ನಿಮ್ಮ ಮಗುವಿಗೆ ಉತ್ತರಿಸುವ ಮುನ್ನ

ನಿಮ್ಮ ಮಗುವಿಗೆ ಉತ್ತರಿಸುವ ಮುನ್ನ

ನಿಮ್ಮ ಮಗುವಿಗೆ ಉತ್ತರಿಸುವ ಮುನ್ನ


ನನ್ನ ಅಕ್ಕ ಕಲಿತವಳು ಮತ್ತು ಶಾಲೆಯೊಂದರಲ್ಲಿ ಕಲಿಸುವ ಕೆಲಸ ಮಾಡುತ್ತಾಳೆ ಅದರೆ ಅವಳ ಮಗ ಕೇಳೋ ಪ್ರಶ್ನೆಗಳಿಗೆ ಕಸಿವಿಸಿಗೋಂಡವಳಂತೆ ವರ್ತಿಸಿದ್ದನ್ನು ನಾ ನೋಡಿದ್ದೆನೆ.ನನ್ನ ಮಗ ಕೇಳೊ ಪ್ರಶ್ನೆಗಳಿಗೆ ಉತ್ತರ ಹೇಳೊದು ತುಂಬ ಕಷ್ಟ ಅನ್ನೊದು ಅನೇಕ ತಾಯಂದಿರ ಸಾಮಾನ್ಯ ಅಭಿಪ್ರಾಯ. ಮಗುವಿನ ಮುಗ್ಧ ತೊದಲು ನುಡಿಗೆ ಅತಂಕಕ್ಕೆ, ಭಯಾಕ್ಕೆ, ತೋಳಲಾಟಕ್ಕೆ, ಕೋಪಕ್ಕೆ, ಮುಜುಗರಕ್ಕೆ, ಕಸಿವಿಸಿಗಳಿಗೆ ಒಳಪಡಿಸುವಂತದೊಂದು ಶಕ್ತಿಯು ಇದೆ ಹಾಗೆಯೇ ಅಶ್ಚರ್ಯ ಉಂಟುಮಾಡುವ ಪ್ರಬುದ್ದತೆಯು ಇದೆ !. ಅದರೆ ಈ ವಿಷಯಗಳಲ್ಲಿ ಉತ್ತರಿಸಲು ಅತುರ ತೋರಿಸುವುದು ಹಾಗೆಯೇ ಅವಶ್ಯ ಅಸ್ಥೆ ತೊರಿಸದಿರುವುದು ಎರಡು ಒಳ್ಳೆಯದಲ್ಲ, ಕಾರಣ ನೀವು ಹೇಳಲಿರುವ ಉತ್ತರವನ್ನ ಮಗುವಿನ  ಅರಿವಿನ ಬೆಳವಣಿಗೆಯೊಂದಿಗೆ ಹೊಂದಿಸಿಕೊಂಡು ವಿವರಿಸಬೇಕಾದ ಅನಿವಾರ್ಯತೆ ಜಾವಬ್ದಾರಿಯುತ ಪೋಷಕರಿಗಿದೆ, ಅದೆ ಇಲ್ಲಿ ಸವಾಲಿನ ವಿಷಯ, ವಿಷಯಾಂತರ ಮಾಡುವುದು, ಮಾರುತ್ತರ ಕೊಡುವುದು, ತತ್ಸಾರ ವ್ಯಕ್ತಪಡಿಸುವುದು,  ಕೊಪಕ್ಕೋಳಗಾಗುವುದರಿಂದ  ಮಗುವಿನ ಮಾನಸಿಕ ಬೆಳವಣಿಗೆಯ ವೇಗಕ್ಕೆ ತಡೆಯೊಡ್ಡಿದಂತಾಗುತ್ತದೆ.


ಮಗುವಿನ ಅಪ್ರಬುದ್ದವೆನ್ನಿಸುವ ಭಾಷೆ, ಮಗುವಿನ ಅರಿವಿನ ಅಳವನ್ನು ಅರ್ಥೈಸಿಕೋಳ್ಳುವುದು, ಮಗು ಕೇಳುತ್ತಿರುವ ವಿಷಯದ ಬಗ್ಗೆ ಪೋಷಕರ ಅರಿವು, ಮಗುವಿನ ಮಟ್ಟಕ್ಕಿಳಿದು ಉತ್ತರಿಸುವುದು ಇವೆ ಮೊದಲಾದವು ಮಗುವಿಗೆ ಉತ್ತರಿಸುವಾಗ  ಪೋಷಕರ ನೆಡವಳಿಕೆಗಳನ್ನು ಅಂತೆಯೆ ಮಗುವಿನ ಜ್ಞಾನಾತ್ಮಕ ಬೆಳವಣಿಗೆಯನ್ನು ಪ್ರಭಾವಿಸುತ್ತವೆ ಮತ್ತು ಇದರಿಂದಾಗಿ ಮುಂದೊಂದು ದಿನ ಮಗು ಪ್ರಬುದ್ದತೆ ಸಾಧಿಸಲು ಮತ್ತು ಸಾಮಾಜಿಕ ಐಕ್ಯತೆ ಸಾಧಿಸಲು ತೊಂದರೆ ಉಂಟಾಗಬಹುದು, ಅದ್ದರಿಂದ ಮಗು ಕೇಳುತ್ತಿರುವ ವಿಷಯವನ್ನ ಗಮನವಿಟ್ಟು ಕೇಳಿಸಿಕೋಂಡು ಸರಿಯಾಗಿ ಮನದಟ್ಟಾಗುವಂತೆ ಅಕ್ಕರಯಿಂದ ಉತ್ತರಿಸುವ ತಾಳ್ಮೆ ಮತ್ತು ಜಾಣತನವನ್ನ ಪೋಷಕರು ರೂಢಿಸಿಕ್ಕೊಳ್ಳ ಬೇಕಾಗುತ್ತದೆ, ಇಲ್ಲಿ ಮಗುವಿನೋಂದಿಗೆ ಪ್ರತಿ ಪೋಷಕರು ಬೆಳೆಯಬೇಕು ಮತ್ತು ಕಲಿಯಬೇಕು, ಮಗುವಿಗೆ ತಾಯಿಯೇ ಮೊದಲ ಗುರುವಲ್ಲವೆ ? ಕುಟುಂಬವೆ ಮೊದಲ ಶಾಲೆಯಲ್ಲವೆ ?.