ಅತಿ ಸ್ವಾತಂತ್ರ್ಯ ಅಪಾಯಕಾರಿ

ಅತಿ ಸ್ವಾತಂತ್ರ್ಯ ಅಪಾಯಕಾರಿ

Comments

Submitted by Prakash Narasimhaiya Tue, 11/20/2012 - 22:17

ಆತ್ಮೀಯ‌ ದಿವಾಕರರೇ,
ಅತಿಯಾದ‌ ಸ್ವಾತ0ತ್ರ ನಿಜಕ್ಕೂ ಅಪಾಯಕಾರಿಯೆ! ಸ್ವತ0ತ್ರವಿಹುದೆ0ದು ಬಸ್ಸಿಗೆ ಕಲ್ಲು ತೂರುವ‌, ಎಲ್ಲೆ0ದರಲ್ಲಿ ಟೈರು ಸುಡುವ‌, ಅನಗತ್ಯವಾಗಿ ಶಾಲಾ ಕಾಲೆಜುಗಳಲ್ಲಿ ಮುಷ್ಕರ‌ ಮಾಡುವ‌ ಈ ಸ್ವಾತ0ತ್ರ ಬೇಕೇ? ಧರ್ಮದ‌ ಬಗ್ಗೆ ಅನಗತ್ಯ ಚರ್ಚೆ ಮಾಡುತ್ತಾ ಒ0ದು ಪ0ಗಡದವರ‌ ಮನಸ್ಸಿಗೆ ನೊವು0ಟು ಮಾಡುವ‌ ಸ್ವಾತ0ತ್ರ ಬೇಕೇ? ಇತ್ಯಾದಿಯಾಗಿ ಹಲವಾರು ಇವೆ. ಸ್ವತ0ತ್ರ ಸ್ವೇಚ್ಚಾಚಾರ‌ ಆಗಬಾರದು ಎ0ಬುದೇ ಇಲ್ಲಿಯ‌ ಉದ್ದೇಶ‌. ಸಕಾಲಿಕ‌ ಲೇಖನ‌. ಧನ್ಯವಾದಗಳು.

