ಸುರ್ದೂ ಸುರ್ದೂ ಮಳೆ ಒರ್ಗೆ....
ಕವನ
ಸುರ್ದೂ ಸುರ್ದೂ ಮಳೆ ಒರ್ಗೆ
ಅರ್ದೊಗ್ ತೈತೆ ನೀರು
ತೊಟ್ಟ ತೊಟ್ಟ ತೊಟ್ಟಿಕ್ ತೈತೆ
ನನ್ತಲಿಮ್ಯಾಕಿನ್ ಸೂರು
ಚಳೀಗ್ ತಬ್ಕೊಂಡ್ ಇರೋಳ್ಯಾರು
ಊಟಕ್ ಜೋಡಿ ಯಾರು!
ಅವ್ಳೇ ಇಲ್ದೆ ನಾನೆಂಗ್ ತಿನ್ಲಿ
ಇಟ್ಟು ಎಸ್ರು ಸಾರು!
ತಂದೀವ್ನ್ ಇವಳ್ಗೆ ಸೀರೆ ಕುಬ್ಸ
ನಂಗೇನ್ ಇಲ್ಲ ಕಮ್ಮಿ!
ಕಂಬ್ಳಿ ಹೊದ್ಕೊಂಡ್ ಮಕ್ಕೊಂತೀನಿ
ಬರ್ಲಿ ಕನ್ಸಲ್ಲಾದ್ರು ತಿಮ್ಮಿ!