ಉಗ್ರನಿಗೆ ಸಲ್ಲುವ ಗೌರವವಲ್ಲ

ಉಗ್ರನಿಗೆ ಸಲ್ಲುವ ಗೌರವವಲ್ಲ

                       ಮುಂಬೈ ದಾಳಿಯಲ್ಲಿ 161 ಸಾವಿಗೆ ಕಾರಣನಾದವರಲ್ಲಿ ಒಬ್ಬನಾದ ಉಗ್ರವಾದಿ ಕಸಬನನ್ನು ಎಂದೋ ಸಾಯಿಸಬೇಕಾಗಿದ್ದು, ಅವನಿಗೆ   ನಿನ್ನೆ ಗಲ್ಲು ಶಿಕ್ಷೆ ನೀಡಿರುವ ವಿಚಾರವನ್ನು ನಮ್ಮ ನಾಡಿನ ಪ್ರಮುಖಪತ್ರಿಕೆಗಳು ಮುಖ್ಯಪುಟದಲ್ಲಿ ದಪ್ಪ ದಪ್ಪ ಅಕ್ಷರಗಳಲ್ಲಿ, ದೊಡ್ಡ ಫೋಟೋ ಸಮೇತ ಇಡೀ ಪುಟದಲ್ಲಿ ಹುತಾತ್ಮನೇನೋ ಎಂಬುವಂತೆ ಬಿಂಬಿಸಿದ್ದಾರೆ. ಪ್ರತಿಕ್ಷಣದ ನಡವಳಿಕೆಯನ್ನು ದಾಖಲಿಸಿದ್ದಾರೆ.   ಒಬ್ಬ ಉಗ್ರವಾದಿಯನ್ನು ಗಲ್ಲಿಗೇರಿಸಿದರ ಬಗ್ಗೆ ಇಷ್ಟೊಂದು ವೈಭವೀಕರಣ ಬೇಕೇ? ಗಲ್ಲಿಗೆರಿಸುದರ ಬಗ್ಗೆ ಒಂದು ಚಿಕ್ಕ ಸುದ್ದಿ ವಿಭಾಗದ ವರದಿ ಸಾಕೆನಿಸಿತಿತ್ತು. ಬೇಕಿದ್ದರೆ ಸಂಪಾದಕರ ಕಾಲಂನಲ್ಲಿ ಅವನ ಬಗ್ಗೆ ಎಷ್ಟು ವಿವರ ಬೇಕಾದರೂ ವರದಿ ಬರೆಯಲಿ.   ಅದು ಬಿಟ್ಟು ಇವನಿಗೆ  ಭಾರತರತ್ನ ಪ್ರಶಸ್ತಿ ಕೊಟ್ಟಂತೆ ವೈಭವಿಕರಿಸಲಾಗಿದೆ. ಇಷ್ಟೊಂದು ಪ್ರಚಾರದ ಅವಶ್ಯಕತೆ ಏನಿದೆ? 

                  ರಾಷ್ಟ್ರದ ಗೃಹ ಮಂತ್ರಿಗಳು ಪ್ರಧಾನಿಗೆ ಮತ್ತು ಸೋನಿಯಾ ಗಾಂಧಿಗೆ ಈ ವಿಚಾರ ತಿಳಿಸಿರಲಿಲ್ಲವೆಂದು ಹೇಳಿಕೆ ಕೊಟ್ಟಂತಹ ಸಂದರ್ಭದಲ್ಲಿ ಪ್ರಚಾರ ಮಾಧ್ಯಮದವರು ಇಷ್ಟೊಂದು ವೈಭವಿಕರಿಸಿದ್ದು ಸರಿಯೇ?
                   ಏನೇ ಆದರೂ ಒಬ್ಬ ಉಗನಿಗೆ ಸಲ್ಲಬೇಕಾದ ಗೌರವ ಇದಲ್ಲ. 

Comments

Submitted by anand33 Thu, 11/22/2012 - 12:26

ನಿಮ್ಮ ಮಾತು ಅತ್ಯಂತ ಸಕಾಲಿಕ ಹಾಗೂ ನಿಜ. ಮಾಧ್ಯಮಗಳಿಗೆ ಯಾವುದನ್ನು ಹೇಗೆ, ಎಷ್ಟು ಕೊಡಬೇಕು ಎಂಬ ವಿವೇಕವೇ ಮರೆಯಾಗಿದೆ. ಜನರೂ ಅಷ್ಟೇ ಪಟಾಕಿ ಹಚ್ಚಿ, ಸಿಹಿ ವಿತರಿಸಿ ಸಂಭ್ರಮಿಸುವ ಪರಿಸ್ಥಿತಿ ನೋಡಿದರೆ ಯಾವುದೋ ದೊಡ್ಡ ಯುದ್ಧ ಗೆದ್ದ ಸಂಭ್ರಮ ಎಂದು ಭಾವಿಸಬೇಕು. ಇದೆಲ್ಲ ಸಮೂಹ ಸನ್ನಿಯಲ್ಲದೆ ಮತ್ತೇನೂ ಅಲ್ಲ. ಕಸಬ್ ಉಗ್ರಗಾಮಿಗಳ ಒಬ್ಬ ಕೂಲಿಯಾಳು ಮಾತ್ರ. ಆತನು ಹಣಕ್ಕಾಗಿ ಉಗ್ರರ ಕೂಲಿಯಾಗಲು ಒಪ್ಪಿಕೊಂಡಾಗಲೇ ಸ್ವತಹ: ತಾನೂ ಪ್ರಾಣತ್ಯಾಗ ಮಾಡಲು ಒಪ್ಪಿಕೊಂಡವನು, ಆದರೆ ಸಂದರ್ಭವಶಾತ್ ಸಿಕ್ಕಿ ಬಿದ್ದವನು ಅಷ್ಟೇ. ನಿಜವಾದ ಉಗ್ರರ ಕೂದಲು ಕೂಡ ಕೊಂಕದೆ ಇರುವಾಗ ಈ ಪರಿಯ ಸಂಭ್ರಮ ನೋಡುವಾಗ ನಮ್ಮ ಜನರಲ್ಲಿ ವಿವೇಕ ಮರೆಯಾಗಿದೆ ಎಂಬುದು ಎದ್ದು ಕಾಣುತ್ತದೆ. ಇಂಥ ಹುಚ್ಚು ಸಮೂಹ ಸನ್ನಿಯಿಂದ ಮೂರು ಕಾಸಿನ ಪ್ರಯೋಜನವೂ ಆಗಲಾರದು ಎಂಬ ವಿವೇಕ ನಮಗೆ ಇದ್ದರೆ ಒಳ್ಳೆಯದು
Submitted by H A Patil Thu, 11/22/2012 - 20:45

ಪ್ರಕಾಶ ನರಸಿಂಹಯ್ಯನವರಿಗೆ ವಂದನೆಗಳು " ಉಗ್ರನಿಗೆ ಸಲ್ಲುವ ಗೌರವವಲ್ಲ " ಬರಹ ಓದಿದೆ. ತಮ್ಮ ಅಭಿಪ್ರಾಯ ಸರಿ, ಆದರೆ ನೀವು ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದೀರಿ ಎಂದು ಅನಿಸುತ್ತದೆ. ನಮ್ಮ ದೇಶದ ಸಂವಿಧಾನ ಮತ್ತು ಕಾನೂನುಗಳು ಜಗತ್ತಿನಲ್ಲೆ ಮಾನವೀಯತೆಯ ಪರವಾದವು. ಹೀಗಾಗಿ ವಿಳಂಬವಾಹಿತು ಎನಿಸತ್ತದೆ. ಸಾವಿನ ಸಮ್ಮುಖದಲ್ಲಿ ಕಸಬ್ ತಾನು ಇನ್ನು ಮುಂದೆ ಇಂತಹ ಕೃತ್ಯ ಮಾಡುವುದಿಲ್ಲ ಎಂದಿದ್ದಾನೆ ಅಷ್ಟು ಸಾಕು ಎನಿಸುತ್ತದೆ. ಈ ಘಟನೆಯಲ್ಲಿ ಅಂಗವಿಕಲರನ್ನು ಮನೆಗೆ ಕಳಿಸಿದೆ. ಕಸಬ್್ ವಿಚಾರಣೆಗಾಗಿ ಕೋಟ್ಯಾಂತರ ಖರ್ಚು ಮಾಡಿದ ಸರ್ಕಾರ ಇನ್ನೂ ಆ ಯೋಧರಿಗೆ ಪೆನ್ಸೆನ್ ಮಂಜೂರು ಮಾಡದಿರುವುದು ಒಂದು ವಿಪರ್ಯಾಸ. ಸಕಾಲಿಕ ಬರಹ ಧನ್ಯವಾದಗಳು.
Submitted by Prakash Narasimhaiya Thu, 11/22/2012 - 21:37

In reply to by H A Patil

ಆತ್ಮೀಯ ಪಾಟೀಲರಿಗೆ, ಅನಾವಶ್ಯಕವಾಗಿ 161 ಜನ ಮುಗ್ಧರನ್ನು ಕೊಲೆಗೆ ಕಾರಣನಾದ ಒಬ್ಬ ಉಗ್ರನಿಗೆ ಮಾನವೀಯತೆಯನ್ನು ಪ್ರದರ್ಶಿಸಬೇಕಿಲ್ಲ. ಅವನಿಗೆ ನೀಡಲಾದ ಶಿಕ್ಷೆಯನ್ನು ವೈಭವಿಕರಿಸುವುದರ ಬದಲಿಗೆ, ಇಂತಹ ಪಾತಕಕ್ಕೆ ಬಲಿಯಾದ ಕುಟುಂಬಗಳ ಬಗ್ಗೆ ಮಾನವೀಯತೆಯ ಪ್ರದರ್ಶನವಾಗಬೇಕಿದೆ. ಸರಕಾರ ಏನು ಮಾಡಿದೆ? ಏನು ಮಾಡಿಲ್ಲ ? ಎಂಬುದನ್ನು ವೈಭವಿಕರಿಸಬೇಕಿದೆ. ಸಾರ್ವಜನಿಕರ ರಕ್ಷಣೆಗೆ ನಿಂತ ಆ ವೀರ ಯೋಧರ ಕುಟುಂಬಗಳ ಸ್ತಿತಿಯನ್ನು ಜನತೆಗೆ ತಿಳಿಸಬೇಕಾಗಿದೆ. ಇಂತಹ ಕೆಲಸವನ್ನು ಪ್ರಸಾರ ಮಾಧ್ಯಮಗಳು ಬೇಕಿರುವಷ್ಟು ಮಾಡದಿರುವ ಬಗ್ಗೆ ಖಂಡಿತವಾಗಿಯೂ ನನಗೆ ಬೇಸರವಿದೆ. ಹೀಗಾಗಿ ನಾನು ಭಾವನಾತ್ಮಕವಾಗಿಯೇ ಪ್ರತಿಕ್ರಿಯಿಸಿದ್ದೇನೆ. ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
Submitted by Prakash Narasimhaiya Thu, 11/22/2012 - 21:39

In reply to by Prakash Narasimhaiya

ಆತ್ಮೀಯ ಪಾಟೀಲರಿಗೆ, ಅನಾವಶ್ಯಕವಾಗಿ 161 ಜನ ಮುಗ್ಧರನ್ನು ಕೊಲೆಗೆ ಕಾರಣನಾದ ಒಬ್ಬ ಉಗ್ರನಿಗೆ ಮಾನವೀಯತೆಯನ್ನು ಪ್ರದರ್ಶಿಸಬೇಕಿಲ್ಲ. ಅವನಿಗೆ ನೀಡಲಾದ ಶಿಕ್ಷೆಯನ್ನು ವೈಭವಿಕರಿಸುವುದರ ಬದಲಿಗೆ, ಇಂತಹ ಪಾತಕಕ್ಕೆ ಬಲಿಯಾದ ಕುಟುಂಬಗಳ ಬಗ್ಗೆ ಮಾನವೀಯತೆಯ ಪ್ರದರ್ಶನವಾಗಬೇಕಿದೆ. ಸರಕಾರ ಏನು ಮಾಡಿದೆ? ಏನು ಮಾಡಿಲ್ಲ ? ಎಂಬುದನ್ನು ವೈಭವಿಕರಿಸಬೇಕಿದೆ. ಸಾರ್ವಜನಿಕರ ರಕ್ಷಣೆಗೆ ನಿಂತ ಆ ವೀರ ಯೋಧರ ಕುಟುಂಬಗಳ ಸ್ತಿತಿಯನ್ನು ಜನತೆಗೆ ತಿಳಿಸಬೇಕಾಗಿದೆ. ಇಂತಹ ಕೆಲಸವನ್ನು ಪ್ರಸಾರ ಮಾಧ್ಯಮಗಳು ಬೇಕಿರುವಷ್ಟು ಮಾಡದಿರುವ ಬಗ್ಗೆ ಖಂಡಿತವಾಗಿಯೂ ನನಗೆ ಬೇಸರವಿದೆ. ಹೀಗಾಗಿ ನಾನು ಭಾವನಾತ್ಮಕವಾಗಿಯೇ ಪ್ರತಿಕ್ರಿಯಿಸಿದ್ದೇನೆ. ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
Submitted by ಗಣೇಶ Fri, 11/23/2012 - 00:22