Submitted by anand33 Wed, 11/21/2012 - 08:18

ದೇವರು, ಧರ್ಮದ ಹೆಸರಿನಲ್ಲಿ ಜನರ ಗುಂಪು ಕಟ್ಟಿ ಪರ್ಯಾಯ ಆಡಳಿತ ನಡೆಸಲು ಬಿಡುವುದು ಮುಂದೆ ಅರಾಜಕತೆಗೆ ಕಾರಣವಾಗಬಹುದು. ಹೀಗಾಗಿ ಸಂವಿಧಾನವನ್ನು ಗೌರವಿಸದ, ತಾನು ಸಂವಿಧಾನಕ್ಕೆ ಅತೀತ ಎಂದು ಅಹಂಕಾರದಿಂದ ಬೀಗುವ ವ್ಯಕ್ತಿಗಳನ್ನು ಕಾನೂನು ಪ್ರಕಾರ ಉಕ್ಕಿನ ಹಸ್ತಗಳಿಂದ ನಿಯಂತ್ರಿಸದೆ ಹೋದರೆ ಧರ್ಮದ ಹೆಸರಿನಲ್ಲಿ ಪಾಕಿಸ್ತಾನದಲ್ಲಿ ತಾಲಿಬಾನ್ ಬೆಳೆದು ಪ್ರಜಾಪ್ರಭುತ್ವ ವ್ಯವಸ್ಥೆ ನಾಶವಾದಂತೆ ಭಾರತದ ಅವಸ್ಥೆಯೂ ಆದೀತು. ಯಾರೇ ಅದರೂ ಕಾನೂನಿಗಿಂತ, ಸಂವಿಧಾನಕ್ಕಿಂತ ಅತೀತರಲ್ಲ ಎಂದು ಸರ್ಕಾರ ನಡೆದುಕೊಳ್ಳದೆ ಹೋದರೆ ದೇವರು, ಧರ್ಮದ ಹೆಸರಿನಲ್ಲಿ ಜನರ ಗುಂಪು ಕಟ್ಟಿ ತಾವು ಹೇಳಿದಂತೆಯೇ ನಡೆಯಬೇಕು ಎಂದು ಹೇಳುವ ಪಾಳೆಯಗಾರರ ಸಂಖ್ಯೆ ದೇಶದಲ್ಲಿ ಹೆಚ್ಚಿ ಯಾರು ಹೆಚ್ಚು ಜನರ ಗುಂಪು ಕಟ್ಟುತ್ತಾನೋ ಅವನದೇ ಕಾನೂನು ಎಂಬ ಅರಾಜಕತೆ ಉಂಟಾದೀತು. ಹೀಗಾಗಿ ಸಂವಿಧಾನದ ಪ್ರಕಾರ ನಡೆದುಕೊಳ್ಳದ ವ್ಯಕ್ತಿಗಳನ್ನು, ಗುಂಪುಗಳನ್ನು ಕಾನೂನು ಪ್ರಕಾರ ದಂಡಿಸುವುದು ಯೋಗ್ಯ. ಇಂಥ ದಂಡನೆ ನಡೆಸದೆ ಇರುವ ಕಾರಣವೇ ಮುಂಬೈಯಲ್ಲಿ ಒಂದು ಗುಂಪಿನ ಬೆದರಿಕೆಗೆ ಸರ್ಕಾರವೇ ಮಣಿಯುವ ಸ್ಥಿತಿ ನಿರ್ಮಾಣವಾಗಿದೆ. ಇದನ್ನು ಹೀಗೆಯೇ ಬೆಳೆಯಲು ಬಿಟ್ಟರೆ ಪಾಕಿಸ್ತಾನಕ್ಕೆ ಆದ ಗತಿಯೇ ಭಾರತಕ್ಕೆ ಆಗಬಹುದು. ಹೀಗಾಗಿ ಎಲ್ಲರೂ ಕಾನೂನನ್ನು, ಸಂವಿಧಾನವನ್ನು ಗೌರವಿಸುದು ಅಗತ್ಯ. ದೇವರ, ಧರ್ಮದ ಹೆಸರಿನಲ್ಲಿ ಜನರ ಗುಂಪು ಕಟ್ಟಿ ತಮ್ಮ ಮಾತೇ ನಡೆಯಬೇಕು ಎಂದು ಹಿಂಸೆ ನಡೆಸುವವರನ್ನು ನಕ್ಸಲರನ್ನು ಕಠಿಣವಾಗಿ ಹತ್ತಿಕ್ಕುವಂತೆಯೇ ಹತ್ತಿಕ್ಕಬೇಕು. ನಕ್ಸಲರಿಗೆ ಒಂದು ನೀತಿ, ಧರ್ಮದ ಹೆಸರಿನಲ್ಲಿ ಹಿಂಸಾಚಾರ ನಡೆಸುವವರಿಗೆ ಒಂದು ನೀತಿ ಎಂಬ ಭೇದ ಸಲ್ಲದು. ದೇವರು, ಧರ್ಮದ ಹೆಸರಿನಲ್ಲಿ ಹಿಂಸಾಚಾರ ನಡೆಸುವವರಿಗೆ ನಮ್ಮ ದೇಶದಲ್ಲಿ ಕಡಿವಾಣ ಹಾಕದೆ ಇರುವ ಕಾರಣವೇ ದೇಶದಲ್ಲಿ ಹಲವು ಹಿಂಸಾಕಾಂಡಗಳು ನಡೆದಿವೆ.

Submitted by mamatha.k Wed, 11/21/2012 - 10:33

In reply to by anand33

ಫೇಸ್ ಬುಕ್ ನಂತಹ ಸಾಮಾಜಿಕ ಜಾಲ ತಾಣಗಳಲ್ಲಿ ತಮ್ಮ ಯೋಚನೆಗೆ ಬಂದಿದ್ದನ್ನು ಬರೆದು ಬಿಡುವವರ ಸಂಖ್ಯೆ ಹೆಚ್ಚಾಗಿದೆ. ಮಾತು ಆಡೋ ಮುನ್ನ ನೂರು ಬಾರಿ ಯೋಚಿಸು ಎಂಬಂತೆ, ತಮ್ಮ ಬರಹಗಳು ಅಥವಾ ಪ್ರತಿಕ್ರಿಯೆಗಳು ಯಾವುದೇ ಧರ್ಮ, ಸಮಾಜದ ಜನರ ಮನಸ್ಸಿನ ಧಾರ್ಮಿಕ ಹಾಗೂ ವೈಯಕ್ತಿಕ ಭಾವನೆಗಳಿಗೆ ಧಕ್ಕೆ ಉಂಟಾಗುತ್ತಿರುವಂತಿರಬಾರದು ಎಂಬುದನ್ನು ಅರಿತುಕೊಂಡು ಬರೆಯಬೇಕು. ಅತಿಯಾದರೆ ಅಮೃತವೂ ವಿಷ ಅಲ್ಲವೇ?

Submitted by ಆರ್ ಕೆ ದಿವಾಕರ Thu, 11/22/2012 - 12:22

In reply to by mamatha.k

ಬರೋಬರಿ ಮಾತ, ಆನಂದ ಅವರೇ, ಮಮತಾ ಅವರೇ.
ಅಲ್ಪಸಂಖ್ಯಾತರ ಓಲೈಕೆ, ವೋಟುಗಾರಿಕೆ ರಾಜಕೀಯ, ಆನಂದರ ಆಶಯಕ್ಕೆ ಅಡ್ಡಿಯೊಡ್ಡಿದೆ ಮಹಾಸಂಖ್ಯಾತರ ’ಛಿದ್ರತೆ’ಯೂ ಅದಕ್ಕೆ ಷಾಮೀಲಾಗುತ್ತದೆ!
ಜಾಲಬರಹಗಾರರ ಜವಾಬ್ದರಿಯ ಬಗ್ಗೆ, ಜಾಲತಾಣದಲ್ಲೇ ಎಚ್ಚರಿಕೆ ಮಾತನಾಡಿರುವುದು ಮಮತಾರ ವಿವೇಕ.
ಅಭಿವ್ಯಕ್ತಿ ಸ್ವಾತಂತ್ರ್ಯವೆಂದರೆ, ಯಾರು ಬೇಕಾದರೂ, ಏನು ಬೇಕಾದರೂ, ಯಾವಾಗ ಬೇಕಾದರೂ ಹೇಳಿಬಿಡಬಹುದು; ಬರೆಯಬಹುದು ಎಂದಲ್ಲ. ಅಭಿವ್ಯಕ್ತಿಗೆ ಒಂದು ’ರೀತಿ’ ಇರುತ್ತದೆ; ’ನೀತಿ’ ಇರುತ್ತದೆ. ಪ್ರಜೆಗಳೆಲ್ಲಾ ಒಬ್ಬೊಬ್ಬರೂ, ಅವರಿಗವರೇ, ವರದಿಗಾರರೂ, ಸಂಪಾದಕರೂ, ಸುದ್ದಿ ನಿರ್ವಾಹಕರೂ ಆಗಿಬಿಡುವುದಾದರೆ, ಪತ್ರಿಕೋದ್ಯಮವೂ, ದೃಶ್ಯವಾಹಿನಿಗಳೂ ಏಕಾದರೂ ಬೇಕು? ಜಾಲತಾಣಗಳು ಬಿಟ್ಟಿ ಸಿಕ್ಕಿವೆ ಎಂದು ಬೇಕಾಬಿಟ್ಟಿ ಬರೆದು ಬಿಸಾಕಿಬಿಟ್ಟರೆ, ಬರವಣಿಗೆಗೊಂದು ಪಾವಿತ್ರ್ಯ, ಪರಿಣಿತಿ ಮತ್ತು ವಿಶ್ವಾಸಾರ್ಹತೆಯಾದರೂ ಬಂದೀತೇ? ಕಸಬುದಾರಿಕೆ ಮತ್ತು ಹೊಣೆಗಾರಿಕೆಯಿಲ್ಲದ ಚಾನಲ್‌ಗಳು ಈಗಾಗಲೇ ಬೇಕಾದಷ್ಟು ಅವಘಡಗಳನ್ನು ಮಾಡುತ್ತಿವೆ. (ವಿಶೇಷ ಆಮಿಶ ಮತ್ತು ಪ್ರೇರಣೆಯಿಂದಲೂ ಇರಬಹುದು)
ಜಾಲತಾಣ ಬರಹಗಾರರ ಉತ್ಸಾಹವೇನೋ ಮೆಚ್ಚತಕ್ಕದ್ದು. ಜತೆಗೆ ಒಂದಷ್ಟು ’ಹವ್ಯಾಸೀ ಕಸಬುದಾರಿಕೆ’ಯಾದರೂ ಇದ್ದರೆ ಒಳ್ಳೆಯದು.

ಬರಹ

ಬಂದ್ ವಿರುದ್ಧ ಹೇಳಿಕೆ ನೀಡಿದ ಮೂಬೈ ಯುವತಿಯರಿಬ್ಬರನ್ನು ಪೊಲಿಸರು ಬಂಧಿಸಿ ಜಮಾನಿನ ಮೇಲೆ ಬಿಡುಗಡೆ ಮಾಡಿರುವ ಸುದ್ದಿ, ತುಂಬಾ ಗಲಾಟೆ ಮಾಡಿದೆ. ನಾನು ಸಹ, ಸಮಕಾಲೀನ ಘಟನೆಗಳ ಕುರಿತು ವ್ಯಾಖ್ಯಾನಿಸುವ ಹವ್ಯಾಸದವ; ಜಾಲತಾಣದಲ್ಲೂ, ಚೂರು-ಪಾರು ಕೈಯಾಡಿಸುವುದುಂಟು. ಆದರೆ ಹದ ತಪ್ಪಿದ ಟೀಕೆ ಹಚ್ಚಬಹುದಾದ ಬೆಂಕಿ ಅನಾಹುತ ಅರ್ಥ ಮಾಡಿಕೊಳ್ಳುವಷ್ಟು ವೃತ್ತಿ ಅನುಭವ ನನಗಿದೆ. ಬ್ಲಾಗು, ಫೇಸ್ ಬುಕ್ ಇತ್ಯಾದಿ ವಿದ್ಯನ್ಮಾನ ವಿದ್ಯೆಯ ಸಂವೃದ್ಧಿಯುಳ್ಳ ಯೌವನದ ಉತ್ಸಾಹಕ್ಕೆ, ಈ ತಿಳುವಳಿಕೆ ಕಮ್ಮಿ. ಕೈಲಿ ಹಿಡಿದಿರುವ ಆಧುನಿಕ ಎನ್ನುವುದರಲ್ಲೂ ಆಧುನಿಕವಾದ ಹ್ಯಾಂಡ್‌ಸೆಟ್‌ಗಳು ಇವರ ಅಲೋಚನಾ ಲಹರಿಗಿಂತಲೂ ಹೆಚ್ಚು ವೇಗವಾಗಿ ಕೆಲಸ ಮಾಡುವಂಥವು. ಮನೆಯಲ್ಲಿ ಶಾಸ್ತ್ರ-ಸಂಪ್ರದಾಯ ಹೇಳಲು ಬರುವ ಹಿರಿಯರನ್ನು ಗುರಾಯಿಸುವಷ್ಟು ನಿರಪಾಯಕಾರಿಯಲ್ಲ, ಸಾರ್ವಜನಿಕ ಆಗು-ಹೋಗಿನ ಬಗೆಗೆ ಟೀಕೆ ಮಾಡುವುದು. ಬಂದ್ ಅಥವಾ ಅಂತಹ ಅಡೆ-ತಡೆಗಳು ನಮ್ಮನ್ನು ರೇಗಿಸುತ್ತದೆ, ನಿಜ. ಅಂಥವು ತಪ್ಪೂ ಹೌದು, ಅಸರ್ಥನೀಯ ಕೂಡ. ತರ್ಕವನ್ನು ಅರ್ಥಮಾಡಿಕೊಳ್ಳುವ ವ್ಯವಧಾನ, ಸಮೂಹಸನ್ನಿಗಿರುವುದಿಲ್ಲ. ಇಂಥದನ್ನು ತಕ್ಷಣ ಹಸಿ-ಹಸಿಯಾಗಿಯೇ ಬರೆದು ಬಿಸಾಕಿಬಿಡುವುದರಿಂದ ಸುಧಾರಣೆಯಾಗುವುದುವುದಿಲ್ಲ; ಸಂಕಷ್ಟವೇ ಅಗತುಕೊಂಡೀತು! ಬೇಜವಾಬ್ದಾರೀ ಚಾನಲ್‌ಗಳು ಸಹಿತ, ’ಬ್ರೇಕಿಂಗ್ ನ್ಯೂಸ್’ ಪೈಪೊಟಿಯಲ್ಲಿ, ಇಂತಹ ಬೆಂಕಿ ಹಚ್ಚುವ ಕೆಲಸ ಮಾಡುತ್ತವೆ. ಪತ್ರಿಕಾಲಯದಲ್ಲಿರುವಂತೆ, ಸುದ್ದಿಯ ’ಕನ್ಫರ‍್ಮೇಷನ್’ ಪರಿಕಲ್ಪನೆ ಅವರಿಗಿರುವುದಿಲ್ಲ.
ವಾಕ್ ಸ್ವಾತಂತ್ರ್ಯ ಪ್ರಜಾಸತ್ತೆಯ ಆಸ್ತಿ, ನಿಜ. ವಿವೇಚನಾರಹಿತವಾಗಿ ಬಳಸಿದರೆ, ಅದೇ ಕಳೆದುಹೊಗಬಹುದು, ಜೋಕೆ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet