ಕರುಣಾಮಯಿಯ ಕಣ್ಣು
ಕವನ
ಹೂವಿನ ಮನಸಿನ ಹುಡಗಿ
ಎಷ್ಟೆಲ್ಲರಿಗೆ ಅಂತಾ ಹಂಚತಿ?
ಬದಿ ಬಿದ್ದಿರುವ ಸವಕಲು ಹಾದಿ ನಾನು
ನಗುಚೆಲ್ಲಿ ನಡೆದುಹೊದಿ ಸಾಕು ನೀನು!
ಹೂವು ನಗೂವದ ಮರೆತಿತೆ? ಹಾರೂದ ಮರೆತಿತೆ ಹಕ್ಕಿ?
ಭೂಮಿ ತಿರಗೂದ ಬಿಟ್ಟಿತೆ? ಹೊಳೆಯೂದ ಬಿಟ್ಟಿತೆ ಚುಕ್ಕಿ?
ದಿನದ ವಹಿವಾಟ ಮರತೆನೆಂದರ ಹೆಂಗ?
ಸ್ಪಟಿಕದ ಹ್ರುದಯದ ಮಾತೊಂದ ಸಾಕ!
ಇರಬಾರದು ಇಟೊಂದು ಮೃದು ಮನಸು
ತನದಲ್ಲದ ನೊವ ನುಂಗುವ ನೀಲಕಂಠನಂಥದು
ಕಲ್ಮಶರಹಿತ ಮಿಡಿಯುವ ಮನ ಒಂದು, ಸಾಕು ಜೀವಕ್ಕ
ಸಿಕ್ಕರೆ ಮತ್ತೊಂದು ಮರತೇನು, ಮುರಳ ಮುನಿಯ!
ಯಾರ ಮಾಣಿಕವೊ, ನಿನ್ಯಾರ ಕಣ್ಮಣಿ
ನಿನ್ನಾ ಪ್ರಭೆಯೊಳಗೆ ನಾ ಕಲ್ಮಣಿ
ಹೂವಿಗೇನ ಗೊತ್ತ ಮುಡಿದವರ ಮಹತ್ತ
ಕಾಡಿಗೇನ ಗೊತ್ತ ತನ್ನವನ ಸಂಪತ್ತ!
ಇದ್ದಾಗಿ, ಬಿದ್ಹೊಗಿ ಹೊರಟಿಯೆ ನಾ ಜೋಗಿ
ನಿ ಕೊಟ್ಟೆ ಕರುಣೆಯ ಕೈ ಬಾಗಿ ಬಾಗಿ
ಕಣ್ಣೀಗೊತ್ತಿಕೊಂಬೆ ನಾ ಏಳೇ ಮೇಲೆ
ನಿನ್ನಾ ಆದ್ರ ಕಣ್ಣಾ ನಾ ಜೀಕಲಾರೆ!
-ಅನೀಲ ತಾಳಿಕೊಟಿ