ಹದ್ದಿನಂತಹ ಗಿಣಿ!

ಹದ್ದಿನಂತಹ ಗಿಣಿ!

ನೀನೇ ಸಾಕಿದ ಗಿಣಿ, ನಿನ್ನ ಮುತ್ತಿನ ಗಿಣಿ ಹದ್ದಾಗಿ ಕುಕ್ಕಿತಲ್ಲೋ ಈ ಹಾಡು ಕೇಳೀರ್ತೀರಿ. ಇದು ಬರೀ ಹಾಡು ಅದ್ಕೊಂಬೇಡಿ. ಹದ್ದಿನಂತಹ ಗಿಣಿಯೂ ಇದೆ. ನ್ಯೂಜಿಲ್ಯಾಂಡ್ಗೆ ಹೋಗುವ ಪ್ರಕೃತಿ ಪ್ರಿಯರು ಗ್ಯಾರಂಟಿ ಈ ಆಲ್ಪೈನ್ಸ್ ಪರ್ವತ ಶ್ರೇಣಿಯನ್ನ ನೋಡ್ಕೊಂಡೇ ಬರ್ತಾರೆ. ಆಲ್ಪೈನ್ಸ್ನ ಹಿಮನೆಲದ ಮೇಲೆ ನಿಂತು ಅಲ್ಲಿನ ಪೂರ್ಣ ಸೌಂದರ್ಯವನ್ನು ಸವಿಯೋ ಮಂದಿಗೆ ಆ ಒಂದು ಪಕ್ಷಿ ಕಣ್ಣಿಗೇ ಬೀಳೋದಿಲ್ಲ. ಅದು ಜಾತಿಯಲ್ಲಿ ಗಿಣಿ, ವರ್ತನೆಯಲ್ಲಿ ಹದ್ದು!. ಅಂದ್ಹಾಗೆ ಇದರ ಹೆಸ್ರು ಕಿಯಾ. ನ್ಯೂಜಿಲ್ಯಾಂಡ್ನ ಆಲ್ಪೈನ್ಸ್ನಲ್ಲಿ ಕಂಡು ಬರುವ ಗಿಣಿ ಜಾತಿಯ  ವಿಶಿಷ್ಟ ಗಿಣಿ. ಇದರ ಕೊಕ್ಕು ಮತ್ತು ಕಾಲುಗಳು ತುಂಬಾ ಶಕ್ತಿಶಾಲಿ. ಎಂತಹ ವಸ್ತುವನ್ನಾದ್ರೂ ಪಕ್ಕನೇ ಕೀಳುವ, ಎಳೆದು ಬಿಸಾಕುವ ಸಾಮಥ್ರ್ಯ ಹೊಂದಿದೆ.

ನ್ಯೂಜಿಲ್ಯಾಂಡ್ನ ಫಾಕ್ಸ್ ನಗರದಲ್ಲಿ ಕಿಯಾ ಗಿಣಿಗಳದ್ದು ಒಂದೊಂದಲ್ಲ ಕಾಟ. ತೊಟ್ಟಿಯಲ್ಲಿ ತುಂಬಿರೋ ಕಸವನ್ನ ಹೊರಗೆಳೆದು ಬಿಸಾಕುತ್ತೆ. ಮನೆಗಳ ಮೇಲಿನ ಕೇಬಲ್ ವೈರ್ಗಳನ್ನ ಕಡಿದು ಹಾಕುತ್ತೆ. ಮನೆಗಳಲ್ಲಿ ಟಿ.ವಿ. ನೋಡೋ ಮಂದಿಗೆ ಕಿಯಾ ಗಿಣಿಗಳ ಕಾಟದಿಂದ ತಪ್ಪಿಸಿಕೊಳ್ಳೋದೇ ಒಂದು ಕೆಲಸವಾಗಿ ಹೋಗಿದೆ. ಹಾಗಾಗಿಯೇ ಈ ಮಂದಿ ಎಲ್ಲವನ್ನು ಸುರಕ್ಷೆಯಿಂದ ನೋಡಿಕೊಳ್ತಾರೆ. ಬಸ್, ಬಿನ್ ಹಾಗೂ ಕಾರನ್ನೂ ಕೂಡ ತುಂಬಾ ಜಾಗರೂಕತೆಯಿಂದ ಮುಚ್ಚಿರುತ್ತಾರೆ. ಮನೆಗಳ ಮೇಲೆ ಕರೆಂಟ್ ವೈರ್ಗಳಿಂದ ಕಿಯಾ ಗಿಣಿಗಳನ್ನ ತಡೆಯೋ ಕ್ರಮವನ್ನೂ ಕೈಗೊಂಡಿದ್ದಾರೆ. ವಿಶೇಷಾಂದ್ರೆ ಟ್ರಕ್ಗೂ ಕೂಡ ಈ ಗಿಣಿ ಏನಾದ್ರೂ ಮಾಡಿ ಬಿಡುತ್ತೆ ಅನ್ನೋ ಭಯ ಈ ಮಂದಿಗಿದೆ. ಇವುಗಳಿಗೆ ಪ್ರತಿಯೊಂದರ ಮೇಲೂ ಕುತೂಹಲವಿರುತ್ತೆ. ...

