ಸಮಾಜ ಮತ್ತು ಸಂಬಂಧ

ಸಮಾಜ ಮತ್ತು ಸಂಬಂಧ

 

ಅಂದು ಬೇಸರ ಕಳೆಯಲು ಜನರು ಒಂದೆಡೆ ಸೇರಿ ಹರಟೆ ಹೊಡೆದು ಕಾಲ ಕಳೆಯುತ್ತಿದ್ದರು.

ಕೆಲವೊಬ್ಬರು ಅದನ್ನು ಸೋಮಾರಿ ಕಟ್ಟೆ ಎಂದರು ಅವರು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ.

ಏಕೆಂದರೆ ಅಲ್ಲಿ ಕೆಲವೊಮ್ಮೆ  ಮುಖ್ಯವಾದ ವಿಷಯಗಳ ಬಗ್ಗೆಯೂ ಚರ್ಚಿಸುತ್ತಿದ್ದರು ಮತ್ತು

ಏನಾದರೂ ಸಮಸ್ಯೆಗಳಿದ್ದರೆ ಅದಕ್ಕೆ ಅಲ್ಲೇ ಪರಿಹಾರವನ್ನು ಕೂಡ ಕಂಡುಕೊಳ್ಳುತ್ತಿದ್ದರು.

ಸಮಾಜದ ಗೌರವವನ್ನು ಕಾಪಾಡಿಕೊಂಡು ಬದುಕುದಿದ್ದರು.|

ಆದರೆ ಇಂದು  ಚರ್ಚೆ ಎಂಬುದು ಕಡಿಮೆಯಾದಂತಿದೆ, ಏನಾದರೂ ಬೇಸರವಾದರೆ ಸಾಕು..ಮೊಬೈಲ್, ಟಿ ವಿ , ಕಂಪ್ಯೂಟರ್ ಗಳ ಮೂಲಕವೇ

ಬೇಸರವನ್ನು ಮರೆಮಾಡುತ್ತಾರೆ. ಚರ್ಚಿಸಿದರು ಅದು ಬೇಡದ ವಿಷಯಗಳ ಬಗ್ಗೆ..

 

" ಏನಾಗಲಿ  ಮುಂದೆ ಸಾಗು ನೀ..

ಅವರು ಹೇಳಿದ್ದೆಲ್ಲ ನಮಗೆ ಅನ್ವಯಿಸೊಲ್ಲ...

ನನ್ನಾಣೆ ನಾನೆಂದೂ ಈ ಜನರ ನಂಬೊಲ್ಲ"

 

ಅನ್ನುವವರೇ ಜಾಸ್ತಿ ಈಗ. ನಂಬಿಕೆಗೆ ಇಂದು ಮಹತ್ವ ಕಡಿಮೆ..!

ಯಾಕಂದ್ರೆ ಎಲ್ಲರೂ ಬುದ್ದಿವಂತರಾಗಿದ್ದಾರಲ್ಲ..ಅದಕ್ಕೆ ಎಲ್ಲರೂ ಎಲ್ಲದಕ್ಕೂ ಅನುಮಾನ ಪಡುತ್ತಾರೆ .

ಇನ್ನೂ ಸಮಾಜದ ಬಗ್ಗೆ ಚಿಂತಿಸುವವರು ಯಾರಿದ್ದಾರೆ ಹೇಳಿ...

 

"ಹೆಂಡತಿ ಬಂದ ಮೇಲೆ ತಾಯಿಯನ್ನ ಮರೆಯುವ ಹಾಗೆ.. ಇಂಗ್ಲೀಷ್ ಕಲಿತ ಮೇಲೆ ತಾಯಿ ಭಾಷೆಯನ್ನೇ ಮರೆಯುತ್ತಾರೆ"  The great people

 

ಸಮಾಜದ ಬಗ್ಗೆಯು ಚಿಂತಿಸುವುದಿಲ್ಲ  ಸಂಬಂಧಗಳನ್ನಂತು ಲೆಕ್ಕಿಸುವುದೇ ಇಲ್ಲ ...

ಹೌದು ಕಾಲ ಬದಲಾಗಿದೆ ತಂತ್ರಜ್ಞಾನ ಮುಂದುವರೆದಿದೆ..ತಂತ್ರಜ್ಞಾನ ಮುಂದುವರೆದಂತೆಲ್ಲ ಸಮಾಜ ಹಾಳಾಗುತ್ತದೆ ಎನ್ನುವುದರಲ್ಲಿ ಎರಡನೆ ಮಾತೇ ಇಲ್ಲ... .

”ಯಾರೆನಾದರೇನು ಇಲ್ಲಿ ನಾನೊಬ್ಬನೇ ಮುಖ್ಯ.. ನನ್ನ ಪಾಡಿಗೆ ನಾನಿದ್ದರಷ್ಟೇ ಇಲ್ಲಿ ಸೌಖ್ಯ”  ಎಂಬ ವಾಕ್ಯವನ್ನು ನಮ್ಮ ಜನರು ತುಂಬಾ ಚೆನ್ನಾಗಿ

ಬಳಸಿಕೊಳ್ಳುತ್ತಿದ್ದಾರೆ.|

 

ಸಮಾಜದಲ್ಲಿ ಸಂಬಂಧಗಳು ಎಷ್ಟು ಮುಖ್ಯ...ಅದರಲ್ಲೂ  ಅನೈತಿಕ ಸಂಬಂಧಗಳಿಂದ ಸಮಾಜ ಹೇಗೆ ಹಾಳಾಗುತ್ತಿದೆ.

ಎನ್ನುವುದೇ ಈ ಬರವಣಿಗೆಯ ಮುಖ್ಯ ಉದ್ದೇಶ. 

  

 ಇತ್ತೀಚಿನ ದಿನಗಳಲ್ಲಿ ಅನೈತಿಕತೆ ಎನ್ನುವುದು ಸಮಾಜದೊಳಗೆ ಬಿಗಿಯಾಗಿ ನೆಲೆಯೂರಿಬಿಟ್ಟಿದೆ.

ಸಂಬಂಧಗಳು ಮುರಿದು ಬೀಳುತ್ತಿವೆ. ಸಂಸ್ಕೃತಿ ಮಾಯವಾಗುತ್ತಿದೆ. ಸ್ವಾರ್ಥ ಎಲ್ಲೆಡೆ ಆವರಿಸುತ್ತಿದೆ…

 

ಇದಕ್ಕೆ ಉದಾಹರಣೆ ಯಂತೆ

ಅಮಲಾಪುರ ಎಂಬ ಊರಲ್ಲಿ ಅಮರೇಶ್ ಮತ್ತು ಅಮೃತ ಎಂಬ ದಂಪತಿಗಳಿದ್ದರು..ಇಬ್ಬರು ಉದ್ಯೋಗದಲ್ಲಿದ್ದರು, ಸಮಾಜದಲ್ಲಿ ಗುರುತಿಸಿಕೊಂಡಿದ್ದರು.

ಮದುವೆಯಾಗಿ ಕೆಲವು ವರ್ಷಗಳಾಗಿತ್ತು. ಒಂದು ಮಗು ಕೂಡ ಇತ್ತು ,ಚೆನ್ನಾಗಿಯೇ ಸಂಸಾರ ನಡೆಯುತ್ತಿತ್ತು..ಯಾವುದೇ ಮನಸ್ತಾಪಗಲಾಗಲಿ, ಜಗಳಗಳಾಗಲಿ ನಡೆದಿರಲಿಲ್ಲ

ಇಬ್ಬರಲ್ಲೂ ಪ್ರೀತಿ ಕುಗ್ಗಿರಲಿಲ್ಲ.|

ಅಮೃತ ಕೆಲಸ ಮಾಡುತ್ತಿದ್ದ ಆಫೀಸ್ ನಲ್ಲಿ ರಮೇಶ್ ಎಂಬ ಸಹ ಕೆಲಸಗಾರನಿದ್ದ..ಇವನಿಗೂ ಮದುವೆಯಾಗಿತ್ತು,,, ಅಮೃತ ಮತ್ತು ರಮೇಶ್ ನಡುವೆ ಒಳ್ಳೆಯ ಸ್ನೇಹವಿತ್ತು .

