ಮುರಿವ ಕನಸುಗಳು...

ಮುರಿವ ಕನಸುಗಳು...

ಕವನ

ಬಚ್ಹಿಟ್ಟ ಕನಸುಗಳು, ಕನವರಿಸಿದೆ ರಾತ್ರಿಯಲ್ಲಿ...

ಉಸುರಿದೆ ಪದಗಳನು, ಅರ್ಥವರಿಯದ ರೀತಿಯಲ್ಲಿ...

 

ಕರೆದಿದೆ ಅನುರಾಗದಲ್ಲಿ, ನನ್ನ ಹೆಸರನು ರಾಗದಲ್ಲಿ...

ಕರೆದೊಯ್ಯಲು ದಾರಿಯಲಿ, ಓಗೊಟ್ಟಿದೆ ಕೋಗಿಲೆ ಗಾನದಲ್ಲಿ...

 

ಪೋಣಿಸಿದ ಸ್ವರಗಳು ಸ೦ಗೀತದ೦ತೆ, ಒಮ್ಮೆ ಮರೆತ್ತಿದ್ದೆ ಈ ಹಾಡು...

ಕ೦ಬಗಳ ಮೇಲಿನ ಸೂರು ಮ೦ದಿರದ೦ತೆ, ಒಮ್ಮೆ ಬಿಟ್ಟು  ಹಾರಿದೆ ಈ ಗೂಡು...

 

ನೀ ತ೦ದ ಬೆಳದಿ೦ಗಳಲ್ಲಿ, ಕಣ್ಣು ಚ್ಚುಚ್ಚುವ ಬೆಳಕಿತ್ತು...

ಫಳ ಫಳಿಸಿದ ನಿನ್ನ ಕ೦ಗಳಲ್ಲಿ, ನನ್ನ ಸುಡುವ ಕಿಚ್ಚಿತ್ತು...

 

ಒಲವೆ೦ಬ ಈ ಮರಕ್ಕೆ, ಕಟ್ಟಿದೆವು ನಾವು ನೂರೆ೦ಟು ಜೋಕಾಲಿ...

ಬಾಗಿದ ಕೊ೦ಬೆಗಳು, ಮುರಿದು ಬ೦ದವು, ಜೀಕಿದಾಗ ನಾವು ಭಾರ ಹೃದಯದಲ್ಲಿ...

 

ಕಲಿತೆವು ನಾವು ಜೊತೆಯಲ್ಲಿ, ನಿ೦ತ ಗಾಳಿಯಿ೦ದ ಹೊಮ್ಮಿಸಲು ಸ೦ಗೀತ ನಿನಾದ...

ಅರಿತೆನು ನಿನ್ನ ರೀತಿಯಲ್ಲಿ, ಚೆಲುವನು ಹೆಚ್ಹಿಸುವ ನಿನ್ನ ವಿನೋದ...

 

ನಲಿದೆವು ಇಣುಕಿ ನಿರ್ಮಲ ನದಿಯಲ್ಲಿ, ನಮ್ಮ ಬಿ೦ದವಾದಾಗ ಚ೦ಚಲ...

ಕರಗಿದೆವು ದಡದಲ್ಲಿ ಕಣ್ಣೀರಾಗಿ, ನಿನಗೆ ಒಗಟಾದಾಗ ನನ್ನ ಹ೦ಬಲ...

 

ಬಣ್ಣ ಬಣ್ಣದ ಗೊ೦ಬೆ ಕುದುರೆಯನ್ನೇರಿ, ಅಲೆದೆವು ಕನಸಿನಿ೦ದ ಕನಸಿನೆಡೆಗೆ...

ಹೊ೦ಗನಸನು ಬೊಗಸೆಮಾಡಿ, ಚಿಟ್ಟೆಯನ್ನೇರಿ ಹೊರಟೆವು ಚ೦ದ್ರನ ಕಡೆಗೆ...

 

ಕನಸಿಗೆ ಜೀವ ತು೦ಬದೆ ಸೋತೆವು, ಗೊ೦ಬೆ ಕುದುರೆಯ ಬೆನ್ನು ಮುರಿದಾಗ...

ಬರಡು ಚ೦ದ್ರನು ಸೋತ, ಹೂದೋಟ ಕಾಣದೆ, ಚಿಟ್ಟೆಯ ರೆಕ್ಕೆ ಸೋತಾಗ...

 

ಅರಳದು ಹೂವು, ಹಾಡದು ಗಾಳಿ, ಉಳಿಯದು ಕನಸು, ಸೂರಿಲ್ಲದ ಪ್ರೇಮಮ೦ದಿರದಲ್ಲಿ...

ಸೋತೆವು ನಾವು, ಮುರಿದೆವು ನಾವು, ಬರಿಯ ನೆನಪಷ್ಜ್ತೇ ನಾವು ಮುರಿಯುವ ಕನಸುಗಳಲ್ಲಿ...