ಚಳಿಗಾಲದ ಮುಂಜಾವಿನ ಚುಮುಚುಮು ಚಳಿಯಲ್ಲಿ

ಚಳಿಗಾಲದ ಮುಂಜಾವಿನ ಚುಮುಚುಮು ಚಳಿಯಲ್ಲಿ

ಚಳಿಗಾಲದ ಮುಂಜಾವಿನ ಚುಮುಚುಮು ಚಳಿಯಲ್ಲಿ


ಮಂಜಿನ ಹೊದಿಕೆಯನ್ನು ಹೊದ್ದು ಮಲಗಿದ ಪ್ರಕೃತಿ


ನೇಸರನ ತುಂಟಾಟಕ್ಕೆ ಕಣ್ಣುಜ್ಜಿಕೊಂಡು ಎದ್ದು ನೋಡಲು


ಇವರಿಬ್ಬರಾಟವನ್ನು ನೋಡಲು ಮಳೆರಾಯ ಆಗಮಿಸಿದ...


 


ಮಂಜಿನ ಹೊದಿಕೆಯನು ಸರಿಸಿದ ಪ್ರಕೃತಿ


ಮಳೆರಾಯನಿಗೆ ತನ್ನನರ್ಪಿಸಿ ತೋಯುತಿಹಳು


ತರುಲತೆಗಳ ಮೇಲೆ ಕುಳಿತಿದ್ದ ಮಂಜಿನ ಹನಿಯನ್ನು


ಸೇರಿದ ಆನಂದದಲ್ಲಿ ಸಂಭ್ರಮಿಸುತಿಹನು ಮಳೆರಾಯ...


 


ಸೋನೆ ಮಳೆಯ ಹನಿ ಹನಿಯ ಸಿಂಚನ


ತಂಪು ತಂಪಾದ ಕುಳಿರ್ಗಾಳಿಯ ಸ್ಪರ್ಶದಿ


ಪ್ರಕೃತಿಯು ನೆನೆಯುತಿಹಳು, ಕಾಯುತಿಹಳು


ಬೆಚ್ಚನೆಯ ಎಳೆಬಿಸಿಲಿನ ಕಾವಿಗೆ

Rating
No votes yet