ಓಹ್ ಮೈ ಗಾಡ್ .!!-2012 ಇನ್ನೂ ನೋಡಿಲ್ಲವೇ
ಚಿತ್ರ
ಓಹ್ ಮೈ ಗಾಡ್ .!!
ಎಂಬ ಉದ್ಘಾರ ತೆಗೆವ ನಾವುಗಳು ಸಿನೆಮಾಗೆ ಅದೇ ಶೀರ್ಷಿಕೆ ಮಾಡಿ ತೆಗೆದ ಈ ಚಿತ್ರವನ್ನು ನೋಡಿದಾಗ ಆಗುವ ಅನುಭವ ಅಹ..!!
ನೋಡಿಯೇ ಅನುಭವಿಸಬೇಕು.!!
ಗುಜರಾತಿನಲ್ಲಿ ಪ್ರಸಿದ್ಧಿ ಗಳಿಸಿದ ರಂಗಭೂಮಿ ನಾಟಕಕ್ಕೆ( ಕಾಂಜಿ ವಿರುದ್ದ್ಹ್ ಕಾಂಜಿ ) ಹೊಸ ರೂಪ ಕೊಟ್ಟು ಚಿತ್ರ ನಿರ್ಮಿಸಿದ್ದಾರೆ.ಮತ್ತು ಆ ನಾಟಕವನ್ನು ಸಮರ್ಥವಾಗಿ ತೆರೆಗೆ ತಂದಿದ್ದಾರೆ.
ಚಿತ್ರ ಶೀರ್ಷಿಕೆ -ಪೋಸ್ಟರ್ ನೋಡಿ ಮತ್ತು ಅಕ್ಷಯ್ ಕುಮಾರ್ ಹೀರೋ ಅದೇ ಹಾಸ್ಯ ಅದೇ, ಅದೇ ಹೊಸತೆನಿರೋಲ್ಲ ಎಂದು ನೀವೇನಾರ ಇದನ ಮಿಸ್ ಮಾಡಿಕೊಂಡಿದ್ದರೆ ಈಗ ನೋಡಿ ಆಮೇಲೆ ಹೇಳಿ..!!
ದೇವರು-ಧರ್ಮ-ನಂಬಿಕೆ ಮತ್ತು ರಾಜಕೀಯದಂತ ಸೂಕ್ಷ್ಮ ಸಂಕೀರ್ಣ ವಿಷಯಗಳ ಕುರಿತ ಕಥೆ ಕಾದಂಬರಿ ಸಿನೆಮ ಮಾಡುವುದು ಹಗ್ಗದ ಮೇಲಿನ ನಡಿಗೆ ,ಎರಡು ಅಲುಗಿನ ಕತ್ತಿ ಮೇಲಣ ಸಾಮು.! ಆ ತರ್ಹದ್ದಕ್ಕೆ ಪ್ರಯತ್ನಿಸಿ ಯಶಸ್ಸು ಕಾಣುವವರು ವಿರಳ,ನನಗನ್ನಿಸಿದ ಹಾಗೆ ನಾ ನೋಡಿದ ನನ್ನ ಅನುಭವಕ್ಕೆ ಇದ್ವರ್ಗೂ ಬಂದ ಹಾಗೆ ಮೊದಲು ಮಣಿ ರತ್ನಂ(ಇರುವರ್ -ಬಾಂಬೆ -ರೋಜ-ದಿಲ್ ಸೆ ) ಪ್ರಿಯ ದರ್ಶನ್ (ಕಾಲಾಪಾನಿ ) ಈಗ ಈ ಚಿತ್ರದ(ಒಹ್ ಮೈ ಗಾಡ್ ..!!) ನಿರ್ದೇಶಕರು ..
ದೇವ್ರನ್ನ ತಂದೆ ಸ್ಥಾನದಲ್ಲಿರಿಸಿ ಭಯ ಭಕ್ತಿಯಿಂದ ಪೂಜಿಸುವುದನ್ನ ಚಿಕ್ಕಂದಿನಲೇ ಕಲಿವ ನಮಗೆ ಈ ಚಿತ್ರದಲ್ಲಿ ದೇವರು ತಂದೆ ಸ್ಥಾನದಲ್ಲಿರದೆ ಗೆಳೆಯನನ್ನಾಗಿ ತೋರಿಸುವುದು ದೇವರನ್ನ ಗೆಳೆಯನನ್ನಾಗಿ ಕಂಡು ಪ್ರೀತಿಸಿ ಎನ್ನುವುದು ನಿರ್ದೇಶಕರ ಜಾಣ್ಮೆ..!!
ದೇವ್ರನ್ನ ಎಲ್ಲೋ ಹುಡುಕಬೇಡಿ ನಿಮ್ಮೊಳಗೆ ಇರುವನು, ಅನ್ಯಾಯ ಮಾರ್ಗದಲ್ಲಿ ಹಣ ಗಳಿಸಿ ಅಪಾತ್ರ ಧ್ಹಾನ ಮಾಡುವದಕ್ಕೆ ಬದಲಾಗಿ ಬಡ ಬಗ್ಗರಿಗೆ ಹಂಚಿ ಎನ್ನುವುದನ್ನ ಬೋರ್ ಹೊಡೆಸದಂತೆ ಹಾಸ್ಯಯುತವಾಗಿ ಭಲೇ ಸೊಗಸಾಗಿ ಹೇಳಿರುವರು......
ಹಾಡಿದ್ದೆ ಆಡೋ ಕಿಸ್ಬಾಯ್ ದಾಸ ತರ್ಹ್ಹ ಹಾಸ್ಯ ಪಾತ್ರಗಲ್ಲಿ ಮೇಲ್ಮೇಲೆ ನಟಿಸಿ ಅವರ ಆ ಏಕತಾನತೆಯಿಂದ ರೋಸಿದ್ದ ನಮಗೆ ಇಲ್ಲಿ ಅಕ್ಷಯ್ ಮಾಡರ್ನ್ ಯಾನೆ ಆಧುನಿಕ ಕೃಷ್ಣ ಆಗಿ ಭಲೇ ಹಿಡಿಸುವರು..ಒಂದು ಹಾಡಲ್ಲಿ ಪ್ರಭು ದೇವ ಸೋನಾಕ್ಷಿ ಭರ್ಜರಿ ಹೆಜ್ಜೆ ಹಾಕಿ ಮಾಯಾ ಆಗುವರು...
ಅಲ್ಲಲಿ ಬಿಟ್ ಬಿಟ್ ತರಹದ ಹಾಡುಗಳಿವೆ ..... ಕೇಳಲು ಅರ್ಥಪೂರ್ಣವೂ ಮಧುರವೂ ಆಗಿವೆ.
ಈ ಹಾಡು ಅದಕ್ಕೆ ಉದಾಹರಣೆ.
ಮೇರೆ ನಿಶಾನ್ ಎನ್ನುವ ಹಾಡು ಕೇಳಿ /ನೋಡಿ ...
http://www.youtube.com/watch?v=_JaG77jxDzc
ಮನುಷ್ಯರಲಿ ನಾನಿಲ್ಲ
ಅಂಗಡಿಗಳಲ್ಲಿ ಮಾರಲ್ಪಡುತ್ತಿರುವೆ
ಎಂಬರ್ಥದ ಹಾಡು..ಅರ್ಥಪೂರ್ಣ ಮತ್ತು ಮನುಜರ ವರ್ತನೆಗೆ ಹಿಡಿದ ಕೈಗನ್ನಡಿ..!!
ಕಥೆ-
ಚಿತ್ರ ಕಥೆ-
ಸಂಭಾಷಣೆ-
ನಟನೆ-
ನೃತ್ಯ-
ಛಾಯಾಗ್ರಹಣ-
ಸಂಕಲನ-
ಹೀಗೆ ಎಲ್ಲ ವಿಭಾಗಗಳಲ್ಲು ಎಲ್ಲರಿನ್ದೂ ಉತ್ತಮ ಕೆಲಸ..
ಮತ್ತು ನನಗೆ ತಿಳಿದ ಹಾಗೆ ಸರ್ವ ಮಾಧ್ಯಮಗಳಿಂದಲೂ ಚಿತ್ರ ವಿಮರ್ಶೆಯಲ್ಲಿ ಪ್ರಶಂಶೆ ಪಡೆದು ನೋಡಲು ಶಿಫಾರಸ್ಸು ಮಾಡಿದ ಚಿತ್ರ....!!
ಕಥೆ:
=====
ದೇವ್ರ ಬಗ್ಗೆ ಭಯ ಭಕ್ತಿ ಧಾರಾಳವಾಗಿರುವ ಕುಟುಂಬದ ಮುಖ್ಯಸ್ತ (ಪರೇಶ್ ರಾವಲ್ ) ಒಂದು ಪುರಾತನ ವಸ್ತುಗಳನ್ನು ಮಾರುವ ಅಂಗಡಿಯ ಮಾಲೀಕ,ಬೇಜಾನ್ ವ್ಯಾಪಾರಿ (ದುರ್)ಬುದ್ಧಿಯ ಮನುಷ್ಯ..!!
ಕೆಲವೊಮ್ಮೆ ಪುರಾತನ ಎಂದು ನಿನ್ನೇ ಮೊನ್ನೆ ತಯಾರಾದ ವಿಗ್ರಹ -ಆರತಿ ತಟ್ಟೆಗಳನ್ನ ಗ್ರಾಹಕರಿಗೆ ಭಾರೀ ರೇಟಿಗೆ ಮಾರುವ ಅಯ್ನಾತಿ ಮನುಷ್ಯ,ಮತ್ತು ಈ ಮೋಸವನ್ನು ತನ್ನದೇ ರೀತಿಯಲಿ ಸಮರ್ಥಿಸಿಕೊಳ್ಳುವ ವಿತಂಡ ವಾದ ಮಂಡಿಸುವ ಮನುಷ್ಯ..!!
ಅವರ ಈ ಕಲೆಯನ್ನು (ಟೋಪಿ ಹಾಕುವುದು) ಆ ಸನ್ನಿವೇಶಗಳನ್ನು ನೋಡಿಯೇ ಆನಂದಿಸಬೇಕು ...!!
ಈ ಪರೇಶ್ ರಾವಲ್ ಮೊದಲೇ 'ಪಕ್ಕಾ ವ್ಯಾಪಾರಸ್ಥ' ನೋಡಿ,ತನ್ ಅಂಗಡಿಗೆ ಇನ್ಶೂರೆನ್ಸ್ ಮಾಡಿಸಿರುತ್ತಾನೆ...ಅದೊಮ್ಮೆ ದೇವರ ಬಗ್ಗೆ ಸ್ವಾಮೀಜಿಗಳ ಮುಂದೆ ಜನರ ಮುಂದೆ ತನ್ನ ಎಂದಿನ ವಿತಂಡ ವಾದ ಮಂಡಿಸಿ ಮನೆಗೆ ಮರಳಿದವನು ಟೀ ವಿ ನೋಡುವಾಗ ಬಜಾರಿನಲ್ಲಿ ಒಂದೇ ಒಂದು ಅಂಗಡಿ ಭೂಕಂಪದಿಂದ ದರೆಗೆ ಉರುಳಿದ್ದು ಆ ಬಗೆಗಿನ ವಾರ್ತಾ ವರಧಿ ನೋಡಿ ಹಾಸ್ಯ ಮಾಡುವನು-ಅಂಗಡಿ ಹೆಸರು ಹೇಳಿದಾಗ ನಗೆ ಮಾಯವಾಗಿ ಮುಖ ಹರಳೆಣ್ಣೆ ಕುಡಿದಂತೆ ಆಗುವ್ದುದು..ಅದು ಅವನದೇ ಅಂಗಡಿ (ಈ ಒಂದು ಸನ್ನಿವೇಶ ಮಾತ್ರ ನಂಬಲು ಕಷ್ಟ ಸಾಧ್ಯ..ಒಂದೇ ಒಂದು ಅಂಗಡಿ ಧರೆಗೆ ಉರುಳುವುದು..!!)..
