ಈ ಎಳೆ ಬಿಸಿಲು, ಸುಂದರ ಹಗಲು ....

ಈ ಎಳೆ ಬಿಸಿಲು, ಸುಂದರ ಹಗಲು ....

ಕವನ

 

ಈ ಎಳೆ  ಬಿಸಿಲು, ಸುಂದರ ಹಗಲು 
ನೀನಿರದೆ ಈಗ ಭೀಕರ  ಇರುಳು ...
 
ಇನ ದರುಶನದೆ ನಳನಳಿಸಿದೆ ಭುವನ 
ಬನದಲ್ಲಿದೆ ಮಲ್ಲಿಗೆ, ಮೊರಗಾ, ಧವನ;
ಬೆಳಗಿನ ಮೋಡಿಗೆ ಅರಳದು ಹೃದಯ 
ನೀನಿಲ್ಲಿರದಿರುವುದೆ ಇದಕೆ ಕಾರಣ ಗೆಳೆಯಾ 
 
ಹೊರೆಯಾಗಿದೆ ಕೇಳು ನೀನಿಲ್ಲದ ಬಾಳು 
ಯಾರಿಗೆ ಹೇಳಲಿ ಈ  ವಿರಹದ ಗೋಳು ;
ದೂರದಲಿರುವೆ ಮರೆತು  ನನ್ನ 
ಹಾತೊರೆದಿದೆ ಮನ ಸೇರಲು ನಿನ್ನ 
 
 
ಕೊನೆಯಾಗಲಿ ಈ ಕಾಯುವ ಶಿಕ್ಷೆ 
ಬಂದು ಬೇಗನೆ ಕೊಡು ಪ್ರೇಮದ ರಕ್ಷೆ; 
(ಇದು ರತಿಯೊಬ್ಬಳೆ ನಿಂತಿಹ ಸುಂದರ ಚಿತ್ರ 
ಪರಿಪೂರ್ಣತೆ ಮದನನು ಇಲ್ಲಿದ್ದರೆ ಮಾತ್ರ)
 
ಈ ಎಳೆ  ಬಿಸಿಲು, ಸುಂದರ ಹಗಲು 
ನೀನಿರದೆ ಈಗ ಭೀಕರ  ಇರುಳು ...
-ಮಾಲು