ಮಾಲು ಮಾತುಗಳು...

ಮಾಲು ಮಾತುಗಳು...

ಕವನ

 

-1-
ದೇಶದಲ್ಲಿ ಜನ ಸಂಖ್ಯೆ 
ಕೋಟಿ  ಕೋಟಿ  ಕೋಟಿ 
ಆದರೂ ನಿಂತಿಹುದು ಎಲ್ಲಿ 
ಗಂಡು ಹೆಣ್ಣ ಭೇಟಿ?!
ತುತ್ತಿಲ್ಲವೆಂದು ಕೊಡದೆ ಇರರು 
ತುಟಿಗೆ ತುಟಿಯ ಮುತ್ತು!
ನನ್ನ ಮಡಲಿಗೊಂದು ಮಗುವು ಬರಲಿ 
ಇದೇ  ವಿಚಾರ ಹೊತ್ತು!
*****
-2- 
ಹೌದು, ನನ್ನವ 
ಹಲವು ಭಾಷೆಯನರಿತ 
ಪ್ರಕಾಂಡ ಪಂಡಿತ !
ಆದರೆ...
ನನ್ನ ಕಣ್ಣ ಸನ್ನೆಯ
ಭಾಷೆಯ ತಿಳಿಯದಿದ್ದಲ್ಲಿ
ಉಳಿದುಬಿಡುವ 
ಮನದ ಹೊರಗೆ, ಖಂಡಿತ!
-ಮಾಲು