ನಗ್ತಾ ನಗ್ತಾ ನಿಂತ್ಕಂಡವ್ಳೆ....

ನಗ್ತಾ ನಗ್ತಾ ನಿಂತ್ಕಂಡವ್ಳೆ....

ಕವನ

 

ನಗ್ತಾ ನಗ್ತಾ ನಿಂತ್ಕಂಡವ್ಳೆ
ಹೇಳ್ತೀನ್ ನಿಂಗಿವ್ಳ್ ರೂಪ
ಬೆಳ್ಳಿ ಬಟ್ಳಲ್ ಬೆರೆಸ್ದಂಗೈತೆ
ಆಲು ಜೇನು ತುಪ್ಪ!
 
ಲಂಗ ಚೋಲಿ ಮತ್ತೆ ಅದ್ರ್ಮೇಲ್
ಸುತ್ಕೊಂಡವ್ಳೆ  ಸೀರೆ
ಅಂಸ ನಡ್ದಂಗ್ ನಡ್ಕೊಂಡ್ ಒಂಟ್ರೆ 
ಇವ್ಳ್ ನೋಡಕ್ ಬರ್ಬೋದ್ ದ್ಯಾವ್ರೆ!
 
ಇವ್ಳ್ ನೋಡ್ತಾ ನೋಡ್ತಾ ನಿಂತವ್ನೆ
ಈ ಹಳ್ಳಿ ಹೈದ ಬ್ಯಾರೆ!
ಹೆಣ್ಣೇ ಕಾಣದ ಗಂಡ್ಸಿರ್ಬೇಕು 
ನೋಡ್ದ್ರೆ ಗೊತ್ತಾಯ್ತಿವ್ನ್ ಮೊರೆ!
-ಮಾಲು 
(ಮನಸಿನಲ್ಲಿ ಓದಿಕೊಳ್ಳದೆ ಜೋರಾಗಿ ಓದಿಕೊಳ್ಳಿ ಎಂದು ವಿನಂತಿ)