ದೀಪವಾಗಬೇಕು

ದೀಪವಾಗಬೇಕು

ಕವನ

ನಾನೊಂದು ಉರಿಯುವ ದೀಪವಾಗಬೇಕು


ಬೆಳಗದಿದ್ದರೂ ನಾ ಜಗವನು 


ಸ್ವಲ್ಪ ಸಮಯವಾದರೂ ಉರಿದು 


ಕತ್ತಲೆಯನು ತೊಲಗಿಸಬೇಕು 


 


ಚಿಕ್ಕ ದೀಪವಾದರೂ ನಾನು 


ಎದುರಿಸಿ ಬಿರುಗಾಳಿಯ ಸುಳಿಯನು 


ಸಿಡಿಲು ಮಳೆಯ ಬಿರುಸನು 


ಆರದೆ, ಉರಿಯುತಿರಬೇಕು 


 


ಚಿಕ್ಕ ದೀಪವಾದರೂ ನಾನು 


ಕತ್ತಲೆಯೆಂಬ ಬೃಹದಾಕಾರವನು 


ನನ್ನದಿಯಲಿರಿಸಿ ಬೆಳಗುವೇನು, ಆದರೂ 


ನನ್ನ ಎಲ್ಲೆ   ಮೀರಿ ಕತ್ತಲಿಹುದು 


 


ಚಿಕ್ಕ ದೀಪವು ನಾನು


ಇಲ್ಲಿ ಆರುವ ಮುನ್ನ, ಸೇರಬೇಕು


ಸೂರ್ಯನನು; ಆಣುವಾಗಿ ಅಲ್ಲಿ ಒಂದು 


ಬೆಳಗಬೇಕು ನಾ ನಿರಂತರ


 


 - ಪ್ರಮಿತ


10/10/2001


 

Comments