ವಿಶ್ವದ ಹಲವಾರು ವಿಜ್ಞಾನಿಗಳು ಕಿಯಾ ಗಿಣಿಗಳ ಇಂತಹ ಬುದ್ದಿವಂತಿಕೆಯ ಬಗ್ಗೆ ಸಂಶೋಧನೆ ನಡೆಸ್ತಿದ್ದಾರೆ. ಇದೀಗ ಮೌಂಟ್ ಕುಕ್ ರಾಷ್ಟ್ರೀಯ ಉದ್ಯಾನವನದಲ್ಲಿ ಕಿಯಾ ಗಿಣಿಯ ಸಾಮಥ್ರ್ಯ, ವರ್ತನೆ ಹಾಗೂ ಅದರ ಆವಾಸಸ್ಥಾನಗಳ ಬಗ್ಗೆ ವಿಜ್ಞಾನಿಗಳು ಅಧ್ಯಯನ  ನಡೆಸುತ್ತಿದ್ದಾರೆ.

ಆಲ್ಪೈನ್ಸ್ ಶ್ರೇಣಿಯ ಕಠೋರ ವಾತಾವರಣಕ್ಕೆ ಹೊಂದಿಕೊಂಡು ಬಾಳಬೇಕು ಅಂದ್ರೆ ಇಂಥ  ಬದ್ಕೋ ಕಲೆ ಕಲಿತಿರಬೇಕಾಗುತ್ತದೆ. ಹಾಗಾದ್ರೆ ಇಂತಹ ಬದ್ಕೋ ಕಲೆಯನ್ನ ಈ ಪ್ರಾಣಿಗಳು ಕಲಿತದ್ದು ಹೇಗೆ ಅನ್ನೋ ಪ್ರಶ್ನೆ ಉದ್ಬವವಾಗುತ್ತೆ.  ಭತರ್ಿ 94 ದಿನ ಕಾವು ಪಡೆಯುವ ಕಿಯಾ ಮೊಟ್ಟೆ, 95ನೇ ದಿನ ಮರಿಯಾಗಿ ರೂಪಾಂತರಗೊಳ್ಳುತ್ತೆ. ಈ ಮರಿಗಳಿಗೆ ಆಹಾರ-ಆರೈಕೆಯನ್ನು ನೋಡಿಕೊಳ್ಳುವುದು ಹೆಣ್ಣು ಗಿಣಿಯ ಕೆಲಸ. ಮೂರು ತಿಂಗಳ ಕಾಲ ಗೂಡಿನಲ್ಲೇ, ತಾಯಿ ಆರೈಕೆಯಲ್ಲಿರುತ್ತವೆ. ಮೂರು ತಿಂಗಳು ತುಂಬಿದ ನಂತ್ರ ಮರಿ ಗಿಣಿ ಹಾರುವ ಸಮಥ್ರ್ಯ ಹೊಂದುತ್ತದೆ. ಈ ವೇಳೆ ಕಿಯಾಗಳಿಗೆ ಥರಗುಟ್ಟಿಸುವ ಚಳಿಯಿಂದ ತಪ್ಪಿಸಿಕೊಳ್ಳಲು ಅನುಕೂಲವಾಗುವಂತಹ ಪುಕ್ಕ ಮೈಗೂಡಿರುತ್ತದೆ.

