'ಫಿನಿಕ್ಸ್ ಮಾಲ್'
ಮುಂಬೈನ ಕುರ್ಲಾ ಕಡೆ ಹೋಗುವ ದಾರಿಯಲ್ಲಿ ಹಿಂದೆ ’ಕಮಾನಿಯೆಂಬ ಸ್ಟೀಲ್ ಕಾರ್ಖಾನೆ' ಯಿತ್ತು. ನಂತರ ಆದ ಕಾರ್ಮಿಕರ ಆಂದೋಳನದ ನಂತರ ಈ ಘಟಕ ಮುಚ್ಚಲ್ಪಟ್ಟಿತು. ಅದರ ಮತ್ತೊಂದು ಚಿಕ್ಕ ಉಪಶಾಖೆ ಠಾಣೆಯಲ್ಲಿ ಇದೆ ಅಂತ ಕೇಳಿದ್ದೇನೆ. ಈಗ ಈಸ್ಥಳದಲ್ಲಿ ಒಂದು ಭಾರಿ ಪ್ರಮಾಣದ ಮಾಲ್ ಸಿದ್ಧವಾಗಿ ಕಾರ್ಯರಥವಾಗಿದೆ. ಅದೇ 'ಫಿನಿಕ್ಸ್ ಮಾಲ್'. ಸ್ವಲ್ಪ ದಿನಗಳೇ ಆಗಿವೆ. ತುಂಬಾಚೆನ್ನಾಗಿದೆ. ಅಲ್ಲಿ ಏನನ್ನೂ ಕೊಳ್ಳುವುದು ನಮ್ಮಂತಹವರಿಗೆ ಕನಸೇ ಸರಿ. ಕಾರಿನಲ್ಲಿ ಬಂದರೆ ಪಾರ್ಕ್ ಮಾಡಲು ೧೦೦ ರೂಪಾಯಿ ಕೊಡಬೇಕು. ಇಲ್ಲವೇ ಪಾತಾಳದಲ್ಲಿ ಇರುವ ಕಾರ್ ಪಾರ್ಕಿಂಗ್ ಜಾಗಕ್ಕೆ ಹೋಗಲು ೮ ನಿಮಿಷ ಹಿಡಿಯುತ್ತದೆ. ಇಲ್ಲಿ ೩೦ ರೂ. ಪಾರ್ಕಿಂಗ್ ಶುಲ್ಕ.
ನಾವು ಅಮೆರಿಕದಲ್ಲಿದ್ದಾಗ ನೋಡಿದ ಮಾಲ್ ಗೂ, ಇದಕ್ಕೂ ಯಾವ ವ್ಯತ್ಯಾಸವೂ ಇಲ್ಲ. ಅದೇ ತರಹದ ಸಜಾವಟ್ಟು. ಶಾಪ್ ಗಳು ಕಾರಂಜಿ. ದೀಪ, ಎಸ್ಕಲೇಟರ್ ಗಳ ವಿನ್ಯಾಸ, ಈಟಿಂಗ್ ಪ್ಲೇಸ್ ಗಳು ಇತ್ಯಾದಿ. ನಾವು ಹೋದಾಗ ಮಳಿಗೆಗಳು ನೊಣಹೊಡೆಯುತ್ತಿದ್ದವು. ಇಲ್ಲಿ ಕೊಳ್ಳುವ ಶಕ್ತಿ ಇರುವವರು ಬರುವುದು ಕಡಿಮೆ. ಬಹುಶಃ ಚೆನ್ನಾಗಿ ಪರಿಚಯವಾದಮೇಲೆ ಹೆಚ್ಚು ಜನ ಬರಬಹುದೇನೊ. ಈಗಾಗಲೇ ಘಾಟ್ಕೋಪರ್ ಪಶ್ಚಿಮದಲ್ಲಿ ಒಂದು ವಿಶಾಲವಾದ 'ಮಾಲ್' ಇದೆ. ಅದು ಇರ್ವ ಪರಿಸರವೂ ಚೆನ್ನಾಗಿದೆ. ಆದರೆ ಕುರ್ಲಾದ ಫಿನಿಕ್ಸ್ ಮಾಲ್ ಇರುವ ಜಾಗ, ಅಷ್ಟು ಚೆನ್ನಾಗಿಲ್ಲ. ಕಾರ್ಮಿಕರ ಜಾಗದ ಪ್ರದೇಶದಲ್ಲಿ ಇನ್ನೂ ಅಷ್ಟು ಖರೀದಿಸುವ ಜನ ಬರಬೇಕಾಗಿದೆ.