ಬಿಸ್ಲಲ್ ನಾನು ದಣದ್ ಬನ್ದಾಗ...

ಬಿಸ್ಲಲ್ ನಾನು ದಣದ್ ಬನ್ದಾಗ...

ಕವನ

 

ಬಿಸ್ಲಲ್ ನಾನು ದಣದ್  ಬನ್ದಾಗ
ಬಾಯಾರ್ಕೇಲಿ ಬಾಯ್ ಬಿಟ್ಟಾಗ
ನೆರ್ಳಾಗ್ ಬಂದು ನೀರ್ ಕೊಡ್ತೀಯ
ನನ್ ಯೆಂಡ್ತಿ ನೀನು ತಿಮ್ಮಿ!
 
ಅಸ್ವಾದಾಗ ತುತ್ತನ್ ಇಟ್ಟು
ಬೇಕಾದಾಗ ಮುತ್ತನ್ ಕೊಟ್ಟು
ನನ್ ಜೀವ್ನಕ್ ನೀನು ಅಸ್ರಾಡ್ತೀಯ
ನನ್ ಯೆಂಡ್ತಿ  ನೀನು ತಿಮ್ಮಿ!
 
ರೆಪ್ಪೆ ಕಣ್ಣನ್ ಕಾಪಾಡ್ದಂಗೆ
ಒಳ್ಳೆ ನೀರನ್ ಮುಚ್ಚಿಟ್ಟಂಗೆ
ನನ್ ಎದ್ಯಾಗ್ ನಿನ್ನ ಮಡಕ್ಕೊಂಡು
ಕಾಪಾಡ್ತೀನ್ ನಿನ್ ತಿಮ್ಮಿ!