ಮೊದಲ ಚಳಿಗಾಲ ಎಳೆಯ ಗಿಣಿಗಳಿಗೆ ಪರೀಕ್ಷೆಯ ಕಾಲ. ಅದು ಬದುಕುವ ಸಾಮಥ್ರ್ಯದ ಪರೀಕ್ಷೆ. ಈ ವೇಳೆ ಸದಾ ಕಾಲ ಹಿಮ ಬೀಳ್ತಾನೆ ಇರುತ್ತದೆ. ತಾಪಮಾನ ಸೂಚಕ ಕುಸಿದಿರುತ್ತದೆ. ಇಂತ ಚಳಿಯಲ್ಲೂ ಗಿಣಿ ಏನ್ ತಿನ್ನೊದು ಅನ್ನೋ ಆಲೋಚನೆಯಲ್ಲಿರುತ್ತದೆ. ಈ ಕಾಲದಲ್ಲಿ ಆಲ್ ಮೋಸ್ಟ್ ಗಿಣಿಗಳು ಒಟ್ಟಾಗಿ ಸೇರಿರ್ತವೆ. ಒಂದು ಗಿಣಿಗೆ ಆಹಾರದ ಮೂಲ ದೊರೆತ್ರೆ ಅದನ್ನೇ ಉಳಿದ ಗಿಣಿಗಳು ಹಂಚಿಕೊಳ್ತವೆ. ಕಲಿಕೆಗೆ ಇದು ಹೇಳಿ ಮಾಡ್ಸಿದ ಟೈಮು, ಹಾಗಾಗಿಯೇ ಕಿಯಾ ಗಿಣಿಗಳು ಪರಸ್ಪರ ಕ್ರಿಯೆ, ವರ್ತನೆಗಳನ್ನು ಕಲೀತವೆ. ಈ ಕಲಿಕೆ ಗಿಣಿಯ ಸಾಮಾಜಿಕ ಹಾಗೂ ದೈಹಿಕ ಕೌಶಲ್ಯವನ್ನು ವೃದ್ಧಿಸುತ್ತದೆ.

ರೆಕ್ಕೆ-ಪುಕ್ಕ ಬಲಿತ ಗಿಣಿಗಳು ಮೊದಲ ಸಲ ಗುಂಪು ಕಟ್ಕೊಂಡು ಹಾರಾಡುತ್ತವೆ. ಸ್ವಾತಂತ್ರ್ಯಗೊಳ್ಳುವ ಗಿಣಿಗಳು ಆಲ್ಪೈನ್ಸ್ನ ಶಿಖರ ತುದಿಯಲ್ಲಿ ಹಾರಾಡುತ್ತಾ, ಆಹಾರ ಸಿಕ್ಕಲ್ಲಿ ಕೆಳಗಿಳಿಯುತ್ತವೆ. ಪರೀಕ್ಷಿಸದೇ ಮುಂದೆ ಸಾಗುವುದೇ ಇಲ್ಲ. ಯಾಕಂದ್ರೆ ಆಲ್ಪೈನ್ಸ್ನಲ್ಲಿ ಬದುಕು ನಡೆಸುವುದು ಸುಲಭದ ಮಾತಲ್ಲ.

ಆಲ್ಪೈನ್ಸ್ನ ವಸಂತಕಾಲದ ಸೀಸನ್ನಲ್ಲಿ ಸಾಕಷ್ಟು ಹೂ-ಹಣ್ಣುಗಳನ್ನು ಕಾಣಬಹುದು. ಈ ವೇಳೆ ಕಿಯಾ ಎಷ್ಟು ಸಾಧ್ಯವೋ ಅಷ್ಟು ಎಲೆ, ಹೂ-ಹಣ್ಣುಗಳನ್ನು ತಿನ್ನುತ್ತೆ. ಅಲ್ಪಾವಧಿಯಲ್ಲಿ ಸಿಗುವ ಈ ಹೂ-ಹಣ್ಣನ್ನ ಚಾಕಚಕ್ಯತೆಯಿಂದ ಬಳಸಿಕೊಳ್ಳುವುದನ್ನು ಕಿಯಾ ಗಿಣಿಗಳು ಶ್ರದ್ಧೆಯಿಂದ ಕಲಿತಿವೆ. ವಿವಿಧ ಮರಗಿಡಗಳ ಎಲೆ, ಹೂ-ಹಣ್ಣುಗಳನ್ನು ಕಿಯಾ ತಿನ್ನುತ್ತವೆ. ನೂರಕ್ಕೂ ಅಧಿಕ ಗಿಡ-ಮರಗಳ ಉತ್ಪನ್ನಗಳನ್ನ ಕಿಯಾ ಗಿಣಿ ಅನುಭೋಗಿಸುತ್ತದೆ. ಅದನ್ನ ಪ್ರವರ್ಧನಮಾನಕ್ಕೆ ಬರುತ್ತಿರುವ ಗಿಣಿ ನೋಡುತ್ತಾ, ಮಾಹಿತಿಯನ್ನು ತಿಳಿದುಕೊಳ್ಳುತ್ತದೆ. ಇದೆಲ್ಲವೂ ಸಸ್ಯಹಾರಿ ಆಹಾರದ ತಿನಿಸುಗಳು. ಕಿಯಾ ಕೇವಲ ಸಸ್ಯಹಾರಿ ಮಾತ್ರವಲ್ಲ ಮಾಂಸಹಾರಿಯೂ ಹೌದು.

ಆಲ್ಪೈನ್ಸ್ನ ಬೆಟ್ಟದಡಿಯ ಭಾಗದಲ್ಲಿ ಸಮುದ್ರದ ಹಕ್ಕಿಯೊಂದರ ಗೂಡಿಗೆ ಬಾಯಾಕುತ್ತಿದೆ. ಇಲ್ಲೂ ಕಿಯಾ ತನ್ನ ಚತುರ ಬುದ್ದಿಯ ಆಟ ಶುರುವಿಟ್ಟುಕೊಳ್ಳುತ್ತೆ.  ಒಳಗಿರುವ ಮಿಕವನ್ನ ಹೊರಗೆಳೆದು ಬೇಟೆಯಾಡುತ್ತೆ. ಕಾಯುತ್ತಿರುವ ಗಿಣಿಗಳು ಪರಭಕ್ಷಕರ ಪಾತ್ರ ನಿರ್ವಹಿಸುತ್ತವೆ. ಕಿಯಾ ಬಹುಮುಖ ವ್ಯಕ್ತಿತ್ವದ, ಯಾವುದೇ ಅವಕಾಶವನ್ನೇ ಆಗ್ಲಿ ಸದುಪಯೋಗಪಡಿಸಿಕೊಳ್ಳುವ ಮನೋಧೋರಣೆಯನ್ನು ಹೊಂದಿದೆ. ಅದಕ್ಕಿಂತ ಮಿಗಿಲಾಗಿ ಕಿಯಾ ಗಿಣಿಗಳು ನಿಸರ್ಗ ಧರ್ಮಕ್ಕೆ ಧಿಕ್ಕಾರ ಹಾಕಿ ಹೊಸ ಬೆಳವಣಿಗೆಗೆ ಕಾರಣವಾಗಿವೆ.

ಕಿಯಾ ಗಿಣಿಗಳು ಆಲ್ಪೈನ್ಸ್ ಪರ್ವತ ಶ್ರೇಣಿಗಳಲ್ಲಿ ಪರಿಸರ ವಿಜ್ಞಾನದಲ್ಲೊಂದು ವಿಚಿತ್ರ ಬೆಳವಣಿಗೆಯನ್ನು ಹುಟ್ಟುಹಾಕಿವೆ. ಊಟಕ್ಕಾಗಿ ಗಿಣಿಗಳು ಪಯರ್ಾಯ ಮೂಲವನ್ನು ಹುಡುಕಿಕೊಂಡಿವೆ. ಕತ್ತಲಲ್ಲಿ ಕುರಿಗಳ ರೊಪ್ಪಕ್ಕೆ ನುಗ್ಗುವ ಈ ಅಪಾಯಕಾರಿ ಗಿಣಿಗಳು ಕುರಿಗಳ ಮೇಲೆ ದಾಳಿ ಮಾಡ್ತವೆ. ಜೀವಂತ ಕುರಿಯ ಮೂತ್ರಪಿಂಡದ ಕೊಬ್ಬನ್ನ ಕುಕ್ಕಿ ಕುಕ್ಕಿ ತಿಂತವೆ. ಇದಲ್ಲದೇ ಗಿಣಿಗಳ ಮೇಲೆ ಇನ್ನೂ ಒಂದು ಗೊಂದಲವುಂಟುಮಾಡುವ ಅಪವಾದವಿದೆ. ಕಿಯಾ ಗಿಣಿ ಕುರಿಯನ್ನು ಕೊಲ್ಲುತ್ತಾ?

1860ರ ಮಧ್ಯ ಭಾಗದಲ್ಲಿ ಆಲ್ಪೈನ್ಸ್ನ ಕುರುಬರಿಗೆ ಕಿಯಾ ಗಿಣಿ ತಲೆನೋವಾಗಿ ಪರಿಣಮಿಸಿತ್ತು. ಗಿಣಿ ಕುರಿಗಳ ಮೇಲೆ ದಾಳಿ ಮಾಡಿ, ಕೊಲ್ಲುವುದನ್ನು ಖುದ್ದು ಕುರುಬನೊಬ್ಬ ಕಂಡಿದ್ದ. ಆದ್ರೆ ಈ ಸುದ್ದಿಯನ್ನು ಯಾರೊಬ್ಬರೂ ನಂಬ್ತಿರ್ಲಿಲ್ಲ.  ಆ ಕಾಲದ ಬ್ರಿಟಿಷ್ ವಿಜ್ಞಾನಿ ಅಲ್ಫ್ರೆಡ್ ರಸ್ಸಲ್ ವ್ಯಾಲೇಸ್ ಕಿಯಾ ಗಿಣಿಗಳ ವರ್ತನೆಗಳ ಮೇಲೆ ಅಧ್ಯಯನ ಮಾಡಿದ್ರು. ಅಲ್ದೇ ಅಪಾಯಕಾರಿ ಕಿಯಾ ಗಿಣಿಗಳು ಕುರಿಗಳನ್ನು ಕೊಂದು ಅದರ ಮೂತ್ರಪಿಂಡದ ಕೊಬ್ಬನ್ನು ತಿನ್ನುತ್ತ್ತವೆ ಅನ್ನೋದನ್ನ ತೋರಿಸಿಕೊಟ್ಟ್ರು. ಇವತ್ತು ವಿಜ್ಞಾನಿಗಳು ಮಾತ್ರವಲ್ಲ, ಕಿಯಾಗಳ ಕಾಟ ಗೊತ್ತಿರೋ ಮಂದಿ ಕೂಡ ಕಿಯಾ ಅದೆಷ್ಟು ಅಪಾಯಕಾರಿ ಅನ್ನೋದನ್ನ ಒಪ್ಪಿಕೊಳ್ತಾರೆ.

ಕಿಯಾ ಗಿಣಿಯ ಬೇಟೆಗಾರರು ಲೋಡ್ ಮಾಡಿದ ಗನ್ನೊಂದಿಗೆ ಸದಾ ಸಿದ್ಧರಾಗಿರ್ತಾರೆ. ಬೇಟೆಗಾರರು ಬೆಟ್ಟದ ತುದಿಗಳಲ್ಲಿ ಬೆಂಕಿಯ ಹಾಕುವ ಮೂಲಕ ಹೊಸ ಹುರುಪಿನ ಗಿಣಿಗಳನ್ನ ಆಕಷರ್ಿಸುತ್ತಾರೆ. ಬೆಂಕಿ ಕಂಡ ಕೂಡ್ಲೇ ಗಿಣಿಗಳು ಅವಕ್ಕಾಗಿ ಬೆಂಕಿಯೆಡೆಗೆ ನಿಂತುಬಿಡ್ತವೆ. ಅಷ್ಟೊತ್ತಿಗೆ ಬೇಟೆಗಾರರ ಬಂದೂಕಿನ ಗುಂಡು ಕಿಯಾ ಎದೆ ಸೀಳಿರುತ್ತದೆ.  

ಕಾನೂನಿನ ರಕ್ಷಣೆ ಸಿಗೋವರೆಗೂ ಸಾವಿರಾರು ಗಿಣಿಗಳು ಬೇಟೆಗಾರರ ಗುಂಡೇಟಿಗೆ ಬಲಿಯಾಗಿದ್ದವು. ಕಳೆದ ನೂರು ವರ್ಷಗಳಿಂದ ಕಿಯಾ ಗಿಣಿಗಳು ಮನುಷ್ಯನಿಗಾಗ್ಲಿ, ಗನ್ಗಳಿಗಾಗ್ಲಿ ಭಯಪಡೋ ಆಗತ್ಯವಿಲ್ಲ. ಕಿಯಾಗಿಣಿಗಳನ್ನು ಕೊಲ್ಲಬಾರದೆಂಬ ಕಠಿಣ ಕಾನೂನು ಈ ನೆಲದಲ್ಲಿದೆ. ಆಲ್ಪೈನ್ಸ್ನ ಹಿಮಶಿಖರವೇರುವ ಮಂದಿ ಹಿಮಗೊಡಲಿ ಹೊತ್ತು ಬರ್ತಾರೆ. ಇಂತಹ ಹಿಮ ಇಳಿಜಾರಿನಲ್ಲಿ ನಡೆದಾಡೋದು ಅಂದ್ರೆ ಪರ್ವತಾರೋಹಿಗಳಿಗೆ ಬಲು ಇಷ್ಟ. ಪ್ರತಿ ವಾರಾಂತ್ಯಗಳಲ್ಲಿ ಸಾಹಸಿಗ್ರು, ಪರ್ವತಾರೋಗಳು ಆಲ್ಪೈನ್ಸ್ ಏರುತ್ತಾರೆ.

