ಮಿರ ಮಿರ ಮಿರುಗುವ ಮೋಹದ ಮೋರೆ....
ಕವನ
ಮಿರ ಮಿರ ಮಿರುಗುವ ಮೋಹದ ಮೋರೆ
ಹಣ್ಣಾಗಲಿದೆ ಮಣ್ಣಾಗಲಿದೆ
ನಾಳೆಗೆ ನೀರೆ! ಆ ಕಥೆ ಬೇರೆ !
ನಗುವಿನ ರೂಪದ ಮಾಯೆಯ ಜಾಲ
ಸೊಬಗನು ಸಾರುವ ತೊಗಲಿನ ಚೀಲ
ತೂಗುತ ಹಾರುವ ಹೆರಳಿನ ಮಾಲ
ಮೊಗದಲಿ ಉಳಿಸದು ಕರಾಳ ಕಾಲ!
ಹುಂಬನ ಮಾಡುವ ಸಿಹಿ ಸಿಹಿ ಸೊಲ್ಲ
ಹಂಬಲವಿಲ್ಲದೆ ಅಡುಗುವುದಲ್ಲ!
ಚುಂಬಕವಾಗಿಹ ಸಪೂರ ಗಲ್ಲ
ಚುಂಬನವೊಂದನು ಪಡೆವುದೆ ಇಲ್ಲ!
ಎಲೆ ಎಲೆ ನೀರೆ
ವಯಸದು ಜಾರೆ
ಉಳಿಯುವುದೊಂದೆ ಒಲವಿನ ಮೇರೆ!
ಅಂಕೆಯಲಿರಲಿ ರೂಪಿನ ಮೋಹ!
ತಿಳಿಯದೆ ನಿನಗೆ?!
ಅಷ್ಟಾವಕ್ರನ ಮೋಹಿತೆ ಅವಳೇ,
ಸುಂದರಿ ಕುವರಿ!
ಹೇಳುವುದಿನ್ನೇನಿದೆ ಬೇರೆ!
ಮಿರ ಮಿರ ಮಿರಗುವ ಮೋಹದ ಮೋರೆ
ಹಣ್ಣಾಗಲಿದೆ ಮಣ್ಣಾಗಲಿದೆ
ನಾಳೆಗೆ ನೀರೆ!
Comments
ಇಷ್ಟವಾಯಿತು
ಇಷ್ಟವಾಯಿತು