ಕೆಲವು ನುಡಿಗಳು

ಕೆಲವು ನುಡಿಗಳು

ಕವನ
 ಜೀವನ
ಹುಟ್ಟಿದಾಗ ನಲಿವಿನ ಸೂತಕ
ಸತ್ತಾಗ ನೋವಿನ ಸೂತಕ
ಈ ಹುಟ್ಟು-ಸಾವಿನ ನಡುವೆ ಸೂತಕವಲ್ಲದ
ನೋವು-ನಲಿವಿನ ಸಾಧಕ-ಬಾಧಕ
ಇಷ್ಟೇ ಅಲ್ಲವೇ ಜೀವನ!
 
ಸೌಂದರ್ಯ
ಸೃಷ್ಟಿಯ ಪ್ರತಿ ಸೌಂದರ್ಯವನ್ನು
ನಿಮ್ಮ ಕಣ್ಣುಗಳಲ್ಲಿ ನೋಡಿ ಆನಂದಿಸಿ.
ಆದರೆ ಪ್ರತೀ ಸೌಂದರ್ಯವನ್ನೂ
ಅನುಭವಿಸಬೇಕೆಂಬ ದುರಾಸೆ ಪಡದಿರಿ.
 
ಮೌನಿ
ತನ್ನೊಡಲನುರಿಸಿ ಜಗ ಬೆಳಗಿಸುವ ಸೂರ್ಯನು ಮೌನಿ
ಸುಡುವ ಬಿಸಿಲನೀರಿ, ತಂಪನೀವ ಚಂದ್ರನು ಮೌನಿ
ಜಗವ ಸೃಷ್ಟಿಸಿದ ಜ್ಞಾನಿ ಸೃಷ್ಟಿಕರ್ತನೂ ಮೌನಿ
ನಿನಾಗುವುದೆಂತೋ ಮಾನವ ಜ್ಞಾನಿಯಾಗಿ ಮೌನಿ!?

Comments

Submitted by saraswathichandrasmo Thu, 11/01/2012 - 19:00

ಅವರಿಗೂ ಗೊತ್ತಿದೆ ಮಾತು ಬೆಳ್ಳಿ ಮೌನ ಬಂಗಾರ
ಅದಕ್ಕೆ ಆರಿಸಿಕೊಂಡಿದ್ದಾರೆ ಬರಿ ಬಂಗಾರ.

ಮೂರು ಚುಟುಕುಗಳು ಚೆನ್ನಾಗಿವೆ