ಜೀವನ ಸಂಗಾತಿಯ ಆಯ್ಕೆಯು ಮತ್ತು ೨೦೧೨ ನೇ ಅರ್ಥ ಶಾಸ್ತ್ರದ ನೊಬೆಲ್ ಪ್ರಶಸ್ತಿಯೂ
ಜೀವನ ಸಂಗಾತಿಯ ಆಯ್ಕೆಗು ಮತ್ತು ೨೦೧೨ ನೇ ನೊಬೆಲ್ ಪ್ರಶಸ್ತಿಗೆ ಏನು ಸಂಬಂಧ ಅಂತ ನಿಮಗೆ ಆಶ್ಚರ್ಯವಾಗಬಹುದು. ನಮ್ಮ ಬದುಕಿನಲ್ಲಿ ಪ್ರತಿ ಹೆಜ್ಜೆಗು ನಾವು ಹಲವಾರು ಕವಲುದಾರಿಗಳಲ್ಲಿ ಯಾವುದಾದರು ಒಂದನ್ನು ಆಯ್ಕೆ ಮಾಡಿಕೊಳ್ಳುತ್ತಲೇ ಇರುತ್ತೇವೆ. ಹೆಚ್ಚಿನ ಸಂದರ್ಭಗಳಲ್ಲಿ ಈ ನಿರ್ಧಾರವನ್ನು ಹಣದ ಮೂಲಕವೇ ಮಾಡಬಹುದು. ಕೆಲವು ಸನ್ನಿವೇಶಗಳಲ್ಲಿ ಆಯ್ಕೆಯ ನಿರ್ಧಾರಕ್ಕೆ ಹಣವನ್ನು ಉಪಯೋಗಿಸುವುದು ಸಾಧ್ಯವಾಗುವುದಿಲ್ಲ ಮತ್ತು ಅದು ಸಾಧುವು ಅಲ್ಲ. ಉದಾಹರಣೆಗೆ ವಿಧ್ಯಾರ್ಥಿದೆಸೆಯಲ್ಲಿ ಶಾಲೆಯ ಆಯ್ಕೆ,ಯೌವ್ವನದಲ್ಲಿ ಸಂಗಾತಿಯ ಆಯ್ಕೆ, ಅಂಗಾ0ಗಳ (ಕಣ್ಣು, ಹೃದಯ ಮುಂತಾದ) ದಾನಿಗಳ ಮತ್ತು ಬೇಡಿಕೆದಾರ ಸಂಗತದಲ್ಲಿ ಇತ್ಯಾದಿ.
ನಮಗೆ ಆಯ್ಕೆಗೆ ಅವಕಾಶವಿರುವ ನೂರಾರು ಸಂದರ್ಭಗಳಲ್ಲಿ ನಾವು ತೆಗೆದುಕೊಳ್ಳುವ ಹೆಚ್ಚಿನ ನಿರ್ಧಾರಗೆಳು ನಮಗೆ ವೈಯುಕ್ತಿಕವಾಗಿ ತೃಪ್ತಿಯನ್ನು ಕೊಟ್ಟಿರಬಹುದು.
ಸಮನಾದ ಅವಕಾಶಗಳು ಒಟ್ಟಿಗೆ ಅನೇಕರಿಗೆ ಒದಗಿದಾಗ ಸರ್ವರನ್ನು ತೃಪ್ತಿ ಪಡಿಸಿ ಸಮುಷ್ಟಿಯ ತೃಪ್ತಿಯನ್ನು ಹೆಚ್ಚಿಸ ಬಹುದೆ ಎನ್ನುವುದ ಈ ಸಂಶೋದನೆಗಳ ವಿಷಯವಾಗಿದೆ. ಉದಾಹರಣೆಗೆ ವಿಧ್ಯಾರ್ಥಿಗಳು ಮತ್ತು ಉತ್ತಮ ಕಾಲೇಜುಗಳು. ಕಾಲೇಜಿನ ಪ್ರವೇಶದ ಸಮಯದಲ್ಲಿ ಎಲ್ಲರಿಗು ಅತ್ಯಂತ ಉತ್ತಮ ಕಾಲೇಜಿನಲ್ಲಿ ಸೀಟು ಸಿಗಬೇಕೆಂಬಾಸೆ. ಅಲ್ಲಿ ಇರುವ ಸೀಮಿತ ಸ್ಥಳಾವಕಾಶಗಳು ತುಂಬಿದಾಗ ಬೇರೆ ಕಡಿಮೆ ದರ್ಜೆಯ ಕಾಲೇಜಿಗೆ ಸೇರಬೇಕಾದ ನಿರಾಶೆಯ ಸಂದರ್ಭ. ಇಂತಹ ಪರಿಸ್ಥಿತಿಗೆ ಸಿಕ್ಕಿ ಹಾಕಿ ಕೊಳ್ಳಬಾರದೆಂದೆ ಇದಕ್ಕೆ ಮೊದಲೆ ದೊರಕಿದ ಮೂರನೆ ದರ್ಜೆಯ ಕಾಲೇಜಿಗೆ ಸೇರಿದ ವಸ್ತುಸ್ತಿತಿ ನಿಮಗೆಲ್ಲ ಪರಿಚವಿರಬಹುದು. ಇನ್ನು ಸಂಗಾತಿಯನ್ನು ಆರಿಸುವ ವಿಷಯದಲ್ಲಿ ಆಗುವ ನಿರಾಸೆಗಳಿಗೆ ಲೆಖ್ಖವೇ ಇಲ್ಲ! ತಮಗೆ ಬೇಕಾದ ಧರ್ಮೆನ್ದ್ರ ಅಥವಾ ಅಮಿತಾಬ್ ಬಚ್ಚನ್ಗೆ ಕಾದು ಕಾದು ನಂತರ ಕಾಲಮಿಂಚಿ ಕನ್ಯಾಮಣಿಗಳಾಗಿ ಉಳಿದಿರುವ ಅಥವಾ ಇನ್ನು ಯಾರು ಸಿಕ್ಕಲ್ಲ ಅಂತ ಪ್ರಥಮದಲ್ಲೆ ಬಂದ ತೀರ ಸಾಧರಣ ಗಂಡನ್ನು ಮದುವೆ ಮಾಡಿಕೊಂಡಿರುವ ವಿಷಯ ನಿಮಗೆ ಪರಿಚಯವಿರಬಹುದು. ಇಂತಹುದೆ ಸಮಸ್ಯೆಗಳನ್ನು ನೀವು ವಸ್ತುಗಳನ್ನು(ಮುಖ್ಯವಾಗಿ ಬಹುಬೆಲೆಯ ಚಿತ್ರ ಪಟಗಳನ್ನು) ಹರಾಜಿನ ಮೂಲಕ ಮಾರುವ ಆರ್ಥಿಕ ವ್ಯವಹಾರಗಳಲ್ಲಿ, , ವ್ಯಾಪಾರದಲ್ಲಿ ಸರಕಿಗೆ ಸರಿಯಾದ ಬೆಲೆಯನ್ನು ದೊರಕಿಸುವಲ್ಲಿ ಕಾಣಬಹುದು.
ಅಲ್ವಿನ್ ರಾತ್ ಮತ್ತು ಲಾಯ್ಡ್ ಶಾಪ್ಲಿ ಎಂಬ ಹೆಸರಾಂತ ಸಂಶೋಧಕರು ಇಂತಹ ಪ್ರಶ್ನೆಗಳ ಸಾಮಾನ್ಯ ಗುಣಗಳನ್ನು ಒಂದುಗೂಡಿಸಿ ಅವುಗಳನ್ನು ಒಂದು ಗಣಿತದ ನಮೂನೆಯಲಿ ಅಳವಡಿಸಿ ಅದನ್ನು ಸೊಗಸಾದ ಆಲ್ಗೊರಿಥೆಮ್ ಮೂಲಕ ಉತ್ತರ ಸೂಚಿಸಿದ ಸಂಶೋಧನ ಪ್ರಭಂದಕ್ಕೆ ಈ ನೊಬೆಲ್ ಪ್ರಶಸ್ತಿ ಲಭಿಸಿದೆ. ಲಾಯ್ಡ್ ಶಾಪ್ಲಿ ಯವರು ಡೇವಿಡ್ ಗೇಲ್ರರೊಡಗೂಡಿ ೧೯೬೨ ರಲ್ಲೆ ಇದಕ್ಕೆ ಅಸ್ತಿಭಾರ ಹಾಕಿದರೂ ಇದನ್ನು ಪ್ರಚಲಿತ ಸಮಸ್ಯೆಗಳಿಗೆ ಅಳವಡಿಸಿ ಕಾರ್ಯರೂಪಕ್ಕೆ ತಂದವರು ಅಲ್ವಿನ್ ರಾತ್. ಅವರು ಸಾದರ ಪಡಿಸಿದ ಸಣ್ಣ ಉದಾಹರಣೆ ಹೀಗಿದೆ.