In reply to by Prakash Narasimhaiya

ಪ್ರಕಾಶ್ ಅವರೆ, ನಿಮ್ಮ ಅನಿಸಿಕೆಗೆ ನನ್ನ ಸಹಮತವಿದೆ. ಆ ಸಮಯದಲ್ಲಿ ಮಡಿದ ವೀರ ಯೋಧನ ಒಂದು ನೆನಪು- ವೀರ ಯೋಧ ಮೇಜರ್ ಸಂದೀಪ್ ಉನ್ನಿಕೃಷ್ಣನ್ ( http://en.wikipedia… ) ಅವರ ನೆನಪಿಗೆ ಸರಕಾರ ಯಲಹಂಕ ನ್ಯೂಟೌನ್ ಬಳಿಯ, ಸುಮಾರು ೩-೪ ಕಿ.ಮೀ. ಉದ್ದದ ರಸ್ತೆಗೆ ಅವರ ಹೆಸರಿಟ್ಟಿದೆ. ಪುತ್ತೂರು, ದಕ್ಷಿಣ ಕನ್ನಡದ ಸಮೀಪದ ಒಂದು ಹಳ್ಳಿಯಲ್ಲಿ ಸರ್ಕಲ್ ಹೆಸರು ನೋಡಿ-
Submitted by Prakash Narasimhaiya Fri, 11/23/2012 - 10:13

In reply to by ಗಣೇಶ

ಆತ್ಮೀಯ ಗಣೇಶರೆ, ನೋಡಿ ಇಂತಹ ವಿಚಾರಗಳು ಪ್ರಚಾರ ಪಡೆದುಕೊಳ್ಳುವುದೇ ಇಲ್ಲ. ನಿಮ್ಮ ಅನಿಸಿಕೆಗೆ ಧನ್ಯವಾದಗಳು.
Submitted by H A Patil Fri, 11/23/2012 - 20:21

In reply to by Prakash Narasimhaiya

ಪ್ರಕಾಶ ನರಸಿಂಹಯ್ಯ ರವರಿಗೆ ವಂದನೆಗಳು ಈ ಲೇಖನ ಕುರಿತಂತೆ ನಾನು ಬರೆದ ಪ್ರತಿಕ್ರಿಯೆಗೆ ತಾವು ಬರೆದ ಮರು ಪ್ರತಿಕ್ರಿಯೆ ಓದಿದೆ, ತಮ್ಮ ಅನಿಸಕೆ ಸರಿ ಧನ್ಯವಾದಗಳು.
Submitted by bhalle Thu, 11/22/2012 - 21:29

ಜಯ-ವಿಜಯ’ರು ಶಾಪಗ್ರಸ್ತರಾಗಿ ಶಾಪಮುಕ್ತರಾಗಲು ಏನು ಮಾಡಬೇಕು ಎಂದು ಕೇಳಿಕೊಂಡಾಗ, ಅವರ ಮುಂದೆ ಎರಡು ಚಾಯ್ಸ್ ಕೊಡಲಾಯಿತು ... ಅವರುಗಳು ತೆಗೆದುಕೊಂಡ ನಿರ್ಧಾರದಿಂದ ನನಗೆ ಏನನ್ನಿಸುತ್ತದೇ ಅಂದರೇ, ಅತೀ ಒಳ್ಳೆಯವರಾದರೂ, ಅತೀ ಕೆಟ್ಟವರಾದರೂ ಸಲ್ಲುವ ಮನ್ನಣೆ ಒಂದೇ ! ಅತ್ಲಾಗೆ ಅದೂ ಅಲ್ಲದೇ ಇತ್ಲಾಗೆ ಇದೂ ಅಲ್ಲದೆ ಇರೋ ನಮ್ಮಂತಹ ಬಡಪಾಯಿಗಳು ಈ ಜಗದಲ್ಲಿ ತ್ರಿಶಂಕುಗಳು !!
Submitted by Prakash Narasimhaiya Thu, 11/22/2012 - 21:49

In reply to by bhalle

ಆತ್ಮೀಯ ಭಲ್ಲೇಜಿ, ನಮ್ಮಂತಹ ತ್ರಿಶಂಕಿನ ವಾಸಿಗಳು ಏನೂ ಮಾಡಲಾಗದೆ ಕೇವಲ ಮಾತನಾಡಿ ಅಥವಾ ಸಂಪದದಲ್ಲಿ ಒಂದು ಲೇಖನ ಬರೆದು ಚಟ ತೀರಿಸಿಕೊಳ್ಳುವವರು. ಆದರೆ ಒಂದೇ ಒಂದು ಸಮಾಧಾನ ಅಂದರೆ, ನಮ್ಮ ಒಳಗಿನ ಬೇಗುದಿಯನ್ನು ಸ್ವಲ್ಪ ಶಾಂತ ಗೊಳಿಸಿದ್ದು ನಿಮ್ಮಂತಹ ಅಭಿಮಾನಿಗಳು ಓದಿದಾಗ ಇನ್ನಷ್ಟು ಶಾಂತಿ.......ಏನನ್ನುತ್ತೀರಾ? ಧನ್ಯವಾದಗಳು.