ಕಿಯಾ ಗಿಣಿ ತೋಳದ ಗರಿಯ ಪಕ್ಷಿ ಅಂತ್ಲೂ ಕರೀತಾರೆ. ಒಲಿವ್ ಹಸಿರು ಪುಕ್ಕಗಳನ್ನ ಹೊಂದಿರುವ ಕಿಯಾ ಭತರ್ಿ ಒಂದು ವರ್ಷ ಕಾಲವೂ ಕೇವಲ 8 ಡಿಗ್ರಿ ಸೆಲ್ಸಿಯಸ್ ಚಳಿಯನ್ನು ತಡೆದುಕೊಳ್ಳಬಲ್ಲ ಸಾಮಥ್ರ್ಯ ಹೊಂದಿದೆ. ಇಂತಹ ವಿಶಿಷ್ಟ ಕಾರಣದಿಂದಾಗಿಯೇ ಕಿಯಾ ಗಿಣಿಯ ದೇಹದ ರಕ್ತ ಚಲನೆ ಮೇಲಿಂದ ಕಾಲಿಗೆ ಸರಾಗವಾಗಿ ಹರಿಯುತ್ತದೆ. ಇದು ಶೀಥಲ ನೆಲದಲ್ಲೂ ಗಿಣಿ ಆರಾಮವಾಗಿ ನಡೆದಾಡೋಕೆ ಸಹಾಯಕವಾಗಿದೆ. ಈ ಎಲ್ಲಾ ಕಾರಣಗಳಿಂದಾಗಿಯೇ ಕಿಯಾ ಗಿಣಿಗಳಂತಹ ವಿಶಿಷ್ಟ ಪ್ರಾಣಿ, ಪಕ್ಷಿಗಳು ಹಿಮದ ಮೇಲೆ ಬದುಕಬಲ್ಲವು. ಅದೇ ಮನುಷ್ಯ ಆ ನೆಲದ ಮೇಲೆ ಕ್ಷಣ ಕಾಲವೂ ಇರಲಾರ. ಇದಲ್ದೇ ಆಲ್ಪೈನ್ಸ್ ಚಳಿಗಾಲದ ಕ್ರೀಡೆಗಳಿಗೆ ತುಂಬಾ ಫೇಮಸ್ ಆದ ಜಾಗ. ಸ್ನೋ ಸ್ಕೇಟರ್ಸ್ಗೆ ಇದೊಂಥರ ಮೆಕ್ಕಾ ಆಗಿಬಿಟ್ಟಿದೆ. ಈ ಕಾರಣಕ್ಕಾಗಿಯೇ ಇಲ್ಲಿನ ಪ್ರವಾಸೋದ್ಯಮ ಕೂಡ ಅತ್ಯುತ್ತಮವೆನಿಸುತ್ತದೆ.