ಆ ಸಮಯದಲ್ಲೂ ಬೇರೆವ್ರಿಗೆ ಏನೋ ಚಿಂತೆ ಆದ್ರೆ ಇವನಿಗೆ ತನ್ ಅಂಗಡಿಯಲಿದ್ದ ತಿಜೋರಿ ಮತ್ತು ಪುರಾತನ ವಸ್ತುಗಳ ಸುರಕ್ಷತೆ ಚಿಂತೆ..!
ಇನ್ಶೂರೆನ್ಸ್ ಕಂಪನಿಗೆ ಹೋಗಿ ಹಣ ಕ್ಲೇಮ್ ಮಾಡಲು ಹೋದಾಗ ಅಲ್ಲಿ ಅವರು ಇನ್ಶೂರೆನ್ಸ್ ಫಾರ್ಮನ ಕೊನೆ ಕಂಡಿಶನ್ಸ್ ತೋರಿಸಿ ಹೇಳುವ ಮಾತು ಆಘಾತ ಉಂಟು ಮಾಡುತ್ತದೆ...
ಇನ್ಶೂರೆನ್ಸ್ ಕೊನೆಯ ಸಾಲಿನಲ್ಲಿ ಅತಿ ಚಿಕ್ಕದಾಗಿ ದೇವರು ಉಂಟುಮಾಡುವ ಪ್ರಾಕೃತಿಕ ಬದಲಾವಣೆಗಳಿಗೆ ಭೂಕಂಪ-ಸುನಾಮಿ-ಚಂಡ ಮಾರುತ ಇತ್ಯಾದಿಗಳಿಗೆ ಕಂಪನಿ ಹಣ ಪಾವತಿಸುವುದಿಲ್ಲ. ಅದನ್ನು ನೋಡದೆಯೇ ಓದದೆಯೇ ಸಹಿ ಹಾಕಿದ್ದ ತನ್ನದೆ ಸಹಿ ನೋಡಿ ಹಲ್ಲು ಕಚ್ಹುವನು..
ಆದರೂ ಪಟ್ಟು ಬಿಡದೆ ಇನ್ಶೂರೆನ್ಸ್ ಕಂಪನೆಯಿಂದ ಹಣ ಪಡೆವ ಯಾವ್ದರ ದಾರಿ ಇದೆಯಾ ಅಂತ ಲಾಯರುಗಳನ್ನು ಎಡತಾಕಿದಾಗ ಯಾರ ಮೇಲೆ ಕೇಸು ಎಂದು ಕೇಳಿದ ಕೂಡಲೇ ,ರಾಮಕೃಷ್ಣ-ವೆಂಕಟೇಶ ಮಹಮ್ಮದ್ -ಜೀಸಸ್ ಎಂದು ಹೆಸರು ಗಳನ್ನ ಹೇಳಿದಾಗ ಲಾಯರುಗಳೆಲ್ಲ ಇವನನ್ನು ಹುಚ್ಚನ ರೀತಿ ನೋಡಿ ಪರಾರಿ ಆಗುವರು ಕೆಲವರು ಬಿಟ್ಟಿ ಬುದ್ಧಿವಾದ ಹೇಳುವರು , ಹಲವರು ಹಲ್ಲೆ ನಡೆಸುವರು.
