ಹೊಣೆಗೇಡಿತನ

ಹೊಣೆಗೇಡಿತನ

ಬರಹ

ಸಂಸತ್ತಿನ ಸಂಕ್ಷಿಪ್ತ ಚಳಿಗಾಲದ ಅಧಿವೇಶನದ ದಿನಗಳು ಸಹ ಸಂಸದರ ವಾಡಿಕೆಯ ತಾತ್ಸಾರಕ್ಕೆ ಬಲಿಯಾಗುತ್ತಿವೆ. ಇದು ನಮ್ಮ ರಾಜಕೀಯಸ್ಥರ ಬುದ್ಧಿ-ವಿದ್ಯೆಗಳ ಸೂಚ್ಯಾಂಕವೇ? ರಾಜಕೀಯ, ದೇಶದ ಸಾಮಾಜಿಕಾರ್ಥಿಕ ಮುನ್ನಡೆಗೆ ಸಾಧನವಗಬೇಕು; ಆದರಲ್ಲಿ ಪ್ರಗತಿಯಲ್ಲೇ, ರಾಜಕೀಯ ತಾಂಡವವಾಡುತ್ತಿದೆ. ಚಿಲ್ಲರೆ ವ್ಯಾಪಾರದಲ್ಲಿ ನೇರ ವಿದೇಶೀ ಬಂಡವಾಳ ತೊಡಗಿಸಬಹುದಾದಷ್ಟೇನೂ, ನಮ್ಮ ಆರ್ಥಿಕ ಪ್ರಗತಿ ಸಮೃದ್ಧವಾಗಿಲ್ಲ. ಸಾಫ್ಟ್‌ವೇರ್ ಜಾಣ ಯುವಕ-ಯುವತಿಯರು, ವರ್ಷಕ್ಕೆ ದಶಲಕ್ಷ ಸಂಪಾದಿಸುತ್ತಿರುವುದು ದೇಶದ ಮುನ್ನಡೆಯಲ್ಲ. ಅವರು ಹಗಲಿರುಳು ದುಡಿಯುವುದು, ವಿದೇಶೀ ಸಾಹುಕಾರರಿಗಾಗಿ. ದೇಶದ ಬೀಜ-ಬಂಡವಾಳವಾಗುವುದಿಲ್ಲ. ಮಾಲ್ ಸಂಸ್ಕೃತಿ ಈಗಾಗಲೇ ವ್ಯಾಪಿಸಿ, ದೊಡ್ಡ-ದೊಡ್ಡ ಗಳಿಕೆ, ಅಲ್ಲಿನ ತಿಜೋರಿ ತುಂಬುತ್ತಿದೆ; ಅಷ್ಟು ಗಳಿಕೆಯಿಲ್ಲದ ಮಂದಿಗೆ ಫುಟ್‌ಪಾತ್ ಮಾಲುಗಳಿಗೇ ಗತಿಯಾಗಿದೆ. ಇನ್ನು ಸಾಹುಕಾರರ ಅಟ್ಟಹಾಸ ಅಲ್ಲಿಗೂ ಬರುತ್ತದಂತೆ!
ಚಾಕರಿದಾರಿಕೆ ಮತ್ತು ಮಾರುಕಟ್ಟೆ ತಂತ್ರಗಳಿಂದಲೇ, ಇನ್ನೂರೈವತ್ತು ವರ್ಷದ ಕೆಳಗೆ, ವಿದೇಶೀ ಕಂಪನಿಗಳು, ಇಡೀ ದೇಶವನ್ನೇ ಇಂಚಿಂಚಾಗಿ ಕಬಳಿಸಿದ್ದು. ಇಂದಿನ ರಾಜಕೀಯ ಪ್ರಾಣಿಗಳು, ಹಿಂದಿನ ತಲೆಮಾರಿನವರಿಗಿಂತಾ ಹೆಚ್ಚು ವಿದ್ಯಾವಂತರೂ, ಪ್ರಬುದ್ಧರೂ ಆಗಿರುವುದೇ ಆದಲ್ಲಿ, ಈ ವಿಷಯ ನೆನಪಿಟ್ಟುಕೊಳ್ಳಬೇಕು; ಆಡಳಿತದಲ್ಲಿ ಕುಳಿತಿದ್ದರೂ ಅಷ್ಟೆ, ವಿರೋಧಪಕ್ಷದಲ್ಲಿದ್ದರೂ ಅಷ್ಟೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet