ಅ ಆ ಇ ಈ ಉ ಊ ....

Submitted by kamath_kumble on Wed, 10/31/2012 - 22:43

 

ಅಮ್ಮ ಆದಿನ ಇರುಳಲಿ ಈದಿನದ 

ಉಗಮಕ್ಕೆ ಊರಲ್ಲಿ ಎಡೆಬಿಡದೆ 

ಏಕಾಂಗಿಯಾಗಿ ಐವತ್ತಕ್ಷರ 

ಒಂದೊಂದಾಗಿ ಓದಿಸಿದಳು 

ಔದಾರ್ಯದಿ ಅಂಗಳದಲಿ

 

ಕಂದನ ಖುಷಿಯಲಿ ಗಂಡನಿಗೂ ಘಳಿಗೆ ಉಳಿಸಿದಳು

ಚಿರಂತನ ಛಾಯೆಯಾಗಿ ಜೊತೆಯಲಿ ಝೇಂಕರಿಸಿದಳು 

ಟೀಕೆ ಟಿಪ್ಪಣಿಗೆ ಡೊಂಕಾಗದೇ, ಢಮರುಗವಾದೆ

ತವರು, ಥಳುಕು, ದ್ರವ್ಯಗಳ ಧಿಕ್ಕರಿಸಿದೆ ನಿನಗಾಗಿ 

ಪ್ರಗತಿಯಲಿ ಫಲವ ಬಯಸದೆ ಭವಿಷ್ಯವಾದೆ ಮಗನಿಗೆ 

 

ಯಾವನಿಗಾಗಿ ರಕ್ತವ ಲವಲವಿಕೆಯಲಿ ವ್ಯಯಿಸಿದೆಯೋ

ಶಹರದಿ ಷೋಕಿ ಸರಸದಲಿರಲವನು 

ಹತಾಶ ಳಾಗದೆ ಕ್ಷೆಮಾಭಿಲಾಷೆಯಲೇ 

ತ್ರಿಕಾಲ ಜ್ನಾಪಿಸುತಲಿಇರುವಳಿವಳು.

  

ಎಲ್ಲ ಸಂಪದಿಗರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

ಕಾಮತ್ ಕುಂಬ್ಳೆ 

೩೧/೧೦/೨೦೧೨ 

Rating
No votes yet

Comments

vidyakumargv

Thu, 11/01/2012 - 15:44

ಈಗ ಕಾಲಿ ನಲವತ್ತೊಂಬತ್ತು ಅಕ್ಷರಗಳು ಮಾತ್ರ ಉಳಿದಿವೆ.. ಒಂದು ಬಗೆಯ ಬೇಸರ.

ಕನ್ನಡ ಕಲಿಕೆ ದಿನೆ ದಿನೆ ಕಮ್ಮಿಯಾಗುತ್ತಿದೆ.

ಸರ್ಕಾರಿ ಶಾಲೆಗಳು ಮುಚ್ಚಲ್ಪಡುತ್ತಿವೆ.

ಆದರು ನೀವು ನಾವು ಅ ಆ ಇ ಈ ಜಪಿಸುತ್ತಲೇ ಬಂದಿದ್ದೇವೆ.

ಇತಿಹಾಸ ಮರುಕಳಿಸುತ್ತದೆ.

ಕನ್ನಡಕ್ಕೆ ಸುವರ್ಣಕಾಲ ಬರುತ್ತದೆ.

ಇದು ನನ್ನ ಅನಿಸಿಕೆ.

ಕವನ ಚೆನ್ನಾಗಿದೆ.

ಕನ್ನಡ ರಾಜ್ಯೋತ್ಸವದ ಈ ದಿನ ತಾಯಿಯನ್ನ ನೆನಪಿಸಿದಿರಿ

ಕುಂಬ್ಳೆ ಅವರಿಗೆ ನಮ್ಮ ಧನ್ಯವಾದಗಳು.

ಗ್ರಾಮಾಂತರ ಪ್ರದೇಶಗಳಲ್ಲಿ ಹಲವಷ್ಟು ಸರ್ಕಾರಿ ಶಾಲೆಗಳು ಮುಚ್ಚಲ್ಪಡುತ್ತಿವೆ ಅದೇ ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ಅಣಬೆಯಂತೆ ಪ್ರತಿ ಗಲ್ಲಿ ಗಳಲ್ಲೂ ವಿದ್ಯಾದಾನವನ್ನು ವ್ಯವಹಾರವಾಗಿ ಪರಿವರ್ತಿಸಿರುವ ಹಲವಷ್ಟು ಸಂಸ್ಥೆಗಳು ತಲೆ ಎತ್ತುತ್ತಿರುವುದು ವಿಪರ್ಯಾಸ. ಕನ್ನಡ ಗೊತ್ತಿರುವವರು ಅದನ್ನು ಪ್ರಚಾರ ಪಡಿಸಬೇಕು, ಉಳಿಸಿ ಬೆಳೆಸಬೇಕು, ಕನ್ನಡ ನಡೆಯುವಲ್ಲಿ ಆದಷ್ಟು ಕನ್ನಡ ವನ್ನೇ ಸಂವಹನ ಮಾಧ್ಯಮವಾಗಿ ಬೆಳೆಸಬೀಕಾಗಿದೆ. ಕೆಲವೊಂದು ಕಡೆಗಳಲ್ಲಿ ಕನ್ನಡವನ್ನು ಬಳಸಲು ಸಾಧ್ಯವಿಲ್ಲ, ಅಂತಹ ಸ್ಥಳಗಳಲ್ಲಿ ಪರ್ಯಾಯ ಭಾಷೆಯನ್ನು ಉಪಯೋಗಿಸಿದರೆ ತಪ್ಪಿಲ್ಲ.
ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು.