ಮಾತುಪಲ್ಲಟ - ೧೭

ಮಾತುಪಲ್ಲಟ - ೧೭

ಇದು ಮಾತುಪಲ್ಲಟ ಸರಣಿಯ ಹದಿನೇಳನೆಯ ಹಾಡು. ಈ ಸಂಚಿಕೆಯ ಮಾತುಪಲ್ಲಟದಲ್ಲಿ ತೆಲುಗು ಭಾಷೆಯ ಚಿತ್ರದಿಂದ ಆಯ್ದ ಹಾಡೊಂದನ್ನು ಬಳಸಿಕೊಳ್ಳಲಾಗಿದೆ.

ಮೂಲ: ಮನಸಂತಾ ಮುಕ್ಕಲು ಚೇಸಿ

ನನ್ನದೆಲ್ಲಾ ಪುಡಿಪುಡಿಯಾಗಿಸಿ ದೂರಕೆ ಸರಿಯುವೆಯೇತಕೆ | ಬೆಂಕಿ
ಕಿಡಿಯನು ಹಚ್ಚಿಸಿ ಆಸೆಯ ಹುಟ್ಟಿಸಿ ತಪ್ಪಿಸಿಕೊಳ್ಳುವೆಯೇತಕೆ ಈ ಬಿಂಕ
ಎಂದೂ ಎಂದೂ ಪ್ರಾಣವನೀವೆನು ನಿನಗೆ
ಇನ್ನೂ ಇನ್ನೂ ಕುಗ್ಗುತಲಿರುವೆನು ಕಡೆಗೆ
ಕೊರೆಕುಂದಿದ್ದರೆ ಮನ್ನಿಸು | ಓ |

ನನಗಾಗಿಯೇ ಬಿರಿದಿದೆ ಹೂವು,
ಅದ ಸೇರಲು ಕಾದಿಹೆ ನಾನು,
ಯಾರೋ; ಕಿತ್ತುಕೊಂಡರೇಕೆ ಒಪ್ಪಿಕೊಳ್ಳಲಿ...
ಒಡೆಯುವ ಟಿಸಿಲಿನ ಕೊಂಬೆ,
ನಾನಾಡುವ ಮಣ್ಣಿನ ಗೊಂಬೆ,
ಯಾರೋ; ಸೆಳಕೊಂಡರೇಕೆ ಸುಮ್ಮನಾಗಲಿ...
ನೀನಾಗಿ, ಮನಸ್ಸಿತ್ತು; ಇದನ್ನಿಲ್ಲಿ ಈ ದಿನ ಕಂಡು
ಕಣ್ರೆಪ್ಪೆ ಎಂತು ಮುಚ್ಚಲಿ | ಓ |

ಹಗಲಲಿ ಇದ್ದರೆ ಬೆಳಕು,
ನಿನ್ನ ಬೆನ್ನಿಗೆಯೆ ಇರುವುದು ನೆರಳು,
ಇರುವೆ; ನಟ್ಟಿರುಳಿನಲ್ಲೂ ನಿನ್ನ ಕೂಡೆಯೇ...
ಚಿಗುರೆಲೆ ಕಂಡರೆ ತಾನೇ,
ಆ ಕೋಗಿಲೆ ಉಲಿವುದು ಗಾನ,
ಮಿಡಿವೆ; ನಿನ್ನೆದೆಯ ಒಳಗೆ ಎಲ್ಲ ಕಾಲವೂ...
ನಿನ್ನ ಬಯಸಿ, ಏನೋ ಕನಸಿ; ನೀ ದೂರಕೆ ಸರಿವುದು ಕಂಡು
ಎದೆಯಾಳದೆ ಏನೋ ಧಗೆ | ಓ |

Rating
No votes yet