ಮಗಳೇ
ಬೇರಿನಿಂದ ದೂರವಾಗಿ ಮರವ ಹಬ್ಬಲು
ಕನಸು ತುಡಿತ ಸಂತಸಗಳ ಮೇಳವಿರಲು
ಸಂಭ್ರಮದಿ ಬರಮಾಡಿಕೊಳ್ಳುವರು ನಿನ್ನ
ಮನದಗಲ ಪ್ರೀತಿಯನೆ ತುಂಬುವನು ನಲ್ಲ
ಅವನ ಮಾತಾಪಿತರನು ಆದರದಿ ಮೆಚ್ಚು
ಹೊಣೆಯನರಿತು ಹೊಂದಾಣಿಕೆಯನು ನೆಚ್ಚು
ತುಂಬುಮನದ ಹಾರೈಕೆಗಳಿವೆ ಮುದ್ದು ಮಗಳೇ
ಚಂದದ ನಗುವಿನ ಸಂಸಾರ ನಿನ್ನದಾಗಿರಲಿ
ಒಲುಮೆ ಪ್ರತಿಮೆಗೆ ಪ್ರೀತಿಯಾ ಕಲಶವಾಗು
ಬಾಳಕಡಲಲಿ ನೌಕೆ ತೇಲಿಸುವ ಜಾಣ್ಮೆಯಿರಲಿ
ಉಲ್ಲಾಸ ನೆಮ್ಮದಿಯ ಹೆಗ್ಗುರಿಯಲಿ ವಿರಾಜಿಸು
ಮುಳ್ಳುಗಳನು ಹೂಗಳಾಗಿಸುವ ದೃಢತೆಯಿರಲಿ
ಚಿಗುರಿರುವ ನಿನ್ನೊಳಗಿನ ಪ್ರತಿಭೆ,ಹವ್ಯಾಸ
ಗಳನು ಚಿವುಟದೆ ಹೊಳಪುರೂಪು ಕೊಡು
ತುಂಬುಹೃದಯದ ಹಾರೈಕೆಗಳಿವೆ ಜಾಣ ಮಗಳೇ
ಸಂಸಾರ ಹಸಿರಾಗಿರಿಸಲೆಲ್ಲರ ಸಹಕಾರ ಸಿಗಲಿ
Rating
Comments
ಮನ ತುಂಬಿದ ಹಾರೈಕೆ, ಶುಭವಾಗಲಿ.
ಮನ ತುಂಬಿದ ಹಾರೈಕೆ, ಶುಭವಾಗಲಿ.
In reply to ಮನ ತುಂಬಿದ ಹಾರೈಕೆ, ಶುಭವಾಗಲಿ. by ಮಮತಾ ಕಾಪು
ಧನ್ಯವಾದಗಳು ಮಮತಾ ಅವರೆ.
ಧನ್ಯವಾದಗಳು ಮಮತಾ ಅವರೆ.
ಮಗಳಿಗೆ ಒಳ್ಳೆಯ ಸಂದೇಶ,
ಮಗಳಿಗೆ ಒಳ್ಳೆಯ ಸಂದೇಶ, ಧನ್ಯವಾದಗಳು
In reply to ಮಗಳಿಗೆ ಒಳ್ಳೆಯ ಸಂದೇಶ, by tthimmappa
ವಂದನೆಗಳು ತಿಮ್ಮಪ್ಪ ಅವರೆ.
ವಂದನೆಗಳು ತಿಮ್ಮಪ್ಪ ಅವರೆ.
ಮಗಳಿಗೆ ಈ ರೀತಿ ಹಿತವಚನ ಭೋದಿಸುವ
ಮಗಳಿಗೆ ಈ ರೀತಿ ಹಿತವಚನ ಭೋದಿಸುವ ತಾಯಿಯರೆ ಈಗ ಅಪರೂಪ (ಹಾಗೆ ಕೇಳುವರು ಅಪರೂಪವೆ ಬಿಡಿ)
ನಿಮ್ಮ ಕವನ ನಿಜಕ್ಕು ಹಿತವಾಗಿದೆ, ಈ ರೀತಿಯ ವಾತವರಣ , ಆತ್ಮೀಯತೆ ಎಲ್ಲಡೆ ಹೆಚ್ಚಲಿ.
In reply to ಮಗಳಿಗೆ ಈ ರೀತಿ ಹಿತವಚನ ಭೋದಿಸುವ by partha1059
ಹೌದು ಪಾರ್ಥಸಾರಥಿಯವರೆ, ಈ ರೀತಿಯ
ಹೌದು ಪಾರ್ಥಸಾರಥಿಯವರೆ, ಈ ರೀತಿಯ ಆತ್ಮೀಯತೆ ಮನೆ ಮನೆಗಳಲ್ಲಿ ಕಾಣುವಂತಾಗಲಿ.ಮೆಚ್ಚುಗೆಗೆ ಧನ್ಯವಾದಗಳು.
In reply to ಹೌದು ಪಾರ್ಥಸಾರಥಿಯವರೆ, ಈ ರೀತಿಯ by Premashri
+೧ ಗಣೇಶ.
+೧ ಗಣೇಶ.
In reply to +೧ ಗಣೇಶ. by ಗಣೇಶ
ಧನ್ಯವಾದಗಳು ಗಣೇಶ್ ಅವರೆ.
ಧನ್ಯವಾದಗಳು ಗಣೇಶ್ ಅವರೆ.
ತವರು ತೊರೆದು ಗಂಡನ ಮನೆ ಸೇರುವ
ತವರು ತೊರೆದು ಗಂಡನ ಮನೆ ಸೇರುವ ಮಗಳಿಗೆ ಹೇಳುವ ಹಿತ ವಚನ..
ಸೂಪರ್..
ಹಿಡಿಸಿತು..
ಕಣ್ಣೆದುರೇ ಕಟ್ಟಿದಂತಿದೆ..
ಶುಭವಾಗಲಿ..
\|
In reply to ತವರು ತೊರೆದು ಗಂಡನ ಮನೆ ಸೇರುವ by venkatb83
ನಿಮ್ಮ ಮೆಚ್ಚುಗೆಯ ನುಡಿಗಳು
ನಿಮ್ಮ ಮೆಚ್ಚುಗೆಯ ನುಡಿಗಳು ಪ್ರೋತ್ಸಾಹವನ್ನು ನೀಡಿವೆ.ಧನ್ಯವಾದಗಳು ಸಪ್ತಗಿರಿಯವರೆ.
ಮೇಡಂ ವಂದನೆಗಳು
ಮೇಡಂ ವಂದನೆಗಳು
" ಮಗಳೆ " ಕವನ ಓದಿದೆ, ಭಾವಪೂರ್ಣ ಕವನ, ಮಗಳ ಕುರಿತು ತಾಯ ಹೇಳುವ ಕಿವಿಮಾತುಗಳು ಬಹಳ ಅರ್ಥಪೂರ್ಣ, ಸುಖ ಸಂಸಾರದ ಟಿಪ್ಸಗಳು ಈ ಕವನದಲ್ಲಿವೆ, ಮದುವೆಯಾಗಿ ಗಂಡನ ಮನೆಗೆ ಹೋಗುವ ಹೆಣ್ಣುಮಗಳು ಈ ಕವನ ಓದಿ ಅರ್ಥ ಮಾಡಿಕೊಂಡರೆ ದಾಂಪತ್ಯ ವಿರಸವೆನ್ನುವುದು ಅವಳ ಬಾಳಿನಲ್ಲಿ ಬರಲುಸಾದ್ಯವಿಲ್ಲ. ಅರ್ಥಪೂರ್ನ ಕವಿತೆ ಧನ್ಯವಾದಗಳು.
In reply to ಮೇಡಂ ವಂದನೆಗಳು by H A Patil
ವಿಮರ್ಶಾತ್ಮಕ ಮೆಚ್ಚುಗೆಯ
ವಿಮರ್ಶಾತ್ಮಕ ಮೆಚ್ಚುಗೆಯ ಪ್ರತಿಕ್ರಿಯೆಯು ಉತ್ಸಾಹವನ್ನು ಹೆಚ್ಚಿಸಿದೆ.ಧನ್ಯವಾದಗಳು ಹನುಮಂತ ಪಾಟೀಲ್ ಅವರೆ.