ಜಗದಲ್ಲಿ ಯಾರಿಹರು? ಜನನಿಗಿಂತ ಮಿಗಿಲು!

ಜಗದಲ್ಲಿ ಯಾರಿಹರು? ಜನನಿಗಿಂತ ಮಿಗಿಲು!

ಕವನ

 

ದೇವ ಕಳುಹಿದ ದೇವತೆ, ಮುದ್ದಿನ ಮಾತೆ
ಬಾಳು ಬೆಳಗೊ ಹಣತೆ
ತ್ಯಾಗ ಸೇವೆ ಸಹನೆ, ಶಾಂತಿ ಪ್ರೀತಿ ಮಮತೆ
ಕ್ಷಮೆಗೆ ಮತ್ತೊಂದು ಹೆಸರೆ, ಜನನಿ ಜನ್ಮದಾತೆ.......ದೇವ
 
ಮಗುವಿನೊಂದಿಗೆ ಆಟದಿ, ಮಗುವಾಗುವಳಮ್ಮ
ಹೆದರಿಸಲು ಗುಮ್ಮಾ
ತಪ್ಪು ಮಾಡೆ ಒಪ್ಪಳು, ತೋರುವಳು ಹುಸಿಕೋಪ
ಗುರುವಾಗುವಳು ಶಿಕ್ಷಿಸಿ, ನಡೆನುಡಿಯ ತಿದ್ದಿಪ.......ದೇವ
 
 ಅತ್ತರೆ ಮಕ್ಕಳು, ಮಾಡುವಳು ಅಕ್ಕರೆ
ನಕ್ಕರದೆ ಸಕ್ಕರೆ
ಸೋಲುಗೆಲುವಿನಲ್ಲೂ, ನೋವು ನಲಿವಿನಲ್ಲು 
ಜೊತೆಯಾಗಿ ಇರುವ ಅಮ್ಮ, ನಿನಗಾರು ಸಾಟಿಯಮ್ಮ.........ದೇವ
 
ಪ್ರೀತಿ ಸುರಿಸೋ ಮುಗಿಲು, ಬೆಳಕಾ ಹೊನಲು
ವಾತ್ಸಲ್ಯ ತುಂಬಿದ ಕಡಲು
ಬತ್ತದು ಅವಳೊಡಲು, ಬಲು ಮೆತ್ತ ಹಿತ ಮಡಿಲು
ಜಗದಲ್ಲಿ ಯಾರಿಹರು, ಜನನಿಗಿಂತ ಮಿಗಿಲು...........ದೇವ
 
ಶಾರಿಸುತೆ
 
ಸ್ವರಚಿತ ಕವನ
ಪುರಂದರದಾಸರ "ಬಂದಾಳೊ ನಮ್ಮ ಮನೆಗೆ ಹಾಡಿನ ದಾಟಿ"
http://youtu.be/liskW4WPnkM
 
ಚಿತ್ರ್

Comments

Submitted by venkatb83 Tue, 12/04/2012 - 17:21

ಮಾತೆಯ ಬಗ್ಗೆ ಸರಳ ಸುಂದರ ಅರ್ಥಪೂರ್ಣ ಕವನ. ಭಲೇ ಹಿಡಿಸಿತು..
ಮಾತೆಯ ಬಗ್ಗೆ ಏನೆಲ ಹೇಳಿದರೂ ಎಷ್ಟು ಎಲ್ಲ ಬರೆದರೂ ಕಡಿಮೆಯೇ.
ಪದಗಳಿಗೆ ನಿಲುಕದ ಭಾವನೆಗೆ ಗೋಚರಿಸುವ ಅನುಭವವಾಗುವ ಶಕ್ತಿ -ಸ್ಪೂರ್ತಿ-ಚಿಲುಮೆ
ಜಗದ ಸರ್ವ ಮಾತೆಯರಿಗೆ ನಮಿಸುತ್ತಾ ಅವ್ರಿಗೆ ಸುಖ ಶಾಂತಿ ನೆಮ್ಮದಿ ಸಿಗಲೆಂದು ಹಾರೈಸುತ್ತ
ಮಾತೆಯ ಬಗೆಗಿನ ಅತ್ಯುತ್ತಮ ಬರಹಕ್ಕಾಗಿ ನಿಮಗೆ ನನ್ನಿ
ಶುಭವಾಗಲಿ..

\|