ಇನ್ ಟೈಮ್(ಆಂಗ್ಲ ಚಿತ್ರ) -2011 ನೋಡಿದ್ದೀರಾ?

ಇನ್ ಟೈಮ್(ಆಂಗ್ಲ ಚಿತ್ರ) -2011 ನೋಡಿದ್ದೀರಾ?

ಚಿತ್ರ

 

 
ಅಂಡ್ರ್ಯೂ ನಿಕೋಲ್  ನಿರ್ದೇಶನದ  ಇನ್ ಟೈಮ್( 2011) ಚಲನಚಿತ್ರದ  ವಿಶೇಷತೆ  ಆ ಚಿತ್ರದ ಕಥೆಯಲ್ಲಿದೆ..!!
ಕಾಲ್ಪನಿಕ ಕಥೆಯಾದರೂ  ಹಾಗದ್ರೆ ಹೇಗೆ ಅನ್ನಿಸದೆ ಇರದು..
ಮುಂದೊಮ್ಮೆ ಅದೂ ಆದರೂ ಆಗಬಹುದು.!!
 
ಕಥೆ ಏನು??
 
ಭವಿಷ್ಯದಲ್ಲಿ  ಜನಿಸುವ ಮನುಜರಿಗೆ  ಆಯಸ್ಸು ಬರೀ 25 ವರ್ಷಗಳು ಮಾತ್ರ:((
25 ಮುಗಿಯುತ್ತಿದ್ದ ಹಾಗೆ  ಗೊಟಕ್.!!
ಇನ್ನು ಬದುಕಬೇಕು ಎಂಬ ಆಶೆ ಇರುವವರಿಗೆ  ಒಂದು ವರ್ಷ 'ಕೊಳ್ಳುವ' ಅವಕಾಶ.!!
 
ಇನ್ನು  ಅದಕಿಂತ ಹೆಚ್ಚಿಗೆ  ನೀವು ಬಾಳಬೇಕು  ,ಅಮರರಾಗಿರಬೇಕು ಅಂದ್ರೆ  ಕಾಸು ಕೊಟ್ಟು  ಇಲ್ಲ ಬೆಲೆ ಬಾಳುವ ವಸ್ತುಗಳನ್ನು ಅಡವಿಟ್ಟು  'ವಯಸ್ಸು' ಕೊಳ್ಳಬೇಕು .!!
ಪ್ರತಿಯೊಬ್ಬರ  ಕೈ ಕೆಳಗಡೆ  ಅವರು ಜನಿಸಿದ ಕೂಡಲೇ ವಯಸ್ಸು ಕೌಂಟ್ ಆಗುವ ಆಟೋಮ್ಯಾಟಿಕ್  ಗಡಿಯಾರ ಅಚ್ಚು ಆಗಿರುವುದು ಮತ್ತು ಪ್ರತಿ ಸೆಕೆಂಡು  ಕೌಂಟ್ ಆಗುತ್ತಿರುವುದು..
ಬಡವರು ನಿರ್ಗತಿಕರು  ವಯಸ್ಸು ಕೊಳ್ಳಲು ಆಗದವರು  ಒಂದೋ ವಯಸ್ಸು  ಕಳ್ಳತನ  ಮಾಡಬೇಕು ಇಲ್ಲ ಸಾಯಬೇಕು..
ಶ್ರೀಮಂತರೆಲ್ಲ  ಹಲವು ದಶಕಗಳಿಗೆ  ಆಗುವಸ್ತು  ವಯಸ್ಸ್ಸು  ಕೊಂಡು ಕೊಂಡಿರುವರು ..ಆ ವಯಸ್ಸು  ಒಂದು ಪುಟ್ಟ ಯಂತ್ರದಲ್ಲಿ  ಶೇಖರವಾಗಿರುವುದು.
ಕೆಲ ಗಂಡ ಹೆಂಡತಿ  ಮಕ್ಕಳು  ತಮ್ಮವರು ತಮ್ಮ ಮುಂದೆ ಸಾಯುವುದು ನೋಡಲು  ಆಗದೆ ತಮ್ಮ ಕೆಲ ವರ್ಷ- ದಿನ- ವಾರ -ತಿಂಗಳುಗಳ  ಆಯಸ್ಸನ್ನು ತಮ್ಮ ಪ್ರೀತಿ ಪಾತ್ರರಿಗೆ  ದಾನ ಮಾಡುವರು..!!
 
ರೂಂ ಬಾಡಿಗೆಗೆ ,ವಾಹನ ಕೊಳ್ಳಲು ,ವಸ್ತು ಖರೀದಿ ಇತ್ಯಾದಿ ಎಲ್ಲವೂ  ನಿಮ್ಮ ಆಯಸ್ಸಿನ ಇನ್ತಿಸ್ಟು   ದಿನ ವಾರ ತಿಂಗಳು ಅಂತ ನೀಡಿದರೆ ಮಾತ್ರ..!!
ಚಿತ್ರದ  ತಮ್ಮ ಕೈನಲ್ಲಿರುವ ಆಯಸ್ಸು ಬೇರೊಬ್ಬರಿಗೆ ಗೊತ್ತಾಗದಿರಲಿ ಅಂತ ಪ್ರತಿಯೊಬ್ಬರೂ ಪೂರ್ಣ ತೋಳಿನ  ಅಂಗಿ ತೊಟ್ಟೇ  ಅಡ್ಡಾ ಡುವರು ..
ಆಯಸ್ಸು ಕೊಂಡುಕೊಳಲು ಆಗದವರು ಇತರರಾನ್ನು ಸಾಯಿಸಿ ಬೆದರಿಸಿ ಅವರ ಆಯಸ್ಸು ದೊಚುವುದೇ  ಅದ್ಕೆ ಕಾರಣ.!!
ಈ ಚಿತ್ರದ ನಾಯಕನ ಪ್ರೇಯಸಿ  ಅವಳ ಆಯಸ್ಸು  ಕೊನೆಯಾಗಿ ನಾಯಕ ಅವಳ ಹತ್ತಿರ ಧಾವಿಸುವ ಮೊದಲೇ  ಮರಣಿಸುವಳು ..
ಬೆಳಗ್ಗೆ ಹೊರಗೆ ಹೋಗುವಾಗಲೇ ತನ್ನ ಕೆಲ ಗಂಟೆಗಳ  ಆಯಸ್ಸನ್ನು ಅವಳಿಗೆ ಕೊಟ್ಟು ಹೋಗಿರುವ ನಾಯಕನಿಗೆ  ಗೊತ್ತು ಅವಳ ಮರಣ ಇಂದೇ ಎಂದು,ಹಾಗೆಯೇ ಅವನ ಆಯಸ್ಸು ಕೆಲವೇ ಗಂಟೆಗಳಿರುವುದು  ತನ್ನ ಮತ್ತು ಪ್ರೇಯಸಿಯ ಆಯಸ್ಸು ವೃದ್ಧಿಸುವ  ದಾರಿ ಹುಡುಕಲು  ಬಾರ್ ಒಂದಕ್ಕೆ ಹೋಗಿ ಕುಳಿತ ನಾಯಕನಿಗೆ  100ದಿನಗಳಿಗೆ ಮೇಲೆ ಆಯಸ್ಸಿರುವ  ಒಬ್ಬ ಕುಡುಕನ  ಭೇಟಿ ಆಗಿ ಅವನ ಆಯಸ್ಸೇ ಅವನಿಗೆ ಆಪತ್ತು ಎಂದು ತಿಳಿ ಹೇಳಿ......ಹೊರಗೆ ಹೋಗಲು ತಿಳಿಸುವನು  ಅಸ್ತ್ರಲ್ಲಿ ಕೆಲ ಖಳರು  ಆ ಅಪರಿಚಿತನ  ಆಯಸ್ಸು ಕದಿಯಲು  ದಾವಿಸುವರು.
 
ಆ ಅಪರಿಚಿತನನ್ನು  ರಕ್ಚಿಸಿ  ಹೊರ ಕರೆತರುವ  ನಾಯಕನಿಗೆ  ಧನ್ಯವಾದ ಹೇಳಲು  ಅವನು ಮಲಗಿರುವಾಗ ಆ ಅಪರಿಚಿತ ವ್ಯಕ್ತಿ ತನ್ನ ಆಯಸ್ಸನ್ನು ಈ ಕಥಾನಾಯಕನಿಗೆ  ನೀಡಿ ಹೊರ ಹೋಗುವನು..ತನಗೆ ಆ ಆಯಸ್ಸು ಉಪಯೋಗವಿಲ್ಲವೆಂದು ಅದನ್ನು ನೀನು ಚೆನ್ನಾಗಿ  ಉಪಯೋಗಿಸಿಕೊ  ಎಂದು ಒಂದು ಬರಹ ಬರೆದು ಇಟ್ಟು  ಸೇತುವೆ ಮೇಲೆ ಕೂರುವನು  ಅವನ ಆಯಸ್ಸು  ಕೆಲವೇ ನಿಮಿಷಗಳಿದ್ದು  ಅದು ಝೀರೋ ಆದ ಕೂಡಲೇ  ಮೇಲಿಂದ ಬಿದ್ದು ಸಾಯುವನು.
ಅನಿರೀಕ್ಷಿತವಾಗಿ  ಸಿಕ್ಕ ಈ ಆಯಸ್ಸಿಗೆ  ಆನಂದವಾದರೂ  ಅವನ ಮರಣಕ್ಕೆ ತ್ತಾನೆ ಕಾರಣ ಎಂದು ನಾಯಕನಿಗೆ ಅನ್ನಿಸುವುದು ,ಅವನು ಮರಳಿ ತನ್ನ ಮನೆಯ ಕಡೆ ಹೊರಡುವನು.
ಅಪರಿಚಿತನ ಹತ್ಯೆಗೈದು  ಅವನ ಆಯಸ್ಸು ದೊಚಿರುವನು  ಎಂದು ಪೊಲೀಸರು ಕಥಾ ನಾಯಕನನ್ನು  ಹುಡುಕಲು ಶುರು ಮಾಡುವರು.
ಕೆಲವೇ ನಿಮಿಷ ಆಯಸ್ಸು ಇರುವ ಪ್ರೇಯಸಿಯನ್ನು  ಬದುಕಿಸಲು  ಧಾವಿಸುವ ನಾಯಕನ ಕೈನಲ್ಲೇ  ಪ್ರೇಯಸಿ  ಅಸು ನೀಗುವಳು.
ಪ್ರೇಯಸಿಯ ಅಗಲಿಕೆ -ಪೋಲೀಸರ ಹುಡುಕಾಟ -ಆ ಊರು ಬಿಟ್ಟು ಬೇರೆ ಊರಿಗೆ ಧಾವಿಸಿ  ಅಲ್ಲಿ ಗ್ಯಾಮ್ಬ್ಲಿಂಗ್ ನಲ್ಲಿ  1000ಗಂಟೆಗಳ ಆಯಸ್ಸು ಗೆದ್ದು  ದಶಕಗಳ ಆಯಸ್ಸು  ಶೇಖರಿಸಿ ಇಟ್ಟಿರುವ ಶ್ರೀಮಂತನೊಬ್ಬನ  ಭೇಟಿ  ಆಗಿ ಅವನ ಅತಿಥಿಯಾಗಿ ಅವನ ಮನೆಗೆ ಧಾವಿಸುವನು.ಅವನ ಮಗಳ ಮನ ಗೆದ್ದು  ಅವಳನ್ನೇ ತನ್ನ ಆಯಸ್ಸು ವೃದ್ಧಿಗೆ  ಏಳಿಗೆಗೆ ಏಣಿ ಮಾಡಿಕೊಂಡು  ಪೋಲೀಸರ ಕೈನಿಂದ ತಪ್ಪಿಸಿಕೊಂಡು  ಓಡುವನು ....
 
ಅತಿ ಭದ್ರತಾ ಕೊಠಡಿಯಲ್ಲಿ  ಶೇಖರಿಸಿಟ್ತಿರುವ  ಹಲವು ಲಕ್ಷ ದಶಕಗಳ  ಆಯಸ್ಸನ್ನು  ಕದಿಯುವನು  ಅದನ್ನು ಜನಗಳಿಗೆಲ್ಲ  ಹಂಚುವನು ..
ಎಲೆಲ್ಲು ಅರಾಜಕತೆ  ಆಗಿ ಎಲ್ಲ ಆಯಸ್ಸು ಬ್ಯಾಂಕುಗಳಿಗೆ  ಜನ ನುಗ್ಗಿ  ಆಯಸ್ಸು ಕದಿಯುವರು..
 
ಛಲ ಬಿಡದ ತ್ರಿವಿಕ್ರಮನ ರೀತಿಯ ಒಬ್ಬ ಪೋಲೀಸು  ಮಾತ್ರ ಇವರಿಬ್ಬರನ್ನು ಹಿಡಿದು ಯಮಪುರಿಗೆ  ಅಟ್ಟ ಲೇ  ಬೇಕು ಅಂತ  ಬೇಜಾನ್ ಪ್ರಯತ್ನಿಸುವನು  ಇನ್ನೇನು ಕೆಲವೇ ಕ್ಷಣಗಳಲ್ಲಿ  ಮರಣ ಇರುವ ಆ ಪೋಲೀಸು  ನಾಯಕ ಮತ್ತು  ಆ ಶ್ರೀಮಂತನ ಮಗಳು -ಈ ಮೂವರಲ್ಲಿ ಯಾರು ಉಳಿಯುವರು ಹೇಗೆ? 
ಆ ಚಿತ್ರವನ್ನು  ನೋಡಿದಾಗ  ಮನದಲ್ಲಿ ಬಂದ ಭಾವ ' ಒಹ್..!! ನಿಜವಾಗಲೂ ಮುಂದೊಮ್ಮೆ ಹೀಗೂ ಆಗಬಹುದು .ಆದ್ರೆ ಹೇಗೆ?
ನಿಮಗೂ ಆ ಭಾವ ಬರಬಹ್ದು.
 
ಚಿತ್ರದಲ್ಲಿ  ಮುಜುಗರ ತರುವ  ದೃಶ್ಯಗಳು ಇಲ್ಲ .ಹಾಗಾಗಿ ಧಾರಾಳವಾಗಿ  ಚಿತ್ರ ನೋಡಬಹುದು...!!
 
==============================================================
 
 
ಚಿತ್ರದ  ಟ್ರೇಲರ್ ಗಾಗಿ ಇಲ್ಲಿ ಕ್ಲಿಕ್ಕಿಸಿ :http://www.imdb.com/video/imdb/vi775265305/
 
ಈ ಚಿತ್ರದ ಬಗ್ಗೆ  ಕೆಲ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.: http://www.imdb.com/title/tt1637688/
 
ಚಿತ್ರ ಮೂಲ: http://www.shotpix.com/images/12333528012201120248.jpg
 
Rating
No votes yet

Comments

Submitted by venkatb83 Sat, 11/10/2012 - 17:55

ಚ್ಹಿಕ್ಕು‍ . ಅವ್ರೇ
ಕೆಲವು ಸಿನೆಮಾ ಶ್ಹೀರ್ಷಿಕೆ ನೋಡಿದರೆ ನೊಡಲು ಮನಸ್ಸೆ ಬರೊಲ್ಲ ಆದ್ರೇ ಇದು ಮಾತ್ರ ಭಿನ್ನ‌...!
ಸೀ ಡಿ ಕೊ0ಡು ನೋಡಿ ಇಲ್ಲವೇ ನನ್ ಕೇಳಿ ನಾ ಕೊಡುವೆ..
ಒಳಿತಾಗಲಿ..

\|

Submitted by swara kamath Sat, 11/10/2012 - 22:22

ಸಪ್ತಗಿರಿಅವರೆ ತಮಗೆ ದೀಪಾವಳಿ ಹಬ್ಬದ ಶುಭಾಷಯಗಳು. ಇನ್ನೊಂದು ಆಂಗ್ಲಚಿತ್ರ "ಇನ್ ಟೈಂ 2011" ಕುರಿತು ಬರೆದಿರುವಿರಿ.
ನೋಡಲು ಪ್ರಯತ್ನಿಸುವೆ.ವಂದನೆಗಳು.

Submitted by venkatb83 Sun, 11/11/2012 - 18:16

In reply to by swara kamath

ಹಿರಿಯರೇ ನೀವು ಆ ಚಿತ್ರವನ್ನು ಮೆಚ್ಚುವಿರಿ ಎಂದಿನಂತೆ ನನ್ನ ಈ ಬರಹವೂ ಆ ಚಿತ್ರವೂ ಹಿಡಿಸುವುದು ಎಂದು ನಂಬಿರುವೆ.
ನಿಮ್ಮನ್ನು ಸೆಳೆಯುವ ರೀತಿ ಆ ಚಿತ್ರ ಇದೆ ಎಂದು ಖಾತರಿ ಕೊಡಬಲ್ಲೆ. ನೋಡಿ..ಖುಷಿ ಪಡಿ..

ನಮ್ಮ ಸಹ ಸಂಪದಿಗ ಶ್ರೀ ನಾಥ್ ಭಲ್ಲೆ ಅವ್ರು ದಟ್ಸ್ ಕನ್ನಡದಲ್ಲಿ ಸುಬ್ಬನ ಬಗ್ಗೆ ಒಂದು ಬರಹ ಬರೆದಿರುವರು (ಸುಬ್ಬ ಅಂತ ಶೀರ್ಷಿಕೆ ನೋಡಿದ ಕೂಡಲೇ ಸಂಶಯ ಬಂತು ಅವ್ರೆ ಬರದಿರಬಹುದ ?ಅಂತ ಅದು ನಿಜವಾಯ್ತು) ಅದರ ಲಿಂಕ್ ಇಲ್ಲಿದೆ ಎಲ್ರೂ ಓದಿ.. http://kannada.onein... @ ಭಲ್ಲೆ ಅವ್ರೆ ಆ ಬರಹವನ್ನು ನೀವ್ಯಾಕೆ ಇನ್ನು ಸಂಪದದಲ್ಲಿ ಹಾಕಿಲ್ಲ..? ಹಾಕಿ ಪ.. ಎಲ್ರೂ ಓದಲಿ.. ನಿಮಗೂ *********ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು*********** ಎಲರಿಗೂ ಬೆಳಕಿನ ಹಬ್ಬ **********ದೀಪಾವಳಿಯ ಹಾರ್ದಿಕ ಶುಭಾಶಯಗಳು.**************** ಶುಭವಾಗಲಿ.. \|