ಕರ್ಣಾಟಕವನ್ನು ಆಳಿದ್ದ ರಾಜಮನೆತನಗಳ ವಿವರ

ಕರ್ಣಾಟಕವನ್ನು ಆಳಿದ್ದ ರಾಜಮನೆತನಗಳ ವಿವರ

ಅವಧಿ   -   ರಾಜವಂಶ -    ಪ್ರಮುಖ ರಾಜರು (ಅನುಕ್ರಮವಾಗಿ)
3ನೆಯ ಶತಮಾನಕ್ಕಿಂತ ಮುಂಚೆ - ಶಾತವಾಹನರು -     ಶ್ರೀಮುಖ, ಗೌತಮಿಪುತ್ರ
ಕ್ರಿ.ಶ.325-540-   ಕದಂಬರು -             ಮಯೂರವರ್ಮ
325-999 -         ಗಂಗರು -                ಅವಿನೀತ, ದುರ್ವಿನೀತ, ರಾಚಮಲ್ಲ
500-757 - ಬಾದಾಮಿ ಚಾಲುಕ್ಯರು - ಮಂಗಳೇಶ, ಪುಲಿಕೇಶಿ
757-923 -         ರಾಷ್ಟ್ರಕೂಟರು -        ಕೃಷ್ಣ, ಗೋವಿಂದ, ನೃಪತುಂಗ
973-1198 - ಕಲ್ಯಾಣದ ಚಾಲುಕ್ಯರು - ವಿಕ್ರಮಾದಿತ್ಯ
1198-1312 -     ದೇವಗಿರಿ ಯಾದವರು  -      ಸಿಂಗಾಹನ
1000-1346 -     ಹೊಯ್ಸಳರು - ವಿಷ್ಣುವರ್ಧನ
1336-1565 -     ವಿಜಯನಗರದ ಅರಸರು - ಕೃಷ್ೞದೇವರಾಯ
1347-1527 - ಬಹಮನಿ ಸುಲ್ತಾನರು - ಮಹಮದ್ ಷಾ ೧,೨
1490-1686 -     ಬಿಜಾಪುರ ಸುಲ್ತಾನರು - ಯೂಸುಫ್ ಆದಿಲ್  ಷಾ, ಇಬ್ರಾಹಿಮ್ ಆದಿಲ್ ಷಾ
1500-1762- ಕೆಳದಿಯ ಅರಸರು - ಚೌಡಪ್ಪನಾಯಕ, ಸದಾಶಿವನಾಯಕ,ರಾಣಿ ಚನ್ನಮ್ಮ, ಶಿವಪ್ಪನಾಯಕ ಮುಂತಾದವರು


1399-1761 - ಮೈಸೂರು ಒಡೆಯರು -  ರಣಧೀರ ಕಂಠೀರವ, ಚಿಕ್ಕದೇವರಾಯ
1761-1799 - ಹ್ಶೆದರ್ ಆಲಿ, ಟಿಪ್ಪುಸುಲ್ತಾನ್
1800-1831 - ಮೈಸೂರು ಒಡೆಯರು - ಕೃಷ್ೞರಾಜ ಒಡೆಯರ್
1800 -              ಕರ್ಣಾಟಕದ ವಿಭಜನೆ:        ಹಳೆ ಮೈಸೂರು ಭಾಗವನ್ನು ಹೊರತು ಪಡಿಸಿ ಕರ್ಣಾಟಕವು ಬ್ರಿಟಿಷರ ಆಡಳಿತದಲ್ಲಿದ್ದ ಬಾಂಬೆ ಮತ್ತು ಮದರಾಸು ಪ್ರಾಂತಗಳು, ಮರಾಠರು ಮತ್ತು ಹ್ಶೆದರಾಬಾದ್ ನಿಜಾಮರುಗಳ ನಡುವೆ ಹರಿದು ಹಂಚಿಹೋಯಿತು.
1831-1881 -  ಬ್ರಿಟಿಷರು -  ಆಂಗ್ಲರ ಆಧಿಪತ್ಯ
1881-1950 - ಮೈಸೂರು ಒಡೆಯರು -  ಕೃಷ್ೞರಾಜ ಒಡೆಯರ್, ಜಯಚಾಮರಾಜ ಒಡೆಯರ್
1956 - ಇಂದಿನ ಕರ್ನಾಟಕದ ರಚನೆ
 ******************************
'ಕೆಳದಿ ನೃಪವಿಜಯ'ದಲ್ಲಿ ಬರುವ ಕರ್ಣಾಟಕದ ವರ್ಣನೆ
ಇಂತೆಸೆವ ಭರತಖಂಡದ ತೆಂಕಣಾಶಾಭಾಗದೊಳ್  ನಾನಾವಿಧವರ್ಣಾಶ್ರಮಸುಖಸಂಪತ್ಸಮಾಜಕಾಸ್ಪದಮೆನಿಸಿ
ಮೆರೆವ   ಕನ್ಯಾಖಂಡಪ್ರದೇಶದೊಳ್
     ಅಗಣಿತತೀರ್ಥ ನದೀಜದ
     ನಗಪುಣ್ಯಾರಣ್ಯವಿಷಯಸುಕ್ಷೇತ್ರಸಮೂ
     ಹಗಳಿಗೆಡೆಯೆನಿಸಿ ಮಿಗೆ ಝಗ
     ಝಗಿಪುದು ಸಹ್ಯಾಚಲಂ ಮಹಾಸುಖಮೂಲಂ                   
          ಆ ಸಹ್ಯಾದ್ರಿಯೊಳೊಪ್ಪುವ
          ದೇಶಂಗಳೊಳಧಿಕಮೆನಿಸಿ ನಿರುಪಮಲಕ್ಷ್ಮೀ
          ಕೋಶಂ ವಿಲತ್ಪುಣ್ಯನಿ
           ವೇಶಂ ಕರ್ಣಾಟಕದೇಶಮುರೆ ರಂಜಿಸುಗುಂ               
     ಕೆರೆಯಿಂ ಕಾಳ್ಪುರದಿಂ ಕನತ್ಕುವಲಯಾಂಭೋಜಂಗಳಿಂ ಶೋಭಿಪೊ
     ಳ್ಸರದಿಂ ಪುಷ್ಪಲತಾಪ್ರತಾನ ಲಸದಾರಾಮ ಪ್ರದೇಶಂಗಳಿಂ
     ತೊರೆಂ ರಾಜಿಪ ಗಂಧಶಾಲಿವನದಿಂ ಕ್ರೀಡಾದ್ರಿಯಿಂ ಕಣ್ಗೆ ಭಾ
     ಸುರಮಾಗಿರ್ದುದು ದೇಶಮುನ್ನತಸುಖಾವಾಸಂ ದಲೇಂ ವರ್ಣಿಪೆಂ
 

Comments

Submitted by VeerendraC Thu, 12/13/2012 - 17:45

ನಾನು ಇತ್ತಿಚೆಗೆ ಕರ್ನಾಟಕದ‌ ಇತಿಹಾಸದ‌ ಬಗೆ ವಿಕಿಪಿಡಿಯ‌ ಮು0ತಾದ‌ ಕಡೆಯಲ್ಲಿ ನೋಡಿದರು ಸ0ಪೂರ್ಣವಾಗಿ ಸಿಗಲ್ಲಿಲ್ಲಾ.. ನೀವು ತು0ಬಾ ಒಳ್ಳೆಯ‌ ಮಾಹಿತಿಯನ್ನು ಕಲೆ ಹಾಕಿ ತಿಳಿಸಿದ್ದಿರಾ ಧನ್ಯವಾದಗಳು .. ಬಹುಶ‌ ನೀವು ಪಾಳೆಗಾರರ‌ ಬಗೆ ಮಾಹಿತಿಯನ್ನು ಸೇರಿಸಬಹುದು.. ಅವ‌ರು ವಿಜಯನಗರದ‌ ಅರಸರ‌ ಪತನದ‌ ನ0ತರ‌ ಹಲವು ಕಡೆ ಪ್ರಾಬಲ್ಲ್ಯ‌ ಸಾದಿಸಿದ್ದರು..
Submitted by venkatb83 Thu, 12/13/2012 - 17:57

ಹಿರಿಯರೇ ಸಂಕ್ಷಿಪ್ತ ಮಾಹಿತಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗಿದೆ.. ಜೊತೆಗೆ ಸೇರಿಸಿದ ಕೊನೆಯ ಸಾಲುಗಳು ಹಳ ಗನ್ನಡವೆ ? ಉಪಯುಕ್ತ ಮಾಹಿತಿಗೆ ನನ್ನಿ .. ಶುಭವಾಗಲಿ.. \|
Submitted by H A Patil Thu, 12/13/2012 - 18:48

ಕವಿ ನಾಗರಾಜ ರವರಿಗೆ ವಂದನೆಗಳು "ಕರ್ನಾಟಕವನ್ನು ಆಳಿದ್ದ ರಾಜ ಮನೆತನಗಳ ವಿವರ" ರಾಜರ ಆಳ್ವಿಕೆಯನ್ನು ಅನುಕ್ರಮವಾಗಿ ವಿವರಿಸಿದ್ದೀರಿ. ಕೆಳದಿ ನೃಪ ವಿಜಯದಲ್ಲಿ ಬರುವ ಕರ್ಣಾಟಕದ ವರ್ಣನೆ ಚೆನ್ನಾಗಿದೆ. ಧನ್ಯವಾದಗಳು.
Submitted by venkatb83 Sat, 12/15/2012 - 16:31

In reply to by kavinagaraj

ಹಿರಿಯರೇ.. ಶ್ರೀ ಮಧ್ ಗೋವಿಂದ ಅಲ್ಲಿಯೇ ಇರುವರು... ಸ ವಾ ಮಾತ್ರ ಬರಹ ನಾಮದಿಂದ -ನಿಜ ನಾಮಕ್ಕೆ (ನಾಮದೆಯಕ್ಕೆ)ವಪಾಸಾಗಿರುವನು..!! ಶುಭವಾಗಲಿ.. \|
Submitted by Jayanth Ramachar Sat, 12/15/2012 - 22:11

Kavigale tumba olleya mahitiyulla lekhana
Submitted by modmani Sun, 12/16/2012 - 10:21

ಕನ್ನಡದ ರಾಜಮನೆತನದ ಬಗ್ಗೆ ನಿಮ್ಮ ಲೇಖನ ನೋಡಿ ಸಂತಸವಾಯಿತು. ಇಂತಹುದೇ ಲೇಖನಗಳು ನಿಮ್ಮಿಂದ ಇನ್ನಷ್ಟು ಬರಲೆಂದು ಕೇಳಿಕೊಳ್ಳುವ ಮೊದ್ಮಣಿ --
Submitted by partha1059 Sun, 12/16/2012 - 12:49

.... ಒಮ್ಮೆ ಕೇಳಿದ್ದೆ ಅನ್ನಿಸುತ್ತೆ ೧೯೫೬ ನಂತರದ ಮಹಾನುಭಾವರ ಆಡಳಿತದ ಸರದಿಯ ಬಗ್ಗೆ ಹೇಳಲೆ ಇಲ್ಲ ಎಂದು :) ಉತ್ತಮ ಮಾಹಿತಿ ವಂದನೆಗಳು