ಅದು ಸುಮಾರು 2 ವರ್ಷಗಳ ಸ್ನೇಹ, ಆ ಸ್ನೇಹ ದಿನೇ ದಿನೇ ಮಿತಿ ಮೀರಿತ್ತು. ಇಬ್ಬರು ಆಫೀಸ್ ಮುಗಿದರೂ ಮನೆಗೆ ಮಾತ್ರ 1-2 ಗಂಟೆ ಲೇಟಾಗಿ ಹೋಗುತ್ತಿದ್ದರು..

ಆ ಸಮಯ ಇಬ್ಬರಿಗೂ ಅತಿ ಪ್ರಿಯ.  ಮದುವೆಯಾಗಿದೆ ಎಂಬುದನ್ನು ಮರೆತು ಇಬ್ಬರು ಸಂಬಂಧ ಬೆಳೆಸಿಕೊಂಡರು.. ಅದೇನೂ ಪ್ರೇಮ ಸಂಬಂಧವೋ- ಕಾಮ ಸಂಬಂಧವೋ.?

ಗಂಡನಿಗೆ ಮೋಸ ಮಾಡಿ ಅವನ ಜೊತೆ ಸೇರುವ ಇವಳ ಉದ್ದೇಶವಾದರೂ ಏನಿತ್ತೋ...? ಆ ಸ್ನೇಹದಲ್ಲಿ ಪ್ರೀತಿ ಹುಡುಕಿದರೆ ಪರವಾಗಿಲ್ಲ…

ಆದರೆ ಕೇವಲ ಸ್ವಾರ್ಥ ಸುಖಕ್ಕೋಸ್ಕರ ಇವಳು ಅವನ ಜೊತೆ ಬೆರೆಯುವುದು ಎಷ್ಟು ಸರಿ.

ಇಂತಹ ಒಂದು ಆಟಕ್ಕೆ  ಮದುವೆ ಯಾಕೆ ಆಗಬೇಕಿತ್ತು..?

ಇತ್ತ ಸಮಾಜದ ರಕ್ಷಣೆಗಾಗಿ ಗಂಡನೂ ಬೇಕು.. ಅತ್ತ ಸ್ವಾರ್ಥಕ್ಕಾಗಿ ಇನ್ನೊಬ್ಬನೂ ಬೇಕು. ಇದು ಯಾವ ನ್ಯಾಯ.!

ಹೀಗೆ ಮಾಡುವುದರಿಂದ ಇವರಿಗೆ ಸಿಗುವುದಾದರೂ ಏನು…

ಇತ್ತ ಇವಳು ಹೀಗೆ ಮಾಡುತ್ತಿದ್ದಾರೆ ಅತ್ತ ಈಕೆ ಗಂಡ ಇವಳಿಗೇನು ಕಡಿಮೆಯಿಲ್ಲ ಅನ್ನುವ ಹಾಗೆ ಇನ್ಯಾರೋ ಹೆಣ್ಣಿನ ಜೊತೆ ಸಂಬಂಧ ಬೆಳೆಸಿಕೊಂಡಿರುತ್ತಾನೆ…

ಆದರೆ ಹೆಂಡತಿಯ ವಿಷಯ ಗಂಡನಿಗಾಗಲಿ..ಗಂಡನ ವಿಷಯ ಹೆಂಡತಿಗಾಗಲಿ ಗೊತ್ತೇ ಇರುವುದಿಲ್ಲ... ಅದು ಇಬ್ಬರಿಗೂ ಗೊತ್ತಾದರೆ ವಿವಾಹ ವಿಚ್ಛೇದನ ಎಂಬ ಇನ್ನೊಂದು ನಾಟಕ.!!!

ಈ ಮೂವರ ನಾಟಕದಲ್ಲಿ  ರಮೇಶನ ಹೆಂಡತಿ ಗತಿ ಏನಾಗಬೇಕು...ಇಂತಹ ಪರಿಸ್ಥಿತಿಯಲ್ಲಿ ಅವಳು ಏನು ಮಾಡಬಹುದು?

ಆಗ ಇಲ್ಲಿ ಎರಡು ಕುಟುಂಬಗಳು ಒಡೆದು ಹೋಗುತ್ತವೆ, ಏನೂ ತಪ್ಪು ಮಾಡದ ರಮೇಶನ ಹೆಂಡತಿ ಕೂಡ ಇಲ್ಲಿ ಕಷ್ಟ ಪಡಬೇಕಾಗುತ್ತದೆ.

