ಖಂಡಿತ ಹೀಗಾಗಬಾರದಿತ್ತು; ನಮ್ಮ ಶತ್ರುವಿಗೂ ಈ ಮಾನಸಿಕ ಆಘಾತ ಬೇಡ !

ಖಂಡಿತ ಹೀಗಾಗಬಾರದಿತ್ತು; ನಮ್ಮ ಶತ್ರುವಿಗೂ ಈ ಮಾನಸಿಕ ಆಘಾತ ಬೇಡ !

ಚಿತ್ರ

 

ಮುಂಬೈ ಟೈಮ್ಸ್ ಆಫ್ ಇಂಡಿಯದ ಸಪ್ಲಿಮೆಂಟ್ ಆಗಿರುವ ’ಮುಂಬೈ ಮಿರರ್’ ಒಂದು ಅತ್ಯಂತ ದಿಟ್ಟ ಹಾಗೂ ಸಾರ್ವಜನಿಕರಿಗೆ ನೈಜ ಸುದ್ದಿಗಳನ್ನು ಅರಸಿ ಓದುಗರಿಗೆ ಕೊಡಲು ಶ್ರಮಿಸುತ್ತಿರುವ ರಾಷ್ಟ್ರದ ಪ್ರಮುಖ ಪತ್ರಿಕೆಗಳಲ್ಲಿ ಮೊದಲನೆಯದು. ಈ ಪತ್ರಿಕೆಯ ಫೋಟೋ ಎಡಿಟರ್ ಮಿ. ಸೆಬಾಶ್ಚಿಯನ್ ಡ್’ಸೂಝರವರು, ೨೦೦೮ ರ ನವೆಂಬರ್ ೨೬ ರ ರಾತ್ರಿ  ಆತಂಕವಾದಿ  ಅಜ್ಮಲ್ ಕಸಬ್ ನಚಿತ್ರವೂ ಸೇರಿದಂತೆ ೧೯ ಬಹಳ ಮಹತ್ವದ ಚಿತ್ರಗಳನ್ನು ತೆಗೆದರು. ಛತ್ರಪತಿ ಶಿವಾಜಿಮಹಾರಾಜ್ ರೈಲ್ವೆ ನಿಲ್ದಾಣದ ಅಮಾಯಕ ಯಾತ್ರಿಗಳಮೇಲೆ ಗುಂಡಿನ ಮಳೆಗರೆದು ಕೊಂದ ಕೊಲೆಪಾತಕಿಯನ್ನು ತೀರ ಹತ್ತಿರದಲ್ಲೇ ನಿಂತು ಫೋಟೋ ತೆಗೆದ ವೀರ ಫೋಟೋಗ್ರಾಫರ್ ಎಂದು ಅವರು ಹೆಸರಾಗಿದ್ದಾರೆ.  ಅದೇ ಪತ್ರಿಕೆ ಮತ್ತೊಂದು ಮರೆಯಲಾಗದ ಮನಕಲಕುವ ಸುದ್ದಿಯೊಂದನ್ನು ಸಂಗ್ರಹಿಸಿ ವರದಿಮಾಡಿದೆ.
ಮಹಾತ್ಮ ಗಾಂಧಿಯವರ ನತದೃಷ್ಟ ಮಗ ಹರಿಲಾಲ್ ಗಾಂಧಿಯವರ ಬಗ್ಗೆ ಮಾಹಿತಿ ನೀಡಿರುವ ವಿಷಯ :
ಸನ್. ೧೮೮೮ ರಲ್ಲಿ  ಮಹಾತ್ಮ ಗಾಂಧಿಯವರಿಗೆ ೧೮ ವರ್ಷ ವಿರುವಾಗ ಹರಿಲಾಲ್ ದಕ್ಷಿಣ ಆಫ್ರಿಕದಲ್ಲಿ ಜನಿಸಿದರು. ಹರಿಲಾಲ್ ಇಂಗ್ಲೆಂಡ್ ನಲ್ಲಿ ಓದಿ ಬ್ಯಾರಿಸ್ಟರ್ ಆಗುವ ಕನಸು ಕಂಡರು. ಆದರೆ ಗಾಂಧಿಯವರು ಅ ಆಶೆಗೆ ನೀರೆರೆಯಲಿಲ್ಲ. ಬೇಸರ,  ಜಿಗುಪ್ಸೆ ಹರಿಲಾಲರ ಜೀವನದುದ್ದಕ್ಕೂ ಹರಿದು ಬಂತು. ಇಸ್ಲಾಮ್ ಧರ್ಮಕ್ಕೆ ಮತಾಂತರಗೊಂಡರು.  ಗುಲಾಬ್ ಎಂಬ ಹುಡುಗಿಯನ್ನು ವಿವಾಹವಾಗಿ  ೩ ಗಂಡು ೨ ಹೆಣ್ಣು ಮಕ್ಕಳು ಪಡೆದರು.  ಫ಼್ಲೂನಿಂದ ಪತ್ನಿಯ ಮರಣದ ಬಳಿಕ ಮಕ್ಕಳಿಂದಲೂ ಹಾಗು ಸಂಬಂಧಿಕರಿಂದಲೂ  ದೂರವಾದರು. ಬಾಪು ಎಷ್ಟೋ ವಿಧದಲ್ಲಿ ಮಗನನ್ನು ಒಲಿಸಲು ಪ್ರಯತ್ನಿಸಿದ್ದರು.  ವಿಲಾಯತಿ ವಿದ್ಯಾಭ್ಯಾಸ ಗಾಂಧಿಯವರಿಗೆ ಸರಿಬಮ್ದಿರಲಿಲ್ಲ. ಇದನ್ನು ಹರಿಲಾಲ್ ಅರ್ಥಮಾಡಿಕೊಲ್ಲಲಿಲ್ಲ. ಅದರಿಂದ ಆದ ಮನಸ್ತಾಪ ದಿನೇದಿನ ಹೆಚ್ಚುತ್ತಾ ಹೋಗಿ ಕೊನೆಗೆ ಮಹಾತ್ಮಾ ಗಾಂಧಿಯವರು ಹರಿಲಾಲ್ ಮಗನೆ ಅಲ್ಲ ಎಂದು ಕೋರ್ಟ್ ನಲ್ಲಿ ಘೋಷಿಸುವ ಹಂತಕ್ಕೆ ಹೋಯಿತು. ಹೀಗೆ ಮಾನಸಿಕವಾಗಿ ಅಸ್ವಸ್ಥರಾಗಿದ್ದ ಹರಿಲಾಲ್ ಕೆಲಸವೂ ಇಲ್ಲದೆ ಬಹಳ ಕಷ್ಟಪಟ್ಟರು.  ಹರಿಲಾಲ್ ಗಾಂಧಿ ಕ್ಷಯರೋಗಪೀಡಿತರಾಗಿ ಬೊಂಬಾಯಿನ ಸಿವ್ರಿ ಉಪನಗರದ ಕ್ಷಯರೋಗ ರುಗ್ಣಾಲಯದಲ್ಲಿ ಭರ್ತಿಯಾಗಿ ಅಲ್ಲಿಯೇ  ರಾತ್ರಿ ೮ ಗಂಟೆ,   ತಮ್ಮ ಕೊನೆಯುಸಿರೆಳೆದರು. ಅವರ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಿದ ಆಸ್ಪತ್ರೆಯ ಕೆಲವರು, ಹಾಗೂ  ಅವರ ಪುತ್ರಿಯರಾದ, ಮನು, ರಾಮಿ, ಮತ್ತು ಅಳಿಯ,  (ಮನುರವರ ಪತಿ ಸುರೇಂದ್ರ ಮಶ್ರುವಾಲಾ), ಬಿಟ್ಟರೆ ಬೇರೆಯಾರೂ ಪಾಲ್ಗೊಳ್ಳಲಿಲ್ಲ. ಎಂತಹ ದುರ್ದೈವ ? ಗಾಂಧಿಯವರು ಮತ್ತು ಕಸ್ತುರ್ ಬಾ  ಯಾರಿಗೂ ಹೇಳಿಕೊಳ್ಳಲಾಗದ  ದುಖಃದಿಂದ ಎಷ್ಟು ನೊಂದಿರಬಹುದು !
 
ಹರಿಲಾಲ್ ಗಾಂಧಿ ಮಾನಸಿಕ ಸಂತುಲನವನ್ನು ಕಳೆದುಕೊಂಡು ಬೊಂಬಾಯಿನ  ಕಾಮಾಟಿಪುರದ ಮನೆಯೊಂದರಲ್ಲಿ ಸ್ಮೃತಿ ಹೀನ ಸ್ಥಿತಿಯಲ್ಲಿದ್ದಾಗ,  ಜೂನ್ ೧೯೪೮ ರಂದು ಸಿವ್ರಿಯ ಕ್ಷಯದಾಸ್ಪತ್ರೆಗೆ  ಸೇರಿಸಲ್ಪಟ್ಟರು. ಮಹಾತ್ಮಗಾಂಧಿಯವರು ಮರಣಿಸಿದ ೪ ತಿಂಗಳ ಬಳಿಕ ಕ್ಷಯರೋಗದ ರುಗ್ಣಾಲಯದಲ್ಲಿ ಅಸು ನೀಗಿದರು. ಈ ವಿಷಯವೂ  ಇದುವರೆಗೆ ಎಳ್ಳು ಬಹಿರಂಗವಾಗಿ ಪ್ರಕಟವಾಗಿರಲಿಲ್ಲ. ಆದರೆ ಆಸ್ಪತ್ರೆಯ ದಿನವನ್ನು ಆಚರಿಸಲು ಸಿದ್ಧತೆ ನಡೆದಾಗ ಸಂಸ್ಥೆಯ ಹೆಜ್ಜೆಯ ಗುರುತುಗಳನ್ನು ಪತ್ತೆಹಚ್ಚುವ ಪ್ರಯತ್ನವನ್ನು ಚೀಫ್ ಮೆಡಿಕಲ್ ಆಫೀಸರ್ ಲಲಿತ್ ಕುಮಾರ್ ಆನಂದೆ ಮಾಡಿದರು. ಹರಿಲಾಲ್ ಗಾಂಧಿಯವರ ಹೆಸರು ಗಮನಕ್ಕೆ  ಬಂತು. ಮಹಾತ್ಮ ಗಾಂಧಿ ಮತ್ತು ಅವರ ಮಗ ಹರಿಲಾಲ್ ಬಗ್ಗೆ ತಿಳಿದಿದ್ದ ಅವರು ಹರಿಲಾಲ್ ಜೀವನದಲ್ಲಿ ಆದ ಅನಾಹುತವನ್ನು ಕೇಳಿ ಬಹಳ ನೊಂದುಕೊಂದರು.  ಮಗ ಮಾಡಿದ ತಪ್ಪುಗಳನ್ನು ಕಸ್ತುರ್ ಬಾ ಸಹಿತ ಮನ್ನಿಸಲಿಲ್ಲ. ಇದರ ಬಗ್ಗೆ ಆನಂದೆ ಓದಿ ತಿಳಿದಿದ್ದರು. ಈಗ ಆ ಮಹಾನ್ ಚೇತನರ ಹೀನ ಅದೃಷ್ಟದ ಮಗ ಹಿರಾಲಾಲ್ ರವರ ಹೆಸರಿನಲ್ಲಿ ಮುಂದೆ ಕಟ್ಟಿಸಲಾಗುವ ಎಮರ್ಜೆನ್ಸಿ ಕಕ್ಷವನ್ನು 'ಹರಿಲಾಲ್ ಗಾಂಧಿ ಐಸಿಯು ಯುನಿಟ್ ಎಂದು ಕರೆಯಲು ಅವರು ತಮ್ಮ ಸಂಸ್ಥೆಯ ವರಿಷ್ಠ ಅಧಿಕಾರಿಗಳಿಗೆ ಮನವಿಮಾಡಿಕೊಂಡರು.
ಹೀಗೆ  ೧೯೪೧ ರಲ್ಲಿ ಸ್ಥಾಪಿತವಾದ  ಈಗಿನ  ೧ ಸಾವಿರ ಹಾಸಿಗೆಗಳ  ಹೊಸ ಐಸಿಯು ಕೇಂದ್ರವನ್ನು  ಮೊದಲನೆಯ ಮಾಳಿಗೆಯಲ್ಲಿ  ಕೆಲವೇ ವಾರಗಳಲ್ಲಿ ಬ್ರಿಹನ್ ಮುಂಬೈನ  ಮುನಿಸಿಪಲ್ ಕಾರ್ಪೊರೇಶನ್  ಸಿದ್ಧಪಡಿಸಲಿದೆ  ೩ ತಿಂಗಳಲ್ಲಿ  ೧೦ ಹಾಸಿಗೆ ಯ ಐಸಿಯು ಯುನಿಟ್ ನ ಹೆಸರನ್ನು 'ಹರಿಲಾಲ್ ಗಾಂಧಿ ಐಸಿಯು ಯುನಿಟ್  ನ್ನು ಕರೆಯಲು ಎಲ್ಲರು ಒಪ್ಪಿಕೊಂಡರು.  ಮುಂಬೈ ನ  ಬಿ.ಎಮ್.ಸಿ. ಯ  ವಕೋಲ ಶಾಖೆಯ ವಸ್ತು ಸಂಗ್ರಹಾಲಯದಲ್ಲಿ  ಹರಿಲಾಲ್ ರ  ಮರಣ ಪತ್ರವಿದೆ. ಮೊದಲು ಅವರ ಹೆಸರು  ಹೀರಾಲಾಲ್ ಎಂದು ತಪ್ಪಾಗಿ ದಾಖಲಾಗಿತ್ತು.
ಮಹಾತ್ಮಾ ಗಾಂಧಿಯವರ ಮರಿ ಮೊಮ್ಮಗ  ತುಶಾರ್ ಗಾಂಧಿಯಾ  ಪ್ರಕಾರ  ಹರಿಲಾಲ್ ತಂದೆಯ ಜೊತೆ ಹೋರಾಡುತ್ತಾ  ದಕ್ಷಿಣ ಆಫ್ರಿಕಾದಲ್ಲಿ  ೬ ಬಾರಿ ಜೈಲುವಾಸ ಅನುಭವಿಸಿದ್ದರು.
ಭಾರತಕ್ಕೆ ಬಂದಮೇಲೆ ಅವರ ನಡುವಳಿಕೆಯಲ್ಲಿ ಅಪಾರ ಬದಲಾವಣೆಯಾಯಿತು.  ಮುಂಬೈನಲ್ಲಿ ಅವರ ಹೆಣ್ಣು ಮಕ್ಕಳು  ಮನು, ಹಾಗೂ  ರಾಮಿಯ ಜೊತೆ ಸಂಪರ್ಕವಿತ್ತು. ಆಸ್ಪತ್ರೆಗೆ ಸೇರಿಸುವ ಮೊದಲು ಮಾಟುಂಗದ ರಾಮಿಯ ಮನೆಯಲ್ಲಿ ಒಂದು ವಾರ, ಇದ್ದರು. ರಾಮಿಯ  ೭೯ ವರ್ಷದ ಗುಜರಾತಿನಲ್ಲಿ ವಾಸವಾಗಿರುವ ಮಗಳು, ನೀಲಮ್ ಪಾರೀಖ್ ಗೆ ತೊಡೆಯಮೇಲೆ ಕುಳ್ಳಿರಿಸಿಕೊಂಡು  ಊಟಮಾಡಿಸುತ್ತಿದ್ದರು ಎಂದು ನೆನೆಸಿಕೊಳ್ಳುತ್ತಾರೆ.  ತಾವು ಜೀವನದಲ್ಲಿ  ಮಾಡಿದ ಕೆಲವು ತಪ್ಪು ನಿರ್ಧಾರಗಳಿಂದ ಅವರೇ ನೊಂದಿದ್ದರು.  ತಾವೇ ಮನಸ್ಸುಮಾಡಿ  ಸ್ವತಃ ಕುಡಿಯುವ ಚಟವನ್ನು ನಿಲ್ಲಿಸಲು ಪ್ರಯತ್ನಿಸಿದ್ದರು. ಯಾವಾಗಲೂ  ಅವರು  ತಮ್ಮ ಮನೆಯವರಿಂದ ದೂರವಿರುತ್ತಿದ್ದರು. ಯಾರಿಗೂ ಸುಳಿವು ಸಿಕ್ಕದೆ ಎಲ್ಲೋ ಇದ್ದು ಬಿಟ್ಟಿದ್ದರು. ಹರಿಲಾಲ್ ಸತ್ತಮೇಲೆ ಅವರ  ಜೇಬಿನಲ್ಲಿ  ಮನೆಯ ಎಲ್ಲಾ ಸದಸ್ಯರ  ಫೋನ್ ನಂಬರ್ ಗಳು ದೊರೆತವು. ಆದರೆ ಅವರಲ್ಲಿ ಒಬ್ಬರು ಆಸ್ಪತ್ರೆಗೆ ಬಂದು ವಿಚಾರಿಸಿರಲಿಲ್ಲ. 
 
Rating
No votes yet

Comments

Submitted by venkatb83 Sun, 12/16/2012 - 15:44

ಹಿರಿಯರೇ
ಈ ಮೊದಲು ಅಲ್ಪ ಸ್ವಲ್ಪ ರಾಮ ಲಾಲನ ಬಗ್ಗೆ ಕೇಳಿದ್ದೆ ಓದಿದ್ದೆ.ಅವರ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿದ್ದು ಇಲ್ಲಿಯೇ ಎನ್ನಬಹ್ದು..
ಮಗನ ಈ ಅವಸ್ಥೆ-ಮಹಾತ್ಮರಿಗೆ ಭಲೇ ಮಾನಸಿಕ ತೊಂದರೆ ಕೊಟ್ಟಿರಬಹ್ದು ,ತಂದೆಯೇ ಇವ ತನ್ ಮಗನಲ್ಲ ಎಂದು ಹೇಳುವ ಸಂದರ್ಭ ಬಂದದ್ದು ದುರಂತ...:((
ರಾಮಲಾಲನ ಕಾರಣವಾಗಿ ಮಹಾತ್ಮರು ಮುಜುಗರ ಅನುಭವಿಸಬೇಕಾಗಿ ಬಂದದ್ದು ಉಂಟು..
ಸತ್ಯಾಗ್ರಹ-ಚಳುವಳಿ -ಮಧ್ಯೆ ಮಹಾತ್ಮರು ಮಕ್ಕಳ ಲಾಲನೆ ಪಾಲನೆ ವಿಧ್ಯಾಭ್ಯಾಸ ದ ಕಡೆ ಗಮನ ಕೊಡಲಿಲ್ಲವೇ?
ಕಸ್ತೂರಿ ಬಾ ಸಹಿತವಾಗಿ ಚಳುವಳಿ ಸತ್ಯಗ್ರಹದಲಿ ಸೇರಿದ್ದು ಮಕ್ಕಳ ಬೆಳವಣಿಗೆಗೆ ಸಹಾಯಕವಾಗಲಿಲ್ಲ ಎಂದರೂ ಇತರ ಮಕ್ಕಳು ಚೆನ್ನಾಗೆ ಬೆಳೆದು ಬಾಳಿದರಲ್ಲ ...
ಈ ಅಚ್ಚರಿಯ ಮಾಹಿತಿ ಇಲ್ಲಿ ಹಂಚಿಕೊಂಡಿದ್ದಕ್ಕೆ ನನ್ನಿ ..

ಶುಭವಾಗಲಿ..

\|