ಮನಸೆಂಬ ಮರ್ಕಟ (ಶ್ರೀ ನರಸಿಂಹ 54)
ಹುರಿದು ಬಿತ್ತಿದ ಬೀಜದಿಂದ ಫಲ ಪಡೆಯಲಾಗದಂತೆ
ಚಂಚಲ ಮನಸಲಿ ಗೈವ ಪೂಜೆ, ಜಪತಪಗಳು ಅಂತೆ
ಹುರಿದು ಬಿತ್ತಿದ ಬೀಜಕೆ ನೀರೆರೆದರೂ ಬೆಳೆ ಕೊಡದು
ಮನಸ ನಿಗ್ರಹಿಸದೆ ಸಾಧನೆಯಲಿ ಗುರಿ ಸೇರಲಾಗದು
ಹಸನಾಗಿಹ ಬೀಜವನು ಬಿತ್ತಿ ಬೆಳೆಯ ನೀ ಪಡೆವಂತೆ
ಸುಯೋಚನೆಗಳಲೇ ನೀ ಮನಸ ತೊಡಗಿಸ ಬೇಕಂತೆ
ಹಸುವನು ಕಟ್ಟುವ ತೆರದಿ ನೀ ಮನಸ ಹಿಡಿದಿಡಬೇಕು
ಅಸಾಧ್ಯವೇನಲ್ಲವಿದು ಅಭ್ಯಾಸದಿಂದಲಿ ಸಾಧಿಸಬೇಕು
ಮನವು ಮರ್ಕಟನ ತೆರದಿ ಚಂಚಲವೆಂಬುವುದದು ಸಹಜವು
ಹಿಡಿದಿಡಲದನು ಸಾಧನವಾಗಿಹುದು ಶ್ರೀನರಸಿಂಹನ ಜಪವು
Rating
Comments
ವಿಚಾರದ ಬೀಜಗಳ ಬಿತ್ತನೆ
ವಿಚಾರದ ಬೀಜಗಳ ಬಿತ್ತನೆ ಮುಂದುವರೆಯಲಿ.
In reply to ವಿಚಾರದ ಬೀಜಗಳ ಬಿತ್ತನೆ by kavinagaraj
ಬಹು ದಿನಗಳ ನಂತರ ನಿಮ್ಮ
ಬಹು ದಿನಗಳ ನಂತರ ನಿಮ್ಮ ಪ್ರತಿಕ್ರಿಯೆ ನೋಡಿ ಖುಷಿಯಾಯಿತು ಧನ್ಯವಾದಗಳು
.....ಸತೀಶ್