ಜಬ್ ತಕ್ ಹೈ ಜಾನ್

ಜಬ್ ತಕ್ ಹೈ ಜಾನ್

ಜಬ್ ತಕ್ ಹೈ ಜಾನ್... ಜೀವ ಇರೋವರೆಗೂ ಸಾಧ್ಯ. ಆಮೇಲೆ. ಎಲ್ಲವೂ ಶೂನ್ಯ. ಇರೋರ ಮನದಲ್ಲಿ ಆತನ ಸಾಧನೆ ಬರಿ ನೆನಪು. ಈಗ ಜಬ್ ತಕ್ ಹೈ ಜಾನ್ ಡೈರೆಕ್ಟರ್ ಯೆಶ್ ಚೋಪ್ರಾ ಚಿತ್ರಪ್ರೇಮಿಗಳ ಮನದಲ್ಲಿ ಶಾಶ್ವತ. ಆದ್ರೆ ಕೊನೆಯ ಚಿತ್ರ ಜಬ್ ತಕ್ ಹೈ ಜಾನ್. ಇದು ಇನ್ನೂ ತಾಜಾ..ತಾಜಾ. ಬರೋ ನವೆಂಬರ 13 ಕ್ಕೆ ಚಿತ್ರ ತೆರೆಗೆ ಬರುತ್ತಿದೆ. ಈಗಾಗಲೇ ಚಿತ್ರವೆಬ್ಬಿಸಿದ...ಹುಟ್ಟು ಹಾಕಿದ ಕ್ರೇಜ್ ಇದೆ ನೋಡಿ. ಇದು ಅದ್ಭುತ. ಪಾಕಿಸ್ತಾನದಂತಹ ಪಾಕಿಸ್ತಾನವೇ ತಮ್ಮ ದೇಶದಲ್ಲಿ ಸಿನಿಮಾ ಬಿಡುಗಡೆಯನ್ನ ನಿಷೇಧಿಸಿದೆ. ಇದಿರಲಿ. ನಮ್ಗೆ ಬೇಕಾಗಿರೋದು ನಮ್ಮ ದೇಶದ ಈ ನಮ್ಮ ಚಿತ್ರದ ಮೇಲಿನ ಪ್ರೀತಿಯನ್ನ ಹೆಚ್ಚಿಸಿಕೊಳ್ಳೋದು. ಎಲ್ಲರಿಗೂ ಗೊತ್ತಿರೋ ಹಾಗೆ ಚಿತ್ರಕ್ಕೆ ಕವಿ ಗುಲ್ಜಾರ್ ಗೀತರಚನೆ ಇದೆ. ಎ.ಆರ್. ರೆಹಮಾನ್ ಸಂಗೀತದ ಮೋಡಿಯ ಸಂಯೋಜನೆ ಇದೆ. ಒಂದು ವಿಷ್ಯ ಗೊತ್ತಿದೆಯೋ ಇಲ್ಲವೋ. ಗೊತ್ತಿರೋರು ಚಿತ್ರದ ಪ್ರಮೋದಲ್ಲಿರೋ ಶಾಯಿರಿಗಳು ಗುಲ್ಜಾರ್ ಬರೆದದ್ದು ಅಲ್ಲ. ಯಶ್ ಚೋಪ್ರಾ ಪುತ್ರ ಆದಿತ್ಯ ಬರೆದಿರೋ ಕವಿತೆಯ ಸಾಲಿವು ಅಂತಾರೆ. ಅದು ನಿಜ ಕೂಡ. ಇದನ್ನ ಕೇಳ್ತಾ..ಕೇಳ್ತಾ...ಕಳೆದು ಹೋಗುವ ನನಗೆ ಇವು ಸದಾ ಕಾಡುತ್ತವೆ. ಆ ಕಾಡುವಿಕೆಯನ್ನ ಕನ್ನಡದಲ್ಲಿ ಬರೆಯೋ ಸಾಹಸ ಮಾಡಿದ್ದೇನೆ.

ನಿನ್ನ ಕಣ್ಣೋಟದ ಆ ಚಾಂಚಲ್ಯ
ನಗುವಿನಲ್ಲಿರೊ ಅಪರಿಮಿತ ತುಂಟತನ
ಎಂದೂ ಮರೆಯನೂ...ಉಸಿರಿರೋವರೆಗೂ...

