ತೂ ಹಿಂದು ಬನೇಗಾ ನ ಮುಸಲ್ಮಾನ ಬನೇಗಾ

ತೂ ಹಿಂದು ಬನೇಗಾ ನ ಮುಸಲ್ಮಾನ ಬನೇಗಾ

ತೂ ಹಿಂದು ಬನೇಗಾ ನಾ ಮುಸಲ್ಮಾನ ಬನೇಗಾ……
                 ಹಿಂದಿ  : ಸಾಹಿರ್ ಲುಧಿಯಾನ್ವಿ ( ಧೂಲ್ ಕಾ ಫೂಲ್ ) 1959
                 ಕನ್ನಡಕ್ಕೆ : ಲಕ್ಷ್ಮೀಕಾಂತ ಇಟ್ನಾಳ

ನೀ ಹಿಂದು ಆ /ಗದಿರೀಗ /ಮುಸಲಿಮನಾ/ ಗದಿರೀಗ
ಮಾನವನ ಮಗುವೆ ಬದುಕು/ ಮಾssನವನಾಗೀಗ/
ಸರಿಹೋಗಿದೆ/ ನಿನಗಾವುದೆ/ ಹೆಸರಿಡ ದದಕೆ/
ಮತವಾವುದ /ಜೊತೆಗಾ/ವುದ ಬಂಧ/ಬೇಡದಕೆ/
ಜ್ಞಾನವದಾ /ಮನುಜರ /ಹೋಳಾ /ಗಿಸುವುದೊ
ಆ ಜ್ಞಾನದಾ /ರೋಪವದು/ ನಿನಮೇ/ಲಿರದೊ
ನವಮನ್ವಂತರ/ ಕಾಲದ/ ಗುರುತಾಗುವಿ/ ನೀನು
ಮಾನವನ ಮಗುವೆ ಬದುಕು/ ಮಾssನವನಾಗೀಗ/
ನೀ ಹಿಂದು ಆ /ಗದಿರೀಗ /ಮುಸಲಿಮನಾ/ ಗದಿರೀಗ
ಮಾನವನ ಮಗುವೆ ಬದುಕು /ಮಾssನವನಾಗೀಗ/

ಪ್ರತಿ ಮಾನವಗೆ/ ಮಾನವ ನಾ/ಗಿಸಿದ ಭಗವಾನನು
ಮಾಡಿದೆವು ಹಿಂದು/ ಮುಸಲಿಮ ನಾ/ವವನನು/
ಸೃಷ್ಟಿಯದು ನೀ/ಡಿಹುದೊಂದೆ ಭೂ/ಮಿಯನು
ನಾವದರಲಿ / ಮಾಡಿಹೆವು/ ಭಾರತ  ಇರಾನು
ಪ್ರತಿ ಬಂಧನ/ ಮುರಿದವ ಬಿರು/ಗಾಳಿಯಾ/ಗುವನು/
ಮಾನವನ ಮಗುವೆ ಬದುಕು/ ಮಾssನವನಾಗೀಗ/  
ನೀ ಹಿಂದು ಆ /ಗದಿರೀಗ /ಮುಸಲಿಮನಾ/ ಗದಿರೀಗ
ಮಾನವನ ಮಗುವೆ ಬದುಕು /ಮಾssನವನಾಗೀಗ/

ದ್ವೇಷವನು ಕಲಿಸುವ/ ಮತ ನಿನದಾ/ಗಿರದು
ಮಾನವರನು ಮೆ/ಟ್ಟುವ ಹೆಜ್ಜೆ ನಿನ/ದಾಗಿರದು
ಕುರಾನವಿರದ/  ಮಂದಿರವು/ ನಿನದಾಗಿರದು
ಗೀತೆಯಿರದ/ಮಸೀದೆಯದು/ ನಿನದಾಗಿರದು
ಶಾಂತಿ ಹಾಗೂ/ ಸ್ನೇಹದಾ/ ಶಯವಾಗು ನೀ/ನೀಗ
ಮಾನವನ ಮಗುವೆ ಬದುಕು/ ಮಾssನವನಾಗೀಗ/
ನೀ ಹಿಂದು ಆ /ಗದಿರೀಗ /ಮುಸಲಿಮನಾ/ ಗದಿರೀಗ
ಮಾನವನ ಮಗುವೆ ಬದುಕು/ ಮಾssನವನಾಗೀಗ/

ಹೇ ಧರ್ಮ ದುರಾ/ಚಾರರೇ /ಜನ್ಮಭೂಮಿ ಮಾ/ರುವವರೆ  
ಮಾನವರ /ಶವಗಳ/  ಹೊದಿಕೆ ಮಾ/ರುವವರೆ  
ಮಹಲೊಳು /ಕುಳಿತಿಹ /ಕೊಲೆ ಸುಲಿಗೆ/ಖೋರರೆ
ಹೂಗಳ ಬದಲಿಗೆ/ ಮುಳ್ಳುಗಳ /ಮಾರುವವರೆ
ನೀನಿಂಥ/ವರಿಗೆ ಆಗು/ ಮರಣಶಾಸನ/ ವದಾಗು
ಮಾನವನ ಮಗುವೆ ಬದುಕು/ ಮಾssನವನಾಗೀಗ/

ನೀ ಹಿಂದು ಆ /ಗದಿರೀಗ /ಮುಸಲಿಮನಾ/ ಗದಿರೀಗ/
ಮಾನವನ ಮಗುವೆ ಬದುಕು/ ಮಾssನವನಾಗೀಗ/
ಸರಿಹೋಗಿದೆ/ ನಿನಗಾವುದೆ/ ಹೆಸರಿಡ ದದಕೆ/
ಮತವಾವುದ ಜೊತೆಗಾ/ವುದ ಬಂಧ/ಬೇಡದಕೆ/

Rating
No votes yet

Comments

Submitted by H A Patil Fri, 12/07/2012 - 20:20

ಲಕ್ಷ್ಮೀಕಾಂತ ಇಟ್ನಾಳ್ ರವರಿಗೆ ವಂದನೆಗಳು
ಸಂಪದಕ್ಕೆ ಬಹಳ ದಿನ ರಜಾ ಹಾಕಿದ್ದಿರಿ, ನಿಮ್ಮ ಆಗಮನ ಸಂತಸ ತಂದಿದೆ. 'ಧೂಲ್ ಕಾ ಫೂಲ್' ಚಿತ್ರದ ಸಾಹಿರ ಲುಧಿಯಾನ್ವಿ ವಿರಚಿತ " ತೂ ಹಿಂದು ಬನೆಗಾ ನ ಮುಸಲ್ಮಾನ ಬನೆಗಾ ಇನ್ಸಾನ ಕಿ ಔಲಾದ ಹಿ ಇನ್ಸಾನ ಬನೆಗಾ ' ಹಾಡನ್ನು ಕನ್ನಡೀ ಕರಿಸಿ ಕೊಟ್ಟದ್ದೀರಿ. ಈ ಚಿತ್ರದ ಕುರಿತು ನನ್ನ ನೂತನ ಕಥಾನಕ 'ಸಿನೆಮಾ'ದಲ್ಲಿ ದಾಖಲಿಸಿದ್ದೇನೆ. ಈ ಹಾಡನ್ನು ನಟ ಮನಮೋಹನಕೃಷ್ಣರ ಅಭಿನಯದಲ್ಲಿ ಚಿತ್ರಿಸಲಾಗಿದೆ. ಇದೊಂದು ಕಾಲೇಜಿನ ಸಹಪಾಠಿಗಳ ಪ್ರೇಮ ಕಥನ. ಇದರ ನಾಯಕ ರಾಜೇಂದ್ರ ಕುಮಾರ(ಮಹೇಶ) ಮಾಲಾಸಿನ್ಹಾ (ಮೀನಾ)ಳನ್ನುಪ್ರೀತಿಸುತ್ತಾನೆ, ಮದುವೆಗೆ ಮುನ್ನ (ಮೀನಾ) ಗರ್ಭಿಯಾಗುತ್ತಾಳೆ, ಹೆದರಿದ ನಾಯಕ ಅವಳನ್ ನು ತ್ಯಜಿಸಿ ನಂದಾಳನ್ನು ಮದುವೆಯಾಗುತ್ತಾನೆ, ಇವರಿಬ್ಬರ ಗಾಂಧರ್ವ ಪ್ರೇಮಕ್ಕೆ ಒಂದು ಗಂಡು ಮಗುವಾಗುತ್ತದೆ. ಸಮಾಜಕ್ಕೆ ಹೆದರಿದ ಮೀನಾ ಮಗುವನ್ನು ಒಂದು ನಿರ್ಜನ ಪ್ರದೇಶದಲ್ಲಿ ಮಲಗಿಸಿ ಹೋಗುತ್ತಾಳೆ. ಆ ಮಗು ಮನಮೋಹನಕೃಷ್ಣನ ಕೈಗೆ ಸಿಗುತ್ತದೆ, ಆ ಮಗುವನ್ನು ಆತ ತೆಗೆದುಕೊಂಡು ಹೋಗಿ ಸಾಕುತ್ತಾನೆ, ಆ ಸಂಧರ್ಭದಲ್ಲಿ ಈ ಹಾಡನ್ನು ಬಳಸಿಕೊಳ್ಳಲಾಗಿದೆ, ಆ ಕಾಲದಲ್ಲಿ ಒಂದು ರೀತಿಯ ಸಂಚಲನವನ್ನು
ಈ ಚಿತ್ರ ನಿಮಿಸಿತ್ತು. ಬಿಆರ್ ಛೋಪ್ರಾ ಬ್ಯಾನರಿನ ಈ ಚಿತ್ರವನ್ನು ಯಶ ಛೋಪ್ರಾ ನಿರ್ಧೇಸಿಸಿದ್ದ. ಇದು ಅತನ ಮೊದಲ ನಿರ್ದೇಶನದ ಚಿತ್ರ. ಈ ಚಿತ್ರದ ಎಲ್ಲ ಹಾಡುಗಳು ಅಗ ಜನಪ್ರಿಯವಾಗಿದ್ದವು. ಎನ್.ದತ್ತಾ ಸಂಗೀತ ಸಂಯೋಜನೆಯ ಹಾಡುಗಳ ಪೈಕಿ ಚಿತ್ರೀಕರಿಡಸಿದ ಮೊದಲ ಹಾಡು ' ತೆರೆ ಪ್ಯಾರ್ ಕಾ ಆಸರಾ ಚಾಹತಾ ಹ್ಞೂಂ ' ಬಹಳ ಜನಪ್ರಿಯ ಹಾಡು ಆಗಿತ್ತು. ದನ ಕಾಯುವ ಹುಡುಗರೂ ಸಹ ಹಳ್ಳಿಗಳಲ್ಲಿ ಹಾಡುತ್ತಿದ್ದರು. ಇದರ ರಾಗ ಸಂಯೋಜನೆಯನ್ನು ಬಳಸಿಕೊಂಡು ಭಕ್ತಿಗೀತೆಗಳು ಸಹ ರಚಿತವಾಗಿದ್ದವು.. ನಿಮ್ಮ ಅನುವಾದ ಈ ಎಲ್ಲವನ್ನು ಜ್ಞಾಪಸಿತು. ಪ್ರತಿಕ್ರಿಯೆ ಉದ್ದವಾಯಿತು ಕ್ಷಮೆಯಿರಲಿ, ಧನ್ಯವಾದಗಳು.

Submitted by lpitnal@gmail.com Fri, 12/07/2012 - 23:17

In reply to by H A Patil

ಆತ್ಮೀಯ ಹೆಚ್ ಏ ಪಾಟೀಲ ರವರೇ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ತೂ ಹಿಂದು ಬನೇಗಾ ಹಾಡಿನ ಅನುವಾದವು ತಮಗೆ ಅಂದಿನ ನೆನಹುಗಳನ್ನು, ಅಂದಿನ ಇನಿದನಿಯ ಗೀತೆಗಳನ್ನು ಜ್ಞಾಪಿಸಿದ್ದುದನ್ನು ತಾವು ನೆನಪಿಸಿಕೊಳ್ಳುತ್ತ ಮೆಚ್ಚುಗೆಯನ್ನು ಸೂಚಿಸಿದ್ದೀರಿ. ಈ ಸಾಹಿರ್ ಲುಧಿಯಾನ್ವಿಯವರ ಹಾಡನ್ನು ಸ್ವಲ್ಪ ಫೋಲ್ಕ್ ಆಗೀ, ಮಕ್ಕಳು ಗ್ರುಪ್ ಗೀತೆಯಾಗಿ ಕೂಡ ಹಾಡಲು ಅನುವು ಆಗುವಂತೆ ಅನುವಾದಿಸಿ ಪ್ರಕಟಿಸಿದ್ದು, ಎಷ್ಟರ ಮಟ್ಟಿಗೆ ಸಫಲತೆಯನ್ನು ಮೈಗೂಡಿದೆ ಎಂಬುದನ್ನು ಸಹೃದಯ ಸಂಪದಿಗರೇ ಹೇಳಬೇಕು. ತಮ್ಮ ಮೆಚ್ಚುಗೆಯ ಹಿತ ನುಡಿಗಳಿಗೆ ಧನ್ಯವಾದಗಳು ಸರ್. ತಾವಂದಂತೆ ಸೆಶನ್ ಮುಗಿಯುವ ತನಕ ತುರಿಸಿಕೊಳ್ಳಲು ಕೂಡ ಪುರುಸೊತ್ತು ಸಿಗೋದಿಲ್ಲ. ಇನ್ನೊಂದು ವಾರೊಪ್ಪತ್ತು ಅದೃಶ್ಯವಾಗಿಯೇ ಇರಬೇಕಾಗಿದೆ. ಬಂಡಿ ಬಂಡಿ ಯಷ್ಟು ಕೆಲಸಗಳು ಸರ್, ತಮಗೆ ಗೊತ್ತೇ ಇದೆಯಲ್ಲ.

Submitted by H A Patil Sat, 12/08/2012 - 19:12

In reply to by lpitnal@gmail.com

ಲಕ್ಷ್ಮೀಕಾಂತ ಇಟ್ನಾಳರಿಗೆ ವಂದನೆಗಳು
ತಮ್ಮ ಮರು ಪ್ರಿತಿಕ್ರಿಯೆ ಓದಿದೆ,ತಾವಂದದ್ದು ನಿಜ, ಮೊದಲು ವೃತ್ತಿ ನಂತರ ಪ್ರವೃತ್ತಿ, ಧನ್ಯವಾದಗಳು.