" ಕವನ ಬರುವುದಾದರೆ ಬರಲಿ "....ಪುಸ್ತಕ ಬಿಡುಗಡೆ ಸಮಾರಂಭ

" ಕವನ ಬರುವುದಾದರೆ ಬರಲಿ "....ಪುಸ್ತಕ ಬಿಡುಗಡೆ ಸಮಾರಂಭ

ಚಿತ್ರ

ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ 'ಆತ್ಮೀಯ ಆಮಂತ್ರಣ' .ಎಲ್ಲ ಸಂಪದಿಗರಿಗೆ ಆತ್ಮೀಯ ವಂದನೆಗಳು

ಮಾನ್ಯರೆ,

ನನ್ನ ಎರಡನೆ ಕವನ ಸಂಕಲನ " ಕವನ ಬರುವುದಾದರೆ ಬರಲಿ" , ಇದರ ಲೋಕಾರ್ಪಣೆ ದಿನಾಂಕ  23-12-2012 ರಂದು ಬೆಳಿಗ್ಗೆ ಗಂಟೆ 10-30ಕ್ಕೆ,  ಶಿವಮೊಗ್ಗ ಜಿಲ್ಲೆಯ ಸಾಗರದ ಎಂ.ಡಿ.ಎಫ್ ಪಿಯೂ ಕಾಲೇಜಿನಲ್ಲಿ ಇದೆ.

ದಯವಿಟ್ಟು ಎಲ್ಲರೂ ಬನ್ನಿ

                                                                                                                                            ತಮ್ಮ ವಿಶ್ವಾಸಿ,
                                                                                                                                            ಹನುಮಂತ ಅನಂತ ಪಾಟೀಲ
                                                                                                                                             ರಿಪ್ಪನಪೇಟೆ
 

Rating
No votes yet

Comments

Submitted by H A Patil Sun, 12/16/2012 - 16:06

In reply to by kavinagaraj

ಕವಿ ನಾಗರಾಜ ರವರಿಗೆ ವಂದನೆಗಳು
ತಮ್ಮ ಶುಭ ಕಾಮನೆಗೆ ಧನ್ಯವಾದಗಳು, ತಮ್ಮ ವಿಳಾಸ ತಿಳಿಸಿದರೆ ಪುಸ್ತಕದ ಪ್ರತಿಯನ್ನು ಕಳಿಸಿ ಕೊಡುವೆ, ನಿಮ್ಮ ಅಂತಃಕರಣಭರಿತ ವಿಶ್ವಾಸಕ್ಕೆ ಮೂಕನಾಗಿರುವೆ.

Submitted by H A Patil Sat, 12/29/2012 - 13:20

In reply to by kavinagaraj

ಕವಿ ನಾಗಾರಾಜ ರವರಿಗೆ ವಂದನೆಗಳು
ಮಾನ್ಯರೆ ನನ್ನ ಕವನ ಸಂಕಲನ ' ಕವನ ಬರುವುದಾದರೆ ಬರಲಿ ' ಕೃತಿಯ ಕೆಲವು ಪ್ರತಿಗಳನ್ನು ಪ್ರಕಾಶಕರು ಉಚಿತವಾಗಿ ನೀಡಿದ್ದು ತಮಗೊಂದು ಪ್ರತಿಯನ್ನು ಅಂಚೆ ಮೂಲಕ ಆಚೆ ಮೊನ್ನೆ ಕಳಿಸಿದ್ದೇನೆ. ತಾವು ಕೃತಿಯನ್ನು ಓದಿ ಅದರ ಬಗ್ಗೆ ತಮ್ಮ ಆಭಿಪ್ರಾಯ ವ್ಯಕ್ತ ಪಡಿಸಿದರೆ ಸಾಕು ಅದೆ ಒಂದು ದೊಡ್ಡ ಸಂಭಾವನೆ, ಧನ್ಯವಾಧಗಳು.

Submitted by partha1059 Sun, 12/16/2012 - 12:53

ಪಾಟೀಲರೆ ನಮಸ್ಕಾರ

ತಮ್ಮ ಕವನ ಸಂಕಲನ ಬಿಡುಗಡೆ ಎಂದು ತಿಳಿದು ಸಂತಸ ವಾಯಿತು
< ಲೋಕಾರ್ಪಣೆಗೆ ಮೊದಲೆ ಸಂಪದಾರ್ಪಣೆಯಾಗಿದೆಯಲ್ಲ ಪುಸ್ತಕದ ಪ್ರತಿ ಕಾಣುತ್ತಿದೆ ಚಿತ್ರದಲ್ಲಿ :‍) >

ಅಭಿನಂದನೆಗಳು
ಪಾರ್ಥಸಾರಥಿ

Submitted by H A Patil Sun, 12/16/2012 - 16:24

ಮಾನ್ಯ ಸಂಪದಿಗರೆ
ನಾನು ಪುಸ್ತಕ ಬಿಡುಗಡೆ ಸಮಾರಂಭದ ಆಮಂತ್ರಣ ಕೋರಿ ಬರೆದ ಬರಹವನ್ನು ಬ್ಲಾಗ್ ನಲ್ಲಿ ಹಾಕುವಾಗ ವಾಕ್ಯಗಳು ಅಲ್ಲಲ್ಲಿ ತುಂಡರಿಸಿದಂತೆ ಬಂದಿವೆ, ಸರಿಪಡಿಸಿಕೊಂಡು ಓದಲು ಕೋರಿಕೆ. ನನ್ನ ಪುಸ್ತಕದ ಜೊತೆಗೆ ಎನ್.ಹುಚ್ಚಪ್ಪ ಮಾಸ್ತರರ " ಗೊಂಡರು ಮತ್ತು ಇತರ ಲೇಖನಗಳು" ಹಾಗೂ ಸದರಿ ಮುಚ್ಚಪ್ಪ ಮಾಸ್ತರರು ಹಾಗೂ ಡಾ.ಸರ್ಫ್ರಾಜ್ ಚಂದ್ರಗುತ್ತಿ ಯವರ ಸಂಪಾದಕತ್ವದ "ಯಕ್ಷಗಾನ ಮತ್ತು ಆಧುನಿಕತೆ " ಎಂಬ ಪುಸ್ತಕಗಳೂ ಸಹ ಬಿಡುಗಡೆಗೊಳ್ಳಲಿವೆ. ಈ ಎರಡು ಪುಸ್ತಕಗಳ ಪರಿಚಯವನ್ನು ಮಂಗಳೂರಿನ ಹಿರಿಯ ಸಾಹಿತಿಗಳಾದ ವಿ.ಗ.ನಾಯಕರು ಮತ್ತು ನನ್ನ ಕವನ ಸಂಕಲನ ಕುರಿತು ಹಲಗೇರಿ ಪದವಿ ಪೂರ್ವ ಕಾಲೇಜಿನ ಡಾ.ಹಾ.ಉಮೇಶ ಸೊರಬ ರವರು ಮಾಡಲಿದ್ದಾರೆ. ಈ ಸಮಾರಂಭದ ಅಧ್ಯಕ್ಷತೆಯನ್ನು ಸಾಗರದ 'ಪರಸ್ಪರ' ಸಾಹಿತ್ಯ ವೇದಿಕೆಯ ಅಧ್ಯಕ್ಷ ಡಾ..ಸರ್ಫ್ರಾಜ್ ಚಂದ್ರಗುತ್ತಿ ಯವರು ವಹಿಸಲಿದ್ದಾರೆ. ಈ ಪುಸ್ತಕಗಳ ಪ್ರಕಾಶಕ ಸೊರಬದ ನೇಕಾರ ಪ್ರಕಾಶನದ ರಾಮಕೃಷ್ಣ ( ರಾಮಕೃಷ್ಣ, ನಂ.53, 18 ನೇ ಅಡ್ಡರಸ್ತೆ, 21ನೇ ಮುಖ್ಯರಸ್ತೆ ವಿಜಯನಗರ ಬೆಂಗಳೂರು-40 )ರವರಿಗೆ ಸನ್ಮಾನ ಕಾರ್ಯಕ್ರಮವಿದೆ, ದಯವಿಟ್ಟು ಆಗಮಿಸಿ,

Submitted by swara kamath Sun, 12/16/2012 - 17:07

ಪಾಟೀಲರಿಗೆ ನಮಸ್ಕಾರಗಳು.
ತಮ್ಮ ಎರಡನೆ ಕವನ ಸಂಕಲನ ಬಿಡುಗಡೆಯ ಕಾರ್ಯಕ್ರಮದ ಕುರಿತು ಓದಿ ಸಂತಸ ವಾಯಿತು. ಆವ್ಹಾನ ಪತ್ರಿಕೆ ಹಾಗು ಪುಸ್ತಕದ ಮುಖಪುಟದ ಮೇಲೆ ಕ್ಲಿಕ್ಕಿಸಿ ಅದರ ಹಿರಿದಾದ ಆಯಾಮವನ್ನು ನೋಡಿ ಓದಿ ಹೆಚ್ಚಿನ ವಿಶಯ ಗ್ರಹಿಕೆ ಮಾಡಿಕೊಂಡೆ. ತಮ್ಮ ಆತ್ಮಿಯ ಕರೆಯೋಲೆಗೆ ಧನ್ಯವಾದಗಳು.

Submitted by H A Patil Sun, 12/16/2012 - 18:36

In reply to by swara kamath

ರಮೇಶ ಕಾಮತರಿಗೆ ವಂದನೆಗಳು
ತಮ್ಮ ಪ್ರತಿಕ್ರಿಯೆ ಓದಿದೆ ತಮ್ಮ ಅಭಿಮಾನ ದೊಡ್ಡದು ಕಾರ್ಯಕ್ರಮಕ್ಕೆ ಬನ್ನಿ ತಮ್ಮ ಉಪಸ್ಥಿತಿ ಕಾರ್ಯಕ್ರಮಕ್ಕೊಂದು ಮೆರುಗು, ಧನ್ಯವಾದಗಳು.

Submitted by makara Sun, 12/16/2012 - 18:10

ಹನುಮಂತ ಪಾಟೀಲರಿಗೆ ನಮಸ್ಕಾರಗಳು. ನಿಮ್ಮ ಪುಸ್ತಕ ಬಿಡುಗಡೆಯ ಕಾರ್ಯಕ್ರಮ ಯಶಸ್ವಿಯಾಗಲಿ ಹಾಗೂ ಅದು ಅಪಾರ ಜನಮನ್ನಣೆ ಪಡೆಯಲಿ. ಧನ್ಯವಾದಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by H A Patil Sun, 12/16/2012 - 18:38

In reply to by makara

ಶ್ರೀಧರ ಬಂಡ್ರಿಯವರಿಗೆ ವಂದನೆಗಳು
ತಮ್ಮ ಪ್ರತಿಕ್ಇರಯೆ ಓದಿದೆ ಬಹಳ ದಿನಗಳ ನಂತರ ಸಂಪದಕ್ಕೆ ಮರಳಿದ್ದೀರಿ ತಮ್ಮ ಆತ್ಮೀಯತೆಗೆ ಧನ್ಯವಾದಗಳು.

Submitted by ಗಣೇಶ Mon, 12/17/2012 - 00:50

In reply to by H A Patil

ಶ್ರೀಧರ್‌ಜಿ ಅವರು ಪ್ರತಿಕ್ರಿಯೆ ಬರೆಯುತ್ತಿದ್ದಾರೆ, ಆದರೆ ಅವರ ಲೇಖನಗಳು ಇಲ್ಲಾ..!? ಪಾಟೀಲರೆ,ತಮ್ಮ ಕವನ ಬಿಡುಗಡೆ ಸಮಾರಂಭಕ್ಕೆ ನನ್ನದೂ ಶುಭಹಾರೈಕೆಗಳು.-ಗಣೇಶ.

Submitted by H A Patil Mon, 12/17/2012 - 18:03

In reply to by ಗಣೇಶ

ಗಣೇಶ ರವರಿಗೆ ವಂದನೆಗಳು ತಮ್ಮ ಪ್ರತಿಕ್ರಿಯೆ ಓದಿದೆ, ಹೌದು ತಾವಂದದ್ದು ಸರಿ, ಬಂಡ್ರಿಯವರು ಕೆಲ ದಿನಗಳಿಂದ ಸಂಪದದ ಅಂಗಣದಲ್ಲಿ ಪ್ರತಿಕ್ರಿಯೆಗಳ ಮೂಲಕ ಮರಳಿದ್ದಾರೆ, ಎಲ್ಲರನ್ನೂ ಅವಕಾಶ ದೊರೆತಾಗ ಓದುತ್ತಿರುವೆ, ತಮ್ಮ ಶುಭ ಹಾರೈಕೆಗೆ ಧನ್ಯವಾದಗಳು

Submitted by tthimmappa Sun, 12/16/2012 - 19:10

ಶ್ರೀ ಹನುಮ೦ತ ಪಾಟೀಲರಿಗೆ ನಮಸ್ಕಾರಗಳು
ತಮ್ಮ‌ ಪುಸ್ತಕ‌ ಬಿಡುಗಡೆ ಸಮಾರಂಭಕ್ಕೆ ಶುಭಾಶಯಗಳು .

Submitted by venkatb83 Sun, 12/16/2012 - 19:24

In reply to by H A Patil

ಹಿರಿಯರೇ
ನಿಮ್ಮ ಬರಹಗಳು ಸ0ಪದ‌ ಓದುಗರು ಮಾತ್ರ ಅಲ್ಲದೇ ಎಲ್ಲರ‌ ಕೈ ಸೇರಲು ಸಜ್ಜಾದ‌ ಈ ಸುಮುಹೂರ್ಥದಲಿ ನನ್ನ ಶ್ಹುಭ‌ ಹಾರೈಕೆಗಳು..

ಸ0ತಸದ‌ ವಿಷ್ಯ ಹೇಳಿರುವಿರಿ...

ಒಳಿತಾಗಲಿ..

\|/

Submitted by Prakash Narasimhaiya Mon, 12/17/2012 - 10:46

In reply to by H A Patil

ಆತ್ಮೀಯ ಪಾಟೀಲರೆ,
ನಿಮ್ಮ ಕವನ ಸಂಕಲನದ ಬಿಡುಗಡೆಯ ವಿಚಾರ ಸಂತಸ ತಂದಿದೆ. ಹಿರಿಯರ ವಿಚಾರದ ಮೂಸೆಯಿಂದ ಬರುವಂತಹ ಮಾತುಗಳೆಲ್ಲವೂ ಸುಂದರ ಕವನವೇ ಸರಿ. ಶೀರ್ಷಿಕೆಯು ಅರ್ಥಗರ್ಭಿತವಾಗಿಯೆ ಇದೆ. ಬಿಡುಗಡೆಯ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ, ಕವನ ಸಂಕಲನದ ಪುಸ್ತಕವನ್ನು ಹೆಚ್ಚುಹೆಚ್ಚು ಕಾವ್ಯಪ್ರಿಯರು ಓದಲಿ ಎಂದು ತುಂಬು ಮನಸಿನಿಂದ ಹಾರೈಸುತ್ತೇನೆ.
ಬಿಡುಗಡೆಯಾದ ನಂತರ ಈ ಪುಸ್ತಕವನ್ನು ನನ್ನ ವಿಳಾಸಕ್ಕೆ ಕಳುಹಿಸಿ. ಓದಿ ಆನಂದಿಸುವೆ. ಮುಖಬೆಲೆಯನ್ನು ಎಂ ಓ ಮಾಡುವೆ.
ಧನ್ಯವಾದಗಳು
ಹೆಚ್ ಏನ್ ಪ್ರಕಾಶ್, ಮಲೆನಾಡು ತಾಂತ್ರಿಕ ಮಹಾ ವಿದ್ಯಾಲಯ, ಅಂಚೆ ಡಬ್ಬಿ 21 , ಹಾಸನ 573202 .

Submitted by H A Patil Mon, 12/17/2012 - 19:18

In reply to by Prakash Narasimhaiya

ಪ್ರಕಾಶ ನರಸಿಂಹಯ್ಯ ರವರಿಗೆ ವಂದನೆಗಳು
ತಮ್ಮ ಅಭಿಮಾನ ಪೂರ್ವಕ ಪ್ರತಿಕ್ರಿಯೆಗೆ ಧನ್ಯವಾದಗಳು, ಪುಸ್ತಕ ಬಿಡುಗಡೆಯ ನಂತರ ಪ್ರತಿ ಕಳಿಸುವೆ.

Submitted by H A Patil Sat, 12/29/2012 - 13:13

In reply to by Prakash Narasimhaiya

ಪ್ರಕಾಶ ನರಸಿಂಹಯ್ಯ ರವರಿಗೆ ವಂದನೆಗಳು
ತಮ್ಮ ಕೋರಿಕೆಯಂತೆ ಆಚೆ ಮೊನ್ನೆ ' ಕವನ ಬರುವುದಾದರೆ ಬರಲಿ ' ಕೃತಿಯನ್ನು ಅಂಚೆ ಮೂಲಕ ಕಳಿಸಿದ್ದೇನೆ. ನನಗೆ ಪ್ರಕಾಶಕರು ಕೆಲವು ಪ್ರತಿಗಳನ್ನು ಉಚಿತವಾಗಿ ನೀಡಿದ್ದು ಅವುಗಳಲ್ಲಿಯೆ ಒಂದನ್ನು ನಿಮಗೆ ಕಳಿಸಿದ್ದೇನೆ ಮುಖಬೆಲೆಯನ್ನು ಕಳಿಸುವುದು ಬೇಡ. ಕೃತಿಯ ಬಗ್ಗೆ ತಮ್ಮ ಪ್ರಾಮಾಣಿಕ ಅನಿಸಿಕೆಯನ್ನು ವ್ಯಕ್ತ ಪಡಿಸಿದರೆ ಸಾಕು, ಧನ್ಯವಾದಗಳು.

Submitted by H A Patil Mon, 12/17/2012 - 19:42

In reply to by ಮಮತಾ ಕಾಪು

ಮೇಡಂ ವಂದನೆಗಳು
ನನ್ನ ಕವನ ಸಂಗ್ರಹದ ಶೀರ್ಷಿಕೆಯನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು. ನಾನು ಈ ಕವನ ಸಂಕಲನಕ್ಕೆ ' ಹೊಳೆದಂಡೆ' ಮತ್ತು ' ಚಿನ್ನದ ಸಂಕೋಲೆ ' ಎಂಬ ಶೀರ್ಷಿಕೆಗಳ ಬಗ್ಗೆ ಆಲೋಚಿಸಿದ್ದೆ, ಕೊನೆಗೆ ಈ ಶೀರ್ಷಿಕೆಯನ್ನು ಆಯ್ದುಕೊಂಡೆ. ತಮ್ಮ ಕನ್ನಡಪ್ರಭ ಲೇಖನಗಳ ಸಂಗ್ರಹ ' ಅವಳು ಮತ್ತೊಬ್ಬಳು ' ಬಿಡುಗಡೆಯ ಸಮಾರಂಭದ ಸಂಧರ್ಭದಲ್ಲಿ ತಮ್ಮ ಬರಹಕ್ಕೆ ಪ್ರತಿಕ್ರಿಯಿಸಲು ಆಗಿರಲಿಲ್ಲ, ಈ ಪ್ರಮಾದಕ್ಕೆ ಕ್ಷಮೆಯಿರಲಿ,

Submitted by mmshaik Mon, 12/17/2012 - 19:19

ಪಾಟಿಲ್ ಅವ್ರಿಗೆ ನಮಸ್ಕಾರ‌
ಅಭಿನ0ದನೆಗಳು...ತಮ್ಮ ಸಾಹಿತ್ಯ ಸೇವೆ ಹೀಗೆಯೇ ಮು0ದುವರೆಯಲಿ,ಶುಭ‌ ಹಾರ್ಯಕೆಗಳು..!!

Submitted by H A Patil Mon, 12/17/2012 - 19:22

In reply to by mmshaik

ಮೇಡಂ ವಂದನೆಗಳು, ತಮ್ಮ ಪ್ರತಿಕ್ರಿಯೆ ಓದಿ ಆಶ್ಚರ್ಯವಾಯಿತು, ಸಂಪದದಲ್ಲಿ ತಮ್ಮ ಬರಹ ಓದಿ ಎಷ್ಟೋ ಕಾಲ ವಾದಂತಿದೆ, ಶುಭ ಹಾರೈಕೆಗೆ ಧನ್ಯವಾದಗಳು