ಕೈಹಿಡಿದು ಬಿಟ್ಟು ಹೋದವಳು ನೀನು
ನಿನ್ನ ನೆರಳು ಕೂಡ ಮುನಿಸಿ ಕೊಂಡಿದೆ
ಹಿಂದಕ್ಕೆ ತಿರುಗಿ ನೋಡೋದನ್ನೂ ಮರೆತ ನಿನ್ನ
ಎಂದೂ ಮರೆಯನೂ..ಉಸಿರಿರೋವರೆಗೂ...

ಮಳೆ ಹನಿಯೊಟ್ಟಿಗೆ ಆಡೋ ನೀನು
ಮಾತು..ಮಾತಿಗೂ ಮುನಿಸಿಕೊಳ್ಳುವ
ಸಣ್ಣ..ಸಣ್ಣ ಚೇಷ್ಠೆನೂ ಮಾಡುವೇ..
ಇವುಗಳನ್ನ ಪ್ರೀತಿಸುವೇ ತುಂಬಾ
ಕೊನೆ ಉಸಿರಿರೋವರೆಗೂ...

ನಿನ್ನ ಸುಳ್ಳು ಭರವಸೆ. ಆನೆ ಪ್ರಮಾಣಗಳು
ಸುಟ್ಟು ಕರಕಲಾದ ನಿನ್ನ ಕನಸುಗಳು..
ಕರುಣೆನೆ ಇಲ್ಲದ ನಿನ್ನ ಪ್ರಾರ್ಥನೆಗಳು...
ಇವುಗಳನ್ನ ಸದಾ ದ್ವೇಷಿಸುತ್ತಲೇ ಇರುವೇನು
ಕೊನೆವರೆಗೂ...ಜೀವ ಇರೋವರೆಗೂ..

ಕನ್ನಡದ ಈ ಸಾಲುಗಳು ಶಾಯರಿಯಲ್ಲಿ ಆ ಆತ್ಮವನ್ನ ಎಷ್ಟು ಪ್ರತಿ ಬಿಂಬಿಸುತ್ತವೆಯೋ ಏನೋ..ಮನದಲ್ಲಿ ಉಳಿದು ಕಾಡಿದ ಇವುಗಳನ್ನ  ಬರೆದು ಮರೆಯೋ ಪ್ರಯತ್ನವಿದು.

-ರೇವನ್ ಪಿ.ಜೇವೂರ್

Comments

Submitted by venkatb83 Fri, 02/22/2013 - 17:48

ರೇವನ್ ಅವರೇ ನೀವು ವಿಸ್ಮಯನಗರಿಯಲ್ಲಿಯೂ ಇರುವಿರಿ ಅಲ್ಲವೇ? ನಾನು ಈ ಚಿತ್ರವನ್ನು ನೋಡಿರುವೆ-ಈ ಹಿಂದಿನ ಶಾರುಕ್-ಚೋಪ್ರ ಸಂಗಮದ ಚಿತ್ರಗಳಿಗೆ ಹೋಲಿಸಿದರೆ ಇದು ಪೇಲವ ಆದರೆ ಕಡೆಗಣಿಸುವ ಹಾಗಿಲ್ಲ.. ನೀವ್ ಭಾಷಾಂತರಿಸಿದ ಈ ಹಾಡು ನಿಜಕ್ಕೂ ಅರ್ಥಪೂರ್ಣ ಆಹ್ಲಾದಕರ ಕಿವಿಗಿಂಪು ಆಗಿದೆ.. ಈ ಹಾಡು ಕೇಳಿದವರಿಗೆ ಇದು ಗುಲ್ಜಾರ್ ಮತ್ತಿತರ ಯಶಸ್ವಿ-ಅನುಭವಿ ಕವಿಗಳು ಬರೆದ ರಚನೆ ತರಹ ಇದೆ.ಆದರೆ ಆದಿತ್ಯ ಅವರು(ಅವರೂ ಯಶಸ್ವಿ ನಿರ್ದೇಶಕರು)ಸೂಪರ್ ಆಗಿ ಬರೆದಿರುವರು..ಚಿತ್ರೀಕರಣವೂ ಸೂಪರ್.. ಈ ಚಿತ್ರ ಅಷ್ಟಾಗಿ ಓಡದಿದ್ದರೂ ಹಣ ಗಳಿಸಿದೆ.. ಚೋಪ್ರ ಅವರು ನಮ್ಮೊಡನೆ ಇರಬೇಕಿತ್ತು...;((( ಅವರ ಚಿತ್ರಗಳ ಮೂಲಕ ಅವರು ಸದಾ ಅಮರ... ಶುಭವಾಗಲಿ.. \।