ಛತ್ರಪತಿ ಶಿವಾಜಿಯ ತಂದೆಯ ಸಮಾಧಿಗೆ ಸ್ಥಳ ಒದಗಿಸಿದವರು ಕೆಳದಿಯರಸರು

ಛತ್ರಪತಿ ಶಿವಾಜಿಯ ತಂದೆಯ ಸಮಾಧಿಗೆ ಸ್ಥಳ ಒದಗಿಸಿದವರು ಕೆಳದಿಯರಸರು

 

 

     ಶಿವಾಜಿಯ ತಂದೆ ಶಹಾಜಿ ಭೋಸ್ಲೆ ಕರ್ನಾಟಕದ ಹೋದಿಗ್ಗೆರೆ (ಚನ್ನಗಿರಿ ತಾಲ್ಲೂಕು, ದಾವಣಗೆರೆ ಜಿಲ್ಲೆ) ಅರಣ್ಯದಲ್ಲಿ ಬೇಟೆಯಾಡುವ ಸಂದರ್ಭದಲ್ಲಿ ಕುದುರೆಯಿಂದ ಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡು ೧೬೬೫ರಲ್ಲಿ ಮೃತನಾದಾಗ ಆತನ ದೇಹವನ್ನು ಹೋದಿಗ್ಗೆರೆಯಲ್ಲೇ ಸಮಾಧಿ ಮಾಡಲಾತು. ಆಗ ಹೋದಿಗ್ಗೆರೆ ಕೆಳದಿಯ ರಾಜ್ಯದ ಸೀಮೆಯಲ್ಲೇ ಬರುತ್ತಿದ್ದು, ಶಹಾಜಿಯನ್ನು ಆ ಗ್ರಾಮದಲ್ಲೇ ಸಮಾಧಿ ಮಾಡಲು ಅವಕಾಶ ಕೊಟ್ಟದ್ದು ಕೆಳದಿಯ ಅರಸರೇ. ಸಮಾಧಿ ಮಾಡಲು ಅವಕಾಶ ಕೊಡಬೇಕೇ, ಬೇಡವೇ ಎಂಬ ಬಗ್ಗೆ ದೀರ್ಘವಾದ ಮಂತ್ರಾಲೋಚನೆ ನಡೆದು, ಕೊನೆಗೆ ಶಹಾಜಿ ಮರಣ ಹೊಂದಿದ ಸ್ಥಳದಲ್ಲೇ ಸಮಾಧಿಯನ್ನು ಗೌರವೋಚಿತವಾಗಿ ನಿರ್ಮಿಸಲಾಯಿತೆಂದು ಹೇಳಲಾಗಿದೆ. ಈ ಸಮಾಧಿಯನ್ನು ಕರ್ನಾಟಕ ಸರ್ಕಾರವು ಸಂರಕ್ಷಿತ ಸ್ಮಾರಕವೆಂದು ಘೋಷಿಸಿದೆ. ಶಿವಾಜಿಯ ಅನುಯಾಯಿಗಳೆಂದು ಹೇಳಿಕೊಂಡು ಮರಾಠಿ ಭಾಷೆಯನ್ನು ಮುಂದಿಟ್ಟುಕೊಂಡು ಬೆಳಗಾವಿಯಲ್ಲಿ ಶಾಂತಿ ಕದಡಲು ಪ್ರಯತ್ನಿಸುತ್ತಿರುವವರು ಈ ವಿಷಯವನ್ನು ಗಮನಿಸಬೇಕು. ಸ್ವಭಾಷಾಪ್ರೇಮ ಒಳ್ಳೆಯದು. ಆದರೆ ಅದು ಪರಭಾಷಾ ದ್ವೇಷವಾಗಿ ಬೆಳೆಯಬಾರದು, ಬೆಳೆಸಬಾರದು. ಒಂದು ಭಾಷೆ ಬೆಳೆಯುವುದು, ಅಳಿಯುವುದು ಅದನ್ನು ಬಳಸುವ ರೀತಿಯಿಂದ. ಅನ್ಯ ಭಾಷಿಗರೊಡನೆ ಹೋರಾಡುವುದರಿಂದ, ಕಚ್ಚಾಡುವುದರಿಂದ ಅಲ್ಲ.

-ಕ.ವೆಂ.ನಾಗರಾಜ್.
 

 

Comments

Submitted by sada samartha Mon, 11/12/2012 - 22:23

ಕವಿ ನಾಗರಾಜರೇ, ನಿಮ್ಮ ಬರೆಹ ಚಿಕ್ಕದಾಗಿದ್ದರೂ ನಿಜವಾದ ಸಂಗತಿಯ ಮೇಲೆ ಬೆಳಕು ಚೆಲ್ಲುತ್ತಿದೆ. ಕರ್ನಾಟಕದ ಇತಿಹಾಸದ ವಿವರಣೆಯಲ್ಲಿ ಕೆಳದಿಯರಸರ ಕುರಿತು ಸಾಕಷ್ಟು ಅಧ್ಯಯನ ಮತ್ತು ಪ್ರಕಾಶನಗಳು ಆಗಬೇಕಿದೆ. ನಿಮಗೆ ಧನ್ಯವಾದಗಳು. - ಸದಾನಂದ
Submitted by ಗಣೇಶ Mon, 11/12/2012 - 23:14

ಕವಿನಾಗರಾಜರೆ, ಶಿವಾಜಿಯ ತಂದೆ ಶಹಾಜಿ, ಅನ್ನದೇ ಶಹಾಜಿಯ ಮಗ ಶಿವಾಜಿ ಅನ್ನಿ. ಶಹಾಜಿಯ ಮುಂದೆ ಶಿವಾಜಿ "ಝೀರೋ" (ಅಲ್ವಾ ಭಲ್ಲೇಜಿ :) )- http://en.wikipedia… >>>ಶಿವಾಜಿಯ ಅನುಯಾಯಿಗಳೆಂದು ಹೇಳಿಕೊಂಡು ಮರಾಠಿ ಭಾಷೆಯನ್ನು ಮುಂದಿಟ್ಟುಕೊಂಡು ಬೆಳಗಾವಿಯಲ್ಲಿ ಶಾಂತಿ ಕದಡಲು ಪ್ರಯತ್ನಿಸುತ್ತಿರುವವರು ಈ ವಿಷಯವನ್ನು ಗಮನಿಸಬೇಕು. ಸ್ವಭಾಷಾಪ್ರೇಮ ಒಳ್ಳೆಯದು. ಆದರೆ ಅದು ಪರಭಾಷಾ ದ್ವೇಷವಾಗಿ ಬೆಳೆಯಬಾರದು, ಬೆಳೆಸಬಾರದು. - http://www.kannadap… ಸಮ್ಮೇಳನ ಮಾಡಿದರೋ, ಮಂತ್ರಿಗಳು ಬಂದರೋ, ಹಣಕಾಸು ನೆರವು ಸಿಕ್ಕಿತೋ..ಗೊತ್ತಿಲ್ಲ. ಸಾಮರಸ್ಯ ಮಾತ್ರ ಸಾಧ್ಯವೇ ಇಲ್ಲ. :( ಏಕೆಂದರೆ ರಾಜಕಾರಣಿಗಳಿಗೆ ಅದು ಬೇಕಿಲ್ಲ. ಸರ್, ಹೋದಿಗೆರೆ ಎಂದಾಗ ನನಗೆ ನಮ್ಮ ಮೆಚ್ಚಿನ ಕವಿ ಎಚ್.ಎಸ್.ವೆಂಕಟೇಶಮೂರ್ತಿ ನೆನಪಾಯಿತು- http://www.udayavan… ಹಾಗೇ ಕತೆಗಾರ ಈಶ್ವರಚಂದ್ರರೂ ಹೋದಿಗೆರೆಯವರೆ- http://kanaja.in/di… "ಚಲೋ ಮಲ್ಲೇಶ್ವರ-೨೩"ರಲ್ಲಿ "ಶಹಾಜಿ" ಬಗ್ಗೆ - ".. ಈ ವಾಕ್ಯದಿಂದಲೇ ಅವರು ಎಷ್ಟು ಪ್ರಸಿದ್ಧರು ಎಂದು ಗೊತ್ತಾಗುವುದು. ಅವರ ಬಗ್ಗೆ ಇನ್ನೊಮ್ಮೆ ಹೇಳುವೆ." ಎಂದು ನಿಮ್ಮಿಂದ ಹೇಳಿಸಿದ್ದೆ. ಶಹಾಜಿ ಬಗ್ಗೆ ಬರೆಯದಿದ್ದರೂ ಆತನ ಸಮಾಧಿ ಬಗ್ಗೆ ಬರೆದಿರಿ :) http://sampada.net/… ಧನ್ಯವಾದಗಳು. -ಗಣೇಶ.
Submitted by kavinagaraj Tue, 11/13/2012 - 09:02

In reply to by ಗಣೇಶ

ನಿಜ ಗಣೇಶರೇ. ಶಿವಾಜಿ ಶಹಾಜಿಯ ಮಗ. ಆದರೆ ಶಿವಾಜಿಯ ಬಗ್ಗೆ ಗೊತ್ತಿರುವಷ್ಟು ಶಹಾಜಿಯ ಬಗ್ಗೆ ಜನರಿಗೆ ಗೊತ್ತಿಲ್ಲ. ಹಾಗಾಗಿ ಈ ಬಳಕೆ. [ಇಂದಿರಾಗಾಂಧಿಯ ಬಗ್ಗೆ ಸಿಕ್ಕಿರುವಷ್ಟು ಪ್ರಚಾರ ಮಹಾತ್ಮ ಗಾಂಧಿಗೆ ಸಿಕ್ಕಿಲ್ಲ!. :(] ಶಿವಾಜಿಯನ್ನು ಸೆರೆ ಹಿಡಿಯಲು ಸುಲ್ತಾನ ಸೇನೆಯೊಂದಿಗೆ ಶಹಾಜಿಯನ್ನೇ ನೇಮಿಸಿದ್ದ. ಶಿವಾಜಿ ತಂದೆಯನ್ನು ಭೇಟಿ ಮಾಡಿ, ನಂತರ ಅವನಿಗೇ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಂಡು ಹೋಗಿದ್ದನೆಂದು ಹೇಳುತ್ತಾರೆ. ಈ ಬಗ್ಗೆ ಮತ್ತೆಂದಾದರೂ ಬರೆಯುವೆ.] ಧನ್ಯವಾದಗಳು. ದೀಪಾವಳಿ ಶುಭಾಶಯಗಳು.
Submitted by ಗಣೇಶ Sun, 12/23/2012 - 23:43

>>>ಶಿವಾಜಿಯ ಅನುಯಾಯಿಗಳೆಂದು ಹೇಳಿಕೊಂಡು ಮರಾಠಿ ಭಾಷೆಯನ್ನು ಮುಂದಿಟ್ಟುಕೊಂಡು ಬೆಳಗಾವಿಯಲ್ಲಿ ಶಾಂತಿ ಕದಡಲು ಪ್ರಯತ್ನಿಸುತ್ತಿರುವವರು ಈ ವಿಷಯವನ್ನು ಗಮನಿಸಬೇಕು. ಗಮನಿಸಬೇಕಾದ ಇನ್ನೊಂದು ವಿಷಯವೂ ಇದೆ- http://www.dnaindia…
Submitted by kavinagaraj Mon, 12/24/2012 - 10:20

In reply to by ಗಣೇಶ

ಆತ್ಮೀಯ ಗಣೇಶರೇ, ಉತ್ತಮ ಸಂಗತಿಯನ್ನು ತಿಳಿಸಿರುವಿರಿ. ಈ ರೀತಿ ಸಮನ್ವಯದ ಅನುಸರಣೆಯ ವಾತಾವರಣ ನಿರ್ಮಾಣ ಕಷ್ಟವಾದರೂ ಅದಕ್ಕಾಗಿ ಬಯಸೋಣ. ಧನ್ಯವಾದ.