ಸಾಫ್ಟ್ವೇರ್ ಇಂಜಿನಿಯರ್

ಸಾಫ್ಟ್ವೇರ್ ಇಂಜಿನಿಯರ್

ಚಿತ್ರ

(Bachelors room - ರಾಜೇಶ್ ಅಂಡ್ ಸುಧಾಕರ್ )

ಸುಧಾಕರ್, ಶುಕ್ರವಾರ  ರೂಂ ಗೆ ಬಂದಾಗ ರಾತ್ರಿ 1.30. 
ಲೋ ರಾಜೇಶ್ ಎದ್ದೇಳೋ  , ನಂಗೆ ಈ ಸಾಫ್ಟ್ವೇರ್ ಕೆಲಸ ಸಾಕು, ನಾ ಏನಾದ್ರು ಬಿಸಿನೆಸ್ಸ್ ಮಾಡಬೇಕು, ಇವತ್ತಿನಿಂದನೆ ಪ್ಲಾನ್ ಸ್ಟಾರ್ಟ್, ಕಂಪನಿ ಅವರು ಕೊಟ್ಟಿರೋ ಲ್ಯಾಪ್ಟಾಪ್ ಅಲ್ಲೇ ಪ್ಲಾನ್ ಮಾಡಬೇಕು.
ರಾಜೇಶ್ : ಎನಯ್ತ್ಹೋ ಸುಧಾಕರ್ ಹೋಗ್ಲಿ ಮಲ್ಕೋ ನಾಳೆ ಯೋಚನೆ ಮಾಡೋಣ.
ಸುಧಾಕರ್: ಅವೆಲ್ಲ ಆಗಲ್ಲ ಇವಗ್ಲೆ ಮಾಡಬೇಕು ಪ್ಲಾನ್, ರಾತ್ರಿ 1.30 ತನಕ ಕೆಲಸ ಮಾಡಿದ್ರು ಸಮಾಧಾನ ಇಲ್ಲ ನಾಳೆ ನಾಡಿದ್ದು (Sat and Sun weekend ) ಸಹ ಮನೆಯಿಂದ ಕೆಲಸ ಮಾಡು ಅಂತ ಲ್ಯಾಪ್ ಟಾಪ್ ಬೇರೆ ಕೊಟ್ಟವ್ರೆ. ನಾಯಿ ಪಾಡು ಇದು.
ರಾಜೇಶ್: ಆಯ್ತು ಗುರುವೇ ಮಾಡು, ನಂಗೆ ಮಲಗೋಕೆ ಬಿಡು ಇವಾಗ. 
ಸುಧಾಕರ್: (ಬೆಳಗ್ಗೆ 4.30) ಲೋ ರಾಜೇಶ್ ಇಲ್ಲಿ ನೋಡೋ cow farm ಮಾಡಿದ್ರೆ ಆರಾಮಾಗಿ ಇರ್ಬುದು ಅಲ್ವ .
ರಾಜೇಶ್: ಹು ಮಾಡು.
ಸುಧಾಕರ್: (ಬೆಳಗ್ಗೆ 11.00)  ಲೋ ರಾಜೇಶ್ ಹೋಟೆಲ್ ಓಪನ್ ಮಾಡಿದ್ರೆ ಹೆಂಗೆ ಇರುತ್ಹೋ ?
ರಾಜೇಶ್: ಇಟ್ಸ್ ಗುಡ್, ನನಗೆ ಫ್ರೀ ಊಟ  :)
ಸುಧಾಕರ್: (next day ಬೆಳಗ್ಗೆ 10.00) ಎಲ್ಲಾ ಪ್ಲಾನ್ ರೆಡಿ, cow far ಬೇಡ, ಹೋಟೆಲ್ ಬೇಡ ಇದೆ ನಂಗೆ ಕರೆಕ್ಟ್ ಬಿಸಿನೆಸ್ಸ್. ನೋಡ್ತಾ ಇರು ನಿನಿಗೆ ಗೊತ್ತಗುತೆ .
 
 --Monday ದಿನ ಹೊರಡೋ ಟೈಮ್ ಗಿಂತ ಸ್ವಲ್ಪ ಬೇಗನೆ ಆಫೀಸ್ ಗೆ ಹೊರಟಿದ್ದ ಸುಧಾಕರ್ ನ ನೋಡಿ ರಾಜೇಶ್ ಗೆ ಗೊತಾಯ್ತು ಇವತ್ತು ಸುಧಾಕರ್ ಆಫೀಸ್ ಗೆ goodbye ಹೇಳೇ ಮನೆಗೆ ಬರೋದು ಅಂತ .
(Office, ಸುಧಾಕರ್ ಅಂಡ್ ಅವರ ಬಾಸ್ - ಪ್ರಶಾಂತ್  )
ಪ್ರಶಾಂತ್ : ಸುಧಾಕರ್ ನಿಮಿಗೆ ಕೊಟ್ಟಿದ್ದ ಎಲ್ಲ ಕೆಲಸ ಮುಗ್ಸಿದ್ರ ? (Have you done with your work? )
   (ಎಲ್ಲದುಕ್ಕು ರೆಡಿ ಆಗೇ ಬಂದಿದ್ದ ಸುಧಾಕರ್ )
ಸುಧಾಕರ್ : ಎಸ್ ಪ್ರಶಾಂತ್, ಎಲ್ಲ ಕೆಲಸ ನು ಮಾಡಿ ಮುಗ್ಸಿದೀನಿ. (Yes I have done it.)
ಪ್ರಶಾಂತ್ : good job.
 
(ಸುಧಾಕರ್ back to room)
ರಾಜೇಶ್: ಮಹಾನ್ ಪುರುಷ ಬಾರಪ್ಪ ಬಾ, ಏನೇನೋ ಪ್ಲಾನ್ ಮಾಡ್ತೀನಿ ಅಂತ ಹೇಳ್ತಾ ಆಫೀಸ್ ವರ್ಕ್ ಮಾಡ್ತಿದ್ದ. ಹ ಹ ಹ :
 
--- ಇದು ಸಾಫ್ಟ್ವೇರ್ ಜೀವನ 
 
ಇನ್ನು ಇದೆ . . .
 
 
Rating
No votes yet