ಎಲ್ಲೆ

ಎಲ್ಲೆ

ಎಲ್ಲೆ ಮೀರಿದ ಕ್ಷಣವ
ನಾನರಿಯದಾದೆನೇಕೋ
ಪ್ರತಿ ಕ್ಷಣದ ಭವವೇಕೋ ಕಾಡುವಂಥ ಅಚ್ಚರಿ

ಎರಗಿದುವು ಸಿಡಿಲುಗಳು
ನಡುಗಿಸುವ ಗುಡುಗಿನ ತೆರದೆ
ಸುಟ್ಟು ಕರಟಿದ ಒಡಲ ಅರಿಯದಾದೆನು

ದಟ್ಟ ಕಾಡಿನ ನಡುವೆ
ಚಿಗಿತ ಮೊಲ್ಲೆ ಮೊಗ್ಗುಗಳ
ನಟ್ಟಿರುಳ ಕತ್ತಲಲಾ ಘ್ರಾಣಿಸದೆ ಹೋದೆನು

ಉತ್ತುಂಗದುತ್ಕಟತೆಯಲಿ
ಜಗವ ಮರೆತಿರುವಾಗ
ಕಳೆದುಹೋದುದನೇಕೋ ತಿಳಿಯದಾದೆನು

Rating
No votes yet

Comments

Submitted by venkatb83 Sun, 12/16/2012 - 15:47

ಕೆಲವು ಸಾರಿ ಕೆಲವು 'ಎಲ್ಲ ಮುಗಿದ ಮೇಲೆಯೇ ಅನುಭವಕ್ಕೆ ಬರೋದು..!!
ಇದೂ ಹಾಗೇನೆ...!!
ಕವನ ಚೆನ್ನಾಗಿದೆ.
ಹಲವರ ಭಾವ ಅಕ್ಷರಗಳಾಗಿ ಹೊರಹೊಮ್ಮಿದೆ-ಸಮರ್ಥವಾಗಿ.

ಶುಭವಾಗಲಿ..

\|