ಕೆಲಸ ಖಾಲಿಯಿದೆ. ಅದನ್ನ ಮಾಡೋಕೆ ಯಾರೂ ಮುಂದೆ ಬರ್ತಿಲ್ಲ!

ಕೆಲಸ ಖಾಲಿಯಿದೆ. ಅದನ್ನ ಮಾಡೋಕೆ ಯಾರೂ ಮುಂದೆ ಬರ್ತಿಲ್ಲ!

ಭಾರತದ 1.2 ಮಿಲಿಯನ್​ ಜನರಲ್ಲಿ ಧರ್ಮ ಗುರುಗಳಿದ್ದಾರೆ, ಚಿಂದಿ ಹಾಯುವವರಿದ್ದಾರೆ, ರಾಜಕಾರಣಿಗಳಿದ್ದಾರೆ. ಕೊಲೆಗಡುಕರಿದ್ದಾರೆ, ನಟರಿದ್ದಾರೆ, ತಲೆ ಹಿಡುಕರಿದ್ದಾರೆ, ರೈತರಿದ್ದಾರೆ, ಪ್ರಖರ ಪಂಡಿತರೂ ಇದ್ದಾರೆ. ಹೀಗೆ ಹಲವು ಮಂದಿ ಒಂದಿಲ್ಲೊಂದು ಕೆಲಸಗಳನ್ನ ಮಾಡ್ತಿದ್ದಾರೆ. ಭಾರತದಲ್ಲಿ ಒಂದು ಕೆಲಸ ಖಾಲಿ ಇದೆ. ಆದ್ರೆ ಅದನ್ನ ಮಾಡೋಕೆ ಯಾರೂ ಮುಂದೆ ಬರ್ತಿಲ್ಲ. ಅಂದ್ಹಾಗೆ ಆ ಕೆಲಸ ಯಾವುದು ಗೊತ್ತಾ? ಗಲ್ಲಿಗೇರಿಸುವ ಕೆಲಸ!


2004ರಲ್ಲಿ ಅಸ್ಸಾಂ ಗಲ್ಲಿಗೇರಿಸುವ ಕೆಲಸಕ್ಕೆ ಆಸಕ್ತರನ್ನ ಕರೆದಿತ್ತು. ಈ ವೇಳೆ ಯಾರೊಬ್ಬರೂ ಅತ್ತ ಕಡೆ ತಲೆ ಹಾಕಿರ್ಲಿಲ್ಲ. ಯಾವ ಕಾರಣಕ್ಕಾಗಿ ಈ ಕೆಲಸ ಮಾಡಲು ಇಷ್ಟಪಡುತ್ತಿಲ್ಲವೋ ಗೊತ್ತಿಲ್ಲ. ಆದ್ರೂ ದೇಶದ ತುಂಬಾ ಗಲ್ಲಿಗೇರಿಸುವ ಕೆಲಸ ಮಾಡ್ತಿರೋರು ಕೆಲವೇ ಕೆಲವು ಮಂದಿ ಮಾತ್ರ. ಕೆಲವ್ರು ನಿವೃತ್ತಿ ತಗೊಂಡು ಮನೆಯಲ್ಲಿದ್ದಾರೆ.

ಮಹಾರಾಷ್ಟ್ರದಲ್ಲಿದ್ದ ಗಲ್ಲಿಗೇರಿಸುವ ಕೆಲಸಗಾರ ಜಾಧವ್ 1995ರಲ್ಲಿ ನಿವೃತಿಯಾದ. ತಿಹಾರ್​ ಜೈಲ್​ನಲ್ಲಿ ಅಂತಿಮ ಬಾರಿಗೆ 1989ರಲ್ಲಿ ಗಲ್ಲಿಗೇರಿಸಿದ್ದು. ಇಂದಿರಾ ಗಾಂಧಿ  ಹಂತಕರಾದ ಸತ್ವಂತ್ ಸಿಂಗ್ ಮತ್ತು ಕೆಹಾರ್​ ಸಿಂಗ್​ರನ್ನು ಗಲ್ಲಿಗೇರಿಸಲಾಯ್ತು. ಇವರನ್ನು ಗಲ್ಲಿಗೇರಿಸಿದ್ದು ಕಲ್ಲು ಹಾಗೂ ಫಕೀರ್ ಎಂಬ ಹ್ಯಾಂಗ್​ಮ್ಯಾನ್​ಗಳು. ಅವರೀಗ ಇಲ್ಲ.

ಆದ್ರೆ ಕಲ್ಲು ಅವರ ಮಗ ಮಮ್ಮು ಸಿಂಗ್​ ಮೀರತ್​ ಜೈಲಿನಲ್ಲಿ ಹ್ಯಾಂಗ್​ಮ್ಯಾನ್​ ಆಗಿ ಕೆಲಸ ಮಾಡ್ತಿದ್ದ್ರು. ಇವ್ರು 1997ರಲ್ಲಿ 10 ಮಂದಿಯ ಕುತ್ತಿಗೆಗೆ ನೇಣು ಬಿಗಿದಿದ್ದಾರೆ. ವಿಶೇಷಾಂದ್ರೆ 1995 ರಿಂದ್ಲೂ ಬಿಹಾರ, ಅಸ್ಸಾಂ, ಮಹಾರಾಷ್ಟ್ರ ಒಳಗೊಂಡು ಹಲವಾರು ರಾಜ್ಯದ ಜೈಲುಗಳಲ್ಲಿ ಹ್ಯಾಂಗ್​ಮ್ಯಾನ್​ಗಳ ಕೆಲಸ ಖಾಲಿಯಿದೆ. ಇದಕ್ಕೆ ಏನಾದ್ರೂ ಕಾರಣಗಳಿವೆಯಾ? ಅಂತ ನೋಡಿದ್ರೂ ಸಾಕಷ್ಟು ವಿಚಾರಗಳು ಬೆಳಕಿಗೆ ಬರ್ತವೆ.

ಕೂಲಿ ಬರೀ 150 ರುಪಾಯಿ
ತಾತ್ಕಾಲಿಕ ಕೆಲಸ
ನಿವೃತ್ತಿಯ ಅವಧಿ 58 ವರ್ಷ
ಪಾಪಪ್ರಜ್ಞೆಯ ಕೀಳರಿಮೆ

ಹೀಗೆ ಮನುಷ್ಯನನ್ನು ಕಾನೂನಿನ ಮೇರೆಗೆ ಕೊಲ್ಲುವ ಕೆಲಸಕ್ಕೆ ಸರ್ಕಾರ ನೀಡೋದು ಕೇವಲ 150 ರುಪಾಯಿ.
ಅಲ್ಲದೇ ಇದು ಖಾಯಂ ಕೆಲಸವಲ್ಲ.  ಹ್ಯಾಂಗ್​ಮ್ಯಾನ್​ ಕೆಲಸದ ನಿವೃತ್ತಿಯ ಅವಧಿ 58 ವರ್ಷ. ಇದು ಕೂಡ ಹ್ಯಾಂಗ್​ಮ್ಯಾನ್​ ಕೆಲಸಕ್ಕೆ ಯಾರೂ ಸಿಗದಿರೋದಕ್ಕೆ ಕಾರಣವಾಗಿರಬಹುದು. ಕೊಲ್ಲುವ ಕೆಲಸ ಮಾಡಿ ಪಾಪ ಕಟ್ಟಿಕೊಳ್ತೀವಿ ಅನ್ನೋ ಕೀಳರಿಮೆಯ ಯೋಜನೆಯಿಂದ್ಲೂ ಇಂತಹ ಕೆಲಸಕ್ಕೆ ಯಾರೂ ಬರೊಲ್ಲ ಅನ್ಸುತ್ತೆ.

ಇದಲ್ಲದ ಒಂದಷ್ಟು ಕುತೂಹಲಕಾರಿ ಅಂಶಗಳು ಅಂದ್ರೆ  ಗಲ್ಲಿಗೇರಿಸುವ ಕೆಲಸಗಾರರು ಕಟ್ಟಾ ಧರ್ಮಾಚರಣೆಯನ್ನು ಮಾಡುತ್ತಾರೆ. ಇವರು ಮುಖ್ಯವಾಗಿ ಹನುಮಾನ್ ಹಾಗೂ ಕಾಳಿ ಮಾತೆಯನ್ನು ಆರಾಧಿಸುತ್ತಾರೆ. ಇದನ್ನು ಬಂಗಾಳದ ಜೈಲಿನ ಹ್ಯಾಂಗ್​ಮ್ಯಾನ್​ ಆಗಿದ್ದ ಮುಲ್ಲಿಖ್ ಸಂದರ್ಶನವೊಂದ್ರಲ್ಲಿ ಹೇಳಿಕೊಂಡಿದ್ದಾನೆ.

ಏನ್​ ಕೆಲಸ ಮಾಡ್ಬೇಕು?

ಹ್ಯಾಂಗ್​ಮ್ಯಾನ್​ ಬೆಳಗ್ಗೆ 5 ಗಂಟೆಗೆ ಏಳಬೇಕು. ಗಲ್ಲುಗೇರಿವವನಿಗೆ ಚಹ ನೀಡಿ, ಅವನ ಮೆಚ್ಚುಗೆಯ ಪವಿತ್ರ ಗ್ರಂಥವನ್ನು ಓದಲು ಕೊಡಬೇಕು. ಅಲ್ಲದೇ ಕೊನೆಯ ಆಸೆಯನ್ನೂ ಫೂರೈಸಲು ಮುಂದಾಗಬೇಕು.

ಗಲ್ಲಿಗೇರಿಸುವುದು ಒಂದು ಕಲೆ. ನೇಣಿಗೇರಿಸುವ ಪ್ರಕ್ರಿಯೆ ಸರಳವಾಗುವ ನಿಟ್ಟಿನಲ್ಲಿ ಹಗ್ಗ ತಯಾರಿಸಲು ಕೆಲವು ಹಂತಗಳ ತಯಾರಿ ಅಗತ್ಯವಿರುತ್ತದೆ. ಯಾವುದೇ ವ್ಯಕ್ತಿಯನ್ನು ಗಲ್ಲಿಗೆ ಹಾಕುವ ಮೊದಲು ನಾನು ಮಾರ್ಜಕ, ತುಪ್ಪ ಮತ್ತು ಇತರ ದ್ರವ್ಯಗಳನ್ನು ಹಗ್ಗಕ್ಕೆ ಲೇಪಿಸುತ್ತಾರೆೆ. ಇದರಿಂದ ನೇಣು ಪ್ರಕ್ರಿಯೆ ಸರಾಗವಾಗಿ ನಡೆಯುತ್ತದೆ. ಅದಕ್ಕಿಂತಲೂ ಹೆಚ್ಚಾಗಿ ನೇಣಿಗೆ ಹಾಕುವ ವ್ಯಕ್ತಿ ತನ್ನ ಗಲ್ಲಿಗೇರಿಸುವ ಸಂದರ್ಭದಲ್ಲಿ ತನ್ನ ದೃಢ ಮನೋಭಾವವನ್ನು ಹೊಂದಿರುವುದು ಅಗತ್ಯ.

ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ರಾಜಸ್ತಾನ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಳೆದ ನಾಲ್ಕು ದಶಕಗಳಿಂದ ಈ 65ರ ಮಾಮು ಸಿಂಗ್ ನೇರ ಅಥವಾ ಪರೋಕ್ಷವಾಗಿ ಪಾತಕಿಗಳನ್ನು ಗಲ್ಲಿಗೆ ಹಾಕುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡು ಬಂದಿದ್ದರು.

ಇಷ್ಟರವರೆಗೆ ಮಾಮು ಸಿಂಗ್ ಹಲವು ರಾಜ್ಯಗಳಲ್ಲಿ 10 ಮಂದಿಯನ್ನು ನೇಣಿಗೇರಿಸಿದ್ದಾರೆ. ಅವರ ಪ್ರಕಾರ ತನ್ನ ಅನುಭವವನ್ನು ಪರಿಗಣಿಸಿ ಸರಕಾರವು ತನ್ನನ್ನೇ ಕಸಬ್ ನೇಣಿಗೆ ಹಾಕಲು ಕರೆಸುತ್ತದೆ. ಹಾಗೆ ಮಾಡಿದಲ್ಲಿ ನನಗೆ ಅತೀವ ಸಂತೋಷವಾಗುತ್ತದೆ ಎಂದು ಹೇಳಿಕೊಂಡಿದ್ದರು. ಆದ್ರೆ ಕಸಬ್​ನನ್ನು ಗಲ್ಲಿಗೇರಿಸುವ ಮುಂಚೆಯೇ ಮಾಮು ಸಿಂಗ್​ ಸತ್ತರು. ಕೊನೆಯ ಆಸೆ ಕೇಳುತ್ತಿದ್ದವನ ಕೊನೆಯ ಆಸೆಯೇ ಈಡೇರಲಿಲ್ಲ.

2009ರಲ್ಲಿ ದೇಶದ ಕೊನೆಯ ಹ್ಯಾಂಗ್​ಮ್ಯಾನ್​ ಅನಿಸಿಕೊಳ್ಳುತ್ತಿದ್ದ ನಾಥಾ ಮಲ್ಲಿಕ್​ ಕೂಡ ಇಲ್ಲವಾದ. ಈ ಮೂಲಕ ರಾಷ್ಟ್ರದ ಹಲವು ಜೈಲುಗಳಲ್ಲಿ ಗಲ್ಲಿಗೇರಿಸುವ ಹುದ್ದೆ ಖಾಲಿಯಾಯ್ತು. 1995ರಿಂದ ಇಲ್ಲಿಯವರೆಗೂ ಒಬ್ಬರೂ ಆ ಕೆಲಸಕ್ಕೆ ಸ್ವಯಂಪ್ರೇರಿತರಾಗಿ ಸೇರಿಕೊಳ್ಳಲಿಲ್ಲ. ಇವತ್ತು ರಾಷ್ಟ್ರದ ಹಲವು ಜೈಲುಗಳಲ್ಲಿ ಹ್ಯಾಂಗ್​ಮ್ಯಾನ್​ಗಳೇ ಇಲ್ಲ, ಹ್ಯಾಂಗ್​ ಆಗೋಕೆ 300 ಮಂದಿ ಸಾಲುಗಟ್ಟಿ ನಿಂತಿದ್ದಾರೆ....