ಗಜೇಂದ್ರ ಮೋಕ್ಷ -2
ಗಜೇಂದ್ರ ಮೋಕ್ಷ -2
ಕೆಲವು ತಿಂಗಳ ಹಿಂದೆ ಪದ್ಯಪಾನದಲ್ಲಿ ಕೊಟ್ಟಿದ್ದ ಗಜೇಂದ್ರ ಮೋಕ್ಷವನ್ನು ವರ್ಣಿಸುವ ಒಂದು ದತ್ತಪದಿಯ ಬಗ್ಗೆ ಬರೆದಿದ್ದೆ. ಅಲ್ಲಿ ಆನೆಯನ್ನುಳಿಸಲು, ವಿಷ್ಣು ಗರುಡವಾಹನನಾದ ಪರಿಯನ್ನು ಬಣ್ಣಿಸಲು Auto (ಆಟೊ), Rickshaw (ರಿಕ್ಷ), Volvo (ವೊಲ್ವೊ), Lorry (ಲಾರಿ) ಪದಗಳನ್ನು ಬಳಸಬೇಕಿತ್ತು.
ಆಗ ಬರೆದ ಪದ್ಯವನ್ನು ಓದಲು ಇಲ್ಲಿ ಚಿಟಕಿಸಿ.
ಕಳೆದ ವಾರ ನಡೆದ ಶತಾವಧಾನದಲ್ಲಿ ಕೆಲವು ಪೃಚ್ಛಕರು ಒಂದೇ ಸಮಸ್ಯೆಗೆ ಹತ್ತು-ಇಪ್ಪತ್ತು-ಮೂವತ್ತು ಉತ್ತರಗಳನ್ನು ಬರೆದ ವಿಷಯ ನೋಡಿದಾಗಿನಿಂದ ಇಪ್ಪತ್ತು ಬೇಡ ಹೋಗಲಿ, ಒಂದು ಪ್ರಶ್ನೆಗೆ ನನಗೆ ಎರಡು ಉತ್ತರವನ್ನಾದರೂ ಬರೆಯುವುದು ಸಾಧ್ಯವೇ ಅನ್ನುವ ಪ್ರಶ್ನೆ ಬಂತು . ಇರಲಿ. ಇನ್ನೊಂದು ಅವಧಾನದ ವಿಡಿಯೋ ನೋಡುವಾಗ ಅಲ್ಲಿ ಇದೇ ಗಜೇಂದ್ರ ಮೋಕ್ಷಕ್ಕೆ ತುಸು ಬೇರೆ ಪದಗಳನ್ನು ಕೊಡಲಾಗಿತ್ತು - ಸರಿ, ಅದಕ್ಕೆ ಒಂದು ಕೈ ಹಾಕೋಣವೆಂದು ಈ ಪ್ರಯತ್ನ. ಹಾಗಾಗಿ ಒಂದೇ ಸಮಸ್ಯೆ ಅಲ್ಲದಿದ್ದರೂ ಒಂದೇ ತರಹದ ಸಮಸ್ಯೆ ಅನ್ನಬಹುದು!
ಈ ಬಾರಿ ಇಲ್ಲಿ ಬಳಸಬೇಕಾದ ಪದಗಳೂ ಚಕ್ರಿಗಳೇ - ಅಂದರೆ ಚಕ್ರಗಳನ್ನು ಹೊಂದಿದವೇನೇ: ಸೈಕಲ್ (Cycle) , ವ್ಯಾನ್ (Van), ಲಾರಿ (Van) ಮತ್ತೆ ಕಾರ್ (Car).
ನಾನು ಬರೆದ ಪದ್ಯ ಹೀಗಿದೆ ನೋಡಿ. ಹೇಗಿದೆ ಹೇಳಿ!
ಅಸುವು ಹೋಗುತಲಿಹವು ವ್ಯಾನಾದಿ ಪಂಚಕವು
ತುಸು ನೀನು ಕರುಣಿಸೈ ಕಲ್ಲಾಗಿಸದೆ ಮನವ
ಮೊಸಳೆಯಿಂದೆನ್ನುಳಿಸಲಾರಿಹರೆನಲು ಗಜವು
ಎಸೆವ ಕಾರ್ಮುಗಿಲಿಂದ ಗರುಡವಾಹನ ಬಂದ!
-ಹಂಸಾನಂದಿ
ಕೊ: ಪಂಚಪ್ರಾಣಗಳೆಂದರೆ ಪ್ರಾಣ,ಅಪಾನ,ಉದಾನ,ಸಮಾನ,ಮತ್ತೆ ವ್ಯಾನ. ಹೆಚ್ಚಿಗೆ ವಿವರಕ್ಕೆ ವಿಕಿಪೀಡಿಯ ನೋಡಿ.
ಕೊ.ಕೊ: ಪದ್ಯವು ಪಂಚಮಾತ್ರಾ ಚೌಪದಿಯ ಛಂದಸ್ಸಿನಲ್ಲಿದೆ.
ಚಿತ್ರ ಕೃಪೆ: http://www.harekrsna.com/sun/features/02-10/features1643.htm
Comments
ಹಂಸಾನಂದಿಯವರೆ ಪದ್ಯ
ಹಂಸಾನಂದಿಯವರೆ ಪದ್ಯ ಅರ್ಥಪೂರ್ಣವಾಗಿದೆ. ಅಭಿನಂದನೆಗಳು.
ಬಾಳ ಹಿಡಿಸ್ತು.
ಬಾಳ ಹಿಡಿಸ್ತು.
ಚಿತ್ರ ಆಗಾಗ ನೋಡಿದ್ದೇ..ಆದ್ರೆ
ಚಿತ್ರ ಆಗಾಗ ನೋಡಿದ್ದೇ..ಆದ್ರೆ ಅದರ ಹಿಂದಿನ ಕಥೆ ಗೊತ್ತಿರಲಿಲ್ಲ..ಈಗ ಗೊತ್ತಾಯ್ತು....
ಶುಭವಾಗಲಿ..
\\
ಹಂಸಾನಂದಿಯವರೆ ಕೊಟ್ಟಿರುವ
ಹಂಸಾನಂದಿಯವರೆ ಕೊಟ್ಟಿರುವ ಪದಗಳನ್ನು ಅಡಕವಾಗಿಸಿ ಬರೆದಿರುವ ಪದ್ಯ ಎಷ್ಟು ಸಹಜ ಎಂದರೆ
ಪದ್ಯ ಬರೆದ ನಂತರ ಪದಗಳನ್ನು ಕೊಟ್ಟಿದ್ದಾರ ಅನಿಸುವಮಟ್ಟಿಗೆ
In reply to ಹಂಸಾನಂದಿಯವರೆ ಕೊಟ್ಟಿರುವ by partha1059
ನಿಮ್ಮೆಲ್ಲರ ಒಳ್ಳೆ ಮಾತುಗಳಿಗೆ
ನಿಮ್ಮೆಲ್ಲರ ಒಳ್ಳೆ ಮಾತುಗಳಿಗೆ ನಾನು ಆಭಾರಿ!
In reply to ನಿಮ್ಮೆಲ್ಲರ ಒಳ್ಳೆ ಮಾತುಗಳಿಗೆ by hamsanandi
ಉತ್ತಮವಾಗಿದೆ.
ಉತ್ತಮವಾಗಿದೆ.