ನಿಸರ್ಗದತ್ತವಾದ ಧೈರ್ಯ, ಕೌತುಕ ಹಾಗೂ ಅವಕಾಶಗಳನ್ನು ಹೊಂದಿರುವ ಕಿಯಾ ಗಿಣಿಗಳು ಚಳಿಗಾಲದ ದಿನಗಳಲ್ಲಿ ಸ್ಕೇಟಿಂಗ್ ಜಾಗಕ್ಕೆ ಬರುವ ಮೂಲಕ ಸಾಕಷ್ಟು ಆಹಾರವನ್ನ ಪಡ್ಕೊಳ್ತವೆ. ಕೆಫೆ, ರೆಸ್ಟೋರಂಟ್ಗಳ ಬಳಿ ಹೋಗುವ ಈ ಗಿಣಿಗಳು ಪಾಸ್ಟ್ ಫುಡ್ಗಳನ್ನ ತಿನ್ನೋದನ್ನು ರೂಡಿಮಾಡ್ಕೊಂಡಿವೆ. ಅಲ್ದೇ ಬಿಯರ್ನಂತಹ ಸ್ಟ್ರಾಂಗ್ ಪೇಯಗಳನ್ನು ಟೇಸ್ಟ್ ಮಾಡುತ್ತವೆ. ಯಾವುದೇ ಆಗಿರ್ಲಿ ಅದನ್ನೊಮ್ಮೆ ಟೇಸ್ಟ್ ಮಾಡಿ ನೋಡುವ ಕುತೂಹಲ ಕಿಯಾ ಗಿಣಿಯದ್ದು. ಅಲ್ಲೂ ಕೂಡ ತನ್ನ ಜಾಣ್ಮೆಯಿಂದ ತರ್ಲೆ ಮಾಡೇಮಾಡುತ್ತೆ.  ಹೀಗೆ ಪೌಷ್ಟಿಕ ಆಹಾರ ತಿನ್ನುವ ಕಿಯಾ ಗಿಣಿಗಳು ಚಳಿಗಾಲದಲ್ಲಿ ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತವೆ.

ಕಿಯಾ ಬೋಲ್ಡ್ನೆಸ್ ನೋಡೋ ಮಂದಿ ಅದಕ್ಕೆ ಒಂದಷ್ಟು ಆಹಾರ ನೀಡ್ತಾರೆ. ಆದ್ರೆ ಕಿಯಾ ಅಲ್ಲಿನ ಮಂದಿಯ ಪಾಲಿಗೆ ವನ್ಯಜೀವಿ, ಅದ್ರಿಂದ ದೂರವಿರಿ ಅನ್ನೋ ಕಾನೂನಿನ ಫಲಕಗಳ ಮೂಲಕ ಗಿಣಿಯನ್ನು ದೂರದಿಂದ ನೋಡುವ ಸಂಪ್ರದಾಯವನ್ನು ಹುಟ್ಟುಹಾಕಿದ್ದಾರೆ. ಬುದ್ದಿವಂತಿಕೆಯಿಂದಾಗಿ ಕಿಯಾ ಗಿಣಿಗಳು ಕಡಿಮೆ ಪ್ರಮಾಣದ ಪ್ರತಿಸ್ಪಧರ್ಿಗಳನ್ನ ಹೊಂದಿವೆ. ತನ್ನ ಜಾಣ್ಮೆ ಬಳಸಿ ಹೊಸ ಚಾಲೆಂಜ್ ಸ್ವೀಕರಿಸುವ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಪಡೆದಿವೆ. ಇದಕ್ಕಿಂತ ಮುಖ್ಯವಾದ ವಿಚಾರ ಅಂದ್ರೆ ಹೊಸದಾಗಿ ಅರ್ಥ ಮಾಡಿಕೊಳ್ಳುವ ವಸ್ತು, ವಿಧಾನಗಳನ್ನ ಮತ್ತಷ್ಟು ಅಭಿವೃದ್ಧಿಪಡಿಸಿಕೊಳ್ಳುತ್ತವೆ. ಈ ಮೂಲಕ ಜಾಣ ಹಾಗೂ ಅಪಾಯಕಾರಿ ಗಿಣಿಗಳು ಅನ್ನೋ ಹೆಗ್ಗಳಿಕೆ ಮತ್ತು ಅಪವಾದಕ್ಕೆ ಪಾತ್ರವಾಗುತ್ತಿವೆ.

ಇಂತಹ ಬುದ್ದಿವಂತ ಗಿಣಿಗಳು ನ್ಯೂಜಿಲ್ಯಾಂಡ್ನಲ್ಲಿ ಕಡಿಮೆಯಾಗ್ತಿರೋ ಆಘಾತಕಾರಿ ಸುದ್ದಿಯು ಇದೆ. ಇದಕ್ಕೆ ಮುಖ್ಯ ಕಾರಣ ಅಂದ್ರೆ ಆಹಾರದ ಜೊತೆ ಸೇರೋ ವಿಷ. ಆಕರ್ಷಣೆಗಾಗಿ ಕಾರ್ ಬಳಿ ಹೋಗುವ ಗಿಣಿ ಶವದ ಕಳೆಬರ ಹೊತ್ಕೊಳ್ಳುತ್ತೆ. ಇದಲ್ದೇ ಪರಭಕ್ಷಕ ಪ್ರಾಣಿಗಳ ಕೈಗೆ ಸಿಕ್ಕಿ ಸತ್ತುಹೋಗ್ತವೆ. ಹೀಗೆ ಒಂದಿಲ್ಲೊಂದು ಕಾರಣಗಳಿಗೆ ಕಿಯಾ ಸಂಖ್ಯೆ ಕ್ಷಿಣವಾಗ್ತಿದೆ. 1971ರ ಅಂಕಿ ಅಂಶದ ಪ್ರಕಾರ ಆ ವರ್ಷ ಕೊಲಲ್ಪಟ್ಟ ಕಿಯಾ ಗಿಣಿಗಳ ಸಂಖ್ಯೆ ಭತರ್ಿ ಒಂದೂವರೆ ಲಕ್ಷ.

ಅಂತದ್ದೊಂದು ಮಾರಣ ಹೋಮ ನಡದ 15 ವರ್ಷಗಳ ನಂತರ ಅರ್ಥಾತ್ 1986ರಲ್ಲಿ ಕಿಯಾ ಗಿಣಿಗಳ ರಕ್ಷಣಾ ಕಾನೂನು ಜಾರಿಗೆ ತರಲಾಯ್ತು. ಇವತ್ತು ಕಿಯಾ ಗಿಣಿ ಕೊಲ್ಲೋಕೆ ಜನ ಭಯಪಡ್ತಾರೆ. ನ್ಯೂಜಿಲ್ಯಾಂಡ್ನಲ್ಲಿ ಕಾನೂನು ವ್ಯವಸ್ಥೆ ತುಂಬಾ ಬಲಿಷ್ಟವಾಗಿದೆ. ಯಾಕಂದ್ರೆ ಒಂದು ಕಿಯಾ ಗಿಣಿ ಕೊಂದ್ರೆ, ಭತರ್ಿ 53 ಲಕ್ಷ ದಂಡ ಕಟ್ಬೇಕು. ಅಥರ್ಾತ್ ಅರ್ಧ ಕೋಟಿ. ಅಲ್ದೇ ಆರು ತಿಂಗ್ಳು ಜೈಲುವಾಸ ಅನುಭವಿಸಬೇಕಾಗುತ್ತೆ.

ಇಂತಹ ಕಠಿಣ ಕಾನೂನಿದ್ದರೂ ಸಹ ಆಲ್ಪೈನ್ಸ್ನಲ್ಲಿ ಇವತ್ತು ಉಳಿದಿರೋ ಕಿಯಾ ಗಿಣಿಗಳ ಸಂಖ್ಯೆ ಐದು ಸಾವಿರಕ್ಕಿಂತ ಕಮ್ಮಿ.  ಕಿಯಾ ಗಿಣಿಗಳ ರಕ್ಷಣೆ ಮತ್ತು ಅಭಿವೃದ್ಧಿಗಾಗಿ ನ್ಯೂಜಿಲ್ಯಾಂಡ್ ಸಕರ್ಾರ ಕಾನೂನೊಂದೇ ಅಲ್ಲ, ಸಂರಕ್ಷಣಾ ಸಂಸ್ಥೆಯನ್ನು ತೆರೆದಿದೆ. ಸಂಸ್ಥೆ ಕಿಯಾ ಗಿಣಿಗಳ ಸಂರಕ್ಷಣೆ ಮತ್ತು ವೃದ್ಧಿಗಾಗಿ ಶ್ರಮಿಸುತ್ತದೆ. ಸಕರ್ಾರಿ ಸಂಸ್ಥೆಯೊಂದಿಗೆ ಹಲವಾರು ಸಂಘ-ಸಂಸ್ಥೆಗಳು, ಪ್ರಾಣಿಪ್ರಿಯರು ಕಿಯಾ ಗಿಣಿಗಳ ವೃದ್ಧಿಗಾಗಿ, ಸಂರಕ್ಷಣೆಗಾಗಿ ದುಡಿಯುತ್ತಿದ್ದಾರೆ. ಈ ಮೂಲಕ ಬುದ್ದಿವಂತ ಪಕ್ಷಿಯೊಂದನ್ನು ಉಳಿಸಿ, ಕಾಪಾಡುವ ಕೆಲಸ ಮಾಡ್ತಿದ್ದಾರೆ.

ಚಿತ್ರಕೃಪೆ-ಅಂತರ್ಜಾಲ.

Comments