ನಾಳೆಯ ಉಷಃಕಾಲಕೆ (- ವಿಕ್ಟರ್ ಹ್ಯೂಗೊ )

ನಾಳೆಯ ಉಷಃಕಾಲಕೆ (- ವಿಕ್ಟರ್ ಹ್ಯೂಗೊ )

ಕವನ

ನಾಳೆಯ ಉಷಃಕಾಲಕೆ (- ವಿಕ್ಟರ್ ಹ್ಯೂಗೊ )
------------------
ನಾಳೆಯ ಉಷಃಕಾಲಕೆ ಬಯಲು ಹೊಂಬಣ್ಣವೇರುವಾಗ
ನಾ ಹೊರಡುವೆ. ನಾ ಬಲ್ಲೆ !! ನೀನೆನಗಾಗಿ ಕಾದಿರುವೆ.
ಬನಗಳ ದಾಟುತ , ಶೃಂಗವನೇರುತ ಬರುವೆ,
ಹೇಗಿರಲಿ ದೂರದಿ, ನೀಯೆನ್ನಬಳಿಯಲ್ಲಿರದಾಗ?

ದಾರಿಯ ಸವೆಸುವೆ ನಿನ್ನ ಸೇರುವ ಬರದಲಿ.
ಯಾವ ನೋಟಗಳು ಕಾಣವು, ಯಾವ ಶಬ್ಧಗಳು ಕಾಣವು.
ಏಕಾಂಗಿಯಾದೆ, ಹಾ ದುಃಖಿಯಾದೆ,
ಈ ಹಗಲಲು, ಕತ್ತಲು ಕಣ್ ತುಂಬಿದೆ.

ಸುರಸಂಜೆಯ ಸುವರ್ಣಾಗಸಕೆ ನಾ ಸಾಕ್ಷಿಯಾಗದೆ,
ದೂರದ ಹರ್ಫ್ಲರಿನಲಿ ಕರಗುತಿಹ ನೌಕೆಯ ಕಾಣದೆ,
ನೀನಿರುವೆಡೆ ಬಂದು, ನಿನ್ನ ಸಮಾಧಿಯ ಮೇಲಿರಿಸುವೆ,
ತಿಳಿ ಹಸುರೆಲೆಗಳೊಳಗಿಂದಿಣುಕುವ ಹೂ ಗೊಂಚಲೊಂದನು.

        - ವಿಕ್ಟರ್ ಹ್ಯೂಗೊ ( ಜನನ :೨೬ -೦೨- ೧೮೦೨
                ಮರಣ :೨೨ -೦೫ - ೧೮೮೫)