ಕೊನೆಗೆ ಒಬ್ಬನೇ ಒಬ್ಬ ಯಶಸ್ವಿ -ಅನುಭವಿ ಲಾಯರು ಇವನಿಗೆ ಸಹಾಯ ಮಾಡಲು ಒಪ್ಪುವನು(ಓಂ ಪುರಿ)..ಆಗ ಪರೇಶ್ ರಾವಲ್ಗೆ ಈ ಲಾಯರ್ನ ಒಂದು ಅತಿ ಅಚ್ಚರಿ ವಿಷ್ಯ ತಿಳಿವದು (ತೆರೆ ಮೇಲೆ ನೋಡಿ).!
ತನ್ ಕೇಸನ್ನು ತಾನೇ ವಾದಿಸುವನು,ಮೊದಲಿಗೆ ಬಹುತೇಕ ಜನ ಇವನಿಗೆ ವಿರುದ್ಧ ಆಮೇಲೆ -ಬಹು ಸಂಖ್ಯೆಯಲ್ಲಿ ಜನರಿಂದ ಇವನಿಗೆ ಬೆಂಬಲ.ಹೇಗೆ ಸಾಧ್ಯ? ತೆರೆ ಮೇಲೇ ನೋಡಿ ಆನಂದಿಸಿ...
ಭಗವದ್ಗೀತೆ -ಕುರಾನ್-ಬೈಬಲ್ಲಿನಲ್ಲಿನ ದೇವರ ಬಗೆಗಿನ ಹಲವು ಅಚ್ಚರಿ ವಿಷಯಗಳು ತಿಳಿಯುವವು ...
ಬೇರೆ ಬೇರೆ ರೀತಿಯಾಗಿ ಹೇಳಿದ್ದರೂ ಎಲ್ಲದರ ಅರ್ಥ ಒಂದೇ...ಆಗಿದ್ದು ಅದು ಪರೇಶ್ ರಾವಲ್ಗೆ ಅನುಕೂಲಕರ ಆಗಿ ಬರುವದು .....
ಅದನ್ನು ತೆರೆ ಮೇಲೆ ನೋಡಿ ಆನಂದಿಸಿ..
ಚಿತ್ರ ದೇವರನ್ನು ನಂಬುವವರ -ನಂಬದವರ ಬಗ್ಗೆ ತೆಗೆದನ್ತಿದ್ದರೂ ಚಿತ್ರ ನೋಡಿದ ಮೇಲೂ ದೇವರ ಇರುವಿಕೆ ನಂಬೋದ ಬಿಡೋದ? ಹೇಳಕ್ಕಾಗಲ್ಲ..!!
ಚಿತ್ರದಲ್ಲಿ ಶುರುವಿನ್ದಿಂದ ಕೊನೆವರೆಗೆ ಹಿಂದಿ ಚಿತ್ರರಂಗದ ಪ್ರತಿಭಾವಂತ ನಟ (ಹಿಂದಿ ಚಿತ್ರರಂಗದಲ್ಲಿ ಪರೇಶ್ ರಾವಲ್ ಮೊದಲು ಖಳ ನಾಗಿ-ಪೋಷಕ ಪಾತ್ರಧಾರಿ ಆಗಿ-ಹಾಸ್ಯ ಕಲಾವಿದನಾಗಿ ಬೆಳೆದ ರೀತಿ ಅನನ್ಯ ) ಪರೇಶ್ ರಾವಲ್ ಆವರಿಸಿದ್ದರೆ, ಅವರಿಗೆ ಪೈಪೋಟಿ ಅಭಿನಯ ನೀಡುವಲ್ಲಿ ಮತ್ತೊಬ್ಬ ಪ್ರತಿಭಾವಂತ ಹೆಸರಾಂತ ನಟ ಮಿಥುನ್ ಚಕ್ರವರ್ತಿ ಸ್ವಾಮೀಜಿಪಾತ್ರಧಾರಿ ಆಗಿ (ಆ ಪಾತ್ರ ನಿತ್ಯಾನಂದ ಮತ್ತು ಶ್ರೀ ರವಿ ಶಂಕರ್ ಅವರನ್ನ ನೆನಪಿಸುತ್ತೆ) ಅತ್ಯದ್ಭುತ ಅಭಿನಯ ನೀಡಿರುವರು...
ಇಲ್ಲಿ ಅಧುನಿಕ ಶ್ರೀ ಕೃಷ್ಣನ ದರ್ಶನವೂ ಆಗುವ್ದು..ಆ ಕೃಷ್ಣ ಬೇರಾರು ಅಲ್ಲ ಸಾಕ್ಷಾತ್ ಅಕ್ಕಿ (ಅಕ್ಷಯ್ ಕುಮಾರ್)..!!
ಚಿತ್ರ ನೋಡುತ್ತಾ ನೋಡುತ್ತಾ ಅಂತ್ಯದವರೆಗೆ ನೀವೇನಾರ ಸೀಟ್ ಬಿಟ್ಟು ಎದ್ದು ಹೋದರೆ ಕೇಳಿ..!!
ಇನ್ಶುರೆನ್ಸ್ ಕಂಪನಿ ಗ್ರಾಹಕ ನಡುವಿನ ಜಗಳ ಸ್ವಾಮೀಜಿಗಳು -ಮೌಲ್ವಿಗಳು,ಪಾದ್ರಿಗಳನ್ನು ಆವರ್ಸಿಕೊಂಡು ಒಬ್ಬೊಬ್ಬರ ಮೇಲೆ ಇನ್ನೊಬ್ಬರ ತಪ್ಪು ಹೊರೆಸುವುದು, ಯಾರೂ ತನ್ ಪರವಾಗಿ ವಾದಿಸಲು ಬರದೆ ತಾನೇ ಸ್ವತಹ ವಾದಿಸುವುದು ಆ ಕ್ಷಣಗಳ ಸನ್ನಿವೇಶ ಕಣ್ಣಿಗೆ ಹಬ್ಬ..ಇಲ್ಲಿ ಸ್ವಾಮೀಜಿಗಳ ಭೋಗ -ಐಯ್ಭೋಗ -ಒಳ ಒಪ್ಪಂದ ಮತ್ಸರ,ಜನರ ಮೂಢ ನಂಬಿಕೆ ,ನಿಷ್ಠೆ ಎಲ್ಲದರ ಮೇಲೆ ಕ್ಷ ಕಿರಣ...
ಈ ತರಹದ ಸೂಕ್ಷ್ಮ ವಿಷಯವನ್ನು ಯಾರಿಗೂ ನೋವಾಗದಂತೆ ಹಗ್ಗದ ಮೇಲೆ ನಡಿಗೆ ಮಾಡಿ ಚಿತ್ರ ತೆಗೆದಿರುವುದು ಅನುಭವಕ್ಕೆ ಬರುವುದು..
ನವರಸಗಳ ಚಿತ್ರಗಳನ್ನ ನೋಡಿ ಅದೇ ಹಾಡು ನೃತ್ಯ-ಹೊಡೆದಾಟ ಇತ್ಯಾದಿ ಬೇಸರ ತರಿಸಿದ್ದರೆ ಇದೋ ಇಲ್ಲಿದೆ ಈ ಸಿನೆಮ..ಒಂದು ಹೊಸ ಅನುಭವಕ್ಕೆ -ಆಲೋಚನೆಗೆ ಚಿಂತನಗೆ ನಮ್ಮನ್ನು ಹಚ್ಚುವ ಸಿನೆಮ...
ನೋಡಿ ಆನಂದಿಸಿ....
>>>ಅಂದ್ ಹಾಗೆ ನೀವೆನಾರ ಈ ಚಿತ್ರದ ಬಗ್ಗೆ ನೆಟ್ನಲ್ಲಿ ಹುಡುಕಿದರೆ ಅಚ್ಚರಿ ಆಗುವಸ್ತು ಒಹ್ ಮೈ ಗಾಡ್..!! ಶೀರ್ಷಿಕೆಗಳ ಚಲನ ಚಿತ್ರಗಳು ಸಿಕ್ಕುವವು.!!
ಇದು ಅದ್ಯವುದರ ಕಾಪಿ ಅಲ್ಲ ..
ಒಹ್..!! ದೇವ್ರೇ..........
=======================================================================================
ಚಿತ್ರ ಮೂಲ :http://static.ibnlive.in.com/ibnlive/pix/sitepix/09_2012/omgsep27-4.jpg
http://cdn.koimoi.com/wp-content/new-galleries/2012/09/Don-t-Worry-Hey-Ram-Full-Song-OMG-Oh-My-God-Movie-Akshay-Kumar.jpg
ಐ ಎಂ ಡೀ ಬಿ ನಲಿ ನನ್ನ ಬರಹ: http://www.imdb.com/title/tt2283748/reviews-77
ಐ ಎಂ ಡೀ ಬಿ :http://www.imdb.com/title/tt2283748/
ವೀಡಿಯೊ ಟ್ರೇಲರ್ : http://www.youtube.com/watch?v=VyQAFhBv4Ts
ಪೂರ್ತಿ ಚಲನ ಚಿತ್ರ ಯೂಟೂಬ್ನಲಿ ಲಭ್ಯ: http://www.youtube.com/watch?v=tEBwkbXU4AY
ಮೂಲ ನಾಟಕದ ಟ್ರೇಲರ್ : http://www.youtube.com/watch?v=pQVX1Upn_zk
:ವಿಕಿಪೀಡಿಯ ಲಿಂಕ್: http://en.wikipedia.org/wiki/OMG:_Oh_My_God!
Rating
Comments
ಸಪ್ತಗಿರಿರವರೆ ........ ಓಹ್
ಸಪ್ತಗಿರಿರವರೆ ........ ಓಹ್ ದೇವ್ರೆ , ಈ ತರದ ಸಿನಿಮಾಗಳು ಬರುತ್ತೆ ಅಂದ್ರೆ ನಾನು ಖಂಡೀತ ನೋಡುವೆ, ಬರಿ ಲವ್ ಫೈಟ್ ಕೇಳಿಯೆ ಬೇಸರ.
ಮತ್ತೆ ನಿಮ್ಮ ಗಣೇಶಣ್ಣನವರು ಸಿನಿಮಾನ ವಿರೋದಿಸಿದರು ಅಚ್ಚರಿ ಏನಿಲ್ಲ :)))
In reply to ಸಪ್ತಗಿರಿರವರೆ ........ ಓಹ್ by partha1059
ಹಾ;;;ಗುರುಗಳೇ- ಲೋಕೋಭಿನ್ನರುಚಿ
ಹಾ;;;ಗುರುಗಳೇ- ಲೋಕೋಭಿನ್ನರುಚಿ ಆದರೂ ಈ ಚಿತ್ರ ಬಹುಪಾಲು ಜನರಿಗೆ ಹಿಡಿಸದೆ ಇರದು....
ಈ ಚಿತ್ರ ನೋಡುವವರೆಗೆ ನಾ ಸಹ ಮಾಮೂಲಿ ಅಂದುಕೊಂಡಿದ್ದೆ ನೋಡಿದ ಮೇಲೆ ಈ ತರಹದ ಚಿತ್ರಗಳು ಈಗಲೂ ಬರುವವು ಮುಂದೆಯೂ ಬರಲಿದೆ ಎನ್ನುವುದು ಖಾತ್ರಿ ಆಯ್ತು...
ಆದರೆ ಅಂ .ಬ..ಸ್ವಾಮಿಗಳು ಇದನ್ನು ಖಂಡಿತ ವಿರೋಧಿಸರು ಎಂಬ ಭಾವನೆ ಇದೆ...
ವಿರೋಧಿಸಿದರೆ ಯಾರೊಬ್ಬ ಕಾಂಜಿ ಪೀಂಜಿ (ಕಾಂಜಿ ಬಾಯ್ )ಎನ್ನುವವನು ಕೇಸ್ ಹಾಕದೆ ಇರನು..ಬೇಕಾ ?
ಆದರೆ ಖಂಡಿತ ಈ ಸಿನೆಮ ಕದ್ದು ಮುಚ್ಚಿ ಅವರು ಅದಾಗಲೇ ನೋಡಿರಬಹ್ದು..
ಅದು (ಒಹ್ ಮೇ ಗಾಡ್ ಚಲನ ಚಿತ್ರ) ಈಗಾಗಲೇ ಯೂಟೂಬಗೆ ಅಫಿಸಿಯಲ್ ಆಗಿ ಸೇರಿಸಲ್ಪಟ್ಟಿದೆ ಸೊ ಆರಾಮಾಗಿ ಪೂರ್ತಿ ಸಿನೆಮ ನೋಡಬಹ್ದು.
ಪ್ರತಿಕ್ರಿಯೆಗೆ ನನ್ನಿ
ಶುಭವಾಗಲಿ..
\|
In reply to ಸಪ್ತಗಿರಿರವರೆ ........ ಓಹ್ by partha1059
>>ಗಣೇಶಣ್ಣನವರು ಸಿನಿಮಾನ
>>ಗಣೇಶಣ್ಣನವರು ಸಿನಿಮಾನ ವಿರೋದಿಸಿದರು ಅಚ್ಚರಿ ಏನಿಲ್ಲ :))) ಪಾರ್ಥಸಾರಥಿ ಮತ್ತು ವೆಂಕಟೇಶರೇ ಮೆಚ್ಚಿದ ಮೇಲೆ ನಮ್ಮದೇನಿದೆ? :)
ಸಪ್ತಗಿರಿವಾಸಿ,
ಈ ವಿಮರ್ಶೆ ಚೆನ್ನಾಗಿತ್ತು. ಎಲ್ಲೂ ಸಿನೆಮಾದ ಗುಟ್ಟು ಬಿಟ್ಟುಕೊಡದೇ, ನಮಗೆ ಆಸಕ್ತಿ ಬರುವ ಹಾಗೆ ವಿಮರ್ಶೆ ಮಾಡಿರುವಿರಿ. ಶಹಬ್ಬಾಸ್. ನೀವು ಕೊಟ್ಟ ಕೊಂಡಿ( ಯೂಟ್ಯೂಬ್)ಯಲ್ಲಿ ಸ್ವಲ್ಪ ಸಿನೆಮಾ ನೋಡಿದೆ. ಚೆನ್ನಾಗಿದೆ. ಒಬ್ಬನೇ ನೋಡುವ ಬದಲು ಮನೆಯ ಎಲ್ಲರ ಜತೆ ರಜೆಯಲ್ಲಿ ನೋಡೋಣ ಎಂದಿರುವೆ. ಪರೇಶ್ ರಾವಲ್ ಹಾಸ್ಯ ನನಗೂ ಇಷ್ಟ.
ಗಣೇಶ್ ಅಣ್ಣ ನಿಮ್ಮ ಪುನರಾಗಮನ..!
ಗಣೇಶ್ ಅಣ್ಣ ನಿಮ್ಮ ಪುನರಾಗಮನ..! ಖುಷಿ ತಂದಿದೆ...
ಈ ಚಿತ್ರ ಮನರಂಜಿಸಿ ಹೊಸ ಜಿಜ್ನಾಷೆಗೆ -ಚಿಂತನಗೆ ಹಚ್ಚುವುದರಲ್ಲಿ ಸಂಶಯವಿಲ್ಲ...
ಮನರಂಜನೆ ಖಾತ್ರಿ....100%...
ಪರೇಶ್ ರಾವಲ್ ಮೋಸ ಮಾಡೋಲ್ಲ ಬಿಡಿ....!!
ಪ್ರತಿಕ್ರಿಯೆಗೆ ನನ್ನಿ ..
ಶುಭವಾಗಲಿ.
\|