ದೆಹಲಿ ಅತ್ಯಾಚಾರ

ದೆಹಲಿ ಅತ್ಯಾಚಾರ

  ಕಾಲೇಜು ಓದುವ ಒಂದು ಹುಡುಗಿಯ ಮೇಲೆ ನಡೆದ ದೌರ್ಜನ್ಯವಲ್ಲ, ಇದು, ಇಡೀ ಮನುಷ್ಯತ್ವದ ನಂಬಿಕೆಯ ಮೇಲೆ ನಡೆದ ಅತ್ಯಾಚಾರ. ಈ ಯಾರೋ ಒಬ್ಬನಿಗೆ, ಮುಂದೊಮ್ಮೆ ಅತ್ಯುಗ್ರ ಶಿಕ್ಷೆಯೂ ಆಗಬಹುದು. ಇಂದಿನ ನೂರಾರು ಗೂಂಡಾಗಳಿಗದು ಎಚ್ಚರಿಕೆ ಗಂಟೆ ಆಗುವುದೇ? ಸಂಸತ್ತೂ ಸೇರಿದಂತೆ ಸರ‍್ವರೂ ತಾರ ಸ್ವರ‍್ಜದಲ್ಲಿ ಕೂಗಿದರು, ಅಪರಾಧಿಗಳನ್ನು ನೇಣೆತ್ತಿ, ಎಂದು. ಆದರೆ ಎಂದು? ನಾವು ಸಂವಹನ ತಾಂತ್ರಿಕತೆಯಲ್ಲಿ ಇನ್ನಿಲ್ಲದಂತೆ ಮುಂದುವರೆದಿದ್ದೇವೆ; ಸಣ್ಣ ಸಂಚಾರ ನಿಯಮೋಲ್ಲಂಘನೆಯನ್ನೂ ಕಣ್ಣಿಟ್ಟು ನೋಡುವ ಸಿಸಿಟಿವಿಗಳಿವೆ; ವೀಕ್ಷಕರ ವಿವರ ಸಂಗ್ರಹಿಸಿ, ಕ್ಷಣಮಾತ್ರದಲ್ಲಿ ಅಪರಾಧಿಗಳ ಕರರಾರುವಾಕ್ಕು ಚಹರೆ ಬಿಡಿಸುವ ಪರಿಣಿತಿ ಸಿದ್ಧಿಸಿದೆ; ವೀಡಿಯೋ ಕಾನ್ಫೆರೆನಸಿಂಗ್ ಲಭ್ಯವಿದೆ. ಇಷ್ಟಾದರೂ ಓಬೀ (ಒಲ್ಡ್ ಬ್ರಿಟಿಷ್) ರಾಯನಕಾಲದ ಸಾಕ್ಷ್ಯಾಧಾರ ಕಾಯ್ದೆಯೇ ವಿಚಾರಣಾ ಸಂಹಿತೆಗೆ ಆಧಾರ. ಅದರ ಸುಳು-ಸೂಕ್ಷ್ಮಗಳನ್ನು ಹಿಡಿದು ಮೇಲೆ-ಮೇಲಿನ ನ್ಯಾಯಾಲಯಗಳಿಗೂ ಅಪೀಲು ಹೋಗಬಹುದು. ಇಲ್ಲಿದ್ದ ಸಾಕ್ಷಿ, ಅಲ್ಲಿ ಬೇರೆಯೇ ಆಗಿ, ಅಪರಾಧಿಗೆ ಸಂದೇಹದ ಪ್ರಯೋಜನವೂ ಸಿಕ್ಕಿಬಿಡುತ್ತದೆ!
 ಹೆಣ್ಣಿನ ಮಾನ ಮುರಿಯುವ ಮೃಗಗಳನ್ನೂ, ಸಾಮೂಹಿಕವಾಗಿ ಪ್ರಾಣ ತೆಗೆಯುವ ಭಯೋತ್ಪಾದಕ ಮೂಢಾಧಮರನ್ನೂ, ನೇರವಾಗಿ ಸುಪ್ರಿಂ ಕೋರ್ಟ್ ವಿಚಾರಿಸಬೇಕು; ಎರಡು-ಮೂರುತಿಂಗಳೊಳಗೆ ಪ್ರಕರಣ ಆಖೈರಾಗಿ, ಅಪರಾಧಿಗೆ ಶಿಕ್ಷೆಯಾಗಬೇಕು. ಆಗ ದುಷ್ಟರು ಎಚ್ಚೆತ್ತುಕೊಂಡಾರು. ಅದು ಬಿಟ್ಟು, ಹೆಣ್ಣುಗಳನ್ನು ಕೆಡಿಸುವ ಇಪ್ಪತ್ತು ವರ್ಷದ ಯುವಕನನ್ನು ರಾಜಾರೋಷವಾಗಿ ಓಡಾಡಿಕೊಂಡಿರಲು ಬಿಟ್ಟ, ಎಲ್ಲಾ ಅಪರಾಧಕ್ಕೆ ಒಟ್ಟಾಗಿ, ಅರವತ್ತರ ವಾರ್ಧಕ್ಯದಲ್ಲಿ ಅವನನ್ನು ನೇಣೆತ್ತಿದರೆಷ್ಟು?ಬಿಟ್ಟರೆಷ್ಟು?
 

Rating
No votes yet

Comments

Submitted by Prakash Narasimhaiya Fri, 12/21/2012 - 10:34

ಆತ್ಮೀಯ ದಿವಾಕರ ರವರೆ,
ನಿಮ್ಮ ಕಳಕಳಿಗೆ ಧನ್ಯವಾದಗಳು. ಈಗಿನ ದಿನದಲ್ಲಿ ನಮಗ್ಯಾಕೆ? ಎನ್ನುವ ಮತ್ತು ಅದನ್ನು ವಿಚಾರಿಸಲು ಬೇರೆಯವರಿದ್ದಾರೆ ಎನ್ನುವ ಮಂದಿಗೇನು ಕೊರತೆ ಇಲ್ಲ. ಇಂದು ದೆಹಲಿಯಲ್ಲಿ ಆದದ್ದು ನಾಳೆ ನಮ್ಮ ಮನೆಯಲ್ಲೇ ಆಗುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ? ಜನರಲ್ಲಿ ಜಾಗೃತಿ ಮೂಡದಿದ್ದರೆ ಇಂತಹ ಪ್ರಕರಣಗಳು ಹೆಚ್ಚುತ್ತಲೇ ಇರುತ್ತದೆ. ರಾಜಕೀಯ ವ್ಯಕ್ತಿಗಳ ಹಸ್ತಕ್ಷೆಪವಿಲ್ಲದ ಕಾನೂನು ವ್ಯವಸ್ತೆ ಜಾರಿಯಾಗಬೇಕು. ಕಾನೂನು ಇನ್ನಷ್ಟು ಬಿಗಿಯಾಗಿ ತ್ವರಿತವಾಗಿ ಅಪರಾಧಿಗೆ ಶಿಕ್ಷೆ ಜಾರಿಯಾಗಬೇಕು. ಇವು ಸರ್ಕಾರದ ಕೈಲಿ ಸಾಧ್ಯವಾಗದಿದ್ದರೆ ಸಾಮಾನ್ಯಜನ ಕಾನೂನನ್ನು ಕೈಗೆತ್ತಿಕೊಳ್ಳುವ ಕಾಲ ದೂರ ಉಳಿಯುವುದಿಲ್ಲ.