ಅತಿ ಆಸೆ ತಂದಿತೆ ದುರ್ದೆಸೆ

ಅತಿ ಆಸೆ ತಂದಿತೆ ದುರ್ದೆಸೆ

ಕವನ

 

ಇದ್ದನೊಬ್ಬ ಬಡ್ಡಿ ವ್ಯವಹಾರಿ
ಆಗಿದ್ದನವ ಬಲು ಪಿಸನಾರಿ
ಖರ್ಚು ಹೆಚ್ಚಾಗುವುದೆಂದಾಗಲಿಲ್ಲ ಸಂಸಾರಿ
ಖರೀದಿಸುವಾಗ ತೋರುತ್ತಿತ್ತೆಲ್ಲವು ದುಬಾರಿ
ಊಟ ಮಾಡಲು ಅಳುತ್ತಿದ್ದ ದಿನಕ್ಕೊಂದು ಬಾರಿ
ಹೊಲಿಸಿದರಾಯಿತು ಬಟ್ಟೆ ವರುಷಕ್ಕೊಂದು ಸಾರಿ.
 
ಕೋಟ್ಯಾಧೀಶನಾದ ಬಡ್ಡಿಹಣ ಸೇರಿ ಸೇರಿ
ಹಣಕಾಸು ಸಂಸ್ಥೆಯಲ್ಲಿಟ್ಟ ಪಡೆಯಲು ಬಡ್ಡಿ ಹೆಚ್ಚುವರಿ
ಮುಚ್ಚಿತ್ತೊಂದು ದಿನ ಸಂಸ್ಥೆ ದಿವಾಳಿ ತೋರಿ
ಅಸಲು ಪಡೆಯಲೂ ಇರಲಿಲ್ಲ ಯಾವುದೇ ದಾರಿ
ಆಘಾತದಿ ಪ್ರಾಣ ಬಿಟ್ಟ ವ್ಯಾಪಾರಿ
ಉಡದೆ ಉಣದೆ ಉಳಿಸಿದ್ದಕ್ಕೆ ಶಿಕ್ಷೆಯೇ ಈ ಪರಿ
 
ಶಾರಿಸುತೆ