೧೮೯೩ ರ, ಸೆಪ್ಟೆಂಬರ್ ೧೧ ರಂದು, ವಿಶ್ವದ ಜನತೆ ಮೊಟ್ಟಮೊದಲಿಗೆ ಭಾರತದ ಮಹಾನತೆಯನ್ನು ಅರಿಯಿತು !
ಅಮೇರಿಕ ಸಂಯುಕ್ತ ಸಂಸ್ಥಾನದ ವಾಣಿಜ್ಯ ರಾಜಧಾನಿಯಲ್ಲಿ ಜರುಗಿದ 'ವಿಶ್ವ ಧರ್ಮಗಳ ಮಹಾನ್ ಸಮ್ಮೆಳ'ನದಲ್ಲಿ ಭಾರತದ ಯತಿಯೊಬ್ಬ ಎದ್ದು ನಿಂತು, ಭಾರತದ ಮಹಾನತೆಗಳ ಬಗ್ಗೆ ಒಂದು ದಿವ್ಯ ಸಂದೇಶವನ್ನು ಕೊಡುವುದರ ಮೂಲಕ, ಅದುವರೆವಿಗೂ ತಪ್ಪು ಕಲ್ಪನೆಗಳನ್ನು ಹೊಂದಿದ್ದ ಅಲ್ಲಿನ ಬೇರೆ ಬೇರೆ ಧರ್ಮಗಳ ರಾಯಭಾರಿಗಳ ಮನಸ್ಸನ್ನು ಗೆದ್ದಿದ್ದಲ್ಲದೆ, ದಿಗ್ಭ್ರಮೆ ಹುಟ್ಟಿಸಿ, ಅದೇ ದಿನ ವಿದೇಶದಲ್ಲಿ ಭಾರತದ ಒಂದು 'ಮಠ'ವನ್ನು ಸ್ಥಾಪನೆಮಾಡುವ ದಿಕ್ಕಿನಲ್ಲಿ ಯಶಸ್ವಿಯಾದರು. ಆ ದಿವ್ಯ ಪುರುಷನೇ ನಂತರ ನಮ್ಮ ದೇಶದಲ್ಲೂ 'ವಿವೇಕಾನಂದ'ರೆಂದು ಪ್ರಸಿದ್ಧಿ ಪಡೆದರು. ವಿದೇಶಕ್ಕೆ ತೆರಳುವ ಮೊದಲು ಅವರು ದಕ್ಷಿಣ ಭಾರತದ ಕೊನೆಯಲ್ಲಿರುವ ಕನ್ಯಾಕುಮಾರಿಯ ಸಮುದ್ರ ತೀರದಲ್ಲಿನ ಒಂದು ಬಂಡೆಯ ಮೇಲೆ ಕುಳಿತು ತಪಸ್ಸನ್ನು ಮಾಡಿದ್ದರು. ಅದು ಮುಂದೆ 'ವಿವೇಕಾನಂದ ರಾಕ್' ಎಂಬ ಹೆಸರಿನಿಂದ ಜನಪ್ರಿಯವಾಯಿತು. ಅಲ್ಲಿ ಕಾಲಾನುಕ್ರಮದಲ್ಲಿ ಸ್ವಾಮಿಜಿಯವರ ನೆನಪಿನಲ್ಲಿ ಒಂದು 'ಭವ್ಯ ಪ್ರಾರ್ಥನಾಮಂದಿರ'ವನ್ನೂ ಅಲ್ಲಿ ಸ್ಥಾಪಿಸಲಾಯಿತು.
ನಾವು ಹೋದ ತಿಂಗಳು ಅಲ್ಲಿಗೆ ಹೋಗಿದ್ದಾಗ, 'ವಿವೇಕಾನಂದ ರಾಕ್' ಗೂ ಭೇಟಿಯಿತ್ತು, ಅಲ್ಲಿ ಸ್ವಾಮಿಜಿಯವರು ಕುಳಿತು ಧ್ಯಾನಿಸಿದ ಜಾಗದಲ್ಲಿ ಕೆಲಕಾಲ ಕುಳಿತು ಪ್ರಾರ್ಥಿಸಿದೆವು. ಅಬ್ಬಾ , 'ಅದೊಂದು ತೀರ್ಥ ಸ್ಥಾನ'. ಭಾರತೀಯರೆಲ್ಲಾ ಒಮ್ಮೆಯಾದರೂ ಹೋಗಿ ಅಲ್ಲಿ ಸಿಗುವ ಮನಃ ಶಾಂತಿಯನ್ನು ಅನುಭವಿಸುವ ಸುಸಂಧಿಯನ್ನು ಕಳೆದುಕೊಳ್ಳದಿರಿ.
-ಹೊರಂಲವೆಂ
Comments
ಗೆಳೆಯರೇ,
ಗೆಳೆಯರೇ,
ಇಲ್ಲಿ ನಾನು ಹಾಕಿರುವ ಚಿತ್ರಗಳು ಕಾಣಿಸುತ್ತಿವೆಯೇ ದಯಮಾಡಿ ತಿಳಿಸಿ.
kanista ila sir :(
kanista ila sir :(