 

 

ಈಗೂ ಒಂದು ಸಂಬಂಧ ಮಾಡಬಹುದೇ.  ಇಂಥ ಒಂದು ನಾಟಕಕ್ಕೆ ಮದುವೆ ಎಂಬ ಅಸ್ತ್ರವನ್ನೇಕೆ ಬಳೆಸಿಕೊಳ್ಳುತ್ತಾರೆ…( ಇಂತಹ ಪ್ರಶ್ನೆಗಳು ನಮ್ಮಲ್ಲಿ ಸಾವಿರಾರು)

ಅನೈತಿಕ ಸಂಬಂಧಗಳನ್ನು ಸಮಾಜದಲ್ಲಿ ಎಷ್ಟು ದಿನ ಮುಚ್ಚಿಡಬಹುದು...ಒಂದಲ್ಲ ಒಂದು ದಿನ ಅದು ಗೊತ್ತಾಗಲೇಬೇಕು...

ಆಗ ಇವರ ಜೊತೆ ಸಮಾಜದ ಗೌರವವೂ ಕಡಿಮೆಯಾಗುತ್ತದೆ ಅಲ್ಲವೇ.|

 

ಹೀಗೆ ಮಾಡುವುದರಿಂದ ಸಮಾಜದ ಗೌರವ ಏನಾಗಬೇಕು?  ಸಂಸ್ಕೃತಿ ಏನಾಗಬೇಕು?... ಇವರನ್ನೇ ಇವರ ಮಕ್ಕಳು ಅನುಸರಿಸುವುದಿಲ್ಲವೇ?. ಮಕ್ಕಳ ಭವಿಷ್ಯದ ಬಗ್ಗೆಯಾದರೂ ಯೋಚಿಸಬೇಕಲ್ಲವೇ?.. ಇಂಥವರು ಮುಂದಿನ ಪೀಳಿಗೆಗೆ ಮಾದರಿಯಾಗಬಲ್ಲರೆ..?

ಒಮ್ಮೆ ಅವರನ್ನ ಅವರೇ ಪ್ರಶ್ನಿಸಿಕೊಂಡರೆ ಇದಕ್ಕೆ ಉತ್ತರಸಿಗಬಹುದೇನೋ...!!!

ಸಂಬಂಧಗಳು ಸಮಾಜದ ಗೌರವವನ್ನು ಹೆಚ್ಚಿಸಬೇಕೆ ಹೊರತು...ಹಾಳು ಮಾಡಬಾರದು

ಸಂಬಂಧ ಬಿಡಿಸಲಾಗದ ಅನುಬಂಧ.. ಸಮಾಜ ಸಂಸ್ಕೃತಿ,ಸಂಪ್ರದಾಯ, ಸಮೂಹಕ್ಕೇ ಅಂದ.

ಇವೆರಡು ಚೆನ್ನಾಗಿದ್ದರೆ ನಮಗೆ ಆನಂದ..

 

ಇವುಗಳನ್ನ ನಾವು ರಕ್ಷಿಸಿದರೆ ಅವು ನಮ್ಮನ್ನ ರಕ್ಷಿಸುತ್ತವೆ.

ಜೈ ಕರ್ನಾಟಕ ಮಾತೆ

 

 

 

ಧನ್ಯವಾದ.

ಸೋಮೇಶ್ ಎನ್ ಗೌಡ

Comments

Submitted by spr03bt Wed, 11/28/2012 - 10:33

ಸೋಮೇಶರೆ, ಲೇಖನ ಚೆನ್ನಾಗಿದೆ. "ಸಂಬಂಧ ಬಿಡಿಸಲಾಗದ ಅನುಬಂಧ.. ಸಮಾಜ ಸಂಸ್ಕೃತಿ,ಸಂಪ್ರದಾಯ, ಸಮೂಹಕ್ಕೇ ಅಂದ. ಇವೆರಡು ಚೆನ್ನಾಗಿದ್ದರೆ ನಮಗೆ ಆನಂದ.. " ಎ೦ಬ ವಾಕ್ಯ ಸೊಗಸಾಗಿದೆ.