'ಚೆನ್ನೈ ನ ಶಂಕಮುಖಂ ಬೀಚ್ ಬಳಿಯ ಮತ್ಸಕನ್ಯೆಯ ಪುಥಳಿ' !

'ಚೆನ್ನೈ ನ ಶಂಕಮುಖಂ ಬೀಚ್ ಬಳಿಯ ಮತ್ಸಕನ್ಯೆಯ ಪುಥಳಿ' !

'ಟ್ರಿವೆಂಡ್ರಮ್  ನಗರ'ದ ಬಳಿಯ ವಿಶ್ವವಿಖ್ಯಾತವೆಂದು ಹೆಸರಾದ  'ಕೋವಲಂ ಬೀಚ್' ನಿಜಕ್ಕೂ ಚೆನ್ನಾಗಿದೆ. ಆದರೆ ಇದೆ ತರಹದ ಕೆಲವು ಬೀಚ್ ಗಳು ಇವೆ ಎನ್ನುವುದನ್ನು ಮರೆಯಬಾರದು.

ಈ ಪುಥಳಿ ಒಂದು ಚಿಕ್ಕ ಉದ್ಯಾನದಲ್ಲಿ ಸ್ಥಾಪಿಸಲಾಗಿದೆ. 'ಶಂಖಮುಖ ಸಮುದ್ರತೀರ'ಕ್ಕೆ ಭೇಟಿಕೊಟ್ಟವರೆಲ್ಲಾ ನೋಡಬಹುದು ! ನಾವು ಬೀಚ್ ನೋಡಿಕೊಂಡು ವಾಪಸ್ ಆಗುತ್ತಿದ್ದಾಗ ಕಾರಿನ ಡ್ರೈವರ್ ಈ ಮತ್ಸಕನ್ಯೆಯ ಪುಥಳಿಯನ್ನು ತೋರಿಸಿದ. 

ನಾವು ಅಮೇರಿಕಾದ  ಕ್ಯಾಲಿಫೋರ್ನಿಯಾದ ಅನ್ಹ್ಯಾಂ ನ, ಡಿಸ್ನೆ ಲ್ಯಾಂಡ್ ಗೆ ಹೋದಾಗ, ಅಲ್ಲಿನ ಉದ್ಯಾನ ಒಂದರಲ್ಲಿ ಮತ್ಸಕನ್ಯೆಯೊಬ್ಬಳು ನಿಂತು ತನ್ನ ಫ್ಯಾನ್ ಗಳಿಗೆಲ್ಲಾ 'ಆಟೋ ಗ್ರಾಫ್' ಸಹಿಮಾಡಿ ಕೊಡುತ್ತಿದ್ದಳು. ಅವಳ ಜೊತೆ ಅದೆಷ್ಟು ಜನ ಫೋಟೋ ತೆಗೆಸಿಕೊಂಡರು. ಈಗಲೂ ನಮಗೆ ಆ ಸನ್ನಿವೇಶ ನೆನಪಿದೆ.

ಕಲೆಯ ದೃಷ್ಟಿಯಿಂದ ನೋಡಿದಾಗ ಮಾತ್ರ ಆದಿನದ ನಮ್ಮ ಕಾರ್ಯಕ್ರಮ ನಮಗೆ ಮುದಕೊಟ್ಟಿತು. 'ಕೋವಲಂ ಬೀಚ್' ಕೇರಳದ ಅತಿ ಸುಂದರ ಬೀಚ್ ಎಂದು ಎಲ್ಲೆಲ್ಲೂ ಅದರ ಬಗ್ಗೆ ಮಾಹಿತಿ ಉಪಲಭ್ದವಿದೆ. ಆದರೆ, ಈ ಶಂಖಮುಖ ಸಾಗರ ತೀರದ ಅಲೆಗಳ ನೃತ್ಯ ಅತ್ಯಂತ ಸುಂದರ ಹಾಗು ರಮಣೀಯವಾಗಿತ್ತು.

ಪ್ರಚಾರವಿಲ್ಲದ  ಮತ್ತಿತರ ಅತ್ಯದ್ಭುತ ಬೀಚ್ ಗಳ ಪಟ್ಟಿ ಹೀಗಿದೆ :

* ದಕ್ಷಿಣಕನ್ನಡದ  ಕುಂದಾಪುರದ ಬಳಿಯ 'ಟರ್ಟಲ್ ಬೀಚ್ '

* ಉಡುಪಿಯ ಬಳಿಯ ' ಮಲ್ಪೆ ಬೀಚ್'

 

-ಹೊರಂಲವೆಂ 

Rating
No votes yet

Comments