ಕವನ : ಏನು ಫಲವು
ಏನು ಫಲವು
---------------
ನೂರು ಮಾವಿನ ಮರದಿ
ಸಾವಿರ ಕೋಗಿಲೆ ಕುಳಿತು
ರಾಗವ ಹಾಡಿದರೇನು ಫಲವು
ಚೈತ್ರಮಾಸವಿಲ್ಲದೆ
ಯಾವ ರಾಗದಿ ಹಾಡಿದರೇನು
ಯಾವ ತಾಳವು ಅದಕೆ ಕೂಡಿದರೇನು
ಸಾಹಿತ್ಯ ಸುಂದರವಿದ್ದರೆನು ಫಲವು
ಕೊರಳಲ್ಲಿ ಮಾದುರ್ಯವಿಲ್ಲದೆ
ಹತ್ತು ಕವನವ ಹೊಸೆದು
ಹೊತ್ತು ತಂದು ಸುರಿದರೇನು
ಮತ್ತೆ ಮನದಿ ಮಂಡಿಗೆ ಸವಿದರೇನು ಫಲವು
ಓದುವ ರಸಿಕನಿಲ್ಲದಿದ್ದರೆ
Rating
Comments
"ಹತ್ತು ಕವನವ ಹೊಸೆದು
"ಹತ್ತು ಕವನವ ಹೊಸೆದು
ಹೊತ್ತು ತಂದು ಸುರಿದರೇನು
ಮತ್ತೆ ಮನದಿ ಮಂಡಿಗೆ ಸವಿದರೇನು ಫಲವು
ಓದುವ ರಸಿಕನಿಲ್ಲದಿದ್ದರೆ "
>>ಗುರುಗಳೇ ಕವನ ಸಖತ್...
ಕೊನೆಯ ಸಾಲುಗಳು ...!!
ಈ ಭಾವ ಎಲ್ಲರಲ್ಲೂ ಬಂದಿರುತ್ತೆ ಅನ್ಸುತ್ತೆ.
ಹಾಡು ಹಕ್ಕಿಗೆ ಬೇಕೇ ಬಿರುದು ಸನ್ಮಾನ ಎಂದು ಕವಿಗಳು ಬರೆದು ಗಾಯಕರು ಹಾಡಿದ್ದಾರೆ .
ಆದರೂ ಒಂದು ಪ್ರಶಂಸೆ -ಮೆಚ್ಚುಗೆ-ಬರಹಗಾರರನ ಕಲಾವಿದರನ್ ಉತೇಜ್ಜಿಸಿ ಮತ್ತಸ್ತು ಬರೆವ ಹಾಗೆ ಮಾಡುವುದು....
ನಾ ಇದೇ ರೀತಿ ಹಿಂದೊಮ್ಮೆ ನಿಮಗೆ ಪ್ರತಿಕ್ರಿಸ್ಯಿದ್ದು ನೆನಪು..!!
ಶುಭವಾಗಲಿ.
\|
In reply to "ಹತ್ತು ಕವನವ ಹೊಸೆದು by venkatb83
ವಾಹ್ ಇದು ಟೈಮಿಂಗ್ ಅಂದ್ರೆ ,
ವಾಹ್ ಇದು ಟೈಮಿಂಗ್ ಅಂದ್ರೆ , ನಾನು ನಿಮ್ಮ ವಿಮರ್ಷೆಗೆ ಪ್ರತಿಕ್ರಿಯೆ ಮುಗಿಸಿ ನೋಡುವಾಗ ನೀವು ನನ್ನ ಕವನಕ್ಕೆ ಪ್ರತಿಕ್ರಿಯೆ ನೀಡಿರುವಿರಿ
ಕೆಲವೊಮ್ಮೆ ಇಂತಹ ಘಟನೆಗಳು ನಡೆಯುತ್ತಲೆ ಇರುತ್ತದೆ
:())
:())
ಕಾಕತಾಳೀಯವಸ್ಟೆ ...!!
ಒಮ್ಮೊಮ್ಮೆ ಹೀಗೂ ಆಗುವುದು...!!
\|
ಚೆನ್ನಾಗಿದೆ ಪಾರ್ಥ.
ಚೆನ್ನಾಗಿದೆ ಪಾರ್ಥ.
" ಯಾರು ಕೇಳಲಿ ಎ0ದು ನಾನು ಹಾಡುವುದಿಲ್ಲ" ಎ0ಬ ದಿವ್ಯನಿರ್ಲಕ್ಷ್ಯ ತಾಳಿ '' ಬರೆಯುವುದು ಅನಿವಾರ್ಯ ಕರ್ಮ ನನಗೆ"ಎ0ಬ ಧೋರಣೆಯೊ0ದಿಗೆ ಬರೆಯುತ್ತಿರಬೇಕು,ಅ0ದುಕೊ0ಡಿದ್ದೆ !
In reply to ಚೆನ್ನಾಗಿದೆ ಪಾರ್ಥ. by raghumuliya
ಬರೆಯುವರ ಮನವೆ ಹಾಗೆ ಅಲ್ಲವೆ ರಘು
ಬರೆಯುವರ ಮನವೆ ಹಾಗೆ ಅಲ್ಲವೆ ರಘು ಒಮ್ಮೆ ಹಾಗೆ ಒಮ್ಮೆ ಹೀಗೆ ! ಕೋಗಿಲೆ ಹಾಡುವುದು ಸಹ ತನ್ನ ಇನಿಯಳನ್ನು ಮೆಚ್ಚಿಸಲು!
>>>ಹತ್ತು ಕವನವ ಹೊಸೆದು
>>>ಹತ್ತು ಕವನವ ಹೊಸೆದು
ಹೊತ್ತು ತಂದು ಸುರಿದರೇನು
ಮತ್ತೆ ಮನದಿ ಮಂಡಿಗೆ ಸವಿದರೇನು ಫಲವು
ಓದುವ ರಸಿಕನಿಲ್ಲದಿದ್ದರೆ
-ಹತ್ತು ಓದುವ ರಸಿಕರನ್ನು
ಹೊತ್ತು ತಂದು ಕುಳ್ಳಿರಿಸಿ
ಹೋಳಿಗೆ ಸವಿಯಲು ನೀಡಿ
ಹತ್ತು ಕವನವ ಓದಿದರಾಯಿತು :)
In reply to >>>ಹತ್ತು ಕವನವ ಹೊಸೆದು by ಗಣೇಶ
:)))
:)))
In reply to >>>ಹತ್ತು ಕವನವ ಹೊಸೆದು by ಗಣೇಶ
ಗಣೇಶರೆ
ಗಣೇಶರೆ
>> ರಸಿಕರನ್ನು ಹೊತ್ತು ತಂದು ಕುಳ್ಳಿರಿಸಿ ಹೋಳಿಗೆ ಸವಿಯಲು ನೀಡಿ ಹತ್ತು ಕವನವ ಓದಿದರಾಯಿತು :)
ಈ ಪ್ರಯೋಗ ಹಿ0ದೆ ಒಮ್ಮೆ ಮಾಡಿದ್ದೆ, ಅವರು ತು0ಬಾನೆ ಮೆಚ್ಚಿಕೊ0ಡಿದ್ದರು .....
... ಹೋಳಿಗೆಯ ರುಚಿಯನ್ನ
(ಪ್ರತಿಕ್ರಿಯೆ ಕದ್ದಿದ್ದು !)
ಯಾರು ಕೇಳದಿದ್ದರೂ ಕೋಗಿಲೆ
ಯಾರು ಕೇಳದಿದ್ದರೂ ಕೋಗಿಲೆ ಹಾಡುವುದನ್ನು ನಿಲ್ಲಿಸುವುದಿಲ್ಲ. ಯಾರೂ ಓದದಿದ್ದರೂ ಪರವಾಗಿಲ್ಲ ಬರೆಯುವುದನ್ನು ನಿಲ್ಲಿಸದಿರಿ. ನಿಮಗೆ ಗೊತ್ತಿಲ್ಲದ ಮೆಚ್ಚುವವರೂ ಇದ್ದೇ ಇರುತ್ತಾರೆ! ಫಲ ಮಾತ್ರ ನಿರೀಕ್ಷಿಸದಿರಿ. ಅದು ಅಗೋಚರ!!!
In reply to ಯಾರು ಕೇಳದಿದ್ದರೂ ಕೋಗಿಲೆ by kavinagaraj
ನಾಗರಾಜರೆ ನಾನು ಈ ಕವನ ಬರೆದ
ನಾಗರಾಜರೆ ನಾನು ಈ ಕವನ ಬರೆದ ಗುರಿಯೆ ಬೇರೆಯೆ ಇತ್ತು ಆದರೆ ಅದು ಭೂಮ್ ರಾ0ಗ್ ಆಗಿ ನನ್ನ ಕಡೆಯೆ ಬರುವದೆ0ದು ನಿರೀಕ್ಷಿಸಲಿಲ್ಲ
ಪಾರ್ಥ ಸರ್,
ಪಾರ್ಥ ಸರ್,
ನಿಮ್ಮ ಕವಿತೆಯನ್ನು ಓದುತ್ತಿದ್ದಂತೆ ಪುರಂದರ ದಾಸರ ಈ ಕೀರ್ತನೆ ನೆನಪಿಗೆ ಬಂತು.
ಬೇವಿ ಬೆಲ್ಲದೊಳಿಡಲೇನು ಫಲ,
ಮುದಿ ಹಾವಿಗೆ ಹಾಲೆರೆದೇನು ಫಲ,
ಸೆಟೆಯನ್ನಾಡುವ ಮನುಜನು,
ಮನದಲಿ ವಿಠಲನ ನೆನದರದೇನು ಫಲ
ಮಾತಾ ಪಿತೃಗಳ ಬಳಲಿಸಿದಾ ಮಗ,
ಯಾತ್ರೆಯ ಮಾಡಿದರೇನು ಫಲ
ಜ್ಙಾನಿ ಪುರಂದರ ವಿಠಲನ ನೆನಯದೆ
ಮೌನವ ತಾಳಿದರೇನು ಫಲ
ಆದರೆ ನಿಮ್ಮ ಕವಿತೆ ಮೇಲಿನಂತಿಲ್ಲವಾದ್ದರಿಂದ; ಈಗಾಗಲೇ ಸಪ್ತಗಿರಿವಾಸಿಗಳು ಹಾಗೂ ಕವಿಗಳು ಆಭಿಪ್ರಾಯ ಪಟ್ಟಂತೆ ನಿಮ್ಮ ಕಾಯಕವನ್ನು ಮುಂದುವರೆಸಿ. ಇಲ್ಲಾಂದರೆ ಅಂಡಾಂಡ ಭಂಢರ ಉ(ಅ)ಪಾಯವಂತೂ ಇದ್ದೇ ಇದೆ :)
In reply to ಪಾರ್ಥ ಸರ್, by makara
ಭ0ಡ್ರಿರವರೆ ನಮಸ್ಕಾರ
ಭ0ಡ್ರಿರವರೆ ನಮಸ್ಕಾರ
ನಿಮ್ಮ ಅಭಿಪ್ರಾಯಕ್ಕೆ ಒಪ್ಪಿಗೆ ಇದೆ
ಅ0.ಬ0 . ಉಪಾಯ ಮತ್ತೆ ಸೋಲುವ ಭೀತಿ ಇದೆ, ಬ0ದವರು ಖ0ಡೀತ ಮೆಚ್ಚಿಕೊಳ್ಳುವರು... ನಮ್ಮವರ ಹೋಳಿಗೆಯನ್ನು .
In reply to ಭ0ಡ್ರಿರವರೆ ನಮಸ್ಕಾರ by partha1059
ಹಾಸ್ಯ ಬರಹ, ಕತೆಗಳನ್ನು ಓದುವವರು
ಹಾಸ್ಯ ಬರಹ, ಕತೆಗಳನ್ನು ಓದುವವರು ಸ್ವಲ್ಪ ಮಂದಿಯಾದರೂ ಇರುವರು.ಆದರೆ, ಕವನಗಳನ್ನು ಓದುವವರು ಬಹಳ ಕಡಿಮೆ. ಬರೆದದ್ದನ್ನು ಓದಿ, ಮೆಚ್ಚಿ ಅಥವಾ ವಿಮರ್ಶಿಸಿ ಟೀಕಿಸಿ ಇನ್ನೂ ಉತ್ತಮವಾಗಿ ಹೇಗೆ ಬರೆಯಬಹುದು ಎಂದು ಸಲಹೆ ಕೊಡುವವರಿದ್ದರೆ, ಇನ್ನಷ್ಟು ಬರೆಯಲು ಪ್ರೋತ್ಸಾಹ ಸಿಕ್ಕಿ ಹುರುಪು ಹೆಚ್ಚುತ್ತದೆ.ಆದರೆ ಏನನ್ನೇ ಆಗಲಿ ಬರೆದು ಮುಗಿಸಿದಾಗ ಬರಹಗಾರನಿಗೆ ಏನೋ ಒಂದು ತೃಪ್ತಿ ಸಿಗುತ್ತದೆ.ಅದಕ್ಕಾಗಿಯಾದರೂ ಬರೆಯಬೇಕು.
In reply to ಹಾಸ್ಯ ಬರಹ, ಕತೆಗಳನ್ನು ಓದುವವರು by Premashri
ವ0ದನೆಗಳು ಪ್ರೇಮಶ್ರಿರವರೆ ನಿಜ
ವ0ದನೆಗಳು ಪ್ರೇಮಶ್ರಿರವರೆ ನಿಜ ಕವನ ಓದುವರು ಕಡಿಮೆ ಹಾಗು ಬರೆಯುವರು ಜಾಸ್ತಿ !
ಈಗೀಗ ಸಾಹಿತ್ಯವನ್ನು ಓದುವರೆ ಕಡಿಮೆ ಬರೆಯುವರೆ ಜಾಸ್ತಿ !
ಅದು ಹಾಗೆ ಕಾಲ ಕಾಲಕ್ಕೆ ಮೌಲ್ಯಗಳು ನಿಯಮಗಳು ಬದಲಾಗುತ್ತಲೆ ಇರುತ್ತದೆ .
ಅದಕ್ಕಾಗಿ ನೀವು ಹೇಳಿದ0ತೆ ಮೊದಲು ಬರೆಯಬೇಕು ಅನ್ನಿಸಿದ್ದನ್ನ ಬರೆದು ಮುಗಿಸಬೇಕು !
ಆದರು ನನ್ನ ಲೇಖನದ ಆಶಯ ಬೇರೆಯೆ ಇತ್ತು.