ಹಚ್ಚೋಣ....

ಹಚ್ಚೋಣ....

ನಿರಾಶೆಯ ಕಂಗಳಲ್ಲಿ
ಕನಸುಗಳನು ಬಿತ್ತುತ
ಹಚ್ಚೋಣ  ಸ್ಪೂರ್ತಿಯಾ ಹಣತೆ

ಮುರಿದ ಸಂಬಂಧಗಳನ್ನು
ನವಿರಾಗಿ ಬೆಸೆಯುತ
ಹಚ್ಚೋಣ  ಸ್ನೇಹದಾ ಹಣತೆ

ಬರಿದಾದ ಹೃದಯಕೆ
ಪ್ರೀತಿಯ ತೋರುತ
ಹಚ್ಚೋಣ  ಪ್ರೇಮದಾ ಹಣತೆ

ಮೇಲುಕೀಳು ಭೇದಭಾವ ತೊರೆದು
ಮಾನವೀಯತೆ ಮೆರೆಯುತ
ಹಚ್ಚೋಣ  ಸಮತೆಯಾ ಹಣತೆ

ನಮ್ಮೊಳಗಿನ ಅಸುರರನ್ನೋಡಿಸಿ
ಸುರರನು ಎಚ್ಚರಗೊಳಿಸುತ
ಹಚ್ಚೋಣ  ಬೆಳಕಿನಾ ಹಣತೆ




ಸಂಪದಿಗಬಂಧುಗಳೆಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.

Rating
No votes yet