ಪ್ರೇಮ ಪುಷ್ಪ

ಪ್ರೇಮ ಪುಷ್ಪ

ಕವನ
ಹೃದಯ ಬಡಿತವ ಮಿಡಿಸಿ
ಮನದ ಆಳವ ಥಳಿಸಿ
ಪರಿಮಳದ ಮಕರಂದವ ಸೂಸಿ
ನನ್ನ ಸೆಳೆದ ಪ್ರೇಮ ಪುಷ್ಪವು ನೀನು
 
ನಿನ್ನ ಸುವಾಸನೆಯ ಬೆನ್ನತ್ತಿ
ನಿನ್ನ ಅಂದವ ಕಣ್ತುಂಬಿ
ಮುತ್ತಿಕ್ಕಿ ಮಕರಂದವ ಹೀರಲು
ಹಲುಬುತಿಹ, ಪ್ರೇಮಿ ದುಂಬಿ ನಾನು
 
ಕಾಡು-ಮೇಡು  ಅಲೆದರೂ
ನದಿ ತೊರೆ ಇಣುಕಿದರೂ
ಎಲ್ಲಿ ಅಡಗಿ ಕುಳಿತಿರುವೆ ನೀನು
ನನ್ನ ಕಣ್ಣಿಗೆ ಕಾಣಲೋಲ್ಲೆಯೇನು?
 
ನಿನ್ನ ಅಂದವ ನೋಡದೆ
ಮರುಯೋಚಿಸದೆ ಪ್ರೀತಿಸಿ
ನಿನ್ನ ಹುಡುಕಿ ಬಂದರೆ ನಾನು
ಮುಖ ತೋರದೆ ಮುದುಡಿಹೆ ನೀನು!
 
ನೂರು ಅಡೆತಡೆ ಬಂದರು
ಬರಸಿಡಿಲು ಬಂದೆರಗಿದರು
ಕಣ್ಣ ರೆಪ್ಪೆಯರಳಿಸಿ ಕಾಯುವಾಗ ನಾನು
ಸೂರ್ಯೋದಯಕೆ ಮುಖವರಳಿಸಿದ,
ಪ್ರೇಮ ಕಮಲವೆ ನೀನು
ಆ ಸೂರ್ಯನ ಪ್ರೇಮಿಯೇನು!?