"ನಾಡಿಗೆ ನಮಸ್ಕಾರ"ದ ಕೃತಿಗಳ ಅನಾವರಣ
ಕಾಂತಾವರ ಕನ್ನಡ ಸಂಘದ "ನಾಡಿಗೆ ನಮಸ್ಕಾರ" ಸರಣಿಯಲ್ಲಿ ಮೊದಲ ಬಾರಿಗೆ ಪ್ರಕಟಿಸಲಿರುವ ಮೊದಲ ಕಂತಿನ ಹತ್ತು ಪುಸ್ತಕಗಳ ಅನಾವರಣ ಮೇ ಆರರಂದು ನಡೆಯಲಿದೆ.
ಸ್ಥಳ: ಉಡುಪಿಯ ಕಿದಿಯೂರು ಹೋಟೆಲ್ ಮಹಾಜನ್ ಹಾಲ್
ಅಧ್ಯಕ್ಷತೆ: ಪ್ರೊ. ಎಸ್ ಜಿ ಸಿದ್ಧಲಿಂಗಯ್ಯ, ಅಧ್ಯಕ್ಷರು, ಕನ್ನಡ ಪುಸ್ತಕ ಅಭಿವೃದ್ಧಿ ಪ್ರಾಧಿಕಾರ
ಅನಾವರಣ: ಹರಿಕೃಷ್ಣ ಪುನರೂರು, ರಾಜ್ಯ ಕಸಾಪ ನಿಕಟಪೂರ್ವ ಅಧ್ಯಕ್ಷ
ಹಿರಿಯ ಸಾಹಿತಿ,ಕಲಾಪೋಷಕ ಡಿ ಕೆ ಚೌಟ ಅವರನ್ನು ಸನ್ಮಾನಿಸಲಿರುವವರು: ವಿ. ಪೊನ್ನುರಾಜ್,ಜಿಲ್ಲಾಧಿಕಾರಿ,ಉಡುಪಿ.
ಪುಸ್ತಕಗಳು:
೧)ಪದ್ಮಭೂಷಣ ಡಾ.ವಿರೇಂದ್ರ ಹೆಗ್ಗಡೆಯವರು ಲೇ:ಡಾ.ಬಿ ಪಿ ಸಂಪತ್‌ಕುಮಾರ್
೨)ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ ಲೇ: ಬೆಳಗೋಡು ರಮೇಶ್ ಭಟ್
೩)ಸಂಶೋಧಕ ಮಹೋಪಾಧ್ಯಾಯ ಡಾ.ಯು.ಪಿ.ಉಪಾಧ್ಯಾಯ ಲೇ: ಎಸ್ ಆರ್ ಅರುಣ್‌ಕುಮಾರ್
೪) ಹಿರಿಯ ಸಾಹಿತಿ ಜನಾರ್ದನ ಗುರ್ಕಾರ್ ಲೇ: ಡಾ ಬಿ ಜನಾರ್ದನ ಭಟ್
೫)ಮಹಾಕವಿ ಮಂದಾರ ಕೇಶವ ಭಟ್ ಲೇ: ಡಾ ನಿಕೇತನ್
೬)ಮೃಗಯಾ ಸಾಹಿತಿ ಕೆದಂಬಾಡಿ ಜತ್ತಪ್ಪ ರೈ ಲೇ: ವಿ ಗ ನಾಯಕ್
೭)ಅಭಿನವ ಧನ್ವಂತರಿ ಡಾ.ಮುಳಿಯ ಗೋಪಾಲಕೃಷ್ಣರಾಯರು ಲೇ: ಜನಾರ್ದನ್ ಗುರ್ಕಾರ್
೮)ರಂಗಕರ್ಮಿ ಸದಾನಂದ ಸುವರ್ಣ ಲೇ: ಡಾ ಸೀತಾಲಕ್ಷ್ಮಿ ಕರ್ಕಿಕೋಡಿ
೯)ಸಸ್ಯವಿಜ್ಞಾನಿ ಡಾ ಪಳ್ಳತಡ್ಕ ಕೇಶವ ಭಟ್ ಲೇ:ಡಾ ವಸಂತ್ ಕುಮಾರ್ ಪೆರ್ಲ
೧೦)ಕರ್ನಾಟಕದ ಹಾನಿಮನ್ ಡಾ ವಸಂತ್‌ಕುಮಾರ್ ರಾವ್ ಕೈಕಂಬ ಲೇ:ಡಾ ವಿಶ್ವೇಶ್ವರ ಭಟ್ ವಿ ಕೆ