ನಾಲ್ಕು ಗಂಡುಗಳು {m1,m2,m3,m4} ಮತ್ತು ನಾಲ್ಕುಹೆಣ್ಣು ಗಳು {w1,w2,w3,w4} ಜೋಡಣೆಗೆ ಇದ್ದಾರೆಂದು ಭಾವಿಸಿ. ಪ್ರತಿ ಗಂಡಿಗು ತಮಗೆ ಇಷ್ಟವಾಗಿರುವ ಹೆಣ್ಣುಗಳನ್ನು ಅವರ ಇಷ್ಟಾನುಸಾರ ಅನುಕ್ರಮವಾಗಿ ಹೀಗೆ ಸೂಚಿಸೋಣ:
L(m1) = {w1,w2,w3,w4} (ಅಂದರೆ ಇಲ್ಲಿ m1 ಗೆ w2 ಗಿಂತ w1 ಇಷ್ಟ ಅಂತ ಬಾವಿಸ್ಬೇಕು. ಅದೇ ರೀತಿ ಮಿಕ್ಕವರದು ಕೂಡ)
L(m2) = {w1,w3,w2,w4}
L(m3) = {w1,W2,w4,w3}
L(m4) = {w3,w4,w2,w1}
ಅದೇ ರೀತಿ ಹೆಂಗಸರು ತಮಗೆ ಇಷ್ಟವಾದ ಗಂಡುಗಳನ್ನು ಅನುಕ್ರಮವಾಗಿ ಹೀಗೆ ಸೂಚಿಸಿದ್ದಾರೆಂದು ಬಾವಿಸೋಣ:
L(w1) = {m4,m3,m2,m1}
L(w2) = {m4,m1,m3,m2}
L(w3) = {m1,m2,m4,m3}
L(w4) = {m2,m1,m4,m3}
(ಈ ಹೆಣ್ಣು ಮತ್ತು ಗಂಡುಗಳ ಇಷ್ಟಗಳನ್ನು ನೀವು ಹೇಗೆ ಬೇಕಾದರು ಬದಲಾಯಿಸಿ ಈ ಜೋಡನೆಯ ವಿಶಿಷ್ಟತೆಯನ್ನು ಚೆನ್ನಾಗಿ ತಿಳಿದುಕೊಳ್ಳಬಹುದು).
ಮೊದಲನೆ ಸುತ್ತಿನಲ್ಲಿ m1,m2,m3 and m4 ಅನುಕ್ರಮವಾಗಿ w1 ಮತ್ತು w3 ಗೆ ಪ್ರಸ್ತಾಪ ಮಾಡುತ್ತಾರೆ. w1 ಮಾತ್ರ m3 ಒಪ್ಪಿಕೊಂಡು m1,m2 ರವರನ್ನು ತಿರಸ್ಕರಿಸುತ್ತಾಳೆ. w3 ಮಾತ್ರ m3 ಪ್ರಸ್ತಾಪ ವನ್ನು ಒಪ್ಪಿಕೊಳ್ಳುತ್ತಾಳೆ.
ಎರಡನೆ ಸುತ್ತಿನಲ್ಲಿ m1,m2 ( ಮೊದಲನೆ ಸುತ್ತಿನಲ್ಲಿ ತಿರಸ್ಕರಿದವರು) ಗಳು ತಮ್ಮ ಎರಡನೇ ಇಷ್ಟವಾದ w2 ಮತ್ತು w3 ಗಳಿಗೆ ಪ್ರಸ್ತಾಪ ಮಾಡುತ್ತಾರೆ. w2 ತನಗೆ ಬಂದ m1 ಪ್ರಸ್ತಾಪವನ್ನು ಒಪ್ಪಿಕೋಳ್ಳುತ್ತಾಳೆ. ಆದರೆ w3 ತನಗೆ ಬಂದ m2 ಪ್ರಸ್ತಾಪನವನ್ನು ಒಪ್ಪಿಕೊಂಡು ಮೊದಲೆ ನಿಶ್ಚಯಿಸಿದ m4 ಗಂಡನ್ನು ಬಿಡುತ್ತಾಳೆ.
ಮೂರನೆ ಸುತ್ತಿನಲ್ಲಿ m4 (ಎರಡನೆ ಸುತ್ತಿನಲ್ಲಿ ತಿರಸ್ಕರಿದವರು) ಗಂಡುಗಳು w2 ಪ್ರಸ್ತಾಪ ಮಾಡುತ್ತಾರೆ.
ಈ ಸುತ್ತಿನಲ್ಲಿ {m1,w2},{m2,w3}, {m3,w1} ,{m4,w4} ಜೋಡನೆ ಸಿದ್ದವಾಗುತ್ತದೆ.
m1 ತನ್ನ ಮೊದಲನೆ ಇಷ್ಟವಾದ w1 ಸಿಕ್ಕರೆ ಬೆಲೆ ೧ ಎಂದು w4 ಸಿಕ್ಕರೆ ಬೆಲೆ ೦.೨೫ ಎಂದು ಬಾವಿಸಿದರೆ ಈ ಜೋಡನೆಯ ಬೆಲೆ ೩.೨೫ ಎಂದಾಗುವುದು. ಅದೇರೀತಿ ಹೆಣ್ಣುಗಳ ಧೃಷ್ಟಿಯಲ್ಲಿ ನೋಡಿದಾಗ ಇದರ ಬೆಲೆ ೨ ಎಂದಾಗುವುದು.
ಇದೇ ಉದಾಹರಣೆಯನ್ನು ನಾವು ಹೆಣ್ಣುಗಳಿಂದ ಪ್ರಸ್ತಾಪ ಪ್ರಾರಂಬಿಸಿದರೆ ಜೋಡನೆಯು {w1,m3},{w2,m4},(w3,m1),{w4,m2} ಗೆ ಬದಲಾಗುವುದೆಂದು ಸುಲಭವಾಗಿ ತೋರಿಸಬಹುದು. ಇಲ್ಲಿ ಗಮನಿಸಬೇಕಾದ ಮುಖ್ಯಾಂಶವೆಂದರೆ ಪ್ರಸ್ತಾಪ ಮಾಡುವವರಿಗೆ ಜೋಡಣೆಯಲ್ಲಿ ಹೆಚ್ಚಿನ ಅನುಕೂಲವಿರುವುದು. ಅದಕ್ಕೆ ಇರಬೇಕು ನಮ್ಮಲ್ಲಿ ಹೆಣ್ಣಿನ ಕಡೆಯವರಿಂದ ಹೆಚ್ಚಿನ ಪ್ರಸ್ತಾಪ ಬರುವುದು.
ಈಗ ಇದೇ ಉದಾಹಣೆಯನ್ನು (ನಿಜ ಜೀವನಕ್ಕೆ ಹತ್ತಿರವಾದ) ಸ್ವಲ್ಪ ಬದಲಾಯಿಸೋಣ:
L(m1) = {w1,w2,w3}
L(m2) = {w1,w2,w3}
L(m3) = {w1,w3,w2}
L(w1) = {m1,m2,m3}
L(w2) = {m1,m3,m2}
L(w3) = {m1,m2,m3}
ಇಲ್ಲಿ ಎಲ್ಲ ಗಂಡುಗಳಿಗು {w1} ಇಷ್ಟ ಮತ್ತು ಎಲ್ಲ ಹೆಣ್ಣುಗಳಿಗು {m1} ಇಷ್ಟ. ಮೇಲೆ ಕಾಣಿದ ರೀತಿ ಜೋಡಣೆ ಮಾಡಿದಾಗ (m1,w1),(m2,w2),(m3,w3) ಎಂಬ ಜೋಡಣೆ ಬರುವುದು. ಇಂತಹ ಸನ್ನಿವೇಶದಲ್ಲಿ (ಅಂದರೆ ಎಲ್ಲ ಗಂಡಸರು ಅತಿ ಸುಂದರಿಯನ್ನು ಹಾಗೆ ಎಲ್ಲ ಹೆಂಗಸರು shreemantarannu ಬಯಸಿದರೆ ) ಕೆಲವರಿಗೆ ಮಾತ್ರ ತಮಗೆ ಬೇಕಾದ ಸಂಗಾತಿ ಸಿಕ್ಕಿ ಹೆಚ್ಚಿನವರಿಗೆ ನಿರಾಶೆಯಾಗುವುದು.
ಯಾವುದೇ ಜೋಡಣೆಯನ್ನು ಸ್ಥಿರ/ಅಸ್ಥಿರವೆಂದು ವಿಂಗಡಿಸಬಹುದು. ಸ್ಥಿರವಾದ ಜೋಡಣೆಗಳಲ್ಲಿ ಏಕಾಂಗಿಯಾಗೆ ಇರಬೇಕಾದ ಗಂಡು ಹೆಣ್ಣುಗಳು ಜೋಡಣೆಯಲ್ಲಿ ಸಂಭವಿಸುವ ಜೋಡಿಗಿಂತ ಉತ್ತಮ ಜೋಡಿಯನ್ನು ತದನಂತರ ಹೊಂದಲು ಸಾಧ್ಯವಿಲ್ಲ. Gale & Shapleyಯವರು ಯಾವುದೆ ಎರಡು ಗಂಡು ಹೆಣ್ಣುಗಳ ಸರಣಿಯನ್ನು ಸ್ಥಿರವಾದ ಸರಣಿಯಲ್ಲಿ ಜೋಡಿಸಬಹುದೆಂದು ತೋರಿಸಿದ್ದಾರೆ.
ಇಲ್ಲಿ ನಾವು ೧;೧ ಜೋಡಣೆಯನ್ನು ಮಾತ್ರ ನೋಡಿದ್ದೇವೆ. ಇದನ್ನೇ ಸ್ವಲ್ಪ ಬದಲಾಯಿಸಿ ೧ ಕ್ಕೆ ಅನೇಕ ಉಮೇದು ವಾರರನ್ನು ಜೋಡಣೆ ಮಾಡಬಹುದು.
ಈ ತರಹದ ಜೋಡಣೆಯನ್ನು ಅತ್ಯಂತ ಸ್ಪರ್ದಾತ್ಮಕ ಸನ್ನಿವೇಶಗಳಲ್ಲಿ ಉಪಯೊಗಿಸುತ್ತಾರೆ. ಸುಮಾರು ೧೯೮೦ ರಲ್ಲೆ ಈ ತರಹದ ಜೋಡಣೆ ಅಮೇರಿಕಾದ ಅನೇಕ ವೈದ್ಯಕೀಯ ಕಾಲೇಜುಗಳ ರೆಸಿಡೆನ್ಸಿ ಪ್ರವೇಶದಲ್ಲಿ ಇದೆಯೆಂದರೆ ನಿಮಗೆ ಆಶ್ಚರ್ಯವಾಗ ಬಹುದು. ಕಾಲೇಜಿನ ಪ್ರವೇಶದ ಸಮಯದಲ್ಲಿ ವಿಧ್ಯಾರ್ತಿಗಳು ತಮಗೆ ಬೇಕಾದ ಕಾಲೇಜುಗಳನ್ನು ತಮ್ಮ ಬಯಕೆಗೆ ಅನುಕ್ರಮವಾಗಿ ಸೂಚಿಸುತ್ತಾರೆ. ಅದೇರೀತಿ ಕಾಲೇಜುಗಳು ಕೂಡ ವಿಧ್ಯಾರ್ತಿಗಳನ್ನು ಅನೇಕ ಮಾನದಂಡಗಳಿಂದ ಅಳೆದು ಅವರ ಹೆಸರನ್ನು ಅನುಕ್ರಮವಾಗಿ ಒಂದು ಪ್ರವೇಶಕೇಂದ್ರಕ್ಕೆ ಕಳುಹಿಸುತ್ತಾರೆ. ಅಲ್ಲಿ ಇಂಥಹ ಒಂದು ಜೋಡಣೆ ನಡೆಯುತ್ತದೆ. ಅಲ್ಲಿಂದ ಬಂದ ಫಲಿತಾಂಶವನ್ನು ಕಾಲೇಜು ಮತ್ತು ವಿದ್ಯಾರ್ತಿಗಳು ಒಪ್ಪಿಕೊಳ್ಳಲೇ ಬೇಕು. ಅದಕ್ಕೆ ಇದನ್ನು 'ಮುಂದಾಗಿಯೇ ಒಪ್ಪಿಗೆ' (Deferred Acceptance ) ಕೊಡುವ ಕಾರ್ಯವಿದಾನವೆಂದು ಕರೆಯಬಹುದು.
ಈ ವಿಷಯದಲ್ಲಿ ನಿಮಗೆ ಹೆಚ್ಚಿನ ಮಾಹಿತಿ ಬೇಕೆಂದರೆ ಇಲ್ಲಿ ಕ್ಲಿಕ್ಕಿಸಬಹುದು.
http://www.nobelprize.org/nobel_prizes/economics/laureates/2012/advanced-economicsciences2012.pdf
Comments
stable marriage problem ಎಂದು
ವೈಙಾೢನಿಕ ಬರಹಗಳನ್ನು