ಬಿದನೂರು ಕೋಟೆಯ ಅಳಲು ಕೇಳಿಸುತ್ತಿದೆಯೇ?

ಬಿದನೂರು ಕೋಟೆಯ ಅಳಲು ಕೇಳಿಸುತ್ತಿದೆಯೇ?

 

     ಕೆಳದಿಯರಸರ ಬಿದನೂರು ಕೋಟೆಯ ಈ ಕೆಲವು ಚಿತ್ರಗಳನ್ನು ಕೆಲವು ವರ್ಷಗಳ ಹಿಂದೆ ತೆಗೆದಿದ್ದೆ. ನಿಮ್ಮೊಡನೆ ಹಂಚಿಕೊಳ್ಳಬಯಸಿ ಇಲ್ಲಿ ಪ್ರಕಟಿಸಿರುವೆ. 'ಇತಿಹಾಸದಿಂದ ಪಾಠ ಕಲಿಯಿರಿ; ಅದೇ ತಪ್ಪುಗಳನ್ನು ಮತ್ತೆ ಮತ್ತೆ ಮಾಡದಿರಿ' ಎಂದು ಇವು ಹೇಳುತ್ತಿವೆ. ಈ ಬಿದನೂರು ಕೋಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ನಗರ ಎಂಬಲ್ಲಿದೆ. ಹೊಸನಗರದಿಂದ  17 ಕಿ.ಮೀ. ದೂರದಲ್ಲಿರುವ ಈ ಸ್ಥಳ ಇತಿಹಾಸ ಪ್ರೇಮಿಗಳು ಸಂದರ್ಶಿಸಬೇಕಾದ ಸ್ಥಳ. ದರ್ಬಾರ್ ಸಭಾಂಗಣದ ಚಿತ್ರವನ್ನೂ ನಾನು ಸೆರೆ ಹಿಡಿಯಬೇಕಿತ್ತು. ಮುಂದೊಮ್ಮೆ ಹೋದಾಗ ತೆಗೆಯುವೆ.  ಆ ಸಭಾಂಗಣದಲ್ಲಿ ಕಟ್ಟೆ ಒಂದನ್ನು ಬಿಟ್ಟು ಈಗ ಏನೂ ಉಳಿದಿಲ್ಲ, ನಮ್ಮವರು 'ಉಳಿಸಿಲ್ಲ'! 

-ಕ.ವೆಂ.ನಾಗರಾಜ್.

 

 

 

 

 

 

Comments

Submitted by spr03bt Mon, 12/10/2012 - 19:56

ಕವಿನಾಗರಾಜರೆ, ನಿಮ್ಮ ಲೇಖನ ನೋಡಿ ಮಾಸ್ತಿಯವರ ಚೆನ್ನಬಸವನಾಯಕ ಕಾದ೦ಬರಿ ನೆನಪಾಯಿತು. ಬಿದನೂರಿನ (ನಗರ) ವೈಭವದ ಕೊನೆಯ ಕ್ಷಣಗಳನ್ನು ಕಣ್ಣಿಗೆ ಕಟ್ಟುವ೦ತೆ ವಿವರಿಸಿದ್ದಾರೆ.
Submitted by swara kamath Tue, 12/11/2012 - 23:07

ಕವಿ ನಾಗರಾಜರಿಗೆ ನಮಸ್ಕಾರಗಳು. ಅತೀ ಸುಂದರವಾದ ದೃಶ್ಯಾವಳಿಗಳ ಮೂಲಕ ನಮ್ಮ ಹೊಸನಗರ ತಾಲೂಕಿನ ನಗರದಲ್ಲಿ ಶಿವಪ್ಪನಾಯಕನು ಆಳಿ ಮೆರೆದ ಬಿದನೂರಿನ ಕೋಟೆಯನ್ನು ಸಂಪದಿಗರಿಗೆ ಪರಿಚಯಿಸಿದ್ದೀರಿ. ಗಿಡ ಗಂಟಿಗಳಿಂದ ತುಂಬಿ ಹಾಳು ಸುರಿಯುತ್ತಿದ್ದ ಈ ಕೋಟೆಗೆ ಇತ್ತೀಚೆಗೆ ಸಂರಕ್ಷಣಾ ಇಲಾಖೆಯವರು ಹೊಸ ಮೆರಗನ್ನು ನೀಡಿದ್ದಾರೆ.ಆದರೂ ಕಳ್ಳ ಕಾಕರು ನಿಧಿ ,ಹರಳಿಗಾಗಿ ಆಗಾಗ ಲೂಟಿ ಮಾಡುತ್ತಲೇ ಇದ್ದಾರೆ.