ಅರಳದ ಆಸೆ

ಅರಳದ ಆಸೆ

ಕವನ

 

ನೂರೆಂಟು ಆಸೆಗಳ ಬೀಜವ ಬಿತ್ತಿದೆನು

ಸಾವಿರದೆಂಟು ಕನಸುಗಳ ಬೆಳೆಯಲು

ಮೊಳಕೆಯೊಡೆಯುವ ಮೊದಲೆಮೇಲೆದ್ದವು

ಚಿಂತೆಯ ಕಂತೆಕಂತೆ  ಕಳೆಗಳು ಬೊಂತೆ ಬೊಂತೆಯಾಗಿ  ||

ಧುತ್ತೆಂದು ಬೆಳೆದು ತಿದಿಯನೊತ್ತುವ

ತುದಿಮೊದಲಿಲ್ಲದ ತೀರದ ತೀಟೆಗಳು

ಬಯಕೆಯ ಪುಷ್ಪಗಳು ಕನಸಿನ ಜಾತ್ರೆಯಲಿ

ಚಿಂತೆಯ ಸಂತೆಯಲಿ ಹಾರದಿರುವ ಆಸೆಯ ಚಿಟ್ಟೆಗಳು  ||

ಬಗೆಹರಿಯದ ಬಯಕೆಗಳ ಬಸಿರಿನಲಿ

ಬಗೆಬಗೆಯ ಬಣ್ಣದಾಸೆಯ ಭ್ರೂಣಗಳು

ಪೂರ್ಣಬೆಳೆಯದ ಬಡಪಾಯಿ ಬಯಕೆಗಳು

ಚಿಂತೆಯ ಬೆಂಕಿಯಲಿ ಕಮರಿ ಕರಿಯಾದ ಆಸೆಯ ಬೀಜಗಳು  ||