ಗೇಟ್ ವೇ ಆಫ್ ಬೆಂಗಳೂರು!

ಗೇಟ್ ವೇ ಆಫ್ ಬೆಂಗಳೂರು!

"ನೀವು ಇನ್ನೂ ನೋಡಿಲ್ಲವೇ!?"


"ಬೆಂಗಳೂರಿನ ಅಮರಾವತಿ!"


"ಎರಡು ಮಾಲ್‌ನಷ್ಟು ಸ್ಥಳ ಬರೀ ಪಾರ್ಕಿಂಗ್‌ಗೇ ಇದೆ!"............


ನೋಡಿದ ಎಲ್ಲರೂ ಹೊಗಳಿದರೂ ನಾನು ಅದನ್ನು ನೋಡಲು ಹೋಗಿರಲಿಲ್ಲ.


ಕಳೆದ ರವಿವಾರ ಊರಿಂದ ಬಂದ ಸಂಬಂಧಿಕರು "ಬೆಂಗಳೂರಲ್ಲಿ ನೋಡಲು ಹೊಸತೇನಿದೆ?" ಎಂದಾಗ,"ಗಾರ್ಬೇಜ್" ಎಂದೆನು. :) ನಾನೇ ನಮ್ಮ ಊರನ್ನು ಹಾಸ್ಯಮಾಡುವುದು ಸರಿಯಲ್ಲ ಎಂದು ಕೂಡಲೇ ತಿದ್ದಿ,"ಗೇಟ್‌ವೇ ಆಫ್ ಬೆಂಗಳೂರು ಅಂದರೆ ಬ್ರಿಗೇಡ್ ಗೇಟ್‌ವೇ, ನೋಡೋಣ ಹೊರಡಿ" ಎಂದೆ.


ಯಶವಂತಪುರ ಸರ್ಕಲ್ ಸಮೀಪ, ತುಮಕೂರು ಕಡೆ ಹೋಗುವ ರಸ್ತೆಯ ಪ್ರಾರಂಭದಲ್ಲೇ, ರೈಲ್ವೇ ಓವರ್ ಬ್ರಿಡ್ಜ್ ದಾಟಿದ ಕೂಡಲೇ ಸಿಗುವುದು. ಅಥವಾ ರಾಜಾಜಿನಗರ ಕಡೆಯಿಂದ- ಡಾ.ರಾಜ್ ರಸ್ತೆ ಮತ್ತು ಇಸ್ಕಾನ್ ಟೆಂಪ್‌ಲ್ ಕಡೆಯಿಂದ ಬರುವ ರಸ್ತೆ ಸೇರುವಲ್ಲೇ, ಸೋಪ್ ಫ್ಯಾಕ್ಟರಿ ಸ್ಟಾಪ್ ಎದುರಿಗೆ ಇದೆ.



ನಾನೇ ಫೋಟೋ ತೆಗೆಯುವುದು ಜಾಸ್ತಿ ಅಂದುಕೊಂಡಿದ್ದೆ. ನನ್ನ ಸಂಬಂಧಿ ಬಿಟ್ಟ ಕಣ್ಣು ಬಾಯಿ ಮುಚ್ಚದೇ "ವ್ಹಾ ವ್ಹಾ" ಅನ್ನುತ್ತಾ ಎಡೆಬಿಡದೇ ಫೋಟೋ ತೆಗೆಯುತ್ತಿದ್ದರು. ( ಬಹುಷಃ ಬ್ಲಾಗ್ ಏನಾದರೂ ಬರೆಯುತ್ತಿದ್ದಾರಾ/ ಫೇಸ್‌ಬುಕ್..? :))


ಮಾಲ್‌ಗೆ ಹೋದ ಮೇಲೆ ಸಿನಿಮಾ ನೋಡದಿದ್ದರೆ ಹೇಗೆ? "Life of Pi" ಗೆ ಟಿಕೆಟ್ ಸಿಕ್ಕಿತು. ಕೆಲವೇ ವಿದೇಶೀಯರನ್ನು ಬಿಟ್ಟರೆ ಉಳಿದವರು ಭಾರತೀಯರು. ಎಲ್ಲರೂ ಚೆನ್ನಾಗಿ ಅಭಿನಯಿಸಿದ್ದಾರೆ. ಪ್ರಾಣಿಗಳ ಅದರಲ್ಲೂ ಹುಲಿಯ ಆಕ್ಟಿಂಗ್ ಸೂಪರ್. ( http://www.youtube.com/watch?v=9BrD_v5Vt70 ) 3D ವಿಷುಯಲ್ ಎಫೆಕ್ಟ್ ಚಿತ್ರಕ್ಕೆ ಇನ್ನಷ್ಟು ಮೆರಗು ನೀಡಿತು.


ನಾವು ಒರಿಯನ್ ಮಾಲ್‌ನಲ್ಲಿರುವಾಗ ಪಕ್ಕದ ಶೆರಟಾನ್ ಹೋಟಲ್ ಆವರಣದಲ್ಲಿ "ಪಾಂಡ್ಸ್ ಫೆಮಿನಾ ಮಿಸ್ ಬೆಂಗಳೂರು" ಫೈನಲ್ಸ್ ನಡೆಯುತ್ತಿತ್ತು.


ಒಂದು ರಜಾದಿನ ಒರಿಯಾನ್ ಮಾಲ್‌ಗೆ ಭೇಟಿ ನೀಡಿ- ರಾತ್ರಿವರೆಗೆ ಮನರಂಜನೆ ಖಾತ್ರಿ.


****************


ಇಡೀ ಮಾಲ್‌ನಲ್ಲಿ ಕಸದ ಚೂರೂ ಕಾಣಿಸಲಿಲ್ಲ. ಇಲ್ಲಿ ಸುತ್ತುವ ಜನರೇ ಬೀಚ್/ ರಸ್ತೆ/ ಪಾರ್ಕಲ್ಲಿ ಸುತ್ತಾಡುವಾಗ ಗಲೀಜು ಯಾಕೆ ಮಾಡುವರು?


****************


ಬೆಂಗಳೂರು ತುಂಬಾ ಇದ್ದ ಸುಂದರ ಕೆರೆಗಳು ಹೋಗಿ ಆರ್ಟಿಫಿಶಿಯಲ್ ಕೆರೆ ಕಾರಂಜಿ..


ದೊಡ್ಡ ಗಾತ್ರದ ಮರಗಳು ಉರುಳಿ, ಮಾಲ್ ಬಹು ಅಂತಸ್ತಿನ ಕಟ್ಟಡಗಳು..


ಹಕ್ಕಿಗಳ ಚಿಲಿಪಿಲಿ ಬದಲಿಗೆ ಸರ್ರೌಂಡ್ ಮ್ಯೂಸಿಕ್..


ಹೂವಿನ ಸುವಾಸನೆ ಬದಲಿಗೆ ಸೆಂಟ್ ವಾಸನೆ..


ಇದೇ ಸ್ವರ್ಗ!


*****************


ಕಳೆದ ವಾರ ಪೂರ್ತಿ ಸಮಾರಂಭಗಳು+ನೆಂಟರಿಸ್ಟರು+ಓಡಾಟ ಜಾಸ್ತಿ ಇದ್ದುದರಿಂದ ನನ್ನ ಸಂಪದ ಮಿತ್ರರ ಲೇಖನಗಳನ್ನು ಓದಲಾಗಲಿಲ್ಲ. (ರಾಜ್.., ಕೋಳಿಕಟ್ಟ.., ಶಂಖನಾದ-೨..ಇತ್ಯಾದಿ,ಬರೆದು ಸಂಪದದಲ್ಲಿ ಹಾಕಬೇಕೆಂದಿದ್ದೆ..ಆಗಲಿಲ್ಲ) ಒಂದು ಸಣ್ಣ ಟೂರ್ ಮುಗಿಸಿ ಬಂದು,ಮುಂದಿನ ಬುಧವಾರದಿಂದ ಸಂಪದ ಲೇಖನಗಳನ್ನು ಓದುವೆ.


*****************


 ಕಳೆದ ವಾರ ಈಶ್ವರ ಮಂಗಳ ಸಮೀಪವಿರುವ "ಮೇ. ಸಂದೀಪ್" ನೆನಪಿನ ವೃತ್ತದ ಚಿತ್ರ ಹಾಕಲಾಗಿರಲಿಲ್ಲ.


ಇಲ್ಲಿ ಸೇರಿಸಿರುವೆ.


-ಗಣೇಶ.

Rating
No votes yet

Comments

Submitted by hpn Sat, 12/08/2012 - 09:54

> "ಎರಡು ಮಾಲ್‌ನಷ್ಟು ಸ್ಥಳ ಬರೀ ಪಾರ್ಕಿಂಗ್‌ಗೇ ಇದೆ!" ಆದರೆ ಅದೂ ಸಾಲದು. :-)

ಶನಿವಾರ ಭಾನುವಾರ ಎರಡೂ ದಿನ ಅಲ್ಲಿ ಸಂತೆ. ಪಾರ್ಕಿಂಗ್ ಇರಲಿ, ಅಲ್ಲಿ ನಿಲ್ಲಲೂ ಜಾಗ ಸಿಗದು.

> ಬೆಂಗಳೂರು ತುಂಬಾ ಇದ್ದ ಸುಂದರ ಕೆರೆಗಳು ಹೋಗಿ ಆರ್ಟಿಫಿಶಿಯಲ್ ಕೆರೆ ಕಾರಂಜಿ..

ಒಮ್ಮೆ ಈ ಆರ್ಟಿಫಿಶಿಯಲ್ ಕಾರಂಜಿ ಕೆರೆಗೆ ಟ್ಯಾಂಕಿನಲ್ಲಿ ನೀರುಹೊಡೆಸುತ್ತಿದ್ದರು. :-)

Submitted by ಗಣೇಶ Fri, 12/14/2012 - 00:03

In reply to by hpn

:) :) ಹರಿಪ್ರಸಾದ್ ನಾಡಿಗ್ ಅವರೆ, ನೀವು ಅದಾಗಲೇ ಭೇಟಿ ನೀಡಿಯಾಗಿದೆಯಾ :) ನನಗನಿಸುತ್ತದೆ- ಶನಿವಾರ ಭಾನುವಾರ ಬೆಂಗಳೂರಿನ ಮುಕ್ಕಾಲು ವಾಸಿ ಜನ ಪಾರ್ಕ್ ಬದಲು ಮಾಲ್‌ಗೇ ಧಾಳಿ ಮಾಡಿರುತ್ತಾರೆ.ಮಕ್ಕಳಿಂದ ಹಿಡಿದು ಮುದುಕರವರೆಗೆ ಎಲ್ಲರಿಗೂ ಮನರಂಜನೆ ಅಲ್ಲಿದೆ. (ಹೆಬ್ಬಾರರು ಹೇಳಿದಂತೆ ಭಯೋತ್ಪಾದಕರ ಕಣ್ಣು ಅದರ ಮೇಲೆ ಬೀಳಬಹುದು.)
ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.-ಗಣೇಶ.

Submitted by sasi.hebbar Sat, 12/08/2012 - 10:25

ಭೂಲೋಕದ ಕೃತಕ ಸ್ವರ್ಗ ಎಂಬುದು ನಿಜ - ಬೆಂಗಳೂರಿನ ಟ್ರಾಫಿಕ್ ಜಾಮ್ ಗೆ ಇದು ಮತ್ತೊಂದು ಕೊಡುಗೆ ; ಆದರೂ,ಲೇಖಕರೇ ಬರೆದಿರುವಂತೆ, ಒಮ್ಮೆ ಒಳಗೆ ಹೋದರೆ ನಾಲ್ಕಾರು ಗಂಟೆ ಸಲೀಸಾಗಿ ಕಾಲ ಕಳೆಯಬಹುದು. ಅದನ್ನು ನೋಡಿದಾಗ, ನನ್ನ ಮನಸ್ಸಿನ ಮೂಲೆಯಲ್ಲಿ ತುಸು ಅನುಮಾನ ಬಂದಿದ್ದೇನೆಂದರೆ, ಮುಂಬಯಿರೀತಿ (ತಾಜ್) ಯಾರಾದರೂ ಬೆಂಗಳೂರಿನಲ್ಲಿಭಯೋತ್ಪಾದನೆ ಮಾಡಬೇಕೆಂದು ಬಯಸಿದರೆ, ಈ ಮಾಲ್ ನ್ನು ಆಯ್ಕೆಮಾಡಿಕೊಂಡಾರೇನೊ!

Submitted by ಮಮತಾ ಕಾಪು Sat, 12/08/2012 - 11:05

In reply to by sasi.hebbar

ಉತ್ತಮ ಫೋಟೋಗಳು ಹಾಗೂ ಸಂಕ್ಷಿಪ್ತ ವಿವರಣೆ. ಚೆನ್ನಾಗಿದೆ ಬರಹ. ನಿಜ ಗಣೇಶರೆ ಬೆಂಗಳೂರಲ್ಲಿ ಏನಿದೆ ಯಾರಾದರೂ ಅಂದಾಗ ತಟ್ಟನೆ ನೆನಪಾಗುವುದು, ಗಾರ್ಬೇಜ್ ಅಥವಾ ಪರಿಮಳ ದ್ರವ್ಯವನ್ನೂ ಮೀರಿಸುವಂತಹ ವಾ(ಸು)ಸನೆ.

Submitted by ಗಣೇಶ Fri, 12/14/2012 - 00:17

In reply to by ಮಮತಾ ಕಾಪು

ಮಮತಾ ಅವರೆ, ಈ ಗಾರ್ಬೇಜ್ ರಾಮಾಯಣ ಯಾವಾಗ ಮುಗಿಯುವುದೋ... ವಾಸನೆ ಮಾತ್ರವಲ್ಲ... ರಾತ್ರಿ ಕೆಲಸ ಮುಗಿಸಿ ಬರುವಾಗ ಗಾರ್ಬೇಜ್‌ ಬಳಿ ಇರುವ ಬೀದಿನಾಯಿಗಳ ಕಾಟ ಬೇರೆ.. ಗಾರ್ಬೇಜ್ ಸಿಟಿಗೆ ಜೈ.:(

Submitted by ಗಣೇಶ Fri, 12/14/2012 - 00:10

In reply to by sasi.hebbar

ಹೆಬ್ಬಾರರೆ, >>>ಬೆಂಗಳೂರಿನ ಟ್ರಾಫಿಕ್ ಜಾಮ್ ಗೆ ಇದು ಮತ್ತೊಂದು ಕೊಡುಗೆ ; ನಿಜ- ಮಂತ್ರಿಯಿಂದಾಗಿ ಮಲ್ಲೇಶ್ವರದಲ್ಲಿ ಟ್ರಾಫಿಕ್ ಜಾಮ್, ಒರಿಯನ್ನಿಂದ ಯಶವಂತಪುರ, ಸೆಂಟ್ರಲ್‌ನಿಂದ....ಬೆಂಗಳೂರು ಪೂರ್ತಿ ಮಜಾ ಬದಲಿಗೆ ಜಾಮ್...ಜಾಮ್ನಗರ :)

Submitted by venkatb83 Sat, 12/08/2012 - 18:12

In reply to by kavinagaraj

ಒರಾಯನ್ ಮಾಲು ಕಟ್ಟುವುದಕ್ಕೆ ಮೊದಲಿಂದಲೂ ಆ ರಸ್ತೆ ಉಪಯೋಗಿಸುತ್ತಿದ್ದ ನಂಗೆ (ನಾ ಕಾಲೇಜಿಗೆ ಹೋಗುವಾಗ- ಡಿಪ್ಲೋಮಾ) ಅಲ್ಲಿ ಕಟ್ಟುತ್ತಿರುವುದು ಮಾಲು ಹೋಟೆಲು (ಶೆರಟಾನ್ ) ಎಂದು ಗೊತ್ತಿರಲಿಲ್ಲ..!! ಬಹುಶ ನಮ್ಮ ಮೆಟ್ರೋ ಸ್ಟೇಶನ್ ಮತ್ತು ವಾಣಿಜ್ಯ ಮಳಿಗೆ ಎಂದುಕೊಂಡಿದ್ದೆ..!! ಆಮೇಲೆ ಮಾಲು ಓಪನ್ ಆಗಿ ಬೇಜಾನ್ ಜನ ಅಲ್ಲಿಗೆ ಹೋಗಿದ್ದು ಆಯ್ತು... ನಮ್ಮ ಮೆಟ್ರೋ ಸ್ಟೇಶನ್ ಮತ್ತು ಸುತ್ತಮುತ್ತ (ಮಲ್ಲೇಶ್ವರಂ ಮಂತ್ರಿ ಮಾಲು ಮತ್ತು ಜಾಲಹಳ್ಳಿ ಕ್ರಾಸ್ ರಾಕ್ಲೈನ್ ಮಾಲು ಬಿಟ್ಟು) ಯಾವದೇ ಮಾಲು ಇಲ್ದೆ ಇರೋದು ಈ ಸ್ಥಳ ಆಯ್ದುಕೊಂಡಿದ್ದಕ್ಕೆ ಕಾರಣ ಅನ್ಸುತ್ತೆ...
ಮುಂದೆ ಮೆಟ್ರೋ ಸ್ಟೇಶನ್ (ಮುಗಿಯುತ್ತಿದೆ ಕಾಮಗಾರಿ-ಆರಂಭಕ್ಕೆ ಕೆಲವೇ ತಿಂಗಳು ಬಾಕಿ)-ಆರಂಭವಾಗುತ್ತಿದ್ದಂತೆ ಈ ಮಾಲ್ಗೆ ಫುಲ್ ರಶ್ ಆಗಬಹುದು...!! ಮಂತ್ರಿ ಮಾಲ್ ಅಬ್ಬರ ಕಡಿಮೆ ಆಗಬಹದು...!! ಆದರೆ ಜನರ ವಾಹನಗಳ ಅಬ್ಬರ ಹೆಚ್ಚಾಗಿ ಅಲ್ಲಿ( ಆ ಮಾಲ್ ಮುಂದೆ ಹತ್ತಿರ) ಟ್ರಾಫಿಕ್ ಜಾಮ್ ಸಮಸ್ಯೆ ಸಹಾ ಆಗಬಹ್ದು.:(((

ಮಾಲ್ ಹೀಗೆಲ್ಲ ಇದೆ ಅಂತ ಗೊತ್ತಿರಲಿಲ್ಲ..
.ಚಿತ್ರ ಸಹಿತ ಮಾಹಿತಿಗೆ ನನ್ನಿ ...
ಶೀಘ್ರದಲ್ಲಿಯೇ ಅಲ್ಲಿಗೆ ಭೇಟಿ ಕೊಡುವೆ.
>>ಪ್ರತಿ ಏರಿಯಾದಲ್ಲಿ ಈ ತರಹದ ದೊಡ್ ದೊಡ್ಡ ಮಾಲ್ಗಳು ನೆಲೆಗೊಳ್ಳುತ್ತಿರುವ್ದು ಮತ್ತು ಭೇಟಿ ಕೊಡುವ ಜನ ನೋಡಿದಾಗ ಈ ಬದಲಾವಣೆ ಅಚ್ಚರಿ ಹುಟ್ಟಿಸುತ್ತೆ.!!
ಮಂತ್ರಿ ಮಾಲಿನಲ್ಲಿ ಖರೀದಿಸಿದ ವಸ್ತು ಮತ್ತು ಅದೇ ವಸ್ತುವಿನ ಬೆಲೆಯನ್ನು ಬೇರೆ ಕಡೆ ನೋಡಿದಾಗ ವ್ಯತ್ಯಾಸ ಏನೂ ಕಾಣಿಸಲಿಲ್ಲ..ಹಾಗಾಗಿ ಮಾಲ್ನಲ್ಲಿ ದುಬಾರಿ ವಸ್ತುಗಳಿವೆ ದುಪ್ಪಟ್ಟು ವಸೂಲಿ ಮಾಡುವರು ಎಂದು ಎನಿಸಿದ್ದ ನನಗೆ ಖುಷಿ ಆಯ್ತು...!!
ಶುಭವಾಗಲಿ..
\|

Submitted by ಗಣೇಶ Fri, 12/14/2012 - 00:27

In reply to by venkatb83

ಸಪ್ತಗಿರಿವಾಸಿ ಅವರೆ, ನಾನೂ ಹಿಂದೊಮ್ಮೆ ನೋಡಿದ್ದೆ. ಕಿರ್ಲೋಸ್ಕರ್ ಫ್ಯಾಕ್ಟರಿ ಹಿಂಬದಿ ಸ್ಥಳ..ಪಾಳು ಬಿದ್ದಂತಿತ್ತು. ಈ ಸ್ಥಳದಲ್ಲಿ ಇಷ್ಟು ಎತ್ತರದ ಕಟ್ಟಡಗಳನ್ನು ಕಟ್ಟಿದರೆ ಯಾರು ಬಾಡಿಗೆ ಬರುತ್ತಾರೆ ಎಂದು ಆಲೋಚಿಸುತ್ತಿದ್ದೆ...ಈಗ ನೋಡಿದರೆ ಕೋಟಿಗಟ್ಟಲೆ ಬೆಲೆಬಾಳುವ ಫ್ಲಾಟ್‌ಗಳ ರಾಶಿ!
ಅಬ್ಬಾ..

Submitted by ಗಣೇಶ Fri, 12/14/2012 - 00:22

In reply to by kavinagaraj

ಕವಿನಾಗರಾಜರೆ,>>>ಕರೆದುಕೊಂಡು ಹೋದರೆ!?..
ನೀವು ಸಂಡೆ ಬಂದರೆ ಅವರೆಲ್ಲಾ ನಿಮ್ಮನ್ನು ಒತ್ತಾಯ ಮಾಡಿ ಅಲ್ಲಿಗೇ ಕರಕೊಂಡು ಹೋಗುವರು.ಗ್ಯಾರಂಟಿ. ಅಲ್ಲೇ ನಿಮಗೆ ಕೆಲ ಸಂಪದಿಗರೂ ಕಾಣಸಿಗಬಹುದು.:)

Submitted by partha1059 Sat, 12/08/2012 - 20:39

ಗಣೇಶರೆ ನಿಮ್ಮ ಲೇಖನ‌ ವರ್ಣಚಿತ್ರಗಳು ಎಲ್ಲವು ಸೊಗಸಿದೆ. ನನಗೆ ವಯ್ಯುಕ್ತಿಕವಾಗಿ ಈ ಮಾಲ್ ಸ೦ಸ್ಕೃತಿ ಇಷ್ಟವಾಗುವದಿಲ್ಲ ಅಷ್ಟೆ

Submitted by ಗಣೇಶ Fri, 12/14/2012 - 00:35

In reply to by partha1059

ಪಾರ್ಥರೆ, ನನಗೂ ಈ ಮಾಲ್ ಸಂಸ್ಕೃತಿ ಇಷ್ಟವಿಲ್ಲ. ಆದರೆ ಒಮ್ಮೆ ಹೋಗಿ ನೋಡಿ ಬನ್ನಿ.ನಿಮ್ಮ ನಿಲುವು ಬದಲಾಗಿ ಏನನ್ನುವಿರಿ ಗೊತ್ತಾ:-"ಗಣೇಶರೆ, ಪ್ರತೀ ಊರಲ್ಲೂ, ಪ್ರತೀ ಹಳ್ಳಿಯಲ್ಲೂ ಈ ಮಾಲ್‌ಗಳು ಬರಬೇಕು. ಏನು ಸ್ವಚ್ಛತೆ. ಎಲ್ಲವೂ ಒಂದೇ ಕಡೆ ಸಿಗುವಾಗ ಪ್ರತಿಯೊಂದಕ್ಕೂ ಹಳ್ಳಿಗರು ಪೇಟೆಗೆ ಹೋಗುವುದು ತಪ್ಪುವುದು. ಪ್ರತೀ ಊರಿನ ಬಸ್ ಸ್ಟಾಂಡ್‌ಗಳನ್ನು ಮಾಲ್‌ಗಳಿಗೆ ಒಪ್ಪಿಸಿ. ಸ್ವಚ್ಛ ಸುಂದರ ಲ್ಯಾಟ್ರಿನ್‌ಗಳಿಂದಾಗಿ ಜನರಿಗೆ ವಿಶೇಷವಾಗಿ ಹೆಂಗಸರಿಗೆ ಆರಾಮ. ಪ್ರವಾಸೋದ್ಯಮವೂ ಚುರುಕಾಗುವುದು..."

Submitted by venkatb83 Sat, 12/15/2012 - 16:24

In reply to by ಗಣೇಶ

ಗಣೇಶ್ ಅಣ್ಣ..

ಪಾಳು ಬಿದ್ದ ಕಟ್ಟಡ -ಶುಕ್ರದೆಸೆಗೆ ಕಾದ ಭೂಮಿ ಹುಡುಕಿ ಅಲ್ಲಿ ದೊಡ್ಡ ಪ್ರಮಾಣದ ಮಾಲ್ ಕಟ್ಟಿ ಲಕ್ಷಾಂತರ ರುಪಾಯಿ (ತಿಂಗಳಿಗೆ)ಬಾಡಿಗೆಗೆ ಬಿಡುವ ಬಿಲ್ಡರ್ಗಳ ಬುದ್ಧಿ......!!
ಅಲ್ಲಿ ಸಾಮಾನ್ಯವಾಗಿ ಬಾಡಿಗೆ ಪಡೆಯುವವರು ಈ ಮೊದಲು ಬೇರೆ ಬೇರೆ ಏರಿಯಾದಲ್ಲಿ ತಮ್ಮ ಬ್ರಾಂಚ್ ಇರುವವರೇ ,ಸೊ ಇಲ್ಲಿ ಲಾಸ್ ಆದರೂ (ಆಗೋದು ಕಡಿಮೆ ಅನ್ಸುತ್ತೆ..!!) ಬೇರೆ ಬ್ರಾಂಚ್ ಲಾಭದಲ್ಲಿ ಸರಿ ದೂಗಿಸುವರೆನೋ..!!
ಏನಾಗಲಿ ನೀವ್ ಹೇಳಿದನಂತೆ ಎಲವೋ ಒಂದೇ ಕಡೆ ದೊರೆಯುವುದು.ವಸ್ತುಗಳನ್ನು ನಾವೇ ಮುಟ್ಟಿ , ಪರೀಕ್ಷಿಸಿ ,ಖರೀದಿಸುವ ಈ ವಿಧಾನ ಮತ್ತು ಅಲ್ಲಿನವರ ನಯ ವಿನಯ ಆದರತೆ ನೀಡುವ ಗೌರವ ಸ್ವಚ್ಛತೆ ಮಾಲ್ಗಳಿಗೆ ಮುಕ್ಕುವಂತೆ ಮಾಡುವದು....!!

ಈಗಂತೂ ಬೆಂಗಳೂರಿನ ಪ್ರತಿ ಏರಿಯಾದಲ್ಲಿ ಒಂದೊಂದು ಮಾಲ್ ನಿರ್ಮಾಣವಾಗಿವೆ ಆಗುತಿವೆ..
ಹಾಗೆಯೇ ಯುವ ಜನತೆ (ಪ್ರೇಮಿಗಳು)ಗೆ ಈ ಮಾಲ್ಗಳು ಸಮಯ ಕಳೆಯಲು ತಾಣಗಳಾಗಿವೆ..
ಮಾಲ್ಗಳಲ್ಲಿ ಯುವ ಜನತೆಯದ್ದೆ ಸಿಂಹ ಪಾಲು..!!
ಬದಲಾವಣೆ ಅನಿವಾರ್ಯ..ಒಗ್ಗಿಕೊಳ್ಳುವುದು ಸಹ..!!

>>>ನಿಮ್ಮನ್ನು ಮುಖತ ನೋಡಲು ಇನ್ನು ಮೇಲೆ ನಾವ್ ಹೊಸ ಮಾಲ್ ಎಲ್ಲಿ ಓಪನ್ ಆಗುತ್ತೋ ಅಲ್ಲಿಗೆ ರೇಡ್ ಮಾಡಬೇಕು..!!
ಆದ್ರೆ ಸಮಸ್ಯೆ ಅಂದ್ರೆ ಅಲ್ಲಿ ಎಲ್ಲರೂ ಫೋಟೋ ಕ್ಲಿಕಿಸುವರು ನೀವೇ ಎಂದು ಕಂಡು ಹಿಡಿಯೋಕೆ ಕಷ್ಟ..ಆದರೋ ಪ್ರಯತ್ನಿಸುವ..!!
ಶುಭವಾಗಲಿ..