ತಿಗಣೆ

ತಿಗಣೆ

ಕವನ


ತಿಗಣೆಗಳಿಂದ ಕಡಿಸಿಕೊಂಡವರಿಗೆ ಗೊತ್ತು
ನಿದ್ದೆ ಗೆಟ್ಟ ಆ ಸವಿ ಹೊತ್ತು
ಕಚ್ಚಿದಾಗೆಲ್ಲಾ ಎದ್ದೆದ್ದು ಕೆರೆದಾಗ
ಎಲ್ಲಿಂದಲೋ ಇದ್ದ ಮಜ ಬರುತ್ತಿತ್ತು

ಮತ್ತೆ ಮತ್ತೆ ಕಚ್ಚಿ ಕಾಡಿದಾಗ
ಕೆರೆದ ಜಾಗದಲ್ಲೆಲ್ಲಾ ಹುಣ್ಣೊ0ದು ಬಿದ್ದಿತ್ತು
ಕೋಪಗೊಂಡು ಹೆದರಿ ಚಾಪೆಯನ್ನೆಲ್ಲಾ ಒದರಿ
ಮಲಗಿದಾಗ ಮತ್ತೆ ಮುತ್ತಿಕ್ಕುತ್ತಿತ್ತು

ಮುಖದ ಮೇಲೆ ಏನೋ ಹರಿದಂತಾಗಿ
ಕೈ ಹಾಕುತ್ತಿದ್ದಂತೆ ಹೀರಿದ್ದ ರಕ್ತವು ಅಂಟುತಿತ್ತು
ಹೇಗೇಗೊ ಮಾಡಿ ಒದ್ದಾಡಿ ಗುದ್ದಾಡಿ
ಮಂಪರು ನಿದ್ದೆ ಬರುವಷ್ಟರಲ್ಲಿ ಬೆಳಕೇ ಆಗಿತ್ತು
ಕಡಿಸಿಕೊಂಡವರಿಗೆ ಗೊತ್ತು ತಿಗಣೆ ತಂದ ಆಪತ್ತು.|

                ಸೋಮೇಶ್ ಎನ್ ಗೌಡ