ಆಧ್ಯಾತ್ಮಿಕ ಕನ್ನಗಳ್ಳರು
“ಹೂ ಬೇಕೇ ಹೂವು... ಪರಮಳದ ಹೋ...” ಎಂದೊಬ್ಬ ಹೂವಾಡಗಿತ್ತಿ ಸಾರುತ್ತಾ ಬರುತ್ತಾಳೆ. ಮೈಸೂರು ಮತ್ತು ಸುತ್ತಮುತ್ತಣ ಊರು-ಕೇರಿಗಳಲ್ಲಿದು , ಹಿಂದೆಲ್ಲಾ ಸರ್ವೇ ಸಾಮಾನ್ಯ ವಯಕರಿಯಾಗಿತ್ತು. ಅದೇ ಪಲ್ಲವಿಯಲ್ಲಿ ಒಂದು ಹಾಡು. ಪುರಂದರದಾಸರ “ಕಲ್ಲು ಸಕ್ಕರೆ ಕೊಳ್ಳಿರೋ...” ಹಾಡಿಗೂ ಇಂಥದೇ ಸ್ಫೂರ್ತಿ; ಅದೇ ಅರ್ಥಾಂತರ ನ್ಯಾಸ. ಆಗೆಲ್ಲಾ ಕಲ್ಲುಸಕ್ಕರೆಯನ್ನೂ, ಹಳ್ಳಿ-ಹಳ್ಳಿಗಳಲ್ಲಿ, ಎತ್ತು ಹೇರಿನಿಂದಲೇ ಹೊರೆಸಿ ಮಾರುತ್ತಿದ್ದರೋ, ಎನೋ. ಅಲ್ಲಿ, ದಸರು ’ನಾಮ’ವೆಂಬ ಅಮೂರ್ತವನ್ನು ಮಾರಿದರೆ, ಈ ಸಂತ, ಕೃಷ್ಣನ ತೋಟದ, ಕೈಗೆಟಕುವ ಹೂವು ಎಂದೇ ಕೂಗಿ ಕರೆಯುತ್ತರೆ. ಮಲ್ಲಿಗೆ, ಸಂಪಗೆ, ಜಾಜಿ, ಪಾರಿಜಾತ... ಇತ್ಯಾದಿಗಳ ವ್ಯಕ್ತಾವ್ಯಕ್ತ ’ಪರಿಮಳ’ ಎಲ್ಲಾ ವಿಧದ, ಅಧಿಭೌತಿಕ-ಅಧ್ಯಾತ್ಮಿಕ, ಕ್ಲೇಶಗಳನ್ನೂ ಕಳೆಯುವುದೆಂಬ ’ಗ್ಯಾರಂಟಿ’ ಕೊಡುತ್ತಾರೆ! ಇದು ’ದೇವರನಾಮ’ವಾದರೂ, ಇದರ ಹೂರಣ ಮತ್ತು ಗೇಯಗುಣಗಳೆರಡರಲ್ಲೂ, ಇಂಗ್ಲಿಷ್ ’ರಮ್ಯ ಕಾವ್ಯ’ದ Import, ಎದ್ದು ಕಾಣುತ್ತದೆ. ಅಷ್ಟುಮಟ್ಟಿನ ಸಾಹಿತ್ಯ ಸಂಪನ್ನತೆಯಾಗಲೀ, ವಿಮರ್ಶಾ ಸಾಮರ್ಥ್ಯವಾಗಲೀ ಇರದ ಸ್ವಯಂ-ಪಂಡಿತರು ಮತ್ತು ಇನ್ನೂ ಕೆಳಗಿನ, ಕ್ಯಾಸೆಟ್ ಬೋಧೆ ಮಾತ್ರದ ಗಾಯಕಮಣಿಗಳು, ಈ ಹಾಡನ್ನು ಶ್ರಿಪ್ರಸನ್ನವೆಂಕಟದಾಸರದೆಂದು ಪರಿಭಾವಿಸಿ ವ್ಯಾಖ್ಯಾನಿಸುತ್ತಾರೆ/ಹಾಡುತ್ತಾರೆ. ಜನಮಾನಸಕ್ಕೆ ನೇರವಾಗಿ ತಟ್ಟುವ ಈ ಹಾಡಿನ ನಿಜವಾದ ಸ್ವಾನುಭಾವೀ ಕರ್ತೃ ಶ್ರೀವಿದ್ಯಾಪ್ರಸನ್ನತೀರ್ಥರೆಂಬುವವರು ಎನ್ನುವುದು ಇವರಿಗೆ ತಿಳಿದಿರುವುದಿಲ್ಲ.
ಕನಕಸಾಹಿತ್ಯ ಪರಿಣಿತರಾದ ಪ್ರೊ. ಎಸ್. ಸುಧಾಕರರೆಂಬ ಹಿರಿಯರಿದ್ದಾರೆ. ಹರಿದಾಸಸಾಹಿತ್ಯದ ಪುನರುದ್ಧಾರಕರೆನ್ನಲಾಗುವ ವಿಜಯದಸರು, ಕನಕದಾಸರ ಬಹುತೇಕ ಉತ್ತಮ ಹಾಡುಗಳನ್ನೆತ್ತಿ ಪುರಂದರದಸರ ಹೆಸರಿಗೂ, ತಮ್ಮ ಅಂಕಿತಕ್ಕೂ ಹಾಕಿಕೊಂಡುಬಿಟ್ಟಿದ್ದಾರೆಂಬುದು ಅವರ ವಾದ. ನಮ್ಮ ಕಣ್ಣೆದುರೇ ನಡೆದಿರುವ ’ಹೂ ಬೇಕೇ ಹೂವು’ ಹಾಡಿನ ಅಜ್ಞಾನವನ್ನು ಗಮನಿಸಿದರೆ, ಸುಧಾಕರರ ವಾದದಲ್ಲೂ ಸ್ವಲ್ಪಮಟ್ಟಿನ ಹುರುಳಿರಲಾರದೇಕೆ, ಎನಿಸುತ್ತದೆ!
Comments
ಆತ್ಮೀಯ ದಿವಾಕರರೇ,
ಆತ್ಮೀಯ ದಿವಾಕರರೇ,
ನಿಮ್ಮ ಮಾತು ಸರಿಯಿದೆ. ಪುರ0ದರ ದಾಸರ ಸಮಗ್ರ ಕಾವ್ಯದಲ್ಲಿ ಇರದ ಹಲವಾರು ಕ್ರತಿಗಳು ಪುರ0ದರ ದಾಸರ ನಾಮಾ0ಕಿತದಲ್ಲಿ ಹಾಡುವುದನ್ನು ಕೇಳುವಾಗ ನನಗೂ ಆಶ್ಹ್ಚರ್ಯ ವಾಗಿದೆ. ಉದಾಹರಣೆಗೆ..."ತಲ್ಲಣಿಸದಿರು ಕ0ಡ್ಯ ತಾಳು ಮನವೇ...." ಈ ಕ್ರಿತಿ ಪುರ0ದರ ಮತ್ತು ಕನಕ ದಾಸರ ನಾಮಾ0ಕಿತದಲ್ಲಿದೆ.
ಯಾವುದು ಸರಿ ಯಾವುದು ಸರಿಯಲ್ಲ ಇದರ ತೀರ್ಮಾನ ಕಷ್ತಸಾಧ್ಯವಾಗಿದೆ.
In reply to ಆತ್ಮೀಯ ದಿವಾಕರರೇ, by Prakash Narasimhaiya
ಅದನ್ನು ಕಾಲಕ್ರಮದಲ್ಲಿ ಯಾರೊ
ಅದನ್ನು ಕಾಲಕ್ರಮದಲ್ಲಿ ಯಾರೊ ಮಾಡಿರುವ ಕೃತ್ಯಗಳಷ್ಟೆ ಅದನ್ನು ಕನಕರಾಗಲಿ ಪುರಂದರರಾಗಲಿ ಮಾಡಿಲ್ಲ ಅನ್ನುವದಂತು ಸತ್ಯ. ಅಷ್ಟು ಮಟ್ಟಿಗೆ ಅವರ ಮೌಲ್ಯಗಳು ಕಡಿಮೆಯಾಗುವದಿಲ್ಲ. ಯಾರೊ ಮಾಡಿ ಅವರ ಅಂಕಿತಹಾಕಿದಲ್ಲಿ ಅದು ಮೇಕೆಯ ಬಾಯಿಗೆ ಮೊಸರನ್ನ ಹಚ್ಚುವ ಕೆಲಸ.
ಸಾಮಾನ್ಯ ಓದುಗ/ ಕೇಳುಗರಿಗೆ
ಸಾಮಾನ್ಯ ಓದುಗ/ ಕೇಳುಗರಿಗೆ ರಚಿಸಿದವರ ಹೆಸರು ಮುಖ್ಯವಲ್ಲ ಎನ್ನುವುದಾಗಿದೆ. ಕೆಳಗಿನ ಕೊಂಡಿಯಲ್ಲಿ ಕೆ. ಎಸ್. ನರಸಿಂಹ ಸ್ವಾಮಿಯವರ ಕವಿತೆ ನಿಸಾರ ಅಹಮ್ಮದರ ಹೆಸರಿನಲ್ಲಿ ಪ್ರಕಟವಾಗಿಬಿಟ್ಟಿದೆ.
http://www.kannadalyrics.